
ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 12ರ ರಿಯಾಲಿಟಿ ಶೋಗೆ ಸೂರಜ್ ವೈಲ್ಡ್ ಕಾರ್ಡ್ ಎಂಟ್ರಿ ಪ್ರೇಮಲೋಕ ಸೃಷ್ಟಿ ಮಾಡಿದೆ. ರಾಶಿಕಾಗೆ, ಸೂರಜ್ ರೆಡ್ ರೋಸ್ ನೀಡಿದ್ದೇ ನೀಡಿದ್ದು, ಡುಬಕ್ ಅಂತ ರಾಶಿಕಾ, ಸೂರಜ್ ಬಲೆಗೆ ಬಿದ್ದಿದ್ದಾರೆ. ಸೂರಜ್ ಎಲ್ಲಿಗೆ ಹೋದ್ರೂ ರಾಶಿಕಾ ಅಲ್ಲಿರ್ತಾರೆ. ಸೂರಜ್ ಅಡುಗೆ ಮನೆಗೆ ಹೋಗ್ಲಿ, ರೂಮ್ ನಲ್ಲಿರಲಿ, ಹಾಲ್ ನಲ್ಲಿರಲಿ ಇಲ್ಲ ಸ್ವಿಮ್ಮಿಂಗ್ ಫೂಲ್ ಪಕ್ಕ ಕುಳಿತುಕೊಂಡಿರ್ಲಿ ಎಲ್ಲ ಕಡೆ ಹಿಂದೆ ಹಿಂದೆ ಹೋಗುವ ರಾಶಿಕಾ ಮನಸ್ಥಿತಿ ಮನೆಯವರಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಅವರಿಬ್ಬರು ಒಟ್ಟಿಗಿದ್ರೆ ಅಲ್ಲಿಗೆ ಮನೆಯ ಬೇರೆ ಸದಸ್ಯರು ಸುಳಿಯೋದೂ ಇಲ್ಲ.
ಬಿಗ್ ಬಾಸ್ ಮನೆಯಲ್ಲಿ ನಿನ್ನೆ ರಾಶಿಕಾ, ಸೂರಜ್ ಹಾಗೂ ರಘು ಮಾತನಾಡ್ತಿರುವಾಗ, ಸೂರಜ್ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಎಲ್ಲರೂ ಅವರವರ ಆಟ ಆಡೋಕೆ ಬಂದಿದ್ದು, ನಮಗಾಗಿ ನಾವು ಇಲ್ಲಿಗೆ ಬಂದಿದ್ದೇವೆ ಅಂತ ಮಾತಿನ ಮಧ್ಯೆ ರಾಶಿಕಾ ಹೇಳ್ತಾರೆ. ಇದಕ್ಕೆ ಪ್ಲರ್ಟ್ ಮಾಡ್ತಾ, ನಾನು ನಿನಗೋಸ್ಕರ ಬಂದಿದ್ದು ಅಂತಾರೆ ಸೂರಜ್. ಈ ಮಾತು ಕೇಳಿ ನಾಚಿ ನೀರಾಗುವ ರಾಶಿಕಾ, ಹೌದು ಹೌದು ಅಂತಾರೆ.
ನಿಜವಾಗ್ಲೂ ದೆವ್ವದ ಮಂತ್ರ ವರ್ಕ್ ಆಗಿ ಮಳೆ ನಿಲ್ತಾ?
ಸೂರಜ್, ಹ್ಯಾಂಡ್ಸಮ್ ಹುಡುಗ. ಇದ್ರಲ್ಲಿ ಎರಡು ಮಾತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಹುಡುಗಿಯರ ಮನಸ್ಸು ಗೆದ್ದಿರುವ ಸೂರಜ್, ಬಿಗ್ ಬಾಸ್ ಮನೆಗೆ ಬರ್ತಿದ್ದಂತೆ ಹೊಸ ಲೋಕ ಸೃಷ್ಟಿ ಮಾಡಿದ್ದಾರೆ. ಎಲ್ಲ ಹುಡುಗಿಯರೂ ತಿರುಗಿ ತಿರುಗಿ ಸೂರಜ್ ನೋಡಿದ್ರು. ಆದ್ರೀಗ ರಾಶಿಕಾ, ಸೂರಜ್ ಗೆ ಅಂಟ್ಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೂರಜ್ ಹಾಗೂ ರಾಶಿಕಾಯ ಸಾಕಷ್ಟು ವಿಡಿಯೋ ವೈರಲ್ ಆಗ್ತಾನೆ ಇದೆ. ಮಾತಿನ ಮಧ್ಯೆ, ಬಂದ ತಕ್ಷಣ ನೀವೇ ಚೆನ್ನಾಗಿ ಅನ್ಸಿದ್ದು, ಅದಕ್ಕೆ ನಿಮ್ಗೆ ರೆಡ್ ರೋಸ್ ನೀಡ್ದೆ. ಆದ್ರೆ ನೀವು ನನಗೆ ಹಾರ್ಟ್ ನೀಡ್ಲಿಲ್ಲ, ರಿಷಾಗೆ ನೀಡಿದ್ರಿ ಅಂತ ಸೂರಜ್, ರಾಶಿಕಾ ಕಾಲೆಳೆದಿದ್ದಾರೆ. ಇದನ್ನು ಸೂರಜ್ ಸೀರಿಯಸ್ ಆಗಿ ಹೇಳಿದ್ದಾ ಇಲ್ಲ ರಾಶಿಕಾ ಇದನ್ನು ಸೀರಿಯಸ್ ಆಗಿ ತಗೊಂಡಿದ್ದಾರಾ ಗೊತ್ತಿಲ್ಲ. ವೀಕ್ಷಕರು ಮಾತ್ರ ಇವರಿಬ್ಬರನ್ನು ನೋಡಿ ಉರಿದುಕೊಳ್ತಿದ್ದಾರೆ. ಅದ್ರಲ್ಲೂ ರಾಶಿಕಾ ವರ್ತನೆ ಯಾಕೋ ವೀಕ್ಷಕರಿಗೆ ಇಷ್ಟ ಆಗ್ತಿಲ್ಲ.
