ಇಡೀ ಪ್ರಪಂಚ ಎದುರು ನಿಂತರೂ ಆಕೆನೇ ಬೇಕು, ಒಬ್ಬರೇ ಬದುಕಿ ತೋರಿಸುತ್ತೀವಿ: ಭಾವುಕರಾದ ಅನುಪಮಾ-ಕೃಷಿ!

By Vaishnavi Chandrashekar  |  First Published Mar 21, 2024, 12:33 PM IST

ಸ್ನೇಹಿತೆಯರ ಜೊತೆ ಬರ್ತಡೇ ಆಚರಿಸಿಕೊಂಡ ಅನುಪಮಾ ಗೌಡ. ಭಾವುಕರಾದ ಕೃಷಿ ತಾಪಂಡ.
 


ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಅನುಪಮಾ ಗೌಡ ಸದ್ಯ ಸುವರ್ಣ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ಈ ನಡುವೆ ತಮ್ಮ 32ನೇ ಹುಟ್ಟುಹಬ್ಬವನ್ನು ಸ್ನೇಹಿತೆಯ ಜೊತೆ ಆಚರಿಸಿಕೊಂಡಿದ್ದಾರೆ. ಕಿರುತೆರೆ ನಟಿ ಇಶಿತಾ ವರ್ಷ, ನಟಿ ಕೃಷಿ ತಾಪಂಡ ಮತ್ತು ಖ್ಯಾತ ಡಿಸೈನರ್ ತೇಜಸ್ವಿನಿ ಕ್ರಾಂತಿ ಭಾಗಿಯಾಗಿದ್ದರು. ವೇದಿಕೆ ಮೇಲೆ ಕೇಕ್ ಕಟ್ ಮಾಡಿಸಿ ಒಂದೆರಡು ಗೇಮ್ ಆಡಿ ಎಂಜಾಯ್ ಮಾಡಿದ್ದಾರೆ. ಈ ನಡುವೆ ತಮ್ಮ ಸ್ನೇಹಿತೆ ಎಷ್ಟು ಮುಖ್ಯ ಎಂದು ಕೃಷಿ ಹಂಚಿಕೊಂಡಿದ್ದಾರೆ.

ಅನುಪಮಾ ಗೌಡ ನನ್ನ ಜೀವನದಲ್ಲಿ ಬಂದಿದ್ದಕ್ಕೆ ನಾನು ತುಂಬಾನೇ ಪುಣ್ಯ ಮಾಡಿದ್ದೀನಿ. ಇಡೀ ಪ್ರಪಂಚ ಒಂದು ಕಡೆ ನಿಂತುಕೊಂಡಿದ್ದರೂ ನಾನು ಒಬ್ಬರನ್ನು ಸೆಲೆಕ್ಟ್ ಮಾಡಬೇಕು ಅಂದ್ರೆ ಆ ವ್ಯಕ್ತಿ ಅನು ಮಾತ್ರ. ಏಕೆಂದರೆ ನಾವಿಬ್ಬರೂ ಹೇಗೆ ಇರಬಹುದು ಸ್ನೇಹಿತರಾದ ಮೇಲೆ ನಮ್ಮಲ್ಲಿ ಸಾಕಷ್ಟು ಬದಲಾವಣೆ ಆಗಿದೆ ನಾವು ಒಟ್ಟಿಗೆ ಬೆಳೆದಿದ್ದೀವಿ. ಒಂಟಿಯಾಗಿದ್ದೀನಿ ಜೊತೆಗೆ ಯಾರೋ ಇರಬೇಕು ಅನಿಸಿದಾಗ ಅನು ಸದಾ ಇರುತ್ತಾರೆ  ಅನ್ನೋ ನಂಬಿಕೆ ಇದೆ. ಏನೇ ಕಷ್ಟ ಬರಲಿ ನಾನು ಅವಳ ಪರ ನಿಲ್ಲುತ್ತೀನಿ. ಪ್ರಪಂಚದ ಯಾವುದೇ ಮೂಲೆಯಿಂದ ಆಕೆ ಕರೆ ಮಾಡಿದ್ದರೂ ನಾನು ವಾಪಸ್‌ ಹೋಗಿಬಿಡುತ್ತೀನಿ. ನನ್ನ ಜೀವನದಲ್ಲಿ ನೀನು ತುಂಬಾನೇ ಸ್ಪೆಷಲ್ ಎಂದು ನಟಿ ಕೃಷಿ ತಾಪಂಡ ಮಾತನಾಡಿದ್ದಾರೆ.

Tap to resize

Latest Videos

ಕೃಷಿ ತಾಪಂಡಾ ತಮ್ಮನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಅನುಪಮಾ ಗೌಡ; ನೋಡಿದ್ರಾ?

ನಮ್ಮ ಜೀವನದಲ್ಲಿ ಒಂದು ಸಮಯದವರೆಗೂ ಫ್ಯಾಮಿಲಿ ಇರುತ್ತದೆ ಅದಾದ ಮೇಲೆ ನಾವು ಬೆಳೆಯುವುದಕ್ಕೆ ಜೊತೆಯಲಿ ಸದಾ ಇರುವುದು..ನಕ್ಕಾಗ ಅತ್ತಾಗ ಜೊತೆಯಾಗಿ ಇರುವುದು ಫ್ರೆಂಡ್ಸ್‌ ಮಾತ್ರ. ಅದರಲ್ಲೂ ಫೀಮೆಲ್‌ ಸ್ನೇಹಿತರು ತುಂಬಾನೇ ಸ್ಪೆಷಲ್ ಆಗುತ್ತಾರೆ. ಒಬ್ಬರೇ ಬದುಕಿ ಆಂದರೂ ಬದುಕಿ ತೋರಿಸಬಹುದು.ನಮ್ಮ ನಡುವೆ ಇರುವ ಸಣ್ಣ ಪುಟ್ಟ ಸಾಧನೆಯನ್ನು ನಾವು ಸೆಲೆಬ್ರೇಟ್ ಮಾಡುತ್ತೀವಿ ಎಂದು ಕೃಷಿ ತಾಪಂಡ ಹೇಳಿದ್ದಾರೆ.

 

click me!