ಪುಟ್ಟಕ್ಕನ ಮಗಳು ಸ್ನೇಹಾಳನ್ನು ಚಿತೆಗೇರಿಸೋ ಮುನ್ನ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು? ವಿಡಿಯೋ ವೈರಲ್

Published : Nov 09, 2024, 04:17 PM IST
ಪುಟ್ಟಕ್ಕನ ಮಗಳು ಸ್ನೇಹಾಳನ್ನು ಚಿತೆಗೇರಿಸೋ ಮುನ್ನ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು? ವಿಡಿಯೋ ವೈರಲ್

ಸಾರಾಂಶ

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸ್ನೇಹಾಳನ್ನು ಚಿತೆಗೇರಿಸೋ ಮುನ್ನ ಶೂಟಿಂಗ್​ ಸೆಟ್​ನಲ್ಲಿ ಆಗಿದ್ದೇನು? ಈ ವಿಡಿಯೋದಲ್ಲಿ ನೋಡಿ ವಿವರ...   

ಸಾವು ಎನ್ನುವುದು ಎಂಥವರನ್ನೂ ದಿಗಿಲು ಬಡಿಸುವುದು ಸಹಜವೇ. ಎಷ್ಟೇ ವಯಸ್ಸಾಗಿದ್ದರೂ ಸಾವು ಇನ್ನೇನು ಹತ್ತಿರ ಬಂದಿದೆ ಎಂದು ತಿಳಿದರೆ ಒಂದು ಕ್ಷಣ ಬದುಕುವ ಆಸೆ ಹುಟ್ಟೇ ಹುಟ್ಟುತ್ತದೆ. ಇದು ರಿಯಲ್​ ಲೈಫ್​ ಕಥೆಯಾದ್ರೆ, ಸೀರಿಯಲ್​ನಲ್ಲಿ ಸಾಯುವುದು ಎಂದರೆ ತುಂಬಾ ಸುಲಭ ಎಂದುಕೊಂಡರೆ ಅದು ತಪ್ಪು. ನಟ-ನಟಿಯರು ತಮ್ಮ ಸಾವಿನ ದೃಶ್ಯವನ್ನು ಚಿತ್ರೀಕರಿಸುವಾಗ ಬಹಳ ಭಯ ಪಟ್ಟುಕೊಂಡಿರುವುದು ಇದೆ. ಸೀರಿಯಲ್​ ಆಗಲೀ, ಚಿತ್ರಗಳಲ್ಲಾಗಲೀ ಸಾಯುವ ದೃಶ್ಯವಿದ್ದಾಗ ಸುಮ್ಮನೇ ಶೂಟಿಂಗ್​ ತಾನೇ ಎಂದು ಅಂದುಕೊಂಡು ಚಿತೆಯ ಮೇಲೆ ಮಲಗುವುದು ಅಷ್ಟು ಸುಲಭದ ಮಾತಲ್ಲ. ಇದು ರಿಯಲ್​ ಅಲ್ಲದೇ ರೀಲ್​ ಆಗಿದ್ದರೂ ಕೂಡ ಸಾವು ಸಾವೇ. ಇದೇ ಕಾರಣಕ್ಕೆ ಹಲವು ಸಂದರ್ಭಗಳಲ್ಲಿ ಸಾವಿನ ದೃಶ್ಯಗಳನ್ನು ಮಾಡುವಾಗಲೂ ಆ ದೃಶ್ಯಕ್ಕೂ ಮುನ್ನ ನಟ-ನಟಿಯರಿಗೆ ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಅದೇ ರೀತಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿಯೂ ಮಾಡಲಾಗಿದೆ. ಸ್ನೇಹಾ ಸತ್ತಿದ್ದಾಳೆ. ಅವಳನ್ನು ಚಿತೆಯ ಮೇಲೆ ಏರಿಸಲಾಗಿದೆ. ಹಾಗೆಂದು ಇದೇನೂ ಅಷ್ಟು ಸುಲಭವಾಗಿರಲಿಲ್ಲ. ಈ ಕುರಿತು ಖುದ್ದು ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದರು. ನನಗೆ ಇದೆಯಲ್ಲಾ ಹೊಸತು. ಸಾಯುವ ದೃಶ್ಯ ಮಾಡುವಾಗ ತುಂಬಾ ಭಯವಾಗಿತ್ತು. ನಾನು ಭಯ ಪಡಬಾರದು ಎನ್ನುವ ಕಾರಣಕ್ಕೆ ಅಲ್ಲಿದ್ದವರು ನನಗೆ ಧೈರ್ಯ ತುಂಬುತ್ತಿದ್ದರು ಎಂದು ನಟಿ ಹೇಳಿದ್ದರು. ಆದರೆ ಚಿತೆಯೇರುವ ದೃಶ್ಯಕ್ಕೂ ಮುನ್ನ ಸ್ನೇಹಾ ಅಂದ್ರೆ ನಟಿ ಸಂಜನಾ ಬುರ್ಲಿ ಅವರಿಗೆ ಕುಂಬಳಕಾಯಿಯಿಂದ ದೃಷ್ಟಿ ತೆಗೆಯಲಾಗಿತ್ತು. ನಂತರ ಅದನ್ನು ಒಡೆಯಲಾಗಿತ್ತು. ಆ ಬಳಿಕವಷ್ಟೇ ಸಾವಿನ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಇದರ ವಿಡಿಯೋ ಅನ್ನು ಡಿವಿ ಡ್ರೀಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. 

