ಫ್ರೆಂಡ್​ ಅಪ್ಪನಾಗುವ ಹೊತ್ತು... ಮಾತಲ್ಲಿ ವರ್ಣಿಸಲಾಗದ ರಾಮ್​- ಸಿಹಿಯ ಈ ಕ್ಯೂಟ್​ ಸಂಬಂಧ ಹೀಗೆ ಇರುತ್ತಾ?

Published : Mar 21, 2024, 03:29 PM ISTUpdated : Mar 21, 2024, 03:30 PM IST
ಫ್ರೆಂಡ್​ ಅಪ್ಪನಾಗುವ ಹೊತ್ತು... ಮಾತಲ್ಲಿ ವರ್ಣಿಸಲಾಗದ ರಾಮ್​- ಸಿಹಿಯ ಈ ಕ್ಯೂಟ್​ ಸಂಬಂಧ ಹೀಗೆ ಇರುತ್ತಾ?

ಸಾರಾಂಶ

ಸೀತಾ-ರಾಮನ ಪ್ರೇಮ ಸಂಬಂಧಕ್ಕೆ ಸಿಹಿಯ ಒಪ್ಪಿಗೆ ಸಿಗುತ್ತಾ? ಅಮ್ಮನ ಬಗ್ಗೆ ಸಿಹಿ ಮಾಡಿರುವ ಕಂಪ್ಲೇಂಟ್​ ಏನು? ಸೀತಾರಾಮರ ಕಥೆ ಏನಾಗುತ್ತದೆ?   

ಇಷ್ಟು ದಿನ ಫ್ರೆಂಡ್​ ಫ್ರೆಂಡ್​ ಎಂದು ಒಂದು ನಿಮಿಷವೂ ರಾಮ್​ನನ್ನು ಬಿಟ್ಟಿರಲಾಗದ ಪುಟಾಣಿ ಸಿಹಿಗೆ ಈಗ ಫ್ರೆಂಡ್​ ಅಪ್ಪನಾಗುವ ಸಮಯ ಬಂದಾಗಿದೆ. ಸೀತಾ-ರಾಮ ಒಂದಾಗಿದ್ದಾರೆ. ಆಫೀಸ್​ಗೆ ರಜೆ ಇದ್ದದ್ದರಿಂದ ಇಬ್ಬರೂ ಗುಟ್ಟುಗುಟ್ಟಾಗಿ ಮಾತನಾಡುವುದನ್ನು ಸಿಹಿ ನೋಡಿದ್ದಾಳೆ. ಅವಳಿಗೆ ಅಮ್ಮ ಯಾರ ಜೊತೆ  ಮಾತನಾಡುತ್ತಿರುವುದು ಎಂದು ತಿಳಿದಿದೆ. ನಂತರ ರಾಮ್​ ಸಿಹಿಗೆ ಫೋನ್​ ಕೊಡುವಂತೆ ಹೇಳಿದ್ದಾಳೆ. ಇದೀಗ ಸೀತಾ-ರಾಮನ ಈ ಸ್ನೇಹ ಸಂಬಂಧಕ್ಕೆ ಪುಟಾಣಿ ಅಂಕಿತ ಹಾಕ್ತಾಳಾ ಎನ್ನುವುದು ಪ್ರಶ್ನೆ. 

ಅದೇ ಇನ್ನೊಂದೆಡೆ ಅಮ್ಮನ ಬಗ್ಗೆ ಭಾವಿ ಅಪ್ಪನಿಗೆ ಇದಾಗಲೇ ಕಂಪ್ಲೇಂಟ್​ ಶುರುವಿಟ್ಟುಕೊಂಡಿದ್ದಾಳೆ ಸಿಹಿ. ನನಗೆ ಪಿಜ್ಜಾ ತಿನ್ನಬೇಕು. ಆದರೆ ಅಮ್ಮ ಕಂಜೂಸ್​. ನನ್ನ ಫ್ರೆಂಡ್ಸ್​ ಎಲ್ಲಾ ಪಿಜ್ಜಾ ತಿಂತಾರೆ. ನನಗೆ ಮಾತ್ರ ಅಮ್ಮ ಕೊಡಿಸಲ್ಲ ಎಂದು ರಾಮ್​ ಬಳಿ ಕಂಪ್ಲೇಂಟ್​ ಮಾಡಿದ್ದಾಳೆ ಸಿಹಿ. ಪಿಜ್ಜಾ ತಾನೆ ಇವತ್ತೇ ಕೊಡಿಸುವೆ ಎಂದಿದ್ದಾನೆ ರಾಮ್​. ಇವತ್ತಾ ಎಂದು ಖುಷಿಯಿಂದ ಕೇಳಿದ್ದಾಳೆ ಸಿಹಿ. ಇದನ್ನು ಕೇಳಿ ಸೀತಾ ಅಚ್ಚರಿ ವ್ಯಕ್ತಪಡಿಸಿದ್ದಾಳೆ. ಒಟ್ಟಿನಲ್ಲಿ ಈ ಕ್ಯೂಟ್​ ಸಂಬಂಧ ಹೀಗೆಯೇ ಮುಂದುವರೆಯಲಿ, ಯಾರ ದೃಷ್ಟಿಯೂ ತಾಗದಿರಲಿ. ಸಿಹಿಯ ಬೆಸ್ಟ್​ ಫ್ರೆಂಡ್​​ ಬೇಗ ಅವಳ ಅಪ್ಪನಾಗಿ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಡಿವೋರ್ಸ್​ ಪಡೆದ ಬಳಿಕ ಮೊದಲ ಬಾರಿಗೆ ಒಟ್ಟಿಗೇ ಕಾಣಿಸಿಕೊಂಡ ಸಮಂತಾ- ನಾಗಚೈತನ್ಯ! ಏನಿದು ವಿಷ್ಯ?

