ಅವನು ಮತ್ತು ಶ್ರಾವಣಿ ಧಾರಾವಾಹಿಯನ್ನು ನಿಜವೆಂದೇ ತಿಳಿದ ಮಹಿಳೆಯೊಬ್ಬರು ನಟನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಅದರ ವಿಡಿಯೋ ಪುನಃ ವೈರಲ್ ಆಗಿದೆ.
ಇಂದು ಟಿ.ವಿ.ಚಾನೆಲ್ಗಳಲ್ಲಿ ಬರುವ ಸೀರಿಯಲ್ಗಳು ಬಹುತೇಕ ಮಂದಿಯ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಮೈಮನ ತುಂಬಿಕೊಂಡುಬಿಟ್ಟಿದೆ. ಅದು ಕೇವಲ ಪಾತ್ರವಾಗಿರದೇ, ವೀಕ್ಷಕರಿಗೆ ದಿನನಿತ್ಯದ ಜೀವನ ಎನಿಸಿಬಿಡುತ್ತಿದೆ. ಅಲ್ಲಿರುವ ಪಾತ್ರವಲ್ಲ, ಬದಲಿಗೆ ತಮ್ಮ ಮನೆಯಲ್ಲಿಯೇ ನಡೆಯುತ್ತಿರುವ ಘಟನೆಗಳು ಎನ್ನುವಷ್ಟರ ಮಟ್ಟಿಗೆ ಆವರಿಸಿಕೊಂಡಿರುತ್ತದೆ. ಹಿಂದೆಲ್ಲಾ ರಾಮಾಯಣ, ಮಹಾಭಾರತ ಧಾರಾವಾಹಿ ಪ್ರಸಾರ ಆಗ್ತಿದ್ದ ಸಂದರ್ಭದಲ್ಲಿ ಎಷ್ಟೋ ಮನೆಗಳಲ್ಲಿ ಟಿ.ವಿಗೆ ಹೂವು ಹಾರ ಹಾಕಿ ಪೂಜೆ ಮಾಡಿ ನೋಡುತ್ತಿದ್ದರು. ಇದರಲ್ಲಿ ದೇವತೆಗಳ ಪಾತ್ರಧಾರಿಗಳು ಎಲ್ಲಾದರೂ ಸಿಕ್ಕರೆ ನಿಜವಾದ ದೇವರೇ ಪ್ರತ್ಯಕ್ಷರಾದರೆಂದುಕೊಂಡು ಕಾಲಿಗೆ ಬೀಳುತ್ತಿದ್ದರು. ವಿಲನ್ ಅಂದರೆ ರಕ್ಕಸ ಪಾತ್ರಧಾರಿಗಳನ್ನು ಕಂಡರೆ ಎಷ್ಟೋ ಕಾರ್ಯಕ್ರಮಗಳಲ್ಲಿ ಎಂಟ್ರಿನೂ ಕೊಡುತ್ತಿರಲಿಲ್ಲ. ಆ ರೀತಿಯಾಗಿ ಧಾರಾವಾಹಿಗಳು ವೀಕ್ಷಕರ ಮನಸ್ಸನ್ನು ಗೆದ್ದಿದ್ದವು.
ಕಾಲ ಬದಲಾಗಿರಬಹುದು. ಆದರೆ ವೀಕ್ಷಕರ ಮನಸ್ಥಿತಿ ಮಾತ್ರ ಇಂದಿಗೂ ಅದೇ ರೀತಿ ಇದೆ. ಇದೇ ಕಾರಣಕ್ಕೆ ಸೀರಿಯಲ್ಗಳಲ್ಲಿನ ನಾಯಕ-ನಾಯಕಿಯರನ್ನು ಹಾಗೂ ವಿಲನ್ ಪಾತ್ರಧಾರಿಗಳನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ತಾವು ಟಿ.ವಿಯಲ್ಲಿ ನೋಡುತ್ತಿರುವುದು ಕಾಲ್ಪನಿಕ ಕಥೆ, ಇಲ್ಲಿರುವವರು ಪಾತ್ರಧಾರಿಗಳಷ್ಟೇ. ಈ ಸೀರಿಯಲ್ನಲ್ಲಿ ವಿಲನ್ ಆಗಿದ್ದರೆ, ಇನ್ನೊಂದು ಸೀರಿಯಲ್ನಲ್ಲಿ ನಾಯಕ-ನಾಯಕಿಯಾಗುತ್ತಾರೆ ಎನ್ನುವ ಯೋಚನೆ ಮಾಡದ ಹಲವು ಮಂದಿ ಇಂದಿಗೂ ಇದ್ದಾರೆ. ಇದೇ ಕಾರಣಕ್ಕೆ ವಿಲನ್ ಪಾತ್ರಧಾರಿಗಳು ತಾವು ಎಲ್ಲಾದರೂ ಹೋದರೆ ಜನ ತಮ್ಮನ್ನು ನೋಡುವ ರೀತಿ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾರೆ.
