ಹುಟ್ಟಿಸಿದ ಅಪ್ಪ ಕಣ್ಣೆದುರು ಇಲ್ಲ ಆದರೆ ದೇವರ ಕೊಟ್ಟ ಅಪ್ಪ....;ಕಿರುತೆರೆ ನಟಿ ಸಿತಾರಾ ಭಾವುಕ

Published : Sep 03, 2024, 09:24 AM IST
 ಹುಟ್ಟಿಸಿದ ಅಪ್ಪ ಕಣ್ಣೆದುರು ಇಲ್ಲ ಆದರೆ ದೇವರ ಕೊಟ್ಟ ಅಪ್ಪ....;ಕಿರುತೆರೆ ನಟಿ ಸಿತಾರಾ ಭಾವುಕ

ಸಾರಾಂಶ

ಸುಚೇಂದ್ರ ಪ್ರಸಾದ್ ಜೊತೆ ಫೋಟೋ ಹಂಚಿಕೊಂಡ ಸಿತಾರಾ. ತಂದೆ ಸ್ಥಾನ ಕೊಟ್ಟಿದ್ದಕ್ಕೆ ಪ್ರತಿಯೊಬ್ಬರು ಆಶ್ಚರ್ಯ......

ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ನಟಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ಸಿತಾರಾ ಸೋಷಿಯಲ್ ಮೀಡಿಯಾದಲ್ಲಿ ತಂದೆ ಫೋಟೋವನ್ನು ಹಂಚಿಕೊಂಡಿದ್ದಾರೆ. ತಂದೆ ಬಿಟ್ಟು ಹೋದ ಮೇಲೆ ಜೀವನ ಎಷ್ಟು ಕಷ್ಟ ಆಯ್ತು ಎಂದು ಸಾಕಷ್ಟು ಸಂದರ್ಶನದಲ್ಲಿ ಹೇಳಿಕೊಂಡಿರುವ ಸಿತಾರಾ ಈಗ ಈ ವ್ಯಕ್ತಿಗೆ ತಂದೆ ಸ್ಥಾನ ಕೊಟ್ಟಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ. ನಂತರ ಸಿತಾರಾ ಬರೆದಿರುವ ಕ್ಯಾಪ್ಶನ್ ನೋಡಿ ನೆಮ್ಮದಿಯಾಗಿದ್ದಾರೆ.

ಯಾರು ಆ ವ್ಯಕ್ತಿ?

'ನಾನು ಇದ್ದೇನೆ ನೀನು ಮುಂದೆ ಹೋಗು ಮಗಳೆ ಅನ್ನೋಕೆ ಹುಟ್ಟಿಸಿದ ಅಪ್ಪ ಕಣ್ಣೆದುರು ಇಲ್ಲ. ಆದರೆ ದೇವರು ಕೊಟ್ಟ ಅಪ್ಪ ನನ್ನ ಜೊತೆಯಲ್ಲಿ ಇರುತ್ತೇನೆ ನೀನು ಸಾಧಿಸು ಅಮ್ಮಯ್ಯ ಅಂದಾಗ 100 ಆನೆಗಳ ಬಲ ಬರುತ್ತದೆ ನಂಗೆ. ಥ್ಯಾಂಕ್ ಯು  ಗಾಡ್' ಎಂದು ಸಿತಾರಾ ಬರೆದುಕೊಂಡು ಅಪ್ಲೋಡ್ ಮಾಡಿರುವುದು ನಟ ಸುಚೇಂದ್ರ ಪ್ರಸಾದ್ ಫೋಟೋವನ್ನು. 

ಮುಟ್ಟಬಾರದ ಜಾಗದಲ್ಲಿ ಕೆಟ್ಟದಾಗಿ ಮುಟ್ಟುತ್ತಿದ್ದರು: ನೀನಾಸಂ ಕರಾಳ ಸತ್ಯ ಬಿಚ್ಚಿಟ್ಟ ನಟಿ ಸಿತಾರಾ!

