ಈ ಬಾರಿ ಬಿಗ್‌ಬಾಸ್‌ನಲ್ಲಿ ಇವರಿಬ್ಬರಲ್ಲಿ ಒಬ್ಬರು ಗೆಲ್ಲಬಹುದು ಅಂತಿದ್ದಾರೆ ಸಿರಿ, ಯಾರು ಆ ಇಬ್ಬರು?

Published : Jan 01, 2024, 02:37 PM IST
 ಈ ಬಾರಿ ಬಿಗ್‌ಬಾಸ್‌ನಲ್ಲಿ ಇವರಿಬ್ಬರಲ್ಲಿ ಒಬ್ಬರು ಗೆಲ್ಲಬಹುದು ಅಂತಿದ್ದಾರೆ ಸಿರಿ, ಯಾರು ಆ ಇಬ್ಬರು?

ಸಾರಾಂಶ

ದೊಡ್ಡ ಮನೆಯ ದೊಡ್ಡ ಅಕ್ಕನಂತಿದ್ದು ಒಳ್ಳೆ ಕಂಟೆಸ್ಟೆಂಟ್ ಅನಿಸಿಕೊಂಡಿದ್ದ ಸಿರಿ ಬಿಗ್‌ಬಾಸ್‌ನಿಂದ ಆಚೆ ಬಂದಿದ್ದಾರೆ. ಅವರ ಪ್ರಕಾರ ಈ ಬಾರಿ ಬಿಗ್‌ ಬಿ ಕಿರೀಟ ಇಬ್ಬರು ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳಲ್ಲಿ ಒಬ್ಬರಿಗೆ ಹೋಗುತ್ತಂತೆ. ನಿಮ್ ಪ್ರಕಾರ ವಿನ್ನರ್ ಯಾರಾಗಬಹುದು?

ತುಂಬಿ ತುಳುಕುತ್ತಿದ್ದ ಬಿಗ್‌ಬಾಸ್ ಮನೆಯಿಂದ ಒಬ್ಬೊಬ್ಬರೇ ಹೊರ ನಡೆಯುತ್ತಿದ್ದಾರೆ. ಸ್ಟ್ರಾಂಗ್ ಕಂಟೆಸ್ಟೆಂಟ್ ಅನಿಸಿಕೊಂಡವರೂ ಈಗ ಆಚೆ ಬರಲು ಶುರು ಮಾಡಿದ್ದಾರೆ. ನಿನ್ನೆ ಎಲಿಮಿನೇಟ್ ಆದವರು ಸಿರಿ. ದಶಕಗಳ ಹಿಂದೆ ಕನ್ನಡ ಕಿರುತೆರೆಯ ಮೋಸ್ಟ್ ಫೇಮಸ್ ಹೀರೋಯಿನ್ ಅನಿಸಿಕೊಂಡವರು ಸಿರಿ. ಸಾಲು ಸಾಲು ಜನಪ್ರಿಯ ಸೀರಿಯಲ್‌ಗಳಲ್ಲಿ ನಾಯಕಿಯಾಗಿ ಮಿಂಚಿರೋ ಈ ಪ್ರತಿಭೆ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಬಿಗ್‌ಬಾಗ್ ಮನೆಗೂ ಹೋದರು. ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ, ಉತ್ತಮ ಕಂಟೆಸ್ಟೆಂಟ್‌ ಅನಿಸಿಕೊಂಡು ಮನೆಯಿಂದಾಚೆ ಬರುತ್ತಿದ್ದಾರೆ. ಈ ವಾರ ಸಿರಿ ಅವರು ಸೇರಿದಂತೆ, ಸಂಗೀತಾ ಶೃಂಗೇರಿ, ವಿನಯ್ ಗೌಡ, ವರ್ತೂರು ಸಂತೋಷ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಸಂತು ಅವರು ನಾಮಿನೇಟ್ ಆಗಿದ್ದರು. ಅಂತಿಮವಾಗಿ ಸಿರಿ ಅವರಿಗೆ ಅತೀ ಕಡಿಮೆ ವೋಟ್ ಸಿಕ್ಕಿದ್ದು, ಹಾಗಾಗಿ ಅವರು ಶೋನಿಂದ ಹೊರಬಿದ್ದಿದ್ದಾರೆ.