ಪೂನಂ ಪಾಂಡೆ ವಿರುದ್ಧ ದಾಖಲಾಗತ್ತಾ ಕೇಸ್? ಪ್ರಚಾರಕ್ಕಾಗಿ ಸತ್ತೆನೆಂದ ನಟಿಗೆ ಹೀಗಿದೆ ಶಿಕ್ಷೆ...
ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿದ್ದ ಅವನು ಮತ್ತು ಶ್ರಾವಣಿ ಸೀರಿಯಲ್ನ ನಟನನ್ನು ಮಹಿಳೆಯೊಬ್ಬರು ಝಾಡಿಸಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಇದೀಗ ಪುನಃ ವೈರಲ್ ಆಗುತ್ತಿದೆ. ಸೀರಿಯಲ್ನಲ್ಲಿ ನಟ ಪತ್ನಿಯನ್ನು ಬಿಟ್ಟು ಬೇರೊಬ್ಬಳ ಕಡೆಗೆ ಗಮನ ಹರಿಸುವುದು ಮಹಿಳೆ ಸಹಿಸುತ್ತಿಲ್ಲ. ಇದರಿಂದ ಆಕೆ ರೊಚ್ಚಿಗೆದ್ದು ಒಂದೇ ಸಮನೆ ಬೈದಿದ್ದಾರೆ. ಮನೆಯಲ್ಲಿ ಚಿನ್ನದಂಥ ಹೆಂಡ್ತಿ ಇಟ್ಟುಕೊಂಡು ಪಕ್ಕದ ಮನೆಯವಳ ಮೇಲೆ ಯಾಕೆ ಕಣ್ಣು ಹಾಕುವುದು, ನಾಚಿಕೆ ಆಗಲ್ವಾ? ಬಂಗಾರದಂಥ ಹುಡುಗಿ ಅವಳು, ಅವಳನ್ನು ಬಿಟ್ಟು ಬೇರೆಯವಳ ಮೇಲೆ ಕಣ್ಣು ಹಾಕ್ತಿಯಲ್ಲ. ನಿನ್ನನ್ನು ನೋಡಿ ಜನ ಏನು ಕಲಿತುಕೊಳ್ಳಬೇಕು ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ.
ಅಲ್ಲಮ್ಮ, ಇದು ಸೀರಿಯಲ್ ಪಾರ್ಟ್ ಅಷ್ಟೇ. ಜನ ಹೇಗೆಲ್ಲಾ ಇರುತ್ತಾರೆ ಎಂದು ತೋರಿಸುತ್ತಿದ್ದೇವೆ ಎಂದು ನಾಯಕ ಹೇಳಿದ್ರೂ, ಅದನ್ನು ಒಪ್ಪಲು ಮಹಿಳೆ ರೆಡಿ ಇಲ್ಲ. ಅವಳು ನಿನ್ನನ್ನು ಅಣ್ಣನ ಥರ ನೋಡಿದ್ರೆ, ನೀನು ಕಣ್ಣು ಹಾಕ್ತಿಯಾ? ನಿನ್ನ ಮೈಯಲ್ಲಿ ರಕ್ತ ಹರಿತಿದ್ಯೋ ಇನ್ನೇನೋ ಎಂದು ಒಂದೇ ಸಮನೆ ಬೈದಿದ್ದಾರೆ. ಸಮಾಧಾನ ಮಾಡ್ಕೊಳಿ ಮೇಡಂ. ಇದು ನಿಜ ಅಲ್ಲ ಎಂದರೂ ಕೇಳದೇ ಮಹಿಳೆ ಬೈಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ. megharsh_spk ಎನ್ನುವವರು ಇದನ್ನು ಹಂಚಿಕೊಂಡಿದ್ದು, ಹಳೆಯ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವಧುವಿಗೆ ತಾಳಿ ಕಟ್ಟೋ ಮುನ್ನ ಎಲ್ಲರ ಕೈಲಿ ಮುಟ್ಟಿಸುವುದೇಕೆ? ಶ್ರೀರಸ್ತು ಶುಭಮಸ್ತು ದತ್ತಾ ಹೇಳಿದ್ದಾರೆ ನೋಡಿ..