ಬಿಗ್ ಬಾಸ್ ಶೋ ತೆಲುಗಿನಲ್ಲಿ ಶುರುವಾಗುವ ಸೂಚನೆ ಸಿಕ್ಕಿದೆ. ಕನ್ನಡದಲ್ಲೂ ಇಷ್ಟೊತ್ತಿಗೆ ಶೋ ದಿನಾಂಕ ನಿಗದಿ ಆಗ್ಬೇಕಿತ್ತು. ಈ ಕಾರ್ಯಕ್ರಮ ಹೋಸ್ಟ್ ಮಾಡುವ ಸುದೀಪ್ 'ವಿಕ್ರಾಂತ್ ರೋಣ' ಪ್ರಚಾರದಲ್ಲಿ ಬ್ಯುಸಿ ಆಗಿರುವ ಕಾರಣ ಸದ್ಯಕ್ಕಿದು ಸಾಧ್ಯವಾಗ್ತಿಲ್ಲ. ಮತ್ಯಾವಾಗ ಶುರು ಆಗಬಹುದು?
ಬಿಗ್ ಬಾಸ್ ಶೋ(Big Boss) ಅಂದರೆ ಕುತೂಹಲ ಗರಿಗೆದರುತ್ತದೆ. ಬಿಗ್ ಬಾಸ್ ಶೋ ಶುರುವಾಗ್ತಿದೆ ಅಂದ ಕೂಡಲೇ ಮನಸ್ಸಿಗೆ ಬರುವ ಮೊದಲ ಪ್ರಶ್ನೆ ಮನೆಯೊಳಗೆ ಯಾರ್ಯಾರು ಇರ್ತಾರೆ ಅನ್ನೋದು. ಕಳೆದ ವರ್ಷ ಒಂದೇ ಸೀಸನ್‌ನಲ್ಲಿ ಎರಡೆರಡು ಸಲ ಬಿಗ್ ಬಾಸ್ ಶೋ ನಡೆದದ್ದು ಇತಿಹಾಸ, ಜೊತೆಗೆ ಅರ್ಧಕ್ಕೆ ನಿಂತ ಶೋವನ್ನು ಎಷ್ಟೋ ಸಮಯದ ನಂತರ ಪುನಃ ಶುರು ಮಾಡ್ತಾರೆ ಅಂದಾಗ ಎಲ್ಲರ ಆಸಕ್ತಿಯೂ ಹೋಗಿರುತ್ತೆ, ಯಾರು ನೋಡ್ತಾರೆ ಈ ಶೋವನ್ನು ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಎಲ್ಲ ಊಹೆ ಮೀರಿ ಬಿಗ್ ಬಾಸ್ ನ ಎರಡನೇ ಇನ್ನಿಂಗ್ಸೂ(Innings) ಸೂಪರ್ ಹಿಟ್(Super Hit) ಆಯ್ತು.