ಕನ್ನಡ ಚಿತ್ರರಂಗದ ಹಿರಿಯ ನಟ ಸುಚೇಂದ್ರ ಪ್ರಸಾದ್ ಮತ್ತು ಸಿತಾರಾ ನಿಜವಾಗ್ಲೂ ಅಪ್ಪ-ಮಗಳಾ? ಏನಿದು ಎಂದು ಗೊಂದಲದಲ್ಲಿ ಇರುವವರೇ ಹೆಚ್ಚು. ರಂಗಭೂಮಿ ಹಿನ್ನಲೆಯಿಂದ ಬಂದಿರುವ ಸಿತಾರಾ ಅವರಿಗೆ ಸಪೋರ್ಟ್ ಮಾಡುತ್ತಾ ಬಂದಿರುವ ಸುಚೇಂದ್ರ ಪ್ರಸಾದ್ ಅವರಿಗೆ ತಂದೆ ಸ್ಥಾನವನ್ನು ಕೊಟ್ಟಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಕ್ಲಿಕ್ ಮಾಡಿರುವ ಈ ಚೆಂದದ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಾಲಿಮಾಸ್ತ್ರ ನಿಮ್ಮ ತಂದೆ ಅಂತ ಗೊತ್ತಿದ್ದರೆ ನಿಮ್ಮನ್ನು ನಾವು ಹೆಚ್ಚಾಗಿ ರೇಗಿಸುತ್ತಿರಲಿಲ್ಲ ಎಂದು ನೆಟ್ಟಿಗರು ಹಾಸ್ಯ ಮಾಡಿದ್ದಾರೆ.

ಅರೇಂಜ್ಡ್‌ ಮ್ಯಾರೇಜ್‌ನಲ್ಲಿ ಗಂಡ ಅರ್ಥ ಮಾಡ್ಕೊಳ್ಳಿ ಅಂತ 3 ವರ್ಷ ಕೊಟ್ಟೆ; ವಿಚ್ಛೇದನ ಹಂತದಲ್ಲಿ ನಟಿ ಸಿತಾರಾ

ಕನ್ನಡ ಕಿರುತೆರೆಯಲ್ಲಿ ಖಡಕ್ ವಿಲನ್ ಆಗಿ ಮಿಂಚುತ್ತಿರುವ ಸಿತಾರಾ ನೀನಾಸಂ ನಾಲ್ಕು ವರ್ಷಗಳ ಹಿಂದೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಫ್ಯಾಮಿಲಿ ಮತ್ತು ಸೀರಿಯಲ್‌ ಎರಡನ್ನೂ ಮ್ಯಾನೇಜ್ ಮಾಡಿಕೊಂಡು ಜೀವನವನ್ನು ಫಸ್ಟ್‌ ಕ್ಲಾಸ್ ಆಗಿ ನಡೆಸುತ್ತಾರೆ. ತೆರೆ ಮೇಲೆ ಬಣ್ಣ ಹಚ್ಚಿಕೊಂಡು ಕಲರ್‌ಫುಲ್ ಜೀವನ ನಡೆಸುತ್ತಿದ್ದಾರೆ ಅಂದ್ರೆ ರಿಯಲ್‌ ಲೈಫ್‌ನಲ್ಲೂ ಹಾಗೆ ಅಂದುಕೊಳ್ಳಬೇಡಿ. ತುಂಬಾ ಕಷ್ಟ ನೋವು ಅವಮಾನಗಳನ್ನು ಎದುರಿಸಿಕೊಂಡು ಸಿತಾರಾ ಸಾಧನೆ ಮಾಡಿರುವುದು. ಆದರೆ ಸಣ್ಣ ಪುಟ್ಟ ಸಮಸ್ಯೆಯಿಂದ ಸದ್ಯ ವಿಚ್ಛೇದನ ಹಂತಕ್ಕೆ ಬಂದಿದೆ ಎನ್ನಲಾಗಿದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!