ಡಿವೋರ್ಸ್‌ ಸುದ್ದಿ ನಡುವೆಯೇ 'ನನ್ನ ಮುದ್ದಿನ ಗಂಡ' ಎಂದ ಮಾಸ್ಟರ್‌ ಆನಂದ್‌ ಪತ್ನಿ- ವಿಡಿಯೋ ವೈರಲ್‌

By Suchethana D  |  First Published Jan 5, 2025, 2:21 PM IST

ಮಾಸ್ಟರ್‌ ಆನಂದ್‌ ಅವರ ಹುಟ್ಟುಹಬ್ಬ ಆಚರಿಸಿರುವ ಪತ್ನಿ ತೇಜಸ್ವಿನಿ ಮುದ್ದಿನ ಗಂಡ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ.
 


ಮಾಸ್ಟರ್‌ ಆನಂದ್‌ ಮತ್ತು ಪತ್ನಿ ತೇಜಸ್ವಿನಿ ಅವರ ನಡುವಿನ ವಿಚ್ಛೇದನ ಸುದ್ದಿ ಕೆಲ ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅನ್ನು ಬರಸಿಡಿಲಿನಂತೆ ಬಡಿದಿತ್ತು. ಸಿನಿ ಇಂಡಸ್ಟ್ರಿಯಲ್ಲಿ ಮದುವೆಯಷ್ಟೇ ವೇಗದಲ್ಲಿ ಡಿವೋರ್ಸ್ ಕೂಡ ಆಗುತ್ತಿರುವ ಕಾರಣ ಯಾವುದೇ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದರೆ, ಅದು ಅಚ್ಚರಿ ತರುವ ವಿಷಯವಾಗಿ ಉಳಿಯುತ್ತಿಲ್ಲ. ಸ್ಥಿತಿ ಹೀಗಿರುವಾಗ ಮಾಸ್ಟರ್‌ ಆನಂದ್‌ ಮತ್ತು ಪತ್ನಿ ನಡುವೆ ಬಿರುಕು ಮೂಡಿರುವ ಸುದ್ದಿ ಕ್ಷಣ ಮಾತ್ರದಲ್ಲಿ ವೈರಲ್‌ ಆಗಿ ಹೋಗಿತ್ತು. ಇದು ಹೇಗೆ ವೈರಲ್‌ ಆಯಿತೋ ಗೊತ್ತಿಲ್ಲ. ಆದರೆ ಇದರ ಮಧ್ಯೆಯೇ, ತೇಜಸ್ವಿನಿ ಅವರು ಷಾರ್ಟ್ ಡ್ರೆಸ್‌ ಧರಿಸಿ ಹಾಟ್‌ ಡಾನ್ಸ್‌ ರೀಲ್ಸ್‌ ಮಾಡುವ ಮೂಲಕ ಮತ್ತಷ್ಟು ಸದ್ದು ಮಾಡಿಬಿಟ್ಟರು. ಕೊನೆಗೆ ಇದೇ ವಿಚ್ಛೇದನಕ್ಕೆ ಕಾರಣ ಎನ್ನುವಷ್ಟರ ಮಟ್ಟಿಗೆ ಸದ್ದು ಮಾಡಿತು.

ಇದಾಗಲೇ, ಈ ಬಗ್ಗೆ ತೇಜಸ್ವಿನಿ ಅವರು ಸ್ಪಷ್ಟನೆ ಕೊಟ್ಟೂ ಆಗಿದೆ.  ಕಪ್ಪು ಬಣ್ಣದ ಚಿಕ್ಕ ಶಾರ್ಟ್ಸ್‌ ಹಾಗೂ ನೀಲಿ ಬಣ್ಣದ ಟಾಪ್‌ ತೊಟ್ಟು,'ಈ ಹಾರ್ಟಿಗೆ ಏನಾಗಿದೆ..' ಅನ್ನೋ ಹಾಡಿಗೆ ಮಾದಕವಾಗಿ ಡಾನ್ಸ್‌ ಮಾಡಿದ್ದ ತೇಜಸ್ವಿನಿ ಅವರ ರೀಲ್ಸ್‌ಗೆ ಡಿವೋರ್ಸ್ ಬಗ್ಗೆ ಕಮೆಂಟ್‌ ಹಾಕಿದ್ದ ಮಹಿಳೆಯೊಬ್ಬರನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ, ಡಿವೋರ್ಸ್ ಎಲ್ಲಾ ಗಾಳಿಸುದ್ದಿ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದರು.  ಈ ಕಮೆಂಟ್‌ಗೆ ಉತ್ತರಿಸಿದ್ದ ತೇಜಸ್ವಿನಿ ಅವರು, 'ಮೇಡಂ..ಅದು ಎಂದಿಗೂ ಸಾಧ್ಯವಿಲ್ಲ. ನಾನು ನನ್ನ ಮಕ್ಕಳಿಗಿಂತಲೂ ಜಾಸ್ತಿ ನನ್ನ ಗಂಡನನ್ನೇ ಪ್ರೀತಿಸುತ್ತೇನೆ. ಇಂಥದ್ದನ್ನ ದಯವಿಟ್ಟು ಹೇಳಬೇಡಿ ಮತ್ತು ಇಲ್ಲಸಲ್ಲದ್ದನ್ನ ರೂಮರ್‌ ಮಾಡಬೇಡಿʼ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಇಂದು ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ , ʼತಾವು ಪತಿ ಆನಂದ್‌ ಅವರೊಂದಿಗೆ ಇರುವ ಹಳೇ ಫೋಟೋವನ್ನ ಹಂಚಿಕೊಳ್ಳುವ ಮೂಲಕ  ಈ ಫೋಟೋ ನೋಡಿ ಕಣ್ಣೀರು ಬಂತು ಎಂದು ಕ್ಯಾಪ್ಷನ್‌ ನೀಡಿದ್ದರು.

