
ಮುಂಬೈ (ಅ.02) ಬಿಗ್ ಬಾಸ್ ರಿಯಾಲಿಟಿ ಶೋ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದೆ. ಪ್ರತಿ ದಿನ ಸ್ಪರ್ಧಿಗಳ ನಡುವಿನ ಸ್ಪರ್ಧೆ ತೀವ್ರಗೊಳ್ಳುತ್ತಿದೆ.ಮನಸ್ತಾಪ, ಜಗಳ ತಾರಕಕ್ಕೇರುತ್ತಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಿಗ್ ಬಾಸ್ ಮನೆಯೊಳಗಿನ ಆಟದ ಪ್ರೋಮೋ ವಿಡಿಯೋ ಬಿಡುಗಡೆಯಾಗಿದೆ. ಸ್ಪರ್ಧಿಗಳ ಕಿತ್ತಾಟ, ಕೈಕೈ ಮಿಲಾಯಿಸಿದ ಘಟನೆಯೂ ನಡೆದಿದೆ. ನಿನ್ನಂತವರನ್ನು ನಾನು ಮನೆ ಕೆಲಸದವರನ್ನಾಗಿ ಇಟ್ಟುಕೊಳ್ಳುತ್ತೇನೆ ಅನ್ನೋ ಮಾತು ಬಿಗ್ ಮನೆಯೊಳಗೆ ಕಿಚ್ಚು ಹಚ್ಚಿದೆ. ಹೌದು, ಹಿಂದಿ ಬಿಗ್ ಬಾಸ್ ಶೋನಲ್ಲಿನ ಈ ಕಿತ್ತಾಟ ಹಾಗೂ ರಂಪಾಟ ಇದೀಗ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರೋಮ್ ವಿಡಿಯೋ ಆರಂಭದಲ್ಲೇ ಬಿಗ್ ಬಾಸ್ ಮನೆ ಕ್ಯಾಪ್ಟರ್ ಫರ್ಹಾನ ಭಟ್ ಅಡುಗೆ ಮನೆ ಕೆಲಸದ ಕುರಿತು ಸ್ಪರ್ಧಿ ಅಶ್ನೂರ್ ಕೌರ್ ಜೊತೆ ವಾಗ್ವಾದ ನಡೆಸುವ ದೃಶ್ಯವಿದೆ. ಫರ್ಹಾನ ಭಟ್ ನೇರವಾಗಿ ಗಾರ್ಡನ್ ಏರಿಯಾಗೆ ಎಂಟ್ರಿಕೊಡುವ ದೃಶ್ಯದಿಂದ ಪ್ರೋಮೋ ವಿಡಿಯೋ ಆರಂಭಗೊಳ್ಳುತ್ತಿದೆ. ಗಾರ್ಡನ್ ಏರಿಯಾದಲ್ಲಿ ಅಭಿಷೇಕ್ ಬಜಾಜ್ ಹಾಗೂ ಅಶ್ನೂರ್ ಕೌರ್ ಕುಳಿತು ಮಾತನಾಡುತ್ತಿರುವಾಗಲೇ ಫರ್ಹಾನ ಭಟ್ ಎಂಟ್ರಿಕೊಟ್ಟಿದ್ದಾರೆ. ಮರುಕ್ಷಣದಲ್ಲೇ ವೇದಿಕೆ ರಣಾಂಗಣವಾಗಿದೆ.
ಕ್ಯಾಪ್ಟನ್ ಫರ್ಹಾನಾ ಭಟ್ ನೇರವಾಗಿ ಅಶ್ನೂರ್ ಕೌರ್‌ಗೆ ನಾನು ಎಷ್ಟು ಬಾರಿ ನಿನಗೆ ಹೇಳಲಿ, ಪಾತ್ರೆಗಳನ್ನು ಖಾಲಿ ಮಾಡಿ ಶುಚಿಗೊಳಿಸಲು ಹೇಳಿದ್ದೆ. ಇದಕ್ಕೆ ಅಶ್ನರೂರ್ ಕೌರ್ ಖಾರವಾಗಿ ಉತ್ತರಿಸಿದ್ದಾರೆ, ಅರೆ ಫರ್ಹಾನಾ ನನಗೆ ನಿನ್ನಲ್ಲಿ ಏನೂ ಮಾತನಾಡುವುದಿಲ್ಲ, ನೀನು ಇಲ್ಲಿಂದ ನಡಿ ಎಂದಿದ್ದಾರೆ. ಬೆರಳು ತೋರಿಸಿ ಆಡಿದ ಈ ಮಾತುಗಳು ಫರ್ಹಾನಾ ಭಟ್‌ಗೆ ತೀವ್ರ ಆಕ್ರೋಶ ತರಿಸಿದೆ.
