
ಪ್ರೀತಿಸಿ ಮದುವೆಯಾದ ಗಂಡ, ತನ್ನನ್ನು ಕೊಲೆ ಮಾಡಲು ಬಂದಿರುವ ತಾಯಿಯ ಸಪೋರ್ಟ್‌ಗೆ ನಿಂತು, ತನ್ನ ಮಾತನ್ನು ಕೇಳಿಸಿಕೊಳ್ಳದ್ದರಿಂದ ಬೇಸತ್ತ ಸಹನಾ ಪತಿಯನ್ನು ತೊರೆದು ಮನೆಬಿಟ್ಟೇ ಹೊರಟು ಹೋದಳು. ಪತ್ನಿಯ ನೆನಪಿನಲ್ಲಿಯೇ ಇದ್ದ ಪತಿ ಮುರುಳಿ ಕೊನೆಗೆ ಇನ್ನೊಂದು ಮದುವೆಗೆ ಸಿದ್ಧನಾದ. ಮದುವೆಯ ದಿನ ಅರಿಯದೇ ಹೋದ ಸಹನಾ, ಪತಿಯ ಇಷ್ಟಪಟ್ಟಿದ್ದರೆ ಮದುವೆಯನ್ನು ನಿಲ್ಲಿಸಬಹುದಿತ್ತು. ಆದರೆ, ಆಕೆಗೆ ಸ್ವಾಭಿಮಾನ ಅಡ್ಡಬಂದು ಪತಿಯ ಮದುವೆಗೆ ತಾನೇ ಸಾಕ್ಷಿಯಾದಳು. ಪುನಃ ಸ್ವಂತ ಕಾಲ ಮೇಲೆ ನಿಂತುಕೊಳ್ಳಲು ಹೋದಳು.
ಅಲ್ಲಿ ಅವಳಿಗೆ ನೆರವಾದದ್ದು ಹಿಂದೆ ವಿಲನ್ ಆಗಿದ್ದ ಕಾಳಿ ಹಾಗೂ ವಿದೇಶಿ ಪ್ರವಾಸಿಗ ಮ್ಯಾಕ್ಸ್. ಇಬ್ಬರೂ ಈಗ ಸಹನಾಳನ್ನು ಪ್ರೀತಿಸುತ್ತಿದ್ದಾರೆ. ಸಹನಾ ಸತ್ತೇ ಹೋದಳು ಎಂದುಕೊಂಡಿದ್ದ ಕುಟುಂಬಸ್ಥರಿಗೆ ಆಕೆ ಸತ್ತಿಲ್ಲ ಎನ್ನುವ ನಿಜ ಗೊತ್ತಾಗಿದೆ. ವಾಪಸ್ ಮನೆಗೆ ಬಂದಿರುವ ಸಹನಾ ಸ್ವಾವಲಂಬಿಯಾಗುವ ಉದ್ದೇಶದಿಂದ ಅಮ್ಮ ಪುಟ್ಟಕ್ಕನ ಹೆಸರಿನಲ್ಲಿ ಹೊಸದೊಂದು ಮೆಸ್ ಶುರು ಮಾಡಿದ್ದಾಳೆ. ಅಲ್ಲಿಯೂ ಕಾಳಿ ಮತ್ತು ಮ್ಯಾಕ್ಸ್ ಇವಳಿಗೆ ನೆರವಾಗುತ್ತಿದ್ದಾರೆ. ಇವರಿಬ್ಬರಲ್ಲಿ ಯಾರನ್ನು ಸಹನಾ ಮದುವೆಯಾಗುತ್ತಾಳೆ, ಅಥವಾ ಸ್ನೇಹಾಳ ಗಂಡ ಕಂಠಿಯನ್ನೇ ಮದುವೆಯಾಗುತ್ತಾಳಾ ಎನ್ನುವ ಪ್ರಶ್ನೆ ಸೀರಿಯಲ್ ಪ್ರೇಮಿಗಳನ್ನು ಕಾಡುತ್ತಿದೆ.
