ಬಿಗ್ ಬಾಸ್ ಸ್ಪರ್ಧೆಗೆ ಬಂದು ಕಣ್ಣು ತಂಪು ಮಾಡ್ತಾರಾ ಜ್ಯೋತಿ ರೈ ? ನಟಿಯ ಸೌಂದರ್ಯ ಹಾಡಿಹೊಗಳಿದ ನಿರಂಜನ್, ಕೀರ್ತಿ

By Roopa Hegde  |  First Published Sep 3, 2024, 12:07 PM IST

ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಯಾರೆಲ್ಲ ಬರ್ತಾರೆ? ಸದ್ಯ ಇರುವ ಪ್ರಶ್ನೆ ಇದು. ಸ್ಪರ್ಧಿಗಳ ಲೀಸ್ಟ್ ಗೆಸ್ ಮಾಡಿದ ನಿರಂಜನ್ ಹಾಗೂ ಕೀರ್ತಿ, ನಟಿ ಜ್ಯೋತಿ ರೈ ಗೆ ಫುಲ್ ವೋಟ್ ಮಾಡಿದ್ದಾರೆ. 


ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 11 (Colors Kannada Bigg Boss Season 11) ರ ಮೇಲೆ ಸದ್ಯ ಎಲ್ಲರ ಕಣ್ಣಿದೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಬಿಗ್ ಬಾಸ್ ಶುರುವಾಗ್ಬಹುದು ಎಂಬ ನಿರೀಕ್ಷೆಯಲ್ಲಿರುವ ವೀಕ್ಷಕರಿಗೆ ಚಾನೆಲ್ ಒಂದು ಪ್ರೊಮೊ ನೋಡಿ, ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮಧ್ಯೆ ಬಿಗ್ ಬಾಸ್ ಗೆ ಯಾರೆಲ್ಲ ಸ್ಪರ್ಧಿಗಳು ಬರ್ತಾರೆ ಎಂಬುದು ಬಿಸಿ ಬಿಸಿ ಚರ್ಚೆಯಲ್ಲಿರುವ ವಿಷ್ಯ.

ಬಿಗ್ ಬಾಸ್ ಮಾಜಿ ಸ್ಪರ್ಧಿ (Bigg Boss ex-contestants )ಗಳಾದ ಕಿರಿಕ್ ಕೀರ್ತಿ (Kirik Keerthi) ಮತ್ತು ನಿರಂಜನ್ ದೇಶ್ ಪಾಂಡೆ (Niranjan DeshPandey) ಕೂಡ ತಮ್ಮ ಪ್ರಕಾರ ಯಾರ್ ಯಾರ್ ಬಿಗ್ ಬಾಸ್ ಗೆ ಬರಬಹುದು ಅಂತ ಹೇಳಿರೋದು ಮಾತ್ರವಲ್ಲ, ಯಾರ್ ಯಾರ್ ಬರಬೇಕು ಎಂಬುದನ್ನು ಕೂಡ ಹೇಳಿದ್ದಾರೆ. ಮಿಸ್ಟರ್ ನಿರಿಕ್ 4 (mrnirik4) ಹೆಸರಿನ ಚಾನೆಲ್ ಶುರು ಮಾಡಿರುವ ಕೀರ್ತಿ ಹಾಗೂ ನಿರಂಜನ್, ಜನರಿಗೆ ನಿರಂತರ ಮನರಂಜನೆ ನೀಡ್ತಿದ್ದಾರೆ. ಈ ಮಧ್ಯೆ, ಬಿಗ್ ಬಾಸ್ ನಲ್ಲಿ ಯಾರೆಲ್ಲ ಬಂದ್ರೆ ಕಣ್ಣು ತಂಪಾಗುತ್ತೆ ಎಂಬ ವಿಷ್ಯದ ಬಗ್ಗೆ ಅವರು ಚರ್ಚೆ ನಡೆಸಿದ್ದಾರೆ.

Tap to resize

Latest Videos

ದರ್ಶನ್​ ನಂಬಿ ಹಣ ಕೊಟ್ಟವರು ಹೈರಾಣ: ಬಡ್ಡಿ ದುಡ್ಡು ಕಟ್ಟುವ ಸಂಕಷ್ಟದಲ್ಲಿ ದಚ್ಚು ನಿರ್ಮಾಪಕರು.!

