
ವರದಿ: ನಂದನ್ ರಾಮಕೃಷ್ಣ, ಮಂಡ್ಯ
ಸಾಮಾನ್ಯವಾಗಿ ಎಲ್ಲರಲ್ಲೂ ಸರ್ಕಾರಿ ಆಸ್ಪತ್ರೆಗಿಂತ (Government Hospital) ಖಾಸಗಿ ಆಸ್ಪತ್ರೆಗಳಲ್ಲೇ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂಬ ಭಾವನೆ ಇದೆ. ಸೆಲೆಬ್ರಿಟಿಗಳು, ವಿವಿಐಪಿಗಳಂತು ಸರ್ಕಾರಿ ಆಸ್ಪತ್ರೆಗೆ ಬರದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದ್ರೆ ಕಿರುತೆರೆ ನಟಿ ಪೂರ್ಣಿಮಾ (Actress Poornima) ಎಲ್ಲರಂತೆ ಯೋಚಿಸದೆ ಸರ್ಕಾರಿ ಆಸ್ಪತ್ರೆಯಲ್ಲೇ ತನ್ನ ಚೊಚ್ಚಲ ಹೆರಿಗೆ ಮಾಡಿಸಿಕೊಂಡಿದ್ದಾರೆ. ಮಂಡ್ಯದ ಕೀಲಾರ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ.
ಸಮಸ್ಯೆ ಎಂದು ಹೆದುರಿಸಿದ್ದ ಖಾಸಗಿ ವೈದ್ಯರು
ಪೂರ್ಣಿಮಾ ಗರ್ಭಿಣಿಯಾದ ಬಳಿಕ ಬೆಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದ್ದರು. ಚೆಕಪ್ ಬಳಿಕ ಪ್ಲೆಸೆಂಟಾ ಕಡಿಮೆ ಇದೆ ಹೆರಿಗೆ ಕಷ್ಟಸಾಧ್ಯ ಎಂದು ಖಾಸಗಿ ವೈದ್ಯರು ಹೆದರಿಸಿದ್ದರಂತೆ. ಬಳಿಕ ವೈದ್ಯರನ್ನು ಬದಲಾಯಿದ್ದ ನಟಿ ಪೂರ್ಣಿಮಾ ಎಲ್ಲೂ ಉತ್ತಮ ಚಿಕಿತ್ಸೆ ದೊರೆಯದೆ ಕಂಗಾಲಾಗಿದ್ದರು. ಪ್ರತಿನಿತ್ಯ ಭಯದಲ್ಲೇ ದಿನದೂಡುತ್ತಿದ್ದರು. ಆದರೆ ಕೀಲಾರ ಸರ್ಕಾರಿ ಆಸ್ಪತ್ರೆ ವೈದ್ಯರು ಖಾಸಗಿ ವೈದ್ಯರ ಮಾತು ಸುಳ್ಳಾಗಿಸಿದ್ದಾರೆ.
ಕೀಲಾರ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಲಹೆ
ಖಾಸಗಿ ವೈದ್ಯರ ಮಾತಿನಿಂದ ಹೆದರಿದ್ದ ಪೂರ್ಣಿಮಾ ಒಳ್ಳೆಯ ವೈದ್ಯರನ್ನು ಎದುರುನೋಡುತ್ತಿದ್ದರು. ಮೂಲತಃ ಮಂಡ್ಯದವರೇ ಆದ ಪೂರ್ಣಿಮಾಗೆ ಸ್ನೇಹಿತರೊಬ್ಬರು ಕೀಲಾರ ಸರ್ಕಾರಿ ಆಸ್ಪತ್ರೆ ಬಗ್ಗೆ ಹೇಳಿದ್ದಾರೆ. ಇಲ್ಲಿ ಅನುಭವಿ ವೈದ್ಯರಿದ್ದಾರೆ ಸರ್ಜರಿಗೂ ಉತ್ತಮ ವ್ಯವಸ್ಥೆ ಇದೆ ಎಂದು ಸಲಹೆ ನೀಡಿದ್ದಾರೆ. ಆರಂಭದಲ್ಲಿ ಸರ್ಕಾರಿ ಆಸ್ಪತ್ರೆ ಬಗ್ಗೆ ಭಯ ಹೊಂದಿದ್ದ ಪೂರ್ಣಿಮಾ ಸ್ನೇಹಿತರ ಸಲಹೆ ನಿರಾಕರಿಸಿದ್ದರು. ನಂತರ ಭಯದಿಂದಲೇ ಕೀಲಾರ ಸರ್ಕಾರಿ ಆಸ್ಪತ್ರೆಗೆ ಬರಲು ಒಪ್ಪಿದ ನಟಿ ಸರ್ಕಾರಿ ವೈದ್ಯರ ಟ್ರೀಟ್‌ಮೆಂಟ್‌ಗೆ ಫಿದಾ ಆಗಿದ್ದಾರೆ.