ಸದ್ಯಕ್ಕೀಗ ಕೊರೋನಾ(Covid 19) ಗಲಾಟೆ ಅಷ್ಟೇನಿಲ್ಲ. ಲಾಕ್ ಡೌನ್ ಇತ್ಯಾದಿಗಳೆಲ್ಲ ದೂರದ ಮಾತು. ಹೀಗಾಗಿ ಬಿಗ್ ಬಾಸ್ ಸೀಸನ್ 9(Big Boss Kannada Season 9) ಶುರು ಮಾಡೋದಕ್ಕೆ ಇದು ಸಕಾಲ ಅನ್ನೋ ಮಾತು ಬರ್ತಿದೆ. ಇದಕ್ಕೆ ಪೂರಕ ಎಂಬ ಹಾಗೆ ತೆಲುಗಿನ ಬಿಗ್ ಬಾಸ್ ಸದ್ದು ಮಾಡ್ತಿದೆ. ಸೆಪ್ಟೆಂಬರ್ ೪ರಿಂದ 'ಬಿಗ್ ಬಾಸ್ ತೆಲುಗು ಸೀಸನ್ 6' (Telugu Big Boss Season 6'ಶುರುವಾಗಲಿದೆ. ಈ ಹಿಂದೆಯೇ ತೆಲುಗು ಬಿಗ್ ಬಾಸ್ ಬಗ್ಗೆ ಸಖತ್ ಗಾಸಿಪ್ ಹರಿದಾಡ್ತಾ ಇತ್ತು. ಈ ಶೋವನ್ನು ಕಳೆದ ಮೂರು ಸೀಸನ್‌ಗಳಿಂದ ತೆಲುಗಿನ ಜನಪ್ರಿಯ ನಟ ನಾಗಾರ್ಜುನ(Nagarjuna) ಅವರೇ ನಡೆಸಿಕೊಂಡು ಬರುತ್ತಿದ್ದರು. ಅವರು ಹೋಸ್ಟ್ ಮಾಡುವ ಶೋಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿತ್ತು. ಆದರೆ ಈ ಬಾರಿಯ ಶೋವನ್ನು ಅವರು ಹೋಸ್ಟ್ ಮಾಡಲ್ಲ, ಬದಲಿಗೆ ಹಿಂದೆ ಇವರ ಸೊಸೆಯಾಗಿದ್ದ ನಾಗ ಚೈತನ್ಯ ಅವರ ಮಾಜಿ ಪತ್ನಿ, ಖ್ಯಾತ ನಟಿ ಸಮಂತಾ(Samanth Ruth Prabhu) ಮುಂದುವರಿಸುತ್ತಾರೆ ಎಂಬ ಮಾತು ಹೇಳಿಬಂತು. ಆದರೆ ಇದೀಗ ಅಧಿಕೃತ ಸುದ್ದಿ ಹೊರಬಿದ್ದಿದೆ. ಈ ಶೋವನ್ನು ನಾಗಾರ್ಜುನ ಅವರೇ ಈ ಬಾರಿಯೂ ಮುಂದುವರಿಸಲಿದ್ದಾರೆ.
ಬಿಕಿನಿಯಲ್ಲಿ 'ಕನ್ನಡತಿ' ವರೂಧಿನಿ ಪೋಸ್; ಸೀರಿಯಲ್ ಮಾತ್ರವಲ್ಲ ರಿಯಲ್ ಆಗಿಯೂ ಸಾರಾ ಸಖತ್ ಹಾಟ್
ತೆಲುಗು ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗಲಿದ್ದಾರೆ ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿವೆ. ಟಿಕ್ ಟಾಕ್ ಸ್ಟಾರ್ (TikTok Star) ದೀಪ್ತಿ ಪಿಳ್ಳಿ, ಚೈತ್ರಾ, ನವ್ಯಾ ಸ್ವಾಮಿ, ಅನಿಲ್ ಮಿತ್ರ, ಶಿವ, ಅಮರ್ ದೀಪ್, ಆದಿ, ವರ್ಷಿಣಿ, ನಿರೂಪಕರಾಗಿ ಗುರುತಿಸಿಕೊಂಡಿರುವ ಧನುಷ್ ಈ ಬಾರಿ ತೆಲುಗು ದೊಡ್ಡಮನೆ ಪ್ರವೇಶಿಸುವ ಸಾಧ್ಯತೆ ಇದೆ.