ಮೊದಲು ಕೆಲಸ ಮಾಡಿ ತೋರಿಸು ಎಂದು ಅಶ್ನೂರ್ ಕೌರ್‌ಗೆ ಪರ್ಹನಾ ಎಚ್ಚರಿಸಿದ್ದಾರೆ. ಇದೇ ವೇಳೆ ಫರ್ಹನಾ ಹಾಗೂ ಅಶ್ನೂರ್ ವಾಗ್ವಾದ ನಡುವೆ ಅಭಿಷೇಕ್ ಬಜಾಜ್ ಎಂಟ್ರಿಕೊಟ್ಟಿದ್ದಾರೆ. ಅಭಿಷೇಕ್ ಬಜಾಜ್ ಕಡೆ ತಿರುಗಿದ ಫರ್ಹನಾ ಕತ್ತೆ ಎಂದು ಕರೆದಿದ್ದಾಳೆ. ಇದರಿಂದ ಅಭಿಷೇಕ್ ಬಜಾಜ್ ಪಿತ್ತ ನೆತ್ತಿಗೇರಿದೆ. ನಾನು ಒಂದು ಕೆಲಸ ಮಾಡುವುದಿಲ್ಲ, ಕೆಲಸ ಮಾಡಬೇಕು ಎಂದರೆ ನೀನೇ ಮಾಡು ಎಂದು ಅಭಿಷೇಕ್ ಸೂಚಿಸಿದ್ದಾನೆ. ಇದರಿಂದ ಮತಷ್ಟು ಕೆರಳಿಕ ಕ್ಯಾಪ್ಟನ್ ಫರ್ಹನಾ ಭಟ್ ನಾನಿಲ್ಲಿ ನಿನ್ನ ಸೇವಕನಾಗಿ ಕುಳಿತಿಲ್ಲ, ನನಗೆ ಆರ್ಡರ್ ಮಾಡುವುದು ಬೇಡ ಎಂದು ಎಚ್ಚರಿಸಿದ್ದಾಳೆ. ನೀನು ಸೇವಕಿ, ನೀನು ಮನೆಕೆಲಸದವಳು ಎಂದು ಅಭಿಷೇಕ್ ಬಜಾಜ್ ತಿರುಗೇಟು ನೀಡಿದ್ದಾನೆ.
ಇವರಿಬ್ಬರ ಜಗಳ ತಾರಕ್ಕೇರಿದೆ. ಇತರ ಸ್ಪರ್ಧಿಗಳು ಆಗಮಿಸಿದ್ದಾರೆ. ಜಗಳ ನಡೆಯುತ್ತಿದ್ದ ಸ್ಪರ್ಧಿಗಳನ್ನು ದೂರ ಸರಿಸಲು ಪ್ರಯತ್ನಿಸಿದ್ದಾರೆ. ರಂಪಾಟ,ಕಿತ್ತಾಟ ಶುರುವಾಗಿದೆ. ಇತ್ತ ಫರ್ಹಾನ ನಿನ್ನಂತವರನ್ನು ನಾನು ಮನೆಕೆಲಸಕ್ಕೆ ಇಟ್ಟುಕೊಳ್ಳುತ್ತೇನೆ ಎಂದಿದ್ದಾಳೆ. ಇತ್ತ ಅಭಿಷೇಕ್ ಬಜಾಜ್ ನೀನು ಸೇವಕಿ, ಮನೆಕೆಲಸದಾಕೆ ಎಂದು ಕೂಗಾಡಿದ್ದಾನೆ. ಜಗಳ ತಾರಕಕ್ಕೇರುತ್ತಿದ್ದಂತೆ ಸ್ಪರ್ಧಿಗಳು ಮೂವರನ್ನು ದೂರ ದೂರ ಮಾಡಿದ್ದಾರೆ. ಇದು ಕೇವಲ ಪ್ರೋಮೋ, ಅಸಲಿ ಜಗಳ ತೆರೆ ಮೇಲೆ ಪ್ರಸಾರವಾಗಲಿದೆ. ಇದಕ್ಕಾಗಿ ಪ್ರೇಕ್ಷಕರು ಕಾದುಕುಳತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.