50 ಲಕ್ಷ ಕ್ಯಾಷ್​, ಐಷಾರಾಮಿ ಕಾರು- ಸ್ಕೂಟರ್​​ ಪಡೆವವರಾರು? ಬಿಗ್​ಬಾಸ್​ ಫಿನಾಲೆ ಭರ್ಜರಿ ಝಲಕ್ ಇಲ್ಲಿದೆ...

By Suvarna News  |  First Published Jan 27, 2024, 10:54 AM IST

ಬಿಗ್​ಬಾಸ್​ ಸೀಸನ್​ 10 ಗ್ರ್ಯಾಂಡ್​ ಫಿನಾಲೆ ಇಂದು ಮತ್ತು ನಾಳೆ ಆಗಲಿದ್ದು, ಬಿಗ್​ಬಾಸ್​ ಕಪ್​ ಗೆಲ್ಲರಿರುವ ಸ್ಪರ್ಧಿಗಳು ಯಾರು? ಫಿನಾಲೆಯ ಪ್ರೊಮೋ ರಿಲೀಸ್​ ಆಗಿದೆ. ​
 


ಇಂದು ಮತ್ತು ನಾಳೆ ಬಿಗ್​ಬಾಸ್​ ಕನ್ನಡದ ಸೀಸನ್​ 10ರ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ  6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದಾರೆ. ಬಿಗ್ ಬಾಸ್ ಪ್ರತಾಪ್‌ಗೆ ಎಲಿಮಿನೇಷನ್ ಶಾಕ್ ಕೊಟ್ಟಾಗಿತ್ತು. ಆದರೂ ಕೊನೆಯ ಕ್ಷಣದಲ್ಲಿ ಸುದೀಪ್​ ಅವರನ್ನು ಬಚಾವ್​ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ  ಈ ಸಲ ಐದು ಜನ ಅಲ್ಲ, ಆರು ಜನ ಫೈನಲ್‌ ಲಿಸ್ಟ್‌ನಲ್ಲಿ ಇರ್ತಾರೆ.  ಈ ಫಿನಾಲೆ ವಾರದಲ್ಲಿ  ಅಂತಿಮ ಸ್ಪರ್ಧಿಗಳಾಗಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸ್ಟಾರ್ ಸಂತೋಷ್, ವರ್ತೂರು ಸಂತೋಷ್ ಸೇರಿ ಒಟ್ಟು ಆರು ಸದಸ್ಯರು ಇದ್ದಾರೆ. ಸತತ 16 ವಾರಗಳು ಟಾಪ್​ ಟಿಆರ್​ಪಿಯಲ್ಲಿಯೇ  ಮುಂದುವರೆದಿರುವ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 10’  ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

‘ಬಿಗ್ ಬಾಸ್‌ ಕನ್ನಡ 10’ ವಿಜೇತರಿಗೆ ಕಾನ್ಫಿಡೆಂಟ್‌ ಗ್ರೂಪ್‌ ಕಡೆಯಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ದೊರೆಯಲಿದೆ. ಇಷ್ಟೇ ಅಲ್ಲದೇ ಜೊತೆಗೆ ಹೊಸ ಮಾರುತಿ ಸುಜುಕಿ ಬ್ರೆಜಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ ಸಿಗಲಿದೆ. ‘ಬಿಗ್ ಬಾಸ್‌ ಕನ್ನಡ 10’ ರನ್ನರ್‌ ಆದವರಿಗೆ ಬೌನ್ಸ್‌ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್‌ ಲಭಿಸಲಿದೆ.  ಈ ಹಿಂದೆ ವಿಜೇತರಿಗೆ ಸಿಗುವ 50 ಲಕ್ಷ ರೂಪಾಯಿ ನಗದು ಬಹುಮಾನಕ್ಕೆ ಸಂಬಂಧಿಸಿದಂತೆ ಸ್ಪರ್ಧಿಗಳಿಗೆ  ‘ಬಿಗ್ ಬಾಸ್‌’ ಶಾಕ್​ ಕೂಡ ನೀಡಿದ್ದರು.  ಸ್ಥಾನ-ಮಾನ ಟಾಸ್ಕ್‌ನಲ್ಲಿ ಮೌಲ್ಯಗಳ ಫಲಕಗಳನ್ನು ಪಡೆದ ಆಧಾರದ ಮೇಲೆ ಸ್ಪರ್ಧಿಗಳಿಗೆ ನಾಮಿನೇಟ್‌ ಮಾಡುವ ಅಧಿಕಾರವಿತ್ತು. ನಾಮಿನೇಟ್‌ ಆದ ಸ್ಪರ್ಧಿಗಳ ಒಟ್ಟು ಮೌಲ್ಯವನ್ನು ನಗದು ಬಹುಮಾನದಿಂದ ಕಡಿತ ನ್ನ  ಮಾಡಲಾಗಿತ್ತು. ಇದರಿಂದಾಗಿ  50 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ ಕಡಿತಗೊಂಡಿತ್ತು. 

