
ಹೊಸ ವರ್ಷಕ್ಕೆ ಹೊಸ ಧಾರಾವಾಹಿಗಳು ಮೂಡಿ ಬರುತ್ತಿದೆ, ಹಳೆ ಅಥವಾ ಕಡಿಮೆ ಟಿಆರ್‌ಪಿ (TRP) ಇರುವ ಧಾರಾವಾಹಿಗಳು ಅಂತ್ಯವಾಗುತ್ತಿವೆ. ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾವ್ಯಾಂಜಲಿ (Kavyanjali) ಧಾರಾವಾಹಿ ಕೂಡ ಅಂತ್ಯವಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವೋ, ಸುಳ್ಳೋ ಎಂದು ಯಾರಿಗೂ ಗೊತ್ತಿರಲಿಲ್ಲ. ಆದರೀಗ ಸ್ವತಃ ನಟ ದರ್ಶನ್ (Darshan) ಸ್ಪಷ್ಟನೆ ಕೊಟ್ಟಿದ್ದಾರೆ.
ದರ್ಶನ್ ಮಾತು:
'ನೀವು ರಾಜನಾಗಿ (King) ಸಾಯಬೇಕು. ಇಲ್ಲ ನಾವು ವಿಲನ್ ಆಗುವುದನ್ನು ನೋಡುವುದಕ್ಕೆ ಹೆಚ್ಚು ದಿನ ಬದುಕಿರಬೇಕು. ಈ ಸಾಲುಗಳು ಸದಾ ನನ್ನ ತಲೆಯಲ್ಲಿ ಓಡುತ್ತದೆ. ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಟಿಸುವಾಗ ನನಗೆ ಒಂದೊಂದು ಸಲ ನಟನಾಗಿ ನನ್ನ ಪಾತ್ರ ಎಕ್ಸಪ್ಲೋರ್ (Explore) ಮಾಡಲು ಏನೂ ಇಲ್ಲ ಅನಿಸಿದ್ದಾಗ ಹೊರ ನಡೆಯಬೇಕು ಅನಿಸಿದ್ದು ನಿಜ. ತಮಾಷೆ ಏನೆಂದರೆ ಸಮಯ ಎಲ್ಲವನ್ನೂ ಬದಲಾಯಿಸಿದೆ. ಈಗ ಇದೆಲ್ಲವೂ ನನ್ನ ಮನಸ್ಸಿಗೆ ಹತ್ತಿರವಾಗಿದೆ. ನಮ್ಮ ಧಾರಾವಾಹಿ ಅಪ್ಡೇಟ್ ನೀಡುವುದಾದರೆ, ನನ್ನಷ್ಟು ನಿರಾಶೆ ಅಥವಾ ಹತಾಶೆಗೆ ಯಾರಿಗೂ ಆಗಿರುವುದಿಲ್ಲ ಬಿಡಿ,' ಎಂದು ದರ್ಶನ್ ನಟಿ ಜೊತೆಗಿರುವ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
'ನಾಯಕಿ ವಿದ್ಯಾಶ್ರೀ ಜಯರಾಮ್ (Vidyashree Jayaram) ನೀವು ತುಂಬಾನೇ ಸ್ವೀಟ್‌ಹಾರ್ಟ್, ನನಗೆ ಒಳ್ಳೆಯ ಜೋಡಿಯಾಗಿ ಒಳ್ಳೆಯ ಸ್ನೇಹಿತೆಯಾಗಿದ್ದವರು, #Sidkaವನ್ನು ಖಂಡಿತ ಮಿಸ್ ಮಾಡಿಕೊಳ್ಳುವೆ. ಸಿದ್ಧಾರ್ಥ್‌ಗೆ (Siddhartha) ಸಿಕ್ಕಿರುವ ಕಾವ್ಯಾ (Kavya) ನೀವೇ. ಹಾಗೆ ಕಾವ್ಯಾಂಜಲಿ ತಂಡದಲ್ಲಿರುವ ಪ್ರತಿಯೊಬ್ಬರಿಗೂ ಶುಭಾ ಹಾರೈಸುವೆ. ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳಿಗೆ ಒಳ್ಳೆಯದಾಗಲಿ. ಕೊನೆಯ ಎಪಿಸೋಡ್ ಚಿತ್ರೀಕರಣ ಆಗಿದ್ದು, ನಿಮಗೆ ಈ ಲಾಸ್ಟ್ ಎಪಿಸೋಡ್‌ಗಳು ಮನೋರಂಜನೆ ನೀಡುತ್ತವೆ. ಇಷ್ಟವಾಗುತ್ತದೆ. ಮುರಿದ ಮನಸ್ಸಿನಿಂದ ನಾನು ಈ ಧಾರಾವಾಹಿಗೆ ಬೈ ಹೇಳುತ್ತಿರುವೆ. ಪ್ರೀತಿ ತೋರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು,' ಎಂದು ದರ್ಶನ್ ಬರೆದುಕೊಂಡಿದ್ದಾರೆ.