ಭಿಕ್ಷೆ ಬೇಡಿ ದುಡ್ಡು ಕೊಟ್ಮೇಲೆ ಸ್ನೇಹಾ ಪಾತ್ರಕ್ಕೆ ಆಯ್ಕೆ ಆದೆ: ಅಂದು ನಡೆದ ಘಟನೆ ವಿವರಿಸಿದ ನಟಿ ಸಂಜನಾ ಬುರ್ಲಿ

ಇದರಲ್ಲಿ ಚಿತ್ರತಂಡ ಇರುವುದನ್ನು ನೋಡಬಹುದು. ಪಕ್ಕದಲ್ಲಿಯೇ ಚಿತೆಯನ್ನು ಸಿದ್ಧಗೊಳಿಸಲಾಗಿದೆ. ಅಲ್ಲಿ ಬಿಳಿ ಬಟ್ಟೆಯನ್ನೂ ನೋಡಬಹುದು. ಶೂಟಿಂಗ್​ ಮಾಡುವ ಸಮಯದಲ್ಲಿ ಅದರ ಮೇಲೆ ಸ್ನೇಹಾಳನ್ನು ಮಲಗಿಸುವ ದೃಶ್ಯವಿದೆ. ಅದಕ್ಕೂ ಮುನ್ನ ಸಂಜನಾ ಅವರಿಗೆ ದೃಷ್ಟಿ ತೆಗೆಯಲಾಗಿದೆ. ಅದನ್ನು ಕುಂಬಳಕಾಯಿಯನ್ನು ಒಡೆಯಲಾಗಿದೆ. ಬಳಿಕ ಸಾವಿನ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಇವಿಷ್ಟನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಸಾವಿನ ದೃಶ್ಯ ಮಾಡುವಾಗ ತಮಗಾದ ಅನುಭವವನ್ನೂ ಈ ಹಿಂದೆ ನಟಿ ಹೇಳಿಕೊಂಡಿದ್ದರು.  

 

ಯೂಟ್ಯೂಬ್​ ಚಾನೆಲ್​ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸಂಜನಾ ಅವರು, ನಾನು ಸತ್ತು ಅಲ್ಲಿ ಮಲಗಿದ್ದೆ. ಶೂಟಿಂಗ್​ ನಡೆಯುತ್ತಿತ್ತು. ಕಣ್ಣು ಮುಚ್ಚಿದ್ದೆ. ಕಣ್ಣನ್ನು ಅಲ್ಲಾಡಿಸುವಂತೆಯೂ ಇರಲಿಲ್ಲ, ಏಕೆಂದ್ರೆ ಆಗ ನಾನು ಶವವಾಗಿದ್ದೆ. ಆದರೆ ಹೊರಗೆ ಏನು ಆಗುತ್ತಿದೆ ಎನ್ನುವುದು ನನಗೆ ತಿಳಿಯುತ್ತಿತ್ತು. ಉಮಾಶ್ರೀ ಅಮ್ಮನವರು ಸ್ನೇಹಾಳ ಹೆಣದ ಮುಂದೆ ರೋಧಿಸುತ್ತಿರುವುದನ್ನು ಕೇಳಿ ಸತ್ತಲ್ಲಿಯೇ ನಾನು ಕಣ್ಣೀರಾಗಿ ಬಿಟ್ಟಿದ್ದೆ. ಅಂಥ ಅದ್ಭುತ ನಟನೆ ಅವರದ್ದು. ಕಣ್ಣುಗುಡ್ಡೆಯೂ ಅಲ್ಲಾಡಿಸುವಂತಿರಲಿಲ್ಲವಾದರೂ ಅವರ ನಟನೆಗೆ ಕಣ್ಣೀರು ಹಾಕುವ ಸ್ಥಿತಿ ಬಂತು ಎಂದು ಸಂಜನಾ ನೆನೆಪಿಸಿಕೊಂಡಿದ್ದರು. 

ಪುಟ್ಟಕ್ಕನ ಮಕ್ಕಳು ಟ್ವಿಸ್ಟ್​! ಸ್ನೇಹಾ ಆತ್ಮ ಪ್ರತ್ಯಕ್ಷ... ಕಂಠಿ ಬದುಕಲ್ಲಿ ಮತ್ತೆ ಎಂಟ್ರಿ?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!