Bigg Boss ಮನೆಯಿಂದ ಸೀದಾ ಪೊಲೀಸ್ ಸ್ಟೇಷನ್ಗೆ Ashwini Gowda? ಮರುಕಳಿಸತ್ತಾ 10ನೇ ಸೀಸನ್?
ರಾಶಿಕಾ ಮೇಲೆ ಕೆಂಡ ಕಾರಿದ ವೀಕ್ಷಕರು :
ಸೂರಜ್, ರಾಶಿಕಾ ಹಿಂದೆ ಬಿದ್ದಿಲ್ಲ, ಅವ್ರು ಅವ್ರ ಆಟ ಆಡ್ತಿದ್ದಾರೆ, ಆದ್ರೆ ರಾಶಿಕಾರದ್ದು ಅತಿಯಾಯ್ತು ಎನ್ನುವ ಮಾತುಗಳೇ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರ್ತಿವೆ. ರಾಶಿಕಾ ಬರೀ ಸೂರಜ್ ಹಿಂದೆ ಹೋಗೋದಲ್ಲ. ತಮ್ಮ ಆಟವನ್ನು ಸಂಪೂರ್ಣ ಮರೆತಿದ್ದಾರೆ. ಬೇರೆ ಸದಸ್ಯರ ಜೊತೆ ಬೆರೆಯೋದು ಕಾಣ್ತಿಲ್ಲ. ಸೂರಜ್ ಹಾಗೂ ರಾಶಿಕಾ ಏಕ ವಚನದಲ್ಲಿ ಮಾತನಾಡೋವಷ್ಟು ಆಪ್ತರಾಗಿದ್ದು, ರಾಶಿಕಾ ಬಾಯಿ ಮಾತ್ರ ಅಲ್ಲ ಕೈ ಕೂಡ ಆಡ್ತಿದೆ, ಸೂರಜ್ ಕೈ, ಮೈ ಮುಟ್ಟಿ ಮಾತನಾಡುವಷ್ಟು ರಾಶಿಕಾ ಸಲಿಗೆ ಬೆಳೆಸಿಕೊಂಡಿದ್ದು, ಇದನ್ನು ನೋಡೋಕೆ ಆಗ್ತಿಲ್ಲ ಅಂತ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ರಾಶಿಕಾ ಆಟ ಅತಿಯಾಯ್ತು ಎನ್ನುವ ಕಮೆಂಟ್ ಬರ್ತಿದೆ. ಸೂರಜ್ ಜಿಮ್ ದೇಹ ಹೊಂದಿದ್ದು, ಅವ್ರ ಜೊತೆ ಪ್ರೀತಿ ನಾಟಕ ಆಡ್ತಾ ಇನ್ನೊಂದಿಷ್ಟು ದಿನ ಮನೆಯಲ್ಲಿರಬಹುದು ಎನ್ನುವ ಪ್ಲಾನ್ ರಾಶಿಕಾದ್ದು ಎನ್ನುತ್ತಿದ್ದಾರೆ ವೀಕ್ಷಕರು. ಇಬ್ಬರ ಮಧ್ಯೆ ನಿಜವಾಗ್ಲೂ ಪ್ರೀತಿ ಶುರು ಆಗಿದ್ಯಾ ಇಲ್ಲ ಕಂಟೆಂಟ್ ಗಾಗಿ ನಾಟಕ ಆಡ್ತಿದ್ದಾರಾ ಅದಕ್ಕೆ ಅವರೇ ಉತ್ತರ ನೀಡ್ಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.