ತಂದೆಯಾದ ಸಂಭ್ರಮದಲ್ಲಿ ಗಾಯಕ ಹೇಮಂತ್ ಕುಮಾರ್
ಸರ್ಕಾರಿ ಆಸ್ಪತ್ರೆ ವೈದ್ಯರ ಹೊಗಳಿ ವಿಡಿಯೋ ಮಾಡಿದ ನಟಿ
ಕೀಲಾರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ಕೊಟ್ಟ ನಟಿ ವೈದ್ಯರನ್ನ ಹಾಡಿ ಹೊಗಳಿದ್ದಾರೆ. ಆಸ್ಪತ್ರೆಯಲ್ಲಿ ನಿಂತು ವಿಡಿಯೋ ಮಾಡಿರುವ ಪೂರ್ಣಿಮಾ ಅಲ್ಲಿನ ವೈದ್ಯರು, ಸಿಬ್ಬಂದಿ ಹಾಗೂ ವ್ಯವಸ್ಥೆ ಬಗ್ಗೆ ವಿವರಿಸಿದ್ದಾರೆ. ಬೆಂಗಳೂರಿನ ವೈದ್ಯರು ತಮಗೆ ಹೆದರಿಸಿದ್ದ ಬಗ್ಗೆ ಕೀಲಾರ ಸರ್ಕಾರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ ಬಗ್ಗೆ ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ಉತ್ತಮ ಸರ್ಜರಿ ವಿಭಾಗವೂ ಇದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಈ ರೀತಿ ಚಿಕಿತ್ಸೆ ಸಿಗುತ್ತೆ ಎಂದು ನಾನು ಹೇಳಲ್ಲ. ಆದರೆ ಕೆಲವು ಖಾಸಗಿ ಆಸ್ಪತ್ರೆಯಲ್ಲೂ ಇಂತಹ ಉತ್ತಮ ವ್ಯವಸ್ಥೆ ಇರಲ್ಲ. ಸುಖಾಸುಮ್ಮನೆ 2 ಲಕ್ಷದವರೆಗೂ ಖಾಸಗಿ ಆಸ್ಪತ್ರೆಯವರೂ ಖರ್ಚು ಮಾಡಿಸ್ತಾರೆ. ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಬಳಸಿಕೊಳ್ಳಿ ಎಂದಿದ್ದಾರೆ.
ನಿಕ್ ಜೋನಸ್ ಕೈಯಲ್ಲಿ ಮಾಲ್ತಿ; ಮಗಳ ಮುದ್ದಾದ ಫೋಟೋ ಹಂಚಿಕೊಂಡ ಪ್ರಿಯಾಂಕಾ
ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಶೋ ಮೂಲಕ ಕಿರುತೆರೆ ಪ್ರವೇಶ
ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದವರಾದ ನಟಿ ಪೂರ್ಣಿಮಾ ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. 2011ರಲ್ಲಿ 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫು' ರಿಯಾಲಿಟಿ ಶೋ ಮೂಲಕ ಕಿರುತೆರೆ ಪ್ರವೇಶಿಸಿ ಪೂರ್ಣಿಮಾ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮಗಳು ಜಾನಕಿ, ಅಕ್ಕ, ಬದುಕು ಹೀಗೆ ಪ್ರಸಿದ್ಧ ಧಾರಾವಾಹಿಗಳಲ್ಲಿ ನಟನೆ ಮಾಡಿರುವ ಪೂರ್ಣಿಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ನಟನೆಯಿಂದ ದೂರ ಉಳಿದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.