ಬಿಗ್‌ಬಾಸ್ ಮನೆಯಿಂದ 12ನೇ ವಾರ ಎಲಿಮಿನೇಟ್ ಆಗಿ ಹೊರ ಬಂದಿರುವ ಸಿರಿ ಅವರು ಸ್ವಲ್ಪ ಕಾಲಾವಕಾಶ ಕೊಡಿ, ಮನೆಯಲ್ಲಿ ಯಾರು ಎಂಥವರು ಅನ್ನೋದನ್ನ ಹೇಳ್ತಿನಿ ಎಂದಿದ್ದಾರೆ.
ಬೆಂಗಳೂರು (ಜ.01): ಬಿಗ್‌ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋನಿಂದ 12ನೇ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದ ಸಿರಿ ಅವರು ಸಾಮಾಜಿಕ ಜಾಲತಾಣಕ್ಕೆ ಬಂದು ಮೊದಲ ಬಾರಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ವಲ್ಪ ಕಾಲಾವಕಾಶ ಕೊಡಿ, ಮನೆಯಲ್ಲಿ ಯಾರು ಎಂಥವರು ಅನ್ನೋದನ್ನ ಹೇಳ್ತಿನಿ ಎಂದಿದ್ದಾರೆ.
ಹಾಯ್... ಎಲ್ಲರಿಗೂ ನಮಸ್ಕಾರ, ತುಂಬಾ.. ತುಂಬಾ.. ತುಂಬಾ.. ಖುಷಿಯಾಗ್ತಿದೆ. ನಿಮ್ಮೆಲ್ಲರ ಪ್ರೀತಿ ನೋಡುತ್ತಿದ್ದರೆ, ನಿಜ ಹೇಳಬೇಕೆಂದರೆ ನನಗೆ ಮಾತುಗಳೇ ಹೊರಡುತ್ತಿಲ್ಲ. ನನ್ನ ಜೀವನದ ದೊಡ್ಡ ತೀರ್ಮಾನ ಎಂದರೆ ಬಿಗ್‌ಬಾಸ್ ಮನೆಗೆ ಹೋಗುವುದು ಆಗಿತ್ತು. ಅಲ್ಲಿ ಹೇಗಿರುತ್ತೋ ಏನಿರುತ್ತೋ ಎಂಬ ಬಹಳಷ್ಟು ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು. ಆದರೆ, ನಾನು ಆ ಮನಗೆ ಹೋಗಿದ್ದಾಯ್ತು, ಅಲ್ಲಿ ಇದ್ದಿದ್ದಾಯ್ತು, ಆಟವಾಡಿದ್ದಾಯ್ತು, ಬಹಳಷ್ಟು ಎಮೋಷನ್ಸ್‌ಗಳನ್ನು ಹಂಚಿಕೊಂಡಿದ್ದಾಯ್ತು. ಆದರೆ, ಇವತ್ತು ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದಾದಮೇಲೆ ನಾನು ಗಳಿಸಿಕೊಂಡು ಬಂದಿದ್ದು ಏನೆಂದರೆ ಅದು ನಿಮ್ಮೆಲ್ಲರ ಪ್ರೀತಿ. ನಿಮ್ಮ ಮನಸ್ಸನ್ನು ನಾನು ಗೆದ್ದಿದ್ದೀನಿ ಅದೇ ನನಗೆ ತುಂಬಾ ಸಂತೋಷ ಆಗ್ತಾಯಿದೆ. ಅದಕ್ಕೆ ನಾನು ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲುವುದಿಲ್ಲ. ಈ ನಿಮ್ಮ ಪ್ರೀತಿಯ ಋಣ ನನ್ನ ಉಸಿರಿರೋವರೆಗೂ ನಾನು ಮರೆಯಲು ಸಾಧ್ಯವಿಲ್ಲ.
ಈ ಬಾರಿ ಬಿಗ್‌ಬಾಸ್‌ನಲ್ಲಿ ಇವರಿಬ್ಬರಲ್ಲಿ ಒಬ್ಬರು ಗೆಲ್ಲಬಹುದು ಅಂತಿದ್ದಾರೆ ಸಿರಿ, ಯಾರು ಆ ಇಬ್ಬರು?
ನನಗೆ ಗೊತ್ತು ನೀವು ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನೀವು ನನಗೆ ಸಪೋರ್ಟ್ ಮಾಡಿಕೊಂಡು ಬಂದಿದ್ದೀರಿ. ಆದರೆ, ಬಿಗ್‌ಬಾಸ್ ಮನೆಯಲ್ಲಿದ್ದಾಗಲೂ ನೀವು ಈ ಮಟ್ಟಕ್ಕೆ ಸಹಾಯ ಮಾಡ್ತೀರಾ, ಸಪೋರ್ಟ್ ಮಾಡ್ತೀರಾ, ಪ್ರೀತಿ ಕೊಡ್ತೀರಾ ಎಂಬ ನಿರೀಕ್ಷೆಯೂ ಇರಲಿಲ್ಲ. ನಿಮಗೆ ಹೃದಯಪೂರ್ವಕ ಧನ್ಯವಾದಗಳು. ನಾನು ನಿಮ್ಮೆಲ್ಲರೊಂದಿಗೆ ಮಾತನಾಡಿಕೊಳ್ಳಲು ಆಸೆಯಿದೆ. ನಾನು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವುದಿಲ್ಲ. ಆದರೆ, ನಿಮ್ಮೊಂದಿಗೆ ಮಾತನಾಡುವುದಕ್ಕಾಗಿ ಇನ್‌ಸ್ಟಾಗ್ರಾಂ ಲೈವ್‌ಗೆ ಬರುತ್ತೇನೆ ಎಂದು ಹೇಳಿದರು.
ಬೀಚ್‌ನಲ್ಲಿ ಚೆಡ್ಡಿಮೇಲೆ ಕಾಣಿಸಿಕೊಂಡ ವಿಜಯ್ ದೇವರಕೊಂಡ: ರಶ್ಮಿಕಾಳನ್ನು ಅಡಗಿಸಿಟ್ಟಿದ್ಯಾಕೆ ಎಂದ ಫ್ಯಾನ್ಸ್!
ಇನ್ನು ನಾನು ಇನ್‌ಸ್ಟಾಗ್ರಾಮ್ ಲೈವ್‌ಗೆ ಯಾವಾಗ ಏನು ಎಂಬುದರ ವಿವರವನ್ನೂ ಶೀಘ್ರದಲ್ಲಿಯೇ ನಿಮಗೆ ಮಾಹಿತಿ ಕೊಡುತ್ತೇನೆ. ನನಗೆ ಸ್ವಲ್ಪ ಸಮಯ ಕೊಡಿ. ನಾನು ನಿನ್ನೆಯಷ್ಟೇ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದದ್ದೀನಿ. ಈ ವಾತಾವರಣಕ್ಕೆ ಹೊಂದಾಣಿಕೆ ಆಗಲು ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ನಾನು ಸೋಷಿಯಲ್ ಮೀಡಿಯಾ ಲೈವ್ ಬಂದು ನಿಮ್ಮೆಲ್ಲರೊಟ್ಟಿಗೆ ಮಾತನಾಡುತ್ತೇನೆ. ಆಗ ನಾನು ಬಹಳಷ್ಟು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು ಎಂದು ಸಿರಿ ಹೇಳಿದ್ದಾರೆ.