Tap to resize

Latest Videos

ಜನರು ಸುತ್ತುವರೆದ್ರೂ, ಪೊಲೀಸಪ್ಪ ಎಂಟ್ರಿ ಕೊಟ್ರೂ ನಡು ರಸ್ತೆಯಲಿ ಮೈಮರೆತ ಪ್ರೇಮಿಗಳು! ವಿಡಿಯೋ ವೈರಲ್​

ಇದರ ನಡುವೆಯೇ, ಇದೀಗ ಮಾಸ್ಟರ್‌ ಆನಂದ್‌ ಅವರ ಹುಟ್ಟುಹಬ್ಬ ಅದ್ಧೂರಿಯಿಂದ ನಡೆದಿದೆ. ನಿನ್ನೆ ಅಂದರೆ ಜನವರಿ 4ರಂದು ಮಾಸ್ಟರ್‌ ಆನಂದ್‌ ಅವರ ಹುಟ್ಟುಹಬ್ಬ ನಡೆದಿದ್ದು, ಇದನ್ನು ಪತ್ನಿ ತೇಜಸ್ವಿನಿ ಅವರು ಸೆಲೆಬ್ರೇಟ್‌ ಮಾಡಿದ್ದಾರೆ. ಇದರ ವಿಡಿಯೋ ಶೇರ್‌ ಮಾಡಿಕೊಂಡಿರುವ ಅವರು, ನನ್ನ ಮುದ್ದಿನ ಗಂಡ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಅಲ್ಲಿಗೆ ಸುಖಾ ಸುಮ್ಮನೆ ತಮ್ಮ ದಾಂಪತ್ಯದ ಮಧ್ಯೆ ಬಿರುಕು ತರಿಸಬೇಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. 

ಅದೇನೇ ಇದ್ದರೂ, ಚಿಕ್ಕ ಚಿಕ್ಕಡ್ರೆಸ್‌ನಲ್ಲಿ ಹಾಟ್‌ ಆಗಿ ತೇಜಸ್ವಿನಿ ಅವರು ರೀಲ್ಸ್‌ ಮಾಡುವುದನ್ನು ಆನಂದ್‌ ಅವರ ಫ್ಯಾನ್ಸ್‌ ಸಹಿಸುತಿಲ್ಲ. 'ಯಶಸ್ವಿನಿ ಅವರೇ ಆಡ್ಕೊಂಡವರ ಬಾಯಿಗೆ ತುತ್ತಾಗಬಾರದು. ಅದೇ ನೀವು ಸೀರೆ ಉಟ್ಟು ಡಾನ್ಸ್ ಮಾಡಿ ನೋಡಿ. ರೆಸ್ಪಾನ್ಸ್ ಹೆಂಗಿರುತ್ತೆ ಅಂಥ. ಚಿಕ್ಕ ಚಿಕ್ಕ ಬಟ್ಟೆ ಹಾಕ್ಕೊಂಡು ಪಬ್ಲಿಕ್ ಮೀಡಿಯಾದಲ್ಲಿ ಇದೆಲ್ಲಾ ತುಂಬಾ ಜನ ನೋಡತಾರೆ. ಎಲ್ಲರ ಯೋಚನೆನೂ ಒಂದೇ ತರ ಇರಲ್ಲ ಅಲ್ವಾ. ನಿಮಗೆ ಅದೆಲ್ಲಾ ಇಷ್ಟ ಅಂದ್ರೆ ಫ್ಯಾಮಿಲಿ ಗ್ರೂಪ್‌ನಲ್ಲಿ ಫ್ರೆಂಡ್ಸ್ ಗ್ರೂಪ್‌ನಲ್ಲಿ ಹಾಕಿ. ಯಾಕಂದ್ರೆ ಕೆಲವೊಂದ್ಸಲ ನಾವು ಮಾಡೋ ಗೊತ್ತಿಲ್ಲದ ತಪ್ಪಿಗೆ ಮನೆಯವರಿಗೂ ಮಾತು ಬರುತ್ತೆ. ಗಂಡದ್ರು ತಲೆ ಎತ್ತಿ ನಡಿಬೇಕಾದ್ರೆ ನಾವು ಕೆಲವೊಂದ್ಸಲ ತಲೆ ಬಗ್ಸೋದು ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ' ಎಂದು ಸಲಹೆ ನೀಡುತ್ತಲೇ ಇದ್ದಾರೆ. 

ಸುರಸುಂದರನ ಫೋಟೋ ನೋಡಿ ಹಳ್ಳಕ್ಕೆ ಬಿದ್ದ ಯುವತಿಯರು: ವಿಡಿಯೋನೂ ಕಳಿಸಿ ಪೇಚಿಗೆ ಸಿಲುಕಿದ 700 ಮಂದಿ!

 

click me!