ವರ್ಷಗಳಿಂದ NO 1 ಸ್ಥಾನಕ್ಕೆ ಪೈಪೋಟಿ ಕೊಟ್ಟಿದ್ದ ಕನ್ನಡ ಧಾರಾವಾಹಿ ಇದೇ ತಿಂಗಳು ಅಂತ್ಯ ಆಗಲಿದೆಯಾ?

Published : May 05, 2026, 10:05 AM IST
kannada serial

ಸಾರಾಂಶ

Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆಯುತ್ತಿವೆ, ಹೀಗಿರುವಾಗ 1000 ಎಪಿಸೋಡ್‌ಗೆ ಈ ಧಾರಾವಾಹಿ ಅಂತ್ಯ ಆಗಲಿದೆಯಾ ಎಂಬ ಪ್ರಶ್ನೆ ಬಂದಿದೆ. ಹಾಗಾದರೆ ಮುಂದೆ ಏನಾಗಬಹುದು? 

ಅಮೃತಧಾರೆ ಧಾರಾವಾಹಿಯಲ್ಲಿ ( Amruthadhaare Kannada Serial ) ಗೌತಮ್‌ ದಿವಾನ್‌ಗೆ ಅವನ ಸಾಮ್ರಾಜ್ಯ ಸಿಕ್ಕಿದೆ. ಇನ್ನೊಂದು ಕಡೆ ಜಯದೇವ್‌ ಅಧಃಪತನ ಕೂಡ ಆಗಿದೆ, ಶಕುಂತಲಾಗೆ ಬುದ್ಧಿ ಬಂದಿದೆ. ಜಯದೇವ್‌ನನ್ನು ಬಿಟ್ಟು ಎಲ್ಲರೂ ಜೊತೆಗೆ ಇದ್ದಾರೆ. ಇದನ್ನೆಲ್ಲ ನೋಡಿದ್ರೆ ಸೀರಿಯಲ್‌ ಎಂಡ್‌ ಆಗಲಿದೆಯಾ ಎಂಬ ಪ್ರಶ್ನೆ ಬಂದಿದೆ.

ಯಾವಾಗ ಧಾರಾವಾಹಿ ಅಂತ್ಯ ಆಗತ್ತೆ?

ಹೌದು, ಅಮೃತಧಾರೆ ಧಾರಾವಾಹಿ ಕಥೆ ನೋಡಿದರೆ, ಎಲ್ಲ ಕಡೆ ಸಮಸ್ಯೆ ಬಗೆಹರಿಯುವಂತೆ ಕಾಣ್ತಿದೆ. ಹೀಗಾದರೆ ಸೀರಿಯಲ್‌ ಮುಗಿಯಲೇಬೇಕು ಅಲ್ವಾ? ಕೆಲವು ದಿನಗಳಿಂದ ಈ ಧಾರಾವಾಹಿ ಅಂತ್ಯ ಆಗಲಿದೆ ಎನ್ನಲಾಗಿತ್ತು. ರಾಜೇಶ್‌ ನಟರಂಗ ಕೂಡ, “ಯಾವಾಗ ಸೀರಿಯಲ್‌ ಮುಗಿಯಬೇಕೋ ಆಗ ಮುಗಿಯತ್ತೆ, ರೈಟರ್ಸ್‌, ವಾಹಿನಿ ಅವರಿಗೆ ಬೇಕಾದಾಗ ಸೀರಿಯಲ್‌ ಮುಗಿಸ್ತಾರೆ. ಈ ಬಗ್ಗೆ ನಮ್ಮ ಬಳಿ ಚರ್ಚೆ ಮಾಡಿಲ್ಲ. ಎಲ್ಲದಕ್ಕೂ ಅಂತ್ಯ ಎನ್ನೋದು ಇರುತ್ತದೆ. ಹಾಗೆ ಅಮೃತಧಾರೆ ಧಾರಾವಾಹಿ ಕೂಡ ಒಂದಲ್ಲ ಒಂದಿನ ಎಂಡ್‌ ಆಗಲಿದೆ” ಎನ್ನಲಾಗಿದೆ.

