
ಹೀಗೊಂದು ಸುದ್ದಿ ಕಿರುತೆರೆಯಿಂದ ಕೇಳಿ ಬರುತ್ತಿದೆ. 2020ರಲ್ಲಿ ಬೇಸರದ ಸುದ್ದಿಗಳೇ ಕೇಳಿಬರುತ್ತಿರುವ ಹೊತ್ತಿನಲ್ಲಿ ಬಿಗ್‌ಬಾಸ್ ಕೂಡ ಇಲ್ಲ ಎನ್ನುವ ಸಂಗತಿ ಕಿರುತೆರೆ ಅಭಿಮಾನಿಗಳಿಗೆ ಮತ್ತಷ್ಟು ಬೇಸರ ಉಂಟುಮಾಡುವುದರಲ್ಲಿ ಅಚ್ಚರಿ ಇಲ್ಲ. ಜನ ಎಷ್ಟೇ ಮೆಚ್ಚಿಕೊಂಡರೂ ಬೈದುಕೊಂಡರೂ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಕುತೂಹಲವಂತೂ ಇದ್ದೇ ಇತ್ತು. ಅವರು ಹೋದರಂತೆ, ಇವರು ಜಗಳಾಡಿದರಂತೆ ಎಂಬ ಚರ್ಚೆಗಳು ಸಾಮಾನ್ಯವಾಗಿದ್ದವು. ಆದರೆ ಬಿಗ್‌ಬಾಸ್ ಕೊರೋನಾಗೆ ಶರಣಾಗಿದೆ. ಮೂಲಗಳ ಪ್ರಕಾರ ಈ ವರ್ಷ ಬಿಗ್‌ಬಾಸ್ ಪ್ರಸಾರವಾಗುವುದಿಲ್ಲ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಿಂದ ಬಿಗ್‌ಬಾಸ್ ರಿಯಾಲಿಟಿ ಶೋ ಆರಂ‘ವಾಗುತ್ತಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಿನಿಂದಲೇ ಬಿಗ್‌ಬಾಸ್ ಸೀಸನ್ ೮ ಆರಂ‘ವಾಗಬೇಕಿತ್ತು. ಆದರೆ, ಈಗ ಬಂದಿರುವ ಮಾಹಿತಿ ಪ್ರಕಾರ ಈ ವರ್ಷ ಕನ್ನಡದಲ್ಲಿ ಬಿಗ್‌ಬಾಸ್ ಶೋ ಇರಲ್ಲ. ಹೆಚ್ಚು ಕಮ್ಮಿ ಆರು ತಿಂಗಳು ತಡವಾಗಿ ಬರಲಿದೆ. ಅಲ್ಲಿಗೆ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಬಿಗ್‌ಬಾಸ್ ನೋಡುವ ಬಾಗ್ಯ ಕಿರುತೆರೆ ಪ್ರೇಕ್ಷಕರಿಗೆ ಸಿಗಲಿದೆ.
ಸುದೀಪ್ ನಿರೂಪಣೆಯಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಜನಪ್ರೀತಿ ಗಳಿಸಿಕೊಂಡಿದ್ದು ಇತಿಹಾಸ. ಅದೇ ಜನಪ್ರೀತಿಯಿಂದಲೇ ಅನೇಕ ಸೀಸನ್‌ಗಳು ಪ್ರಸಾರವಾಗಿವೆ. ಮುಂದಿನ ಸೀಸನ್‌ಗಾಗಿ ಕಾಯುತ್ತಿರುವ ವೇಳೆಯಲ್ಲಿ ಈ ಸುದ್ದಿ ಹೊರಬಿದ್ದಿದೆ. ಆದರೆ ತೆಲುಗಿನಲ್ಲಿ ಬಿಗ್‌ಬಾಗ್‌ಸ ಕಾರ್ಯಕ್ರಮ ಪ್ರಸಾರ ಆರಂ‘ವಾಗಿದೆ. ಅಲ್ಲಿ ನಾಗಾರ್ಜುನ ನಿರೂಪಣೆಯ ಹೊಣೆ ಹೊತ್ತುಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ 1 ಮಿಲಿಯನ್ ಫಾಲೋವರ್ಸ್ ಮುಟ್ಟಿದ ನಿವೇದಿತಾ ಗೌಡ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.