ಸೀತಾ-ರಾಮರ ಲವ್​ ಸ್ಟೋರಿ ಏನೋ ಶುರುವಾಗಿಬಿಟ್ಟಿದೆ. ತನ್ನ ಹಿಂದಿನ ಕಥೆ ನಿಮಗೆ ಗೊತ್ತಿಲ್ಲ ಎಂದು ಅದನ್ನು ಹೇಳಲು ಹೋದಾಗ ರಾಮ್​ ತಡೆದಿದ್ದಾನೆ. ನನ್ನ ಹಿಂದಿನ ಕಥೆಯೂ ಚೆನ್ನಾಗಿಲ್ಲ, ಅದೆಲ್ಲಾ ನನಗೆ ಬೇಡ... ನೀವು ಬೇಕು, ನಿಮ್ಮ ಪ್ರೀತಿ ಬೇಕು ಎಂದು ಹೇಳುವ ಮೂಲಕ ಸೀತಾಳಿಗೆ ತನ್ನ ಹಿಂದಿನ ಕಥೆಯನ್ನು ಹೇಳಲು ರಾಮ್​ ಕೊಟ್ಟಿಲ್ಲ. ಆಗ ಸೀತಾ ಸುಮ್ಮನಾಗಿದ್ದಳು. ರಾಮ್​ನನ್ನು ಪ್ರೀತಿ ಮಾಡುವುದಾಗಿ ಒಪ್ಪಿಕೊಂಡಿದ್ದಳು. ಇದೀಗ ಇಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ. ರಾಮ್​ ಅಂತೂ ಸೀತಾಳ ಹೆಸರನ್ನು ತನ್ನ ಬೆಡ್​ರೂಮ್​ನಲ್ಲಿ ದೊಡ್ಡದಾಗಿ ಹಾಕಿಕೊಂಡಿದ್ದಾನೆ. ರಾತ್ರಿ ಇಬ್ಬರಿಗೂ ನಿದ್ದೆ ಬರುತ್ತಿಲ್ಲ. ಹೊಸದಾಗಿ ಲವ್​ ಸ್ಟೋರಿ ಶುರುವಾಗಿರುವ ಕಾರಣ, ಗುಸುಗುಸು ಪಿಸುಪಿಸು ಮಾತು ಶುರುವಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದಾರೆ. ಆದರೆ...?

ಹೌದು. ಈ ಪ್ರೀತಿಯ ನಡುವೆಯೇ ಸೀತಾಗೆ ಹಿಂದಿನ ಕಥೆಯ ಬಗ್ಗೆ ಟೆನ್ಷನ್​ ಶುರುವಾಗಿದೆ. ನಾನು ಇದನ್ನು ಮುಚ್ಚಿಡಬಾರದು ಎಂದುಕೊಂಡಿದ್ದಾಳೆ. ಸಂಪೂರ್ಣ ಕಥೆ ಕೇಳಿದ ಮೇಲೆ ರಾಮ್​ ನನ್ನನ್ನು ಒಪ್ಪಿಕೊಳ್ತಾನಾ ಎನ್ನುವುದೂ ಆಕೆಗೆ ಸಂದೇಹ ಶುರುವಾಗಿದೆ. ಅಷ್ಟಕ್ಕೂ ಸೀತಾಳ ಹಿಂದಿನ ಕಥೆಯೇನು? ಅವಳದ್ದು ನಿಜವಾಗಿಯೂ ಮದ್ವೆಯಾಗಿದ್ಯಾ? ಗಂಡ ಬಿಟ್ಟಿದ್ದಾಳಾ ಅಥ್ವಾ ಗಂಡನೇ ಇಲ್ವಾ? ಸಿಹಿ ಸೀತಾಳ ಸ್ವಂತ ಮಗಳು ಹೌದಾ? ಎಷ್ಟೊಂದು ಪ್ರಶ್ನೆಗಳು ವೀಕ್ಷರನ್ನು ಕಾಡುತ್ತಿವೆ. ಇದರ ಮಧ್ಯೆಯೇ, ಕೆಲ ಎಪಿಸೋಡ್​ ಹಿಂದೆ ಬೈಕ್​ನಲ್ಲಿ ಬಂದಾತನೊಬ್ಬ ಸಿಹಿಯನ್ನು ಕಿಡ್ನಾಪ್​ ಮಾಡಿದ್ದ. ಸೀತಾಳ ಮೇಲೆ ದಾಳಿ ಮಾಡಲು ನೋಡಿದ್ದ. ರಾಮ್​ನನ್ನು ಇರಿದಿದ್ದ. ಹಾಗಿದ್ದರೆ ಅವನಿಗೂ ಸೀತಾಗೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಸೀತಾರಾಮ ಸೀರಿಯಲ್​ ಫ್ಯಾನ್​ಗಳನ್ನು ಕಾಡುತ್ತಿದೆ.

ಸದ್ಗುರು ನೋಡಿ ದೇವರೇ ಕುಸಿದು ಬಿದ್ದಂತೆ ಭಾಸವಾಯ್ತು: ಕಂಗನಾ ಭಾವುಕ- ಆರೋಗ್ಯದ ಮಾಹಿತಿ ನೀಡಿದ ಪುತ್ರಿ


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!