ಜೀವನದಲ್ಲಿ ಏನ್ ಬೇಕಾದ್ರೂ ಮಾಡ್ತೀನಿ..‌ ಇಂಥ ಕಾರ್ಯಕ್ರಮದ ನಿರೂಪಣೆ ಯಾವತ್ತಿಗೂ ಬೇಡ ಅಂದಿದ್ರು ಅಪರ್ಣಾ..

Published : Jul 11, 2024, 11:47 PM IST
ಜೀವನದಲ್ಲಿ ಏನ್ ಬೇಕಾದ್ರೂ ಮಾಡ್ತೀನಿ..‌ ಇಂಥ ಕಾರ್ಯಕ್ರಮದ ನಿರೂಪಣೆ ಯಾವತ್ತಿಗೂ ಬೇಡ ಅಂದಿದ್ರು ಅಪರ್ಣಾ..

ಸಾರಾಂಶ

ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಅವರನ್ನು ಕ್ಯಾನ್ಸರ್​​ ಒಳಗಿದೊಳಕೆ ತಿಂದು ಹಾಕಿದ್ದು ಮಾತ್ರ ವಿಪರ್ಯಾಸ. ಜೀವನದಲ್ಲಿ ಏನ್ ಬೇಕಾದ್ರೂ ಮಾಡ್ತೀನಿ. ಇಂಥ ಕಾರ್ಯಕ್ರಮದ ನಿರೂಪಣೆ ಯಾವತ್ತಿಗೂ ಬೇಡ ಎಂದು ಅಪರ್ಣಾ ಹೇಳಿದ್ದರು. 

ಕನ್ನಡದ ಖ್ಯಾತ ನಿರೂಪಕಿ, ಸಿನಿಮಾ ನಟಿ ಅಪರ್ಣಾ ಗುರುವಾರ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಭಾಷೆಯನ್ನ ಅದ್ಭುತವಾಗಿ ಮಾತನಾಡುತ್ತಿದ್ದ ಅಪರ್ಣ, ತಮ್ಮ ನಿರೂಪಣಾ ಶೈಲಿಯಿಂದಲೇ ಅಪಾರ ಅಭಿಮಾನಿ ಬಳವನ್ನ ಹೊಂದಿದ್ದರು. ಅಪರ್ಣಾ 1984ರಲ್ಲಿ ಬಿಡುಗಡೆಯಾದ ಮಸಣದ ಹೂವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ವರ್ಷಗಳಲ್ಲಿ ಕನ್ನಡ ನಿರೂಪಕಿಯಾಗಿ ತಮ್ಮದೇ ಛಾಪೂ ಮೂಡಿಸಿದರು. 2015ರ ನಂತರದಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್​​ನಲ್ಲಿ ವರಲಕ್ಷ್ಮೀಯಾಗಿ ಮನೆ ಮಾತಾದರು. 

ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಅವರನ್ನು ಕ್ಯಾನ್ಸರ್​​ ಒಳಗಿದೊಳಕೆ ತಿಂದು ಹಾಕಿದ್ದು ಮಾತ್ರ ವಿಪರ್ಯಾಸ. ಜೀವನದಲ್ಲಿ ಏನ್ ಬೇಕಾದ್ರೂ ಮಾಡ್ತೀನಿ. ಇಂಥ ಕಾರ್ಯಕ್ರಮದ ನಿರೂಪಣೆ ಯಾವತ್ತಿಗೂ ಬೇಡ ಎಂದು ಅಪರ್ಣಾ ಹೇಳಿದ್ದರು. ಅಪರ್ಣಾ ಅವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಇವರಿಗೆ ಒಂದು ನಿರೂಪಣೆ ಶಾಲೆ ತೆರೆಯಬೇಕೆಂಬ ಆಸೆ ಇತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಬಿಟ್ಟು ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ. ಆದರೆ ಅಪರ್ಣಾ ಅವರಿಗೆ ಕ್ಯಾನ್ಸರ್‌ ಬಂದಿರೋ ವಿಚಾರ ತಿಳಿದಿದ್ರು ಒಂದು ಕೊನೆಯಾಸೆ ಇತ್ತಂತೆ. 

ಮಜಾ ಟಾಕೀಸ್‌ನ ಒನ್ ಆಂಡ್ ಓನ್ಲಿ ವರು ಧ್ವನಿ ಇನ್ನು ಕೇಳೋಕೆ‌ ಸಿಗದು..‌ ಜೇನಿನಂತೆ‌ ಕನ್ನಡ‌ ಮಾತಾಡ್ತಿದ್ದ ಅಪರ್ಣಾ ‌ಇನ್ನು ನೆನಪು!

ಅದನ್ನು ಈಡೇರಿಸುವ ಮುನ್ನವೇ ನಮ್ಮನ್ನೆಲ್ಲ ಬಿಟ್ಟು ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ಮೃತಪಟ್ಟಿದ್ದಾರೆ. ಹೌದು, ಅಪರ್ಣಾ ಅವರಿಗೆ ಒಂದು ನಿರೂಪಣೆ ಶಾಲೆಯನ್ನು ಮಾಡಬೇಕೆಂಬ ಆಸೆ ತುಂಬಾ ಇತ್ತಂತೆ. ಅದರ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರಂತೆ. ಆದರೆ ಅದು ಕೊನೆಗೂ ಈಡೇರಲೇ ಇಲ್ಲ. ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಲಿಲ್ಲ. ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಅವರು ಮನೆಮಾತಾಗಿದ್ದರು. 

ಅದರಲ್ಲೂ, 80 ಮತ್ತು 90ರ ದಶಕದಲ್ಲಿ ಕನ್ನಡ ಕಿರುತೆರೆ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದ್ದರು. ಇನ್ನು 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಹಾಗೇ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ 'ಮಜಾ ಟಾಕೀಸ್‌'ನಲ್ಲಿ ನಟಿಸಿ, ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು. ಇದರಲ್ಲಿ ವರಲಕ್ಷ್ಮಿ ಉರ್ಫ್ ವರು ಪಾತ್ರದಲ್ಲಿ ಮಿಂಚಿದ್ದರು. ಇವರು ಧ್ವನಿಯನ್ನು ಬಸ್ ನಿಲ್ಧಾಣ ಹಾಗೂ ಮೆಟ್ರೋ ಆರಂಭದ ದಿನಗಳಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಲು ಬಳಸಿಕೊಳ್ಳಲಾಗಿತ್ತು.

ಕನ್ನಡದ ಖ್ಯಾತ ನಿರೂಪಕಿ, ನಮ್ಮ ಮೆಟ್ರೋಗೆ ಧ್ವನಿ ಆಗಿದ್ದ ಅಪರ್ಣಾ ನಿಧನ: ಗಣ್ಯರಿಂದ ಸಂತಾಪ

ಇನ್ನು ಹಲವು ದಶಕಗಳ ಕಾಲ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ಅಪರ್ಣಾ ನಿರೂಪಿಸಿದ್ದರು. ಗುರುವಾರ ಬನಶಂಕರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್​ ಕಾರಣದಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದುಬಂದಿದೆ. ಬನಶಂಕರಿ ಸೆಕೆಂಡ್ ಸ್ಟೇಜ್ ಅವರ ನಿವಾಸದಲ್ಲಿ ಅಪರ್ಣ ಕೊನೆಯುಸಿರೆಳೆದಿದ್ದಾರೆ. ಹಲವು ದಶಕಗಳ ಕಾಲ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಲ್ಲೆ ಅಪರ್ಣಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?