ಅರಮನೆ ಕರೆಂಟ್​ ಬಿಲ್​ ಎಷ್ಟು? ದಂಪತಿ ಜಗಳವಾದ್ರೆ ಸಾರಿ ಕೇಳೋದ್ಯಾರು? ತರ್ಲೆ ಪ್ರಶ್ನೆಗಳಿಗೆ ಯದುವೀರ್​ ಉತ್ತರ ಹೀಗಿದೆ...

By Suchethana D  |  First Published Sep 22, 2024, 12:05 PM IST

ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ ವೇದಿಕೆಗೆ ಆಗಮಿಸಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರು ಆ್ಯಂಕರ್​ ಸೃಜನ್​ ಲೋಕೇಶ್​ ಅವರ ತರ್ಲೆ ಪ್ರಶ್ನೆಗಳಿಗೆ ಕೊಟ್ಟ ಉತ್ತರ ಹೀಗಿದೆ ನೋಡಿ.
 


ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸಂಸದೆಯಾಗಿರುವವರ  ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಇವರ ತಂದೆ ಶ್ರೀಕಂಠದತ್ತ ಒಡೆಯರ್ ಅವರು 4 ಬಾರಿ ಕಾಂಗ್ರೆಸ್ ಸಂಸದರಾಗಿ ಆಯ್ಕೆ ಆಗಿದ್ದರೆ, ಈಗ ಪುತ್ರ ಬಿಜೆಪಿ ಸಂಸದರಾಗಿದ್ದಾರೆ.  1992ರಂದು ಹುಟ್ಟಿರುವ ಯದುವೀರ್​ ಅವರಿಗೆ ಈಗ 32 ವರ್ಷ ವಯಸ್ಸು. ಸಂಸದರಾದ ಮೇಲೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಯದುವೀರ್​ ಅವರು ಈಗ ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ವಿವಿಧ ಸೀರಿಯಲ್​ಗಳಲ್ಲಿ ನಟಿಸುತ್ತಿರುವ ನಟ-ನಟಿಯರು ಸೇರಿದಂತೆ ನಿರ್ದೇಶಕರು, ನಿರ್ಮಾಪಕರು, ಕ್ಯಾಮೆರಾಮನ್​, ಸಂಗೀತ... ಹೀಗೆ ಧಾರಾವಾಹಿಗಳಿಗಾಗಿ ಶ್ರಮಿಸುತ್ತಿರುವವರಿಗೆ ನೀಡುವ ಅವಾರ್ಡ್​ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಆಗಮಿಸಿದ್ದು, ಅವರಲ್ಲಿ ಒಬ್ಬರು  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್.

ಆ್ಯಂಕರ್​ ಸೃಜನ್​ ಲೋಕೇಶ್​ ಅವರು ಯದುವೀರ ಅವರಿಗೆ ಕೆಲವೊಂದು ತರ್ಲೆ ಪ್ರಶ್ನೆ ಕೇಳಿದ್ದಾರೆ. ಮೊದಲಿಗೆ ಅರಮನೆಯ ಕರೆಂಟ್​ ಬಿಲ್​  ಎಷ್ಟು ಬರುತ್ತದೆ ಎಂದಿದ್ದಾರೆ. ಇದಕ್ಕೆ ಜಾಣ್ಮೆಯಿಂದ ಉತ್ತರಿಸಿರೋ ಯದುವೀರ್​ ಅವರು ನಿಜವಾಗಿಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ. ಆಮೇಲೆ ರಾಜಾ ಮತ್ತು ರಾಣಿ ನಡುವೆ ಜಗಳವಾದ್ರೆ ಮೊದ್ಲು ಸಾರಿ ಕೇಳೋದು ಯಾರು ಎಂದಾಗ, ಒಂದು ಕ್ಷಣ ಯೋಚಿಸಿದ ಯದುವೀರ್​ ಅವರು ನಗುತ್ತಲೇ ಸಾಮಾನ್ಯವಾಗಿ ನಾನೇ ಎಂದು ಹೇಳಿದ್ದಾರೆ. ಅಷ್ಟಕ್ಕೂ ಯದುವೀರ್​ ಅವರು ಯಾವುದೇ ಪ್ರಶ್ನೆ ಕೇಳಿದರೂ ಅದಕ್ಕೆ ಜಾಣ್ಮೆಯಿಂದಲೇ ಉತ್ತರ ಕೊಡುತ್ತಾರೆ. ಅಷ್ಟೇ ಸ್ಪಷ್ಟ, ಸ್ಫುಟವಾಗಿ ಉತ್ತರಿಸುತ್ತಾರೆ. ಇಲ್ಲಿಯೂ ಅದೇ ರೀತಿ ಹೇಳುವ ಮೂಲಕ ಕೆಲವು ಪ್ರಶ್ನೆಗಳಿಗೆ ಉತ್ತರಿಸದೇ ನುಣುಚಿಕೊಂಡಿದ್ದರೆ, ಮತ್ತೆ ಕೆಲವಕ್ಕೆ ಎಷ್ಟು ಬೇಕೋ ಅಷ್ಟೇ ಎನ್ನುವಂತೆ ಉತ್ತರಿಸಿ ಎಲ್ಲರನ್ನೂ ನಕ್ಕು ನಗಿಸಿದ್ದಾರೆ.