Tap to resize

Latest Videos

16 ವಾರ, 19 ಸ್ಪರ್ಧಿಗಳು, 6 ಫೈನಲಿಸ್ಟ್​.... ಬಿಗ್​ಬಾಸ್​ ಜರ್ನಿ ಹೇಗಿತ್ತು? ಕುತೂಹಲದ ಪ್ರೊಮೊ ಬಿಡುಗಡೆ

ನಂತರ ಟಾಸ್ಕ್​ ಎಲ್ಲಾ ಕೊಟ್ಟು, ತಮ್ಮದೇ ಆದ ರೀತಿಯಲ್ಲಿ ಒಂದಿಷ್ಟು ಟ್ವಿಸ್ಟ್​ ಕೊಟ್ಟ ಬಳಿಕ ಈ ಹಣವನ್ನು ಪುನಃ 50 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಟಾಸ್ಕ್‌ಗಳಲ್ಲಿ ಏಳು - ಬೀಳು, ಸೋಲು - ಗೆಲುವನ್ನ ಕಂಡ ಸ್ಪರ್ಧಿಗಳು 15 ಲಕ್ಷ ರೂಪಾಯಿಯನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಪರಿಣಾಮ, ಬಹುಮಾನ ಮೊತ್ತ 40 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು. ನಂತರ ಮತ್ತಿಷ್ಟು ಟಾಸ್ಕ್ ಕೊಟ್ಟು ಬಹುಮಾನವನ್ನು 50 ಲಕ್ಷ ರೂಪಾಯಿಗೆ ಏರಿಸಲಾಗಿದ್ದು, ಇವಿಷ್ಟನ್ನೂ ಯಾರು ಪಡೆಯಲಿದ್ದಾರೆ ಎನ್ನುವುದೇ ಈಗಿರುವ ಕುತೂಹಲ. 

ಇದರ ನಡುವೆಯೇ ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆಯ ಪ್ರೊಮೋ ರಿಲೀಸ್​ ಮಾಡಿದೆ. ಇದರಲ್ಲಿ ಹಳೆಯ ಸ್ಪರ್ಧಿಗಳ ಎಂಟ್ರಿ ಕೂಡ ಆಗಿದೆ. ಎಲ್ಲರೂ ಸೇರಿ ಭರ್ಜರಿಯಾಗಿ ಪರ್​ಫಾರ್ಮೆನ್ಸ್​ ನೀಡಿದ್ದಾರೆ. ಬಿಗ್​ಬಾಸ್​ 10ನಲ್ಲಿ ಇದ್ದ ಸ್ಪರ್ಧಿಗಳನ್ನೂ ಇದರಲ್ಲಿ ನೋಡಬಹುದು. ಸಂಗೀತಾ, ವಿನಯ್, ಕಾರ್ತಿಕ್​ ಮಹೇಶ್​, ಡ್ರೋನ್ ಪ್ರತಾಪ್​ ಹಾಗೂ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಈ ಆರು ಮಂದಿಯಲ್ಲಿ ಗೆಲ್ಲುವವರು ಯಾರು, ರನ್ನರ್​ ಅಪ್​ ಆಗುವವರು ಯಾರು ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಇದಾಗಲೇ ಭರ್ಜರಿ ಪ್ರಚಾರ ಕೂಡ ಶುರುವಾಗಿದೆ. 

 ಬಿಗ್​ಬಾಸ್​ ಮನೆಯಲ್ಲಿ 'ರಾಣಿ'! ಕಿಸ್​ ಪಡೆದ ತುಕಾಲಿ ಸುಸ್ತೋ ಸುಸ್ತು: ದೊಡ್ಮನೆಯಲ್ಲಿ ಏನಾಗ್ತಿದೆ?
 

click me!