ಅಮೃತಧಾರೆ ಧಾರಾವಾಹಿಯ ಚಿತ್ರೀಕರಣದ ವೇಳೆ ನಡೆದ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪರ್ಣಾ ಮತ್ತು ಸುಧಾ ಮಾರುಕಟ್ಟೆಯಿಂದ ಹಿಂದಿರುಗುವ ದೃಶ್ಯದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ಅದ್ಭುತವಾಗಿ ಮೂಡಿ ಬರುತ್ತಿದೆ. ಗೌತಮ್ ದಿವಾನ್ ಅಮ್ಮ, ಸೋದರಿ ಮತ್ತು ಆಕೆಯ ಮಗಳು ಮನೆಗೆ ಹಿಂದಿರುಗಿದ್ದಾರೆ. ಅಮ್ಮನನ್ನು ಕಂಡು ಗೌತಮ್ ದಿವಾನ್ ಭಾವುಕರಾಗಿ ನಟಿಸಿದ ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿದ್ದವು. ಇದೀಗ ಧಾರಾವಾಹಿಯ ಚಿತ್ರೀಕರಣದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಅಮೃತಧಾರೆ ಶೂಟಿಂಗ್‌ನಲ್ಲಿ ಏನಾಯ್ತು ನೋಡಿ ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಗೌತಮ್ ದಿವಾನ್ ಸೋದರಿ ಸುಧಾ ಮೊದಲು ಆತನ ಗೆಳೆಯ ಆನಂದ್ ಮನೆಯ ಕೆಲಸಕ್ಕೆ ಸೇರಿಕೊಂಡಿರುತ್ತಾಳೆ. ಅಲ್ಲಿಂದ ಗೌತಮ್ ದಿವಾನ್ ಮನೆ ಸೇರಿರುತ್ತಾಳೆ. ಇದೀಗ ಸುಧಾ ತನ್ನ ಸ್ವಂತ ಸೋದರಿ ಅನ್ನೋದು ಗೌತಮ್, ಭೂಮಿಕಾ ಸೇರಿದಂತೆ ಎಲ್ಲರಿಗೂ ಗೊತ್ತಾಗಿದೆ. ಭೂಮಿಕಾ ಮತ್ತು ಮಲ್ಲಿ ಇಬ್ಬರಿಗೂ ಆರತಿ ಬೆಳಗಿ ಮನೆ ತುಂಬಿಸಿಕೊಂಡಿದ್ದಾರೆ. ಇದೀಗ ಶಕುಂತಲಾ, ಲಕ್ಷ್ಮೀಕಾಂತ್ ಮುಂದೇನು ಮಾಡ್ತಾರೆ ಅನ್ನೋದು ಕುತೂಹಲ ಮನೆ ಮಾಡಿದೆ. ಈ ಎಲ್ಲದರ ನಡುವೆ ಧಾರಾವಾಹಿ ಚಿತ್ರೀಕರಣದ ವಿಡಿಯೋ ಕ್ಲಿಪ್ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಏನಿದೆ ಅಂತ ನೋಡೋಣ ಬನ್ನಿ.
ವೈರಲ್ ವಿಡಿಯೋ?
ಈ ವಿಡಿಯೋವನ್ನು Newz Star ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಅಮೃತಧಾರೆಯ ವೀಕ್ಷಕರು, ನಿರ್ದೇಶಕರು ಪ್ರತಿಯೊಂದು ದೃಶ್ಯವೂ ನೈಜವಾಗಿ ಕಾಣಬೇಕೆಂದು ಪ್ರಯತ್ನಿಸುತ್ತಾರೆ. ಇಂತಹ ಪ್ರಯತ್ನದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಇದೆಲ್ಲದರ ಪ್ರಯತ್ನವಾಗಿ ಅಮೃತಧಾರೆ ಧಾರಾವಾಹಿ ಪರದೆ ಮೇಲೆ ಚೆನ್ನಾಗಿ ಮೂಡಿಬರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆತ್ತತಾಯಿಗೇ ಭಿಕ್ಷೆ ಹಾಕಿದ ಗೌತಮ್ ದಿವಾನ್! ವಿಲನ್ ಲಕ್ಷ್ಮೀಕಾಂತ್ ಭಾಗ್ಯನ್ನ ನೋಡೇ ಬಿಟ್ಟ.. ಮುಂದೈತೆ ಮಾರಿಹಬ್ಬ
ವಿಡಿಯೋದಲ್ಲಿ ಏನಿದೆ?
ಅಪರ್ಣಾ ಮತ್ತು ಸುಧಾ ಮಾರುಕಟ್ಟೆಯಿಂದ ಹಿಂದಿರುಗುವ ದೃಶ್ಯದ ಚಿತ್ರೀಕರಣ ನಡೆಯುತ್ತಿರುತ್ತದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಕ್ಯಾಮೆರಾ ಇರುತ್ತದೆ. ಮಾರುಕಟ್ಟೆಯಿಂದ ಹಿಂದಿರುಗುವಾಗ ಅಪರ್ಣಾ ಸುಸ್ತಾಗಿ ಮರದ ಕೆಳಗೆ ಕುಳಿತಿರುತ್ತಾರೆ. ಆಗ ಸುಧಾ ಎರಡೂ ಬ್ಯಾಗ್ ಹಿಡಿದು ಅಪರ್ಣಾ ಅವರನ್ನು ಕರೆದುಕೊಂಡು ಬರುತ್ತಿರುತ್ತಾರೆ. ಈ ವೇಳೆ ಹಿಂದಿನಿಂದ ಯುವತಿಯೋರ್ವಳು ಇಬ್ಬರು ಕಲಾವಿದರನ್ನು ಕಂಡು ಸಂತೋಷದಿಂದ ಕೈ ಬೀಸುತ್ತಾಳೆ. ಅಷ್ಟರಲ್ಲಿಯೇ ಶೂಟಿಂಗ್ ನಡೆಯುತ್ತಿದೆ ಎಂದು ಒಬ್ಬರು ಕೂಗುತ್ತಾರೆ.. ಆದ್ರೆ ಯುವತಿಗೆ ಅಲ್ಲಿ ಚಿತ್ರೀಕರಣ ನಡೆಯುತ್ತಿರುವ ವಿಷಯವೇ ಗೊತ್ತಿರಲ್ಲ. ಆನಂತರ ಮತ್ತೊಮ್ಮೆ ಚಿತ್ರೀಕರಣ ಶುರುವಾಗುತ್ತದೆ.
ವೈರಲ್ ಆಗಿರುವ ಈ ವಿಡಿಯೋಗೆ 3 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಈ ರೀಲ್ಸ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಪಾಪ ಎಂದು ಕಮೆಂಟ್ ಮಾಡಲಾಗಿದೆ. ಕೆಲವರು ನಗುತ್ತಿರುವ ಎಮೋಜಿ ಸಹ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ದೇವರ ಸನ್ನಿಧಿಯಲ್ಲಿ ಅಮ್ಮ-ಮಗನ ಒಂದು ಮಾಡಿದ ಭೂಮಿಕಾ…. ಇಂಥ ಹೆಂಡ್ತಿ ಪಡೆದವರೇ ಧನ್ಯ!