ಪುಟ್ಟಕ್ಕನ ಮಕ್ಕಳು ಸಹನಾ, ಡಾನ್ಸ್ ಕರ್ನಾಟಕ ಡಾನ್ಸ್ ಷೋದಿಂದ ಹೊರ ಬಂದ ಕಾರಣವೇ ಬೇರೆ! ಸತ್ಯ ತಿಳಿಸಿದ ನಟಿ
ಹೆಚ್ಚಿನ ಮಂದಿ ಕಾಳಿಯನ್ನು ಮದುವೆಯಾಗುವಂತೆ ಕಮೆಂಟ್‌ಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ವಿದೇಶಿ ಪ್ರಜೆ ಮ್ಯಾಕ್ಸ್ ಪರವಾಗಿ ಇದ್ದಾರೆ. ಹಾಗಿದ್ದರೆ ಸಹನಾ ಯಾರನ್ನು ಮದುವೆಯಾಗುತ್ತಾಳೆ ಎನ್ನುವ ಪ್ರಶ್ನೆಗೆ ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಸಹನಾ ಪಾತ್ರಧಾರಿ, ನಟಿ ಅಕ್ಷರಾ ಹೇಳಿದ್ದೇನು? ಅಕ್ಷರಾ ಅವರು ಹೇಳಿರುವಂತೆ ಸಹನಾ ಯಾರನ್ನೂ ಮದುವೆಯಾಗಬಾರದು. ಏಕೆಂದರೆ, ಆಕೆ ಮುರಳಿಯನ್ನು ಪ್ರೀತಿಸಿ ಮದುವೆಯಾದವಳು. ಆಕೆಯನ್ನು ಪ್ಯೂರ್ ಲವ್. ಆದ್ದರಿಂದ ಪತಿಯ ಜಾಗದಲ್ಲಿ ಆಕೆ ಯಾರನ್ನೂ ನೋಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
ಆದರೆ ಇದೇ ವೇಳೆ, ಸೀರಿಯಲ್‌ನಲ್ಲಿ ಏನಾಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಏಕೆಂದರೆ, ಕಥೆ ಚಾನೆಲ್ ಮತ್ತು ನಿರ್ದೇಶಕರ ನಡುವೆ ಇರುತ್ತದೆ.ಮುಂದೆ ಏನಾಗುತ್ತದೆ ಎನ್ನುವುದು ನಮಗೂ ಗೊತ್ತಿರುವುದಿಲ್ಲ. ಆದರೆ ಸಹನಾ ಆಗಿ ನಾನು ನೋಡುವುದಾದರೆ ಆಕೆ ಯಾರನ್ನೂ ಮದುವೆಯಾಗಬಾರದು ಎಂದಿದ್ದಾರೆ. ಇನ್ನು ನಟಿಯ ಕುರಿತು ಹೇಳುವುದಾದರೆ, ಪುಟ್ಟಕ್ಕನ ಮಗಳು ಸೀರಿಯಲ್‌ನಲ್ಲಿ ಹೆಚ್ಚು ಕಲಿಯದೇ ಇರುವ ಸಹನಾ, ನಿಜ ಜೀವನದಲ್ಲಿ ಫೈನಾನ್ಸ್ನಲ್ಲಿ ಎಂಬಿಎ ಪದವೀಧರೆ. ಈ ಸೀರಿಯಲ್ಗೂ ಬರುವ ಮುನ್ನೆ ಕೆಲವು ಧಾರಾವಾಹಿಯಲ್ಲಿ ಅಕ್ಷರಾ ನಟಿಸಿದ್ದಾರೆ. ‘ಅಮ್ನೋರು’ (Amnoru) ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರಿಗೆ ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸಕತ್ ಹೆಸರು ತಂದುಕೊಡುತ್ತಿದೆ. ರಕ್ಷಾ ಬಂಧನ ಸೀರಿಯಲ್ನಲ್ಲಿಯೂ ನಟಿಸಿದ್ದಾರೆ. ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಅಕ್ಷರಾ ಅವರು ನಟಿಸಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್ ತೊರೆದ ಬಿಗ್ಬಾಸ್ ಹಂಸಾ ಪ್ರತಾಪ್ ಹೊಸ ವರ್ಷದ ರೆಸಲ್ಯೂಷನ್ ಕೇಳಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.