ಸಿರಿ, ಸಂಗೀತಾ, ವಿನಯ್, ವರ್ತೂರು ಸಂತೋಷ್, ಮೈಕಲ್, ಕಾರ್ತಿಕ್, ತನಿಷಾ, ತುಕಾಲಿ ಸಂತು ಅವರಲ್ಲಿ ಒಬ್ಬೊಬ್ಬರನ್ನೇ ಸೇವ್ ಮಾಡಲಾಯಿತು. ಅಂತಿಮವಾಗಿ ಸಿರಿ, ಮೈಕಲ್, ವರ್ತೂರು ಸಂತೋಷ್ ಮಾತ್ರ ಉಳಿದುಕೊಂಡರು. ಈ ಮೂವರಲ್ಲಿ ವರ್ತೂರು ಸಂತೋಷ್ ಅವರನ್ನು ಸೇಫ್ ಮಾಡಲಾಯಿತು. ಕೊನೆಗೆ ಸಿರಿ ಮತ್ತು ಮೈಕಲ್ ಮಾತ್ರ ಉಳಿದುಕೊಂಡರು. ಇವರಿಬ್ಬರಲ್ಲಿ ಮೈಕಲ್ ಸೇಫ್ ಆದರೆ, ಸಿರಿ ಅವರು ಶೋನಿಂದ ಹೊರಗೆ ಬರಬೇಕಾಯ್ತು. ಎಲಿಮಿನೇಷನ್ ಅಂಗಳದಲ್ಲಿ ಸಿರಿ ಮತ್ತು ಮೈಕಲ್ ಅವರು ಇದ್ದಾಗ, ಸುದೀಪ್ ಅವರು ಒಂದು ಪ್ರಶ್ನೆ ಕೇಳಿದರು. ಮನೆಯಲ್ಲಿರುವ ಇತರೆ ಸದಸ್ಯರು ಈ ಇಬ್ಬರಲ್ಲಿ ಯಾರು ಇರಬೇಕು? ಯಾರು ಹೋಗಬೇಕು ಎಂದು ಅಭಿಪ್ರಾಯ ಕೇಳಿದರು. ಆಗ ಸಂಗೀತಾ, ಪ್ರತಾಪ್ ಸೇರಿ ಒಟ್ಟು 5 ಮಂದಿ ಸಿರಿ ಪರವಾಗಿ ವೋಟ್ ಹಾಕಿದರು. ವಿನಯ್ ಸೇರಿದಂತೆ ಒಟ್ಟು 3 ಮಂದಿ ಮೈಕಲ್ ಪರವಾಗಿ ವೋಟ್ ಮಾಡಿದರು. ಆದರೆ ವೀಕ್ಷಕರ ನಿರ್ಧಾರವೇ ಬೇರೆಯಾಗಿತ್ತು. ಸಿರಿ ಅವರು ಎಲಿಮಿನೇಟ್ ಆದರು. ಮನೆಯಿಂದ ಹೊರಗೆ ಬರುವಾಗ ಸಿರಿ ಅವರಿಗೆ ವಿಶೇಷ ಅಧಿಕಾರವೊಂದನ್ನು 'ಬಿಗ್ ಬಾಸ್' ನೀಡಿದರು. ಮುಂದಿನ ವಾರದ ಕ್ಯಾಪ್ಟನ್ಸಿ ಟಾಕ್ಕ್‌ ಆಡುವ ಸ್ಪರ್ಧಿಗೆ ವಿಶೇಷ ಅಧಿಕಾರವೊಂದು ಸಿಗಲಿದೆ, ಅದನ್ನು ಯಾರಿಗೆ ನೀಡುತ್ತೀರಿ ಎಂದು ಬಿಗ್ ಬಾಸ್ ಕೇಳಿದರು. ಅದಕ್ಕೆ ಸಿರಿ ಅವರು ಸಂಗೀತಾಗೆ ನೀಡಿದರು. ಸಂಗೀತಾ ಈವರೆಗೂ ಮನೆಯ ಕ್ಯಾಪ್ಟನ್ ಆಗಿಲ್ಲ. ಹಾಗಾಗಿ, ಈ ವಿಶೇಷ ಅಧಿಕಾರದಿಂದ ಅವರು ಕ್ಯಾಪ್ಟನ್ ಆಗಬಹುದು ಎಂಬುದು ಸಿರಿ ಅವರ ಆಲೋಚನೆ ಆಗಿತ್ತು.