ಬಿಗ್ ಬಾಸ್ ನಲ್ಲಿ ಸಾಮಾನ್ಯವಾಗಿ ತೆಳ್ಳಗೆ, ಬೆಳ್ಳಗೆ ಸುಂದರವಾಗಿರುವ ಹುಡುಗಿಯೊಬ್ಬರು ಸ್ಪರ್ಧಿಯಾಗಿ ಬಂದೇ ಬರ್ತಾರೆ. ತಾವು ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ಪರ್ಧಿಯಾಗಿದ್ದ ಸಂಜನಾ ನೆನಪು ಮಾಡ್ಕೊಂಡ ನಿರಂಜನ್, ಪ್ರತಿ ಬಾರಿ ಬಿಗ್ ಬಾಸ್ ಮನೆಯಲ್ಲಿ ಇಂಥ ಬ್ಯೂಟಿಫುಲ್ ಹುಡುಗಿಯರೊಬ್ಬರು ಇರ್ತಾರೆ. ವೀಕ್ಷಕರು ಕಣ್ ತಂಪು ಮಾಡ್ಕೊಳ್ಳಲಿ ಅಂತಾನೆ ಅವರನ್ನು ಹಾಕ್ತಾರೆ. ಹಾಗೆ ಈ ಬಾರಿ, ತಪ್ಪದ ಬೆಡಗಿ ರಾಗಿಣಿ (Ragini) ಹೋಗ್ಬೇಕು ಎನ್ನುತ್ತಾರೆ ನಿರಂಜನ್. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಿರಿಕ್ ಕೀರ್ತಿ, ಜ್ಯೋತಿ ರೈ (Jyoti Rai) ಹೆಸರು ಹೇಳ್ತಾರೆ. ಆಂಧ್ರದಲ್ಲಿ ಬ್ಯುಸಿ ಇರುವ ಜ್ಯೋತಿ ರೈ ಬಗ್ಗೆ ಮಾತನಾಡುವ ಈ ಕಿಲಾಡಿಗಳು, ಸೋಶಿಯಲ್ ಮೀಡಿಯಾ (Social Media)ದಲ್ಲಿ ಜ್ಯೋತಿ ರೈ ಮಿಂಚುತ್ತಿದ್ದಾರೆ. ಅವರನ್ನು ನೋಡೋಕೆ ಎರಡು ಕಣ್ಣು ಸಾಲದು ಎಂದ ನಿರಂಜನ್, ನೂರು ಕಣ್ಣು ಸಾಲದು ಅಂತ ಹಾಡ್ ಕೂಡ ಹಾಡ್ತಾರೆ. 

ಈ ಬಾರಿ ಬಿಗ್ ಬಾಸ್ ಗೆ ಜ್ಯೋತಿ ರೈ ಬರ್ತಾರೆ ಎನ್ನುವ ಸುದ್ದಿ ಇದೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ಜ್ಯೋತಿ ರೈ, ಹಾಟ್ ಆಂಡ್ ಸೆಕ್ಸಿಯಾಗಿ ಕಾಣ್ತಿದ್ದಾರೆ. ದಿನ ಹೋದಂತೆ ಸಿಕ್ಕಾಪಟ್ಟೆ ಬ್ಯೂಟಿಫುಲ್ ಆಗ್ತಿರುವ ಅವರನ್ನು ನಿರಂಜನ್ ಹೇಳಿದಂತೆ ನೋಡೋಕೆ ಎರಡು ಕಣ್ಣು ಸಾಲೋದಿಲ್ಲ. ಆದ್ರೆ ನಿರಂಜನ್ ಹಾಗೂ ಕೀರ್ತಿ ಈ ವಿಡಿಯೋಕ್ಕೆ ಫುಲ್ ಕಮೆಂಟ್ ಬಂದಿದೆ. ಜನರು ಮೆನ್ ವಿಲ್ ಬಿ ಮೆನ್ ಅಂತಿದ್ದಾರೆ. 

ಒಂದೇ ಸಮಯದಲ್ಲಿ ಸಲ್ಮಾನ್ - ವಿವೇಕ್ ಇಬ್ಬರ ಜೊತೆಗೂ ಡೇಟಿಂಗ್ ಮಾಡ್ರಿದ್ತಾ ಐಶ್ವರ್ಯ ರೈ ?

ನಿರಂಜನ್ ಹಾಗೂ ಕೀರ್ತಿ, ಬಿಗ್ ಬಾಸ್ ಗೆ ಯಾರೆಲ್ಲ ಬರ್ಬಹುದು, ಯಾರ್ ಬಂದ್ರೆ ಏನಾಗುತ್ತೆ ಎನ್ನುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅವರ ಲೀಸ್ಟ್ ನಲ್ಲಿ ವರ್ಷಾ ಕಾವೇರಿ (Varsha Kaveri), ವರುಣ್ (Varun), ಅಜಿತ್‌ ಹನುಮಕ್ಕನವರ್‌ (Ajith Hanumakkanavar),  ರಾಧಾ ಹಿರೇಗೌಡ (Radha Hiregowda) ಹೆಸರು ಕೇಳಿ ಬಂದಿದೆ. ನಾವು ಗೆಸ್ ಮಾಡ್ತಿದ್ದೇವೆ ಎನ್ನುತ್ತಲೇ ಮಾತು ಶುರು ಮಾಡಿದ ಅವರು, ಈ ಸ್ಪರ್ಧಿಗಳು ಶೋಗೆ ಬಂದ್ರೆ ಏನೆಲ್ಲ ಆಗ್ಬಹುದು ಎಂಬುದನ್ನು ವಿವರಿಸಿದ್ದಾರೆ. ಬಿಗ್ ಬಾಸ್ ಗೆ ಯಾರ್ ಬರ್ತಾರೆ ಎಂಬ ಕೀರ್ತಿ ಹಾಗೂ ನಿರಂಜನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 1 ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ತಮಗೆ ಯಾವ ಸ್ಪರ್ಧಿ ಬೇಕು, ಯಾರು ಬಂದ್ರೆ ಬಿಗ್ ಬಾಸ್ ಓಡುತ್ತೆ ಎಂಬುದನ್ನು ಅಭಿಮಾನಿಗಳು ಕಮೆಂಟ್ ನಲ್ಲಿ ತಿಳಿಸಿದ್ದಾರೆ. ಬಿಗ್ ಬಾಸ್ ಕನ್ನಡ ಈ ಬಾರಿ ಮತ್ತಷ್ಟು ರೋಚಕತೆಯಿಂದ ಕೂಡಿರುತ್ತೆ ಎನ್ನಲಾಗ್ತಿದೆ. 
 

 
 
 
 
 
 
 
 
 
 
 
 
 
 
 

A post shared by Mr. Nirik (@mrnirik4)

click me!