
ಬೆಂಗಳೂರು (ಜ.1): ಬಿಗ್ ಬಾಸ್ ಕನ್ನಡದ ಫಿನಾಲೆ ತಿಂಗಳು ತಲುಪಿದ್ದೇವೆ. ಈ ತಿಂಗಳ ಕೊನೆಯಲ್ಲಿ ಬಿಗ್ ಬಾಸ್ ಫೈನಲ್ ಆಗುವ ನಿರೀಕ್ಷೆ ಇದೆ. ಇದರ ನಡುವೆ ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರೂ ದೊಡ್ಮನೆಗೆ ಹೊಕ್ಕೆ ತಮ್ಮ ಮಕ್ಕಳನ್ನು ನೋಡಿ ಬಂದಿದ್ದಾರೆ. ಕಳೆದ ವಾರ ಪೂರ್ತಿ ಭಾವುಕ ವಾರವಾಗಿದ್ದರೆ, ಈ ಬಾರಿ ಮತ್ತೆ ಬಿಗ್ ಬಾಸ್‌ನ ಅಸಲಿ ಲಕ್ಷಣ ಕಾಣಿಸಿಕೊಳ್ಳಲು ಶುರುವಾಗಿದೆ. ಸೋಮವಾರದ ಎಪಿಸೋಡ್‌ನ ಪ್ರೋಮೋಅನ್ನು ಕಲರ್ಸ್ ಕನ್ನಡ ಪ್ರಸಾರ ಮಾಡಿದ್ದು, ಇದರಲ್ಲಿ ಬಿಗ್ ಬಾಸ್ ಮನೆಯ ಶನಿ ಯಾರು ಅನ್ನೋದರ ಬಗ್ಗೆ ಚರ್ಚೆ ಆರಂಭವಾಗಿದೆ. ಕೆಲವು ವಾರಗಳ ಹಿಂದೆ ತುಕಾಲಿ ಸಂತೋಷ್ ಹಾಗೂ ವರ್ತೂರ್ ಸಂತೋಷ್ ಮಾತನಾಡುವ ವೇಳೆ ಬಿಗ್ ಬಾಸ್ ಮನೆಯಲ್ಲಿ ಯಾರು ಯಾವೆಲ್ಲಾ ಗ್ರಹಗಳು ಎಂದು ಹೇಳಿದ್ದರು. ಅದೇ ರೀತಿಯ ಚರ್ಚೆಯಲ್ಲಿ ಈ ಬಾರಿ ಮತ್ತೊಮ್ಮೆ ವರ್ತೂರ್ ಸಂತೋಷ್ ಭಾಗಿಯಾಗಿದ್ದಾರೆ. ಆದರೆ, ಈ ಬಾರಿ ಅವರಿಗೆ ಪ್ರಶ್ನೆ ಕೇಳಿದ್ದು ತುಕಾಲಿ ಅಲ್ಲ. ಕಾರ್ತಿಕ್ ಮಹೇಶ್. ಎಂದಿನಂತೆ ಮೂರು ಮಂದಿಯನ್ನು ವರ್ತೂರ್ ಸಂತೋಷ್ ಶನಿ ಎಂದು ಹೇಳಿದ್ದಾರೆ. ಕೊನೆಗೆ ಇದೇ ಪ್ರಶ್ನೆಯನ್ನು ವರ್ತೂರ್ ಸಂತೋಷ್, ಕಾರ್ತಿಕ್‌ಗೆ ಕೇಳಿದ್ದಾರೆ. ಕಾರ್ತಿಕ್ ಕೂಡ ಈ ಮನೆಯ ಶನಿ ಯಾರು ಎನ್ನುವುದನ್ನು ತಿಳಿಸಿದ್ದಾರೆ. ಇದರ ನಡುವೆ ಈ ಪ್ರಶ್ನೆ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಖಂಡಿತಾ ಇರುತ್ತದೆ ಎಂದು ಫ್ಯಾನ್ಸ್‌ಗಳು ಗೆಸ್ ಮಾಡಿದ್ದಾರೆ.