ಸೀರಿಯಲ್‌ ಶುರುವಾಗಿ 3 ವರ್ಷ

ಇಲ್ಲಿಯವರೆಗೆ 949 ಎಪಿಸೋಡ್‌ಗಳು ಪ್ರಸಾರ ಆಗಿವೆ. ಸರಿಯಾಗಿ 1000 ಎಪಿಸೋಡ್‌ಗೆ ಸೀರಿಯಲ್‌ ಅಂತ್ಯ ಆಗಬಹುದು ಎನ್ನಲಾಗ್ತಿದೆ. 2023 ಮೇ 29ಕ್ಕೆ ಈ ಧಾರಾವಾಹಿ ಆರಂಭವಾಗಿದ್ದು, ಈಗಾಗಲೇ 1000 ಎಪಿಸೋಡ್‌ಗಳ ಮುನ್ನುಗ್ಗುತ್ತಿದೆ. ಒಟ್ಟೂ ಮೂರು ವರ್ಷಗಳ ಧಾರಾವಾಹಿಯಲ್ಲಿ ಸಾಕಷ್ಟು ವಾರಗಳ ಕಾಲ ನಂ 1 ಪಟ್ಟಕ್ಕೆ ಏರಿತ್ತು.

ಧಾರಾವಾಹಿಯಲ್ಲಿ ಏನಾಗಿದೆ?

ಗೌತಮ್‌ ದಿವಾನ್‌ ಮನೆಯವರ ಒತ್ತಾಯಕ್ಕೆ ಭೂಮಿಕಾಳನ್ನು ಮದುವೆ ಆಗ್ತಾನೆ. ಈ ಜೋಡಿ ಲೇಟ್‌ ಆಗಿ ಮದುವೆ ಆಗುವುದು. ಆಮೇಲೆ ಇವರಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ. ಇನ್ನು ಗೌತಮ್‌ ಮಲತಾಯಿ ಶಕುಂತಲಾ ಕೂಡ ಭೂಮಿಕಾ ಮಗಳನ್ನು ಕಿಡ್ನ್ಯಾಪ್‌ ಮಾಡಿಸಿದ್ದಳು, ಆದರೆ ಆ ಮಗು ಇನ್ನೂ ಸಿಕ್ಕಿಲ್ಲ. ಇನ್ನೊಂದು ಕಡೆ ಶಕುಂತಲಾ ಮಗ ಜಯದೇವ್‌ ಕೂಡ, ಗೌತಮ್‌ನ ಆಸ್ತಿಯನ್ನು ಕಿತ್ತುಕೊಂಡ. ಭೂಮಿಕಾ ಹಾಗೂ ಗೌತಮ್‌ ದೂರ ದೂರ ಆಗುವಂತೆ ಮಾಡಿದರು. ಕೊನೆಗೂ ಈ ಜೋಡಿ ಒಂದಾಯಿತು. ಆಮೇಲೆ ಜಯದೇವ್‌ ತನ್ನ ಕುತಂತ್ರದಿಂದ ಇನ್ನಷ್ಟು ದುಡ್ಡು ಮಾಡಲು ಹೋಗಿ, ಆಸ್ತಿಯನ್ನು ಕಳೆದುಕೊಂಡು, ಉಳಿದ ಸ್ವಲ್ಪ ಹಣವನ್ನು ಅವನ ಎರಡನೇ ಪತ್ನಿ ದಿಯಾ ಎತ್ತಿಕೊಂಡು ಹೋದಳು. ಈಗ ಗೌತಮ್‌ ತನ್ನೆಲ್ಲ ಆಸ್ತಿಯನ್ನು ಪಡೆದುಕೊಂಡು, ಮತ್ತೆ ದಿವಾನ್‌ ಸಾಮ್ರಾಜ್ಯಕ್ಕೆ ಮರಳಲಿದ್ದಾನೆ. ಜಯದೇವ್‌ ಈಗ ಬೀದಿಗೆ ಬಿದ್ದಿದ್ದಾನೆ, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ರಾಜೇಶ್‌ ನಟರಂಗ, ಛಾಯಾ ಸಿಂಗ್‌,‌ ಸಿಲ್ಲಿ ಲಲ್ಲಿ ಆನಂದ್, ವನಿತಾ ವಾಸು, ಕೃಷ್ಣಮೂರ್ತಿ ಕವತ್ತಾರ್‌, ಕರಣ್‌ ಕೆ ಆರ್‌, ಚೈತ್ರಾ ಶೆಣೈ, ಸಿಹಿ ಕಹಿ ಚಂದ್ರು, ರಾಣವ್‌ ಗೌಡ ಮುಂತಾದವರು ನಟಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಮೃತವರ್ಷಿಣಿ' ರಜಿನಿ ವಿರುದ್ಧ ಗಂಭೀರ ಆರೋಪ: ನಿರ್ದೇಶಕರಿಂದ ಫಿಲಂ ಚೇಂಬರ್​​ಗೆ ದೂರು
Amruthadhaare Serial: ಹೆಣ್ಣಿನ ಕಣ್ಣೀರಿನ ಶಾಪ ಬಿಡ್ಲೇ ಇಲ್ಲ, ಮತ್ತೆ ಬಂದ ದಿಯಾ; ಸರ್ವನಾಶವಾದ ಜಯದೇವ್‌