ಪೋಸ್ಟ್‌ಪೋನ್ ಆಯ್ತು ಬಿಗ್ ಬಾಸ್ ಕನ್ನಡ ಫಿನಾಲೆ; ಅಸಲಿ ಕಾರಣವೇನು, ಕಾಣದ ಕೈ ಯಾವುದು?

ಜೊತೆಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಮಾತನಾಡಿದ ಸಿರಿ ತಮ್ಮ ಬಿಗ್‌ಬಾಸ್ ಜರ್ನಿ (journey) ಬಗ್ಗೆ ಅನುಭವ ಹಂಚಿಕೊಂಡರು. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ವಿನ್ (winner) ಯಾರಾಗಬಹುದು ಅಂತ ಗೆಸ್‌ ಮಾಡಿದ್ದಾರೆ. ಅವರಿಗೆ ಈ ಬಾರಿ ಹೆಣ್ಮಗಳೊಬ್ಬಳು ವಿನ್‌ ಆದರೆ ಖುಷಿ ಅಂತೆ. ಆದರೆ ಅವರ ಪ್ರಕಾರ ಬಿಗ್‌ಬಾಸ್ (Big boss) ವಿನ್ನರ್ ರೇಸ್‌ನಲ್ಲಿ ಇರುವವರು ಇಬ್ಬರು ಒಬ್ಬರು ಕಾರ್ತಿಕ್ ಇನ್ನೊಬ್ಬರು ಸಂಗೀತಾ. 'ಈ ಸೀಸನ್‌ನಲ್ಲಿ ಅತ್ಯಂತ ಜೆನ್ಯೂನ್‌ ಅನಿಸುವುದು ಕಾರ್ತಿಕ್‌. ತುಂಬ ಕಷ್ಟಪಟ್ಟು, ತುಂಬ ಇಷ್ಟಪಟ್ಟು ಆಟ ಆಡ್ತಾ ಇದ್ದಾರೆ.

ಟಾಪ್‌ 5ನಲ್ಲಿ ಕಾರ್ತೀಕ್, ವಿನಯ್‌, ಸಂಗೀತಾ, ತುಕಾಲಿ ಸಂತೋಷ್ ಮತ್ತು ತನಿಷಾ ಇರಬೇಕು. ಹುಡುಗಿ ವಿನ್ನರ್ ಆದ್ರೆ ನನಗೆ ಖುಷಿಯಾಗುತ್ತದೆ (Happy). ಹಾಗೆ ನೋಡಿದ್ರೆ ಸಂಗೀತಾ ಗೆಲ್ಲಬಹುದು ಅನಿಸುತ್ತದೆ. ಆದರೆ ಈಗಿನ ಸನ್ನಿವೇಶ ನೋಡಿದ್ರೆ ಕಾರ್ತೀಕ್ ಗೆಲ್ಲಬಹುದು ಅನ್ನಿಸತ್ತೆ' ಅನ್ನೋ ಮಾತನ್ನು ಸಿರಿ ಹೇಳಿದ್ದಾರೆ. ಅವರ ಪ್ರಕಾರ ಕಾರ್ತಿಕ್ ಅಥವಾ ಸಂಗೀತಾ ವಿನ್ನರ್ ಆಗ್ತಾರೆ? ನಿಮ್ ಪ್ರಕಾರ ಯಾರು ವಿನ್ ಆಗಬಹುದು?

ಬಿಗ್ ಬಾಸ್ ಮನೆಯಲ್ಲಿ ಹಾವು-ಏಣಿ ಬಗ್ಗೆ ಹೇಳಿದ ಡೀಟೆಲ್ಸ್‌ ಕೇಳಿ ಕಿಚ್ಚ ಸುದೀಪ್ ಸುಸ್ತು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!