ಧಾರಾವಾಹಿಗೆ ಬೈ ಹೇಳುವ ಕೆಲವು ದಿನಗಳ ಮುನ್ನ ದರ್ಶನ್ ಕಾವ್ಯಾ ಪಾತ್ರಕ್ಕೆ ಭಾವುಕವಾಗಿ ಸಂದೇಶ ಬರೆದಿದ್ದರು.
'ಪ್ರೀತಿಯಾ ಕಾವ್ಯಾ, ಅತಿ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ನೀನು ಓಲ್ಡ್ ಸ್ಕೂಲ್ (Old school) ಹುಡುಗಿ. ಎಲ್ಲಾ ನಾಟಕಗಳ ನಡುವೆ ನಿಮ್ಮ ಮುಗ್ಧತೆ ಮಿಂಚುತ್ತದೆ. ಕಿಡ್ (Kid) ಅನ್ನುವ ಪದ ನಿನಗೆ ಹೇಳಿ ಮಾಡಿಸಿದ್ದು. ನಿಜ ಹೇಳಬೇಕೆಂದರೆ ನಾನು ಜವಾಬ್ದಾರಿ ಇರುವ ಕಿಡ್‌ನ ಭೇಟಿ ಆಗಿರುವೆ. ನಿನ್ನ ಕುಟುಂಬಕ್ಕೆ ನೀನು ತೋರಿಸುವ ಪ್ರೀತಿಗೆ ನಾನು ಸೋತಿರುವೆ. ನನಗೆ ಖಂಡಿತ ಗೊತ್ತು ನಿನ್ನಂಥ ವ್ಯಕ್ತಿ ಪಡೆಯುವುದಕ್ಕೆ ಅವರು ಎಷ್ಟು ಅದೃಷ್ಟ ಮಾಡಿದ್ದರು ಎಂದು. ನನಗೆ ಸಿಕ್ಕಿರುವ ಬೆಸ್ಟ್ ಕೋ-ಸ್ಟಾರ್ ನೀವು. ಎಂದಿಗೂ ದೊಡ್ಡವಳಾಗಬೇಡ,' ಎಂದು ದರ್ಶನ್ ಬರೆದುಕೊಂಡಿದ್ದರು.
ಈ ತಿಂಗಳ ಕೊನೆಗೆ ಧಾರಾವಾಹಿ ಕ್ಲೈಮ್ಯಾಕ್ಸ್ (climax) ಹಂತ ತಲುಪಲಿದೆ. ಅಭಿಮಾನಿಗಳು ಆಗಲೇ ಬೇಸರದಲ್ಲಿದ್ದಾರೆ. ಕ್ಯಾವ್ಯಾ ಮತ್ತು ಸಿದ್ಧಾರ್ಥ್ ಪಾತ್ರ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿತ್ತು. ಅವರಿಬ್ಬರ ಸಣ್ಣ ಪುಟ್ಟ ರೊಮ್ಯಾನ್ಸ್ ಗಮನ ಸೆಳೆಯುತ್ತಿತ್ತು.
ಕಾವ್ಯಾಂಜಲಿ ಅಂತ್ಯವಾಗುತ್ತಿದ್ದಂತೆ ದರ್ಶನ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಜನವರಿ 31ರಿಂದ ಸ್ಟಾರ್ ಸುವರ್ಣದಲ್ಲಿ (Star Suvarna) ಪ್ರಸಾರವಾಗಲಿರುವ ಬೆಟ್ಟದ ಹೂ (Betta hoo) ಧಾರಾವಾಹಿಯಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಸೋಮವಾರದಿಂದ ಶನಿವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. 'ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹ ನಮ್ಮ ಮೇಲಿರಲಿ' ಎಂದು ಪ್ರೋಮೋ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.