ಇದು ತೆಲುಗು ಬಿಗ್ ಬಾಸ್ ಕತೆಯಾಯ್ತು. ಆದರೆ ಇಷ್ಟೊತ್ತಿಗಾಗಲೇ 'ಬಿಗ್ ಬಾಸ್ ಕನ್ನಡ ಸೀಸನ್ 9' ಶುರು ಆಗಬೇಕಿತ್ತು. ಆದರೆ ಸದ್ಯಕ್ಕೆ ಈ ಶೋಗೆ ತಡೆಯಾಗುತ್ತಿರುವುದು ಸುದೀಪ್ ಡೇಟ್ಸ್(Dates). ಅವರ ಬಹು ನಿರೀಕ್ಷೆಯ ಚಿತ್ರ ವಿಕ್ರಾಂತ್ ರೋಣ(Vikranth Rona) ಜುಲೈ 28ಕ್ಕೆ ತೆರೆ ಕಾಣಲಿದೆ. ಈಗ ಅವರು ದೇಶವಿಡೀ ಸುತ್ತುತ್ತಾ ಸಿನಿಮಾ ಪ್ರಮೋಶನ್‌ನಲ್ಲಿ ಭಾಗಿಯಾಗಿದ್ದಾರೆ. ಸುದೀಪ್ ಅವರಿನ್ನು ಜುಲೈ ಕೊನೆಯವರೆಗೂ ಕೈಗೆ ಸಿಗಲ್ಲ. ಆದರೆ ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಸಿನಿಮಾ ತೆರೆ ಕಂಡ ಬಳಿಕ ಬಿಗ್ ಬಾಸ್ ಹೋಸ್ಟ್ ಮಾಡಲು ತೆರಳುವ ಸಾಧ್ಯತೆ ಇದೆ. ಸುದೀಪ್ ತಮ್ಮ ಮುಂದಿನ ಸಿನಿಮಾ 'ಬಿಲ್ಲ ರಂಗ ಭಾಷ' ಎಂದು ಖಚಿತಪಡಿಸಿದ್ದಾರೆ. ಈ ಚಿತ್ರ 'ವಿಕ್ರಾಂತ್ ರೋಣ' ಸಿನಿಮಾ ನಿರ್ದೇಶಿಸುತ್ತಿರುವ ಪ್ರತಿಭಾವಂತೆ ನಿರ್ದೇಶಕ ಅನೂಪ್ ಭಂಡಾರಿ ಅವರದು. ಜೊತೆಗೆ ಈ ಸಿನಿಮಾಕ್ಕೆ ಸುದೀಪದ ಅವರ ನಿರ್ಮಾಣವೇ ಇರುವ ಕಾರಣ ಶೂಟಿಂಗ್(Shooting) ಡೇಟ್ಸ್ ಬಗ್ಗೆ ಹೆಚ್ಚು ತಲೆ ಕೆಡಿಸಬೇಕಿಲ್ಲ.
Hitler Kalyana: ಕಣ್ಣೀರಿಡುತ್ತಿರುವ ಏಜೆಗೆ ಆಸರೆ ಆಗ್ತಾಳಾ ಯಡವಟ್ಟು ಲೀಲಾ?
ಸದ್ಯದ ಲೆಕ್ಕಾಚಾರ ಪ್ರಕಾರ 'ಬಿಗ್ ಬಾಸ್ ಕನ್ನಡ ಸೀಸನ್ 9' ಅಕ್ಟೋಬರ್ ನಿಂದ ಶುರು ಆಗಬಹುದು. ಸುದೀಪ್ ಅವರೇ ಈ ಶೋ ಹೋಸ್ಟ್ ಮಾಡಲಿದ್ದಾರೆ. ಸ್ಪರ್ಧಿಗಳು ಯಾರಿರಬಹುದು ಅನ್ನುವ ಬಗ್ಗೆ ಊಹಾಪೋಹಗಳು ಹರಿದಾಡಲು ಶುರುವಾಗಿದೆ. ಬಹುಶಃ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆಯಾದ ಒಂದು ವಾರದ ಬಳಿಕ ಈ ಕುರಿತಾಗಿ ಅಧಿಕೃತ ಸುದ್ದಿ ಬರುವ ಸಾಧ್ಯತೆ ಇದೆ.
'ಕನ್ನಡತಿ'ಯಲ್ಲಿ ದೊಡ್ಡ ಬದಲಾವಣೆ; ಆದಿ ಪಾತ್ರದ ನಟ ರಕ್ಷಿತ್ ಧಾರಾವಾಹಿಯಿಂದ ಔಟ್