57 ಸೆಕೆಂಡ್‌ನ ಪ್ರೋಮೋದಲ್ಲಿ ಕಾರ್ತಿಕ್ ಹಾಗೂ ವರ್ತೂರ್ ಸಂತೋಷ್ ಮನೆಯ ಕಿಚನ್ ಏರಿಯಾದಲ್ಲಿ ಕುಳಿತುಕೊಂಡು ಮಾತನಾಡಿದ್ದಾರೆ. ಈ ವೇಳೆ ಮನೆಯ ಕ್ಯಾಪ್ಟನ್ ತನಿಷಾ ಕೂಡ ಇದ್ಆರೆ. 'ಬಗ್ ಮನೆಯಲ್ಲಿ ನವಗ್ರಹಗಳು? ನಿಮ್ಮ ಅನಿಸಿಕೆ? ಎಂಧು ಕಾರ್ತಿಕ್ ವರ್ತೂರ್ ಸಂತೋಷ್‌ಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸುವ ವರ್ತೂರ್ ಸಂತೋಷ್, 'ನಿಜವಾಗ್ಲೂ ನಾವು ಗ್ರಹಗಳೇ ಇಲ್ಲಿ ಎನ್ನುತ್ತಾರೆ. ಇದಕ್ಕೆ ಕಾರ್ತಿಕ್, ಈ ಮನೆಯ ಶನಿ ಯಾರು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವರ್ತೂರ್, ತಮ್ಮ ಮೊದಲ ಹೆಸರಾಗಿ ವಿನಯ್ ಅವರನ್ನು ಶನಿ ಎಂದಿದ್ದಾರೆ. 2ನೇ ಶನಿ ಯಾರು ಎನ್ನುವ ಪ್ರಶ್ನೆಗೆ ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ಆ ಬಳಿಕ ಮೂರನೇ ಶನಿ ಯಾರು ಎಂದು ಕಾರ್ತಿಕ್ ಕೇಳಿದ್ದಾರೆ. ಅದಕ್ಕೆ 'ಮೂರನೇ ಶನಿ ಇದ್ಯಾ' ಎಂದು ಪ್ರಶ್ನೆ ಮಾಡುವ ವರ್ತೂರ್ ಬಳಿಕ ಸಂಗೀತಾ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ನಗುವ ಕಾರ್ತಿಕ್‌ಗೆ ವರ್ತೂರ್ ಕರೆಕ್ಟಾ ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್ ಅಲ್ಲ. ನಂಗೊತ್ತಿಲ್ಲ ಎಂದಿದ್ದು ಪ್ರೋಮೋದಲ್ಲಿ ಸೆರೆಯಾಗಿದೆ. ಮಾತು ಮುಂದುವರಿಸುವ ವರ್ತೂರ್, ಅವರು ಪ್ರಭಾವ ಬೀರಿದರೆ, ಒಬ್ಬರ ಮೇಲೆ ಅದು ಪಕ್ಕಾ ಪರಿಣಾಮ ಬೀರುತ್ತದೆ ಎಂದು ಹೇಳುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಳಿಕ ವರ್ತೂರ್ ಇದೇ ಪ್ರಶ್ನೆಯನ್ನು ಕಾರ್ತಿಕ್‌ಗೆ ಕೇಳಿದ್ದು, ನಿಮ್ಮ ಪ್ರಕಾರ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಚ್ಚರಿಕೆಯಿಂದಲೇ ಉತ್ತರಿಸುವ ಕಾರ್ತಿಕ್, ಬಿಗ್ ಬಾಸ್ ಮನೆಯ ಶನಿ ಎಂದರೆ, ಪ್ರಭಾವ ಬೀರುವವರು ಸಂಗೀತಾ ಎಂದಿದ್ದಾರೆ. ಇದನ್ನು ಕೇಳಿದ ತನೀಷಾ 'ಯಾರು?' ಎಂದು ಪ್ರಶ್ನೆ ಮಾಡಿದ್ದಾರೆ. 