Tap to resize

Latest Videos

ಅನುಬಂಧ ವೇದಿಕೆ ಮೇಲೆ ಹತ್ತಾರು ಭಾಗ್ಯಲಕ್ಷ್ಮಿಯರು- 25 ವರ್ಷಗಳ ಜರ್ನಿ ನೆನೆದು ನಟಿ ಸುಷ್ಮಾ ಕಣ್ಣೀರು

ಇನ್ನು ಯದುವೀರ ಅವರ ಕುರಿತು ಹೇಳುವುದಾದರೆ, ಇವರು, ಬೆಂಗಳೂರಿನ ವಿದ್ಯಾನಿಕೇತನ್​ ಸಂಸ್ಥೆಯಲ್ಲಿ ಹೈಸ್ಕೂಲ್​,  ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಪಿಯುಸಿ ಬಳಿಕ  ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ  ಅರ್ಥಶಾಸ್ತ್ರ ಮತ್ತು ಇಂಗ್ಲಿಷ್​ನಲ್ಲಿ  ಬಿಎ ಪದವಿ ಪಡೆದಿದ್ದಾರೆ.  ಸ್ನಾತಕೋತ್ತರ ಪದವಿಯನ್ನೂ ಅಧ್ಯಯನ ಮಾಡಿದ್ದಾರೆ. ಅಂದಹಾಗೆ, ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2013ರಲ್ಲಿ  ನಿಧನರಾದಾಗ,  ಅವರ ಪತ್ನಿ ಪ್ರಮೋದಾ ದೇವಿ  ಯದುವೀರ್ ಅವರನ್ನು ದತ್ತು ಪಡೆಯುತ್ತಾರೆ.  2015ರಲ್ಲಿ ಆಗ 22 ವರ್ಷವಾಗಿದ್ದ  ಯದುವೀರ್ ಅವರಿಗೆ  27ನೇ ರಾಜರಾಗಿ ಪಟ್ಟಾಭಿಷೇಕ ಮಾಡಲಾಯಿತು. ಯದುವೀರ್ ಗೋಪಾಲರಾಜೇ ಅರಸ್ ಎಂಬ ಹೆಸರನ್ನು  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂದು ಬದಲಾಯಿಸಲಾಯಿತು.

 ರಾಜಸ್ಥಾನದ ಡುಂಗರಪುರ್ ರಾಜಮನೆತನದ ಮಾಜಿ ರಾಜ್ಯಸಭಾ ಸದಸ್ಯ ಹರ್ಷವರ್ಧನ್ ಸಿಂಗ್ ಡುಂಗರಾಪುರ್ ಅವರ ಪುತ್ರಿ ತ್ರಿಷಿಕಾ ಕುಮಾರಿ ಅವರ ಜೊತೆ ಯದುವೀರ್​ ಅವರ ಮದುವೆ 2016ರ ಜೂನ್​ನಲ್ಲಿ ನಡೆದಿದೆ. ಈ ದಂಪತಿಗೆ 2017ರ ಡಿಸೆಂಬರ್​ 6ರಂದು ಆದ್ಯವೀರ್ ಎಂಬ ಪುತ್ರ ಜನಿಸಿದ್ದಾನೆ.  ದಶಕದಿಂದ  ಯದುವೀರ್ ದಂಪತಿ ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದು,  ಅನೇಕ ಬಾರಿ ಮೈಸೂರು ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಲ್ಲಿ ಕಾಣಿಸಿಕೊಂಡಿದ್ದಾರೆ.  2019ರಲ್ಲಿ ಕೊಡಗಿನಲ್ಲಿ ಪ್ರಕೃತಿ ವಿಕೋಪಗಳಾದ ಸಂದರ್ಭದಲ್ಲಿಯೂ ಅಲ್ಲಿಗೆ ಭೇಟಿ ಕೊಟ್ಟು, ಪ್ರಕೃತಿ ಸಂರಕ್ಷಣೆಗೆ ಆದ್ಯತೆ ನೀಡಿ ಪ್ರವಾಸೋದ್ಯಮದ ಬೆಳವಣಿಗೆಗೆ ಶ್ರಮಿಸುವುದಾಗಿ ತಿಳಿಸಿದ್ದರು.  

ರಿಯಲ್​ 'ಕರಿಮಣಿ ಮಾಲಿಕ'ನ ಜೊತೆ ಹತ್ತಾರು ಸುಂದ್ರಿಯರು ಡಾನ್ಸ್ ಮಾಡಿದ್ರೆ ಹೇಗಿರತ್ತೆ ನೋಡಿ...

click me!