16 ವಾರ, 19 ಸ್ಪರ್ಧಿಗಳು, 6 ಫೈನಲಿಸ್ಟ್​.... ಬಿಗ್​ಬಾಸ್​ ಜರ್ನಿ ಹೇಗಿತ್ತು? ಕುತೂಹಲದ ಪ್ರೊಮೊ ಬಿಡುಗಡೆ

By Suvarna News  |  First Published Jan 26, 2024, 2:28 PM IST

16 ವಾರ, 19 ಸ್ಪರ್ಧಿಗಳು, 6 ಫೈನಲಿಸ್ಟ್​ ಬಿಗ್​ಬಾಸ್​ ಜರ್ನಿಯ ಕುರಿತು ಪ್ರೊಮೋ ಬಿಡುಗಡೆ ಮಾಡಿದೆ ಜೀ ಕನ್ನಡ ವಾಹಿನಿ...
 


ಬಿಗ್​ಬಾಸ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಮತ್ತು ನಾಡಿದ್ದು ನಡೆಯಲಿರುವ ಫಿನಾಲೆಗಾಗಿ ಬಿಗ್​ಬಾಸ್​ ಪ್ರೇಮಿಗಳೆಲ್ಲಾ ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. 16 ವಾರಗಳಿಂದ ನಡೆದ ಜರ್ನಿಯಲ್ಲಿ 19 ಸ್ಪರ್ಧಿಗಳು ಭಾಗಿಯಾಗಿದ್ದರು. ಸದ್ಯ  6 ಜನ ಫೈನಲ್ ಲಿಸ್ಟ್‌ನಲ್ಲಿ ಇದ್ದಾರೆ. ಬಿಗ್ ಬಾಸ್ ಪ್ರತಾಪ್‌ಗೆ ಎಲಿಮಿನೇಷನ್ ಶಾಕ್ ಕೊಟ್ಟಾಗಿದೆ. ಇದರ ಜೊತೆಗೆ ಈ ಸಲ ಐದು ಜನ ಅಲ್ಲ, ಆರು ಜನ ಫೈನಲ್‌ ಲಿಸ್ಟ್‌ನಲ್ಲಿ ಇರ್ತಾರೆ ಅಂತಲೂ ಆಶ್ಚರ್ಯ ಮೂಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಮನೆಯಲ್ಲಿ ಭಾರೀ ಕುತೂಹಲ ಮೂಡಿರುವ ನಡುವೆಯೇ ಫೈನಲ್​ಗೆ ಗಂಟೆ ಲೆಕ್ಕವಿದೆ. 

ಈ ಫಿನಾಲೆ ವಾರದಲ್ಲಿ  ಅಂತಿಮ ಸ್ಪರ್ಧಿಗಳಾಗಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್, ತುಕಾಲಿ ಸ್ಟಾರ್ ಸಂತೋಷ್, ವರ್ತೂರು ಸಂತೋಷ್ ಸೇರಿ ಒಟ್ಟು ಆರು ಸದಸ್ಯರು ಇದ್ದಾರೆ. ಸತತ 16 ವಾರಗಳು ಟಾಪ್​ ಟಿಆರ್​ಪಿಯಲ್ಲಿಯೇ  ಮುಂದುವರೆದಿರುವ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 10’  ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್‌ ಒಬ್ಬರ ಕೈಯನ್ನು ಎತ್ತಿ ಹಿಡಿಯಲಿದ್ದಾರೆ. ಬಿಗ್‌ ಬಾಸ್ ಮನೆಯೊಳಗೆ ರಾರಾಜಿಸುತ್ತಿರುವ ಕಪ್ ಅವರ ಕೈ ಸೇರಲಿದೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

Tap to resize

Latest Videos

ರೀಲ್​ ಬಿಟ್ಟ ವಿವಾದದ ಬೆನ್ನಲ್ಲೇ ಮತ್ತೊಂದು ಆರೋಪದಲ್ಲಿ ಪ್ರತಾಪ್! ಡ್ರೋನ್​ ನೀಡ್ತೇನೆಂದು 35 ಲಕ್ಷ ಟೋಪಿ?

ಫಿನಾಲೆ ದಿನ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ.  ಇದರ ನಡುವೆಯೇ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಯ ಗೆಲುವಿಗೆ ಭಾರಿ ಪೈಪೋಟಿ ಅಭಿಮಾನಿಗಳಿಂದ ನಡೆಯುತ್ತಿದೆ. ಕಳೆದ ಬಾರಿಯಂತೆ ಈ ಸಲವೂ ಮಹಿಳೆಗೇ ಕಪ್​ ಸಿಗಬೇಕು ಎನ್ನುವುದು ಬಹುತೇಕ ಮಂದಿಯ ಆಶಯ. ಅದರಂತೆಯೇ ಸಂಗೀತಾ ಅವರ ಪರವಾಗಿ ಭಾರಿ ಒಲವು ತೋರಲಾಗುತ್ತಿದೆ. ಇವರು ಫಿನಾಲೆ ತಲುಪಿದ ಮೊದಲ ಸ್ಪರ್ಧಿ ಆಗಿರುವ ಕಾರಣ, ಇವರೇ ವಿನ್ನರ್​ ಎಂದು ಹಲವರು ಹೇಳುತ್ತಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ಹಿರಿಯ ನಟಿ ಶ್ರುತಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಮಹಿಳೆಯೇ ಗೆಲ್ಲಲಿ ಎನ್ನುತ್ತಿದ್ದಾರೆ. ಅದರೆ ಇದಾಗಲೇ ಯಾರು ವಿನ್ನರ್​ ಎನ್ನುವುದು ಬಿಗ್​ಬಾಸ್​ನಿಂದ ಮೊದಲೇ ನಿಶ್ಚಯವೂ ಆದಂತಿದೆ. ಅವರ ಹೆಸರು ಹೇಳುವುದು ಒಂದೇ ಬಾಕಿ ಇದೆ.
 
ಇದರ ನಡುವೆಯೇ, ಇದೀಗ 16 ವಾರ, 19 ಸ್ಪರ್ಧಿಗಳು, 6 ಫೈನಲಿಸ್ಟ್​.... ಬಿಗ್​ಬಾಸ್​ ಜರ್ನಿ ಹೇಗಿತ್ತು ಎಂಬ ಬಗ್ಗೆ ಕುತೂಹಲದ ಪ್ರೊಮೊ ಬಿಡುಗಡೆ. 19 ಸ್ಪರ್ಧಿಗಳ ಪೈಪೋಟಿ, ಕಚ್ಚಾಟ, ಕಿರುಚಾಟ, ಜಗಳ, ಟಾಸ್ಕ್​ ಭರಾಟೆ, ಪ್ರೀತಿ-ಪ್ರೇಮ-ಪ್ರಯಣ... ಎಲ್ಲವನ್ನೂ ಈ ಪ್ರೊಮೋದಲ್ಲಿ ನೋಡಬಹುದಾಗಿದ್ದು, ಇದು ಇಡೀ 16 ವಾರಗಳ ಜರ್ನಿಯ ಕುರಿತು ವಿವರಣೆ ನೀಡಲಿದೆ. 

ಒಂದೊಂದು ಫೋಟೋ ಒಂದೊಂದು ಕಥೆ... ಫಿನಾಲೆ ಸನೀಹದಲ್ಲಿಯೇ ಕಾರ್ತಿಕ್​ ಫೋಟೋಗಳು ಹೇಳ್ತಿರೋದೇನು?

 

click me!