ಜೊತೆ ಜೊತೆಯಲಿ ಪ್ರೇಮೋತ್ಸವ ಸಂಚಿಕೆಯಲ್ಲಿ ಆರ್ಯವರ್ಧನ್ ಹೇಳಿದ ಒಂದೇ ಒಂದು ಸತ್ಯ ಕೇಳಿ ಅನು ಶಾಕ್ ಆದ್ಲಾ? ಆರ್ಯ ಅವರ ಪ್ರೀತಿ ನಿರಾಕರಿಸಿ ಏನೂ ಹೇಳದೆ ಓಡಿಹೋದದ್ದು ಏಕೆ ?
ಕಿರುತೆರೆಯ ಜನ ಮೆಚ್ಚಿದ ಧಾರಾವಾಹಿ 'ಜೊತೆ ಜೊತೆಯಲಿ' ಪ್ರೇಮೋತ್ಸವ ಸಂಚಿಕೆ ಪ್ರಸಾರವಾಗುತ್ತಿದೆ. ಪ್ರೀತಿ ಹೇಳಿಕೊಳ್ಳುವ ತವಕದಲ್ಲಿರುವ ಆರ್ಯ ಸ್ನೇಹಿತ ಜೇಂಡೆ ಸಹಾಯದಿಂದ ಮನೆಯನ್ನು ವಿಭಿನ್ನವಾಗಿ ಅಲಂಕರಿಸಿದ್ದಾರೆ. ಪ್ರೇಮ ನಿವೇದನೆ ಮಾಡುವುದಷ್ಟೇ ಅಲ್ಲದೇ ತನ್ನ ಹಳೆ ನೆನಪುಗಳನ್ನು ಅನು ಬಳಿ ಹೇಳಿಕೊಳ್ಳುವ ಸಲುವಾಗಿ ಆರ್ಯ ಏನೋ ಸರ್ಪ್ರೈಸ್ ಕೂಡ ಅರೆಂಜ್ ಮಾಡಿದ್ದಾರೆ. ಖುಷಿ ಖುಷಿಯಲ್ಲಿ ವರ್ಧನ್ ಅರಮನೆಯೊಳಗೆ ಕಾಲಿಟ್ಟರುವ ಅನುಳನ್ನು ಹೇಗೆ ಎದರಿಸುತ್ತಾರೆ ಆರ್ಯ?
ಕಾಯುತ್ತಿದ್ದ ಆ ಘಳಿಗೆ ಬಂದೇ ಬಿಡ್ತು; ಅನು - ಆರ್ಯ ಪ್ರೇಮೋತ್ಸವಕ್ಕೆ ಕೌಂಟ್‌ಡೌನ್..!
ಸೀರೆ ಗಿಫ್ಟ್, ಅದರ ಅರ್ಥ ಗೊತ್ತಾ?
ಮನೆಯೊಳಗೆ ಅನುಳನ್ನು ಬರ ಮಾಡಿಕೊಂಡ ಆರ್ಯ ತೊದಲು ಮಾತಿನಲ್ಲಿ ತನ್ನ ಪ್ರೀತಿ ಹೇಳಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಆ ನಂತರ ಅನುಗೆ ತಂದ ಸೀರೆ ಉಡುಗೊರೆಯನ್ನು ನೀಡಲು ಮುಂದಾಗುತ್ತಾನೆ.
ರಾಜನಂದಿನಿ ಬ್ರ್ಯಾಂಡ್‌ನ ಪೀಚ್ ವಿತ್ ಗ್ರೀನ್ ಸೀರೆಯನ್ನು ಅನು ಕೈಯಲ್ಲಿಟ್ಟು ಈ ಹೆಸರಿನ ಬಗ್ಗೆ ನಿನ್ನ ಅಭಿಪ್ರಾಯ ಹಾಗೂ ಅದರ ಹಿಂದಿರುವ ಕಥೆ ಗೊತ್ತಾ ಎಂದು ಪ್ರಶ್ನಿಸುತ್ತಾರೆ. ತುಂಬಾ ಪರಿಚಯವಿರುವ ಜನಪ್ರಿಯ ಹೆಸರಿದು ಎಂದು ಅನು ಹೇಳಿದಳು ಆದರೆ ಹೆಸರು ಯಾರದ್ದು ಎಂದು ಪ್ರಶ್ನಿಸಿದಾಗ 'ರಾಜನಂದಿನಿ ಕೇವಲ ಬ್ರ್ಯಾಂಡ್ ಅಲ್ಲ ಅದು ನನ್ನ ಹೆಂಡತಿ ಹೆಸರು' ಎಂದು ಆರ್ಯವರ್ಧನ್ ಹೇಳುತ್ತಾರೆ.
ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಮಡದಿ, ಮಕ್ಕಳ 'ಜೊತೆ ಜೊತೆಯಲಿ' ಆರ್ಯವರ್ಧನ್...!ಸೀರೆ ಬಿಟ್ಟು ಓಡಿಹೋದ ಅನು:
ಆರ್ಯ ಹೇಳಿದ ಮಾತುಗಳನ್ನು ಕೇಳಿ ಶಾಕ್ ಆದ ಅನು ಸೀರೆಯನ್ನು ಕೆಳಗೆ ಬೀಳಿಸುತ್ತಾಳೆ. ಆರ್ಯನೇ ಅದನ್ನು ಎತ್ತಿ ಟೇಬಲ್ ಮೇಲೆ ಇಡುತ್ತಾನೆ. ಅಲ್ಲಿಗೆ ಕಳೆದ ವಾರದ ಸಂಚಿಕೆ ಮುಕ್ತಾಯವಾಗುತ್ತದೆ. ಇಂದಿನಿಂದ ಪ್ರಸಾರವಾಗುವ ಸಂಚಿಕೆಯಲ್ಲಿ ಅನು ಯಾವ ಪ್ರಶ್ನೆಯೂ ಕೇಳದೇ ಮನೆಯಿಂದು ಓಡಿ ಹೋಗುತ್ತಾಳೆ. ಮುಂದೇನಾಗಿರಬಹುದು ಎಂಬ ನಿಮ್ಮೆಲ್ಲರ ಕುತೂಹಲಕ್ಕೆ ಇಂದಿನ ಸಂಚಿಕೆ ಉತ್ತರ ನೀಡಲಿದೆ.