'ಬಟ್ ಸಂಗೀತಾ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾಳೋ ಇಲ್ಲವೋ?' ಎಂದು ವರ್ತೂರ್ ಹೇಳಿದ್ದಾರೆ. ವಿನಯ್ ಪ್ರಭಾವ ಬೀರಿದ್ದು ಈವರೆಗೂ ಬೀಸುತ್ತಿದೆ ಎನ್ನುವ ಕಾರ್ತಿಕ್, ಇವಾಗ ಬೀರೋಕ್ಕೆ ಅವನಲ್ಲಿ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕಾರ್ತಿಕ್ ಹಾಗೂ ವರ್ತೂರ್ ಸಂತೋಷ್ ಅವರ ಮಾತು ಸಹಜ ಮಾತುಕತೆಯಾಗಿ ಕಂಡಿದ್ದರೂ, ಯಾವ ಕಾರಣಕ್ಕಾಗಿ ಇದು ಚರ್ಚೆಯಾಗಿದೆ ಎನ್ನುವುದು ಇಂದಿನ ಎಪಿಸೋಡ್‌ನಲ್ಲಿಯೇ ನೋಡಬೇಕಾಗಿದೆ.
ಕಾರ್ತಿಕ್ನ ತಬ್ಬಿಕೊಂಡು ಕಿಸ್ ಕೊಟ್ಟ ಸಂತೋಷ್! ಹೆಣ್ಣುಮಕ್ಕಳು ಕೊಟ್ಟ ವ್ಯಾಕ್ಸಿನ್ ಶಿಕ್ಷೆಗೆ ಕಿರುಚಾಡಿದ ತುಕಾಲಿ!
ಇದಕ್ಕೆ ಕಾಮೆಂಟ್ ಮಾಡಿರುವ ಅಭಿಮಾನಿಗಳು, ಶನಿಯೂ ಕೂಡ ದೇವರು ಎಂದು ಹೇಳಿದ್ದಾರೆ. ಈ ವಾರದ ಎಪಿಸೋಡ್‌ನಲ್ಲಿ ಈ ಪ್ರಶ್ನೆ ಖಂಡಿತಾವಾಗಿಯೂ ಇರಲಿದೆ. ಏನ್ ಗುರು ಕಾರ್ತಿಕ್, ಈ ಥರ ಲೂಸ್ ಟಾಕ್ಸ್ ಆಡಿ ಗೆಲ್ಲೋ ಅವಕಾಶ ಯಾಕೆ ಕಳ್ಕೊತಿದೀಯಾ ಎಂದು ಕಾರ್ತಿಕ್ ಗೆ ಎಚ್ಚರಿಸಿದ್ದಾರೆ. 'ಉತ್ತರನ ಪೌರುಷ ಒಲೆಯ ಮುಂದೆ;ಕಾರ್ತಿಕ್ ನ ಪೌರುಷ ಹೆಂಗಸರ ಮುಂದೆ' ಎಂದು ಕಾಮೆಂಟ್ ಮಾಡಿದ್ದಾರೆ. 'ಅದಕ್ಕೆ ಮೊದಮೊದಲೂ ಸಂಗೀತ ಆವರನ್ನು ಬಳಸಿ ಸ್ವಲ್ಪ ಹೆಸರು ಗಳಿಸಿ ಈಗ ತಿರುಗಿ ಬಿದ್ದಿದ್ದು...; ಎಂದು ಕಾಮೆಂಟ್ ಮಾಡಿದ್ದಾರೆ.
72 ಲಕ್ಷ ವೋಟ್ ಪಡೆದ ಬಿಗ್ ಬಾಸ್ ಸ್ಪರ್ಧಿ, ಕಿಚ್ಚ ರಿವಿಲ್ ಮಾಡಿದ್ರು ಅಚ್ಚರಿಯ ನಂಬರ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.