'ನನ್ನ ಆಲೋಚನೆಗೆ ತಕ್ಕಂತ ಪಾರ್ಟ್ನರ್‌ ಸಿಕ್ಕೇ ಸಿಗುತ್ತಾರೆ..' ಎರಡನೇ ಮದುವೆ ಬಗ್ಗೆ ಮಾತನಾಡಿದ ಸೋನು ಗೌಡ

By Santosh Naik  |  First Published Nov 8, 2024, 4:04 PM IST

ನಟಿ ಸೋನು ಗೌಡ ಅವರು ತಮ್ಮ ಎರಡನೇ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಜೀವನದಲ್ಲಿ ಪಾರ್ಟ್ನರ್ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ, ಸದ್ಯಕ್ಕೆ ಯಾವುದೇ ಒತ್ತಡ ತೆಗೆದುಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.


ಬೆಂಗಳೂರು (ನ.8): 'ನನ್ನ ಜೀವನ ತುಂಬಾ ಚೆನ್ನಾಗಿದೆ. ನನ್ನ ಆಲೋಚನೆಗೆ ತಕ್ಕಂತಹ ಪಾರ್ಟ್ನರ್‌ ಸಿಕ್ಕೇ ಸಿಗುತ್ತಾರೆ. ಸಿಕ್ಕಾಗ ಖಂಡಿತ ಹೇಳುತ್ತೇನೆ. ಪಾರ್ಟ್ನರ್‌ ಸಿಕ್ಕಿದಾಗ ಖಂಡಿತಾ ಎಲ್ಲರಿಗೂ ತಿಳಿಸುತ್ತೇನೆ..' ಹೀಗಂತ ನೇರವಾಗಿ ಹೇಳಿಬಿಟ್ಟರು ಸೋನು ಗೌಡ. ಇಂತಿ ನಿನ್ನ ಪ್ರೀತಿಯ ಸಿನಿಮಾದಲ್ಲಿ ನಮನ ಪಾತ್ರದಿಂದ ಜನಪ್ರಿಯತೆ ಪಡೆದ ಸೋನು ಗೌಡ, ಇತ್ತೀಚೆಗೆ ತಮ್ಮ ವಿಭಿನ್ನ ಪಾತ್ರಗಳಿಂದಲೇ ಗಮನಸೆಳೆಯುತ್ತಿದ್ದಾರೆ. ವರ್ಷಗಳ ಬಳಿಕ ಟೆನೆಂಟ್‌ ಸಿನಿಮಾದ ಮೂಲಕ ಅವರು ತೆರೆಯ ಮೇಲೆ ಬರೋಕೆ ಸಜ್ಜಾಗಿದ್ದಾರೆ.  ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ ಟೆನಂಟ್ ಸಿನಿಮಾ ನವೆಂಬರ್ 22 ರಂದು ತೆರೆಕಾಣಲಿದೆ. ಚಿತ್ರತಂಡ ಕೂಡ ನಿರಂತರವಾಗಿ ಸಿನಿಮಾದ ಪ್ರಮೋಷನ್‌ ಕೆಲಸದಲ್ಲಿ ಬ್ಯೂಸಿಯಾಗಿದೆ.

ಇದೇ ವೇಳೆ ಸಂದರ್ಶನವೊಂದರಲ್ಲಿ ಸೋನು ಗೌಡ ಅವರಿಗೆ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳು ಎದುರಾಗಿದೆ. 2ನೇ ಮದುವೆ ಆಗುತ್ತಿರುವ ಬಗೆಗಿನ ಸುದ್ದಿಗಳ ಬಗ್ಗೆಯೂ ಮುಕ್ತವಾಗಿ ಮಾತನಾಡಿದರು.

ನಿಮ್ಮ ಜೀವನಕ್ಕೆ ಇನ್ನೊಬ್ಬ ಪಾರ್ಟ್ನರ್‌ ಯಾಕೆ ಸಿಗಬಾರದು..? ಅಥವಾ ನೀವು ಆ ಪ್ರೀತಿಗಾಗಿ ಹುಡುಕುತ್ತಿದ್ದಾರಾ..? ಎನ್ನುವ ಪ್ರಶ್ನೆಗೆ ಸಹಜವಾಗಿಯೇ ಉತ್ತರ ನೀಡಿದ ಸೋನು ಗೌಡ, 'ಕೆಲವೊಂದು ಸಹ ನಾವು ಬೇಡ ಎಂದರೂ ಅದು ನಮಗೆ ಸಿಕ್ಕಿರುತ್ತದೆ. ಕೆಲವೊಂದು ಸಹ ಅದು ಬೇಕು ಅಂದರೂ ಅದು ಸಿಕ್ಕಿರುವುದಿಲ್ಲ. ನಾನು ವಿಧಿಯ ಮೇಲೆ ನಂಬಿಕೆ ಇಟ್ಟಿದ್ದೇನೆ. ವಿಧಿ ಆ ವ್ಯಕ್ತಿ ನನ್ನ ಜೀವನಕ್ಕೆ ಬೇಡ ಅಂತಾ ಎಂದುಕೊಂಡಿದ್ದರೆ ಹಾಗೇ ಆಗುತ್ತದೆ. ನನಗೆ ಅದರ ಮೇಲೆ ನಂಬಿಕೆ ಇದೆ' ಎಂದು ಹೇಳಿದ್ದಾರೆ.

Tap to resize

Latest Videos

undefined

'ಈಗಂತೂ ನನ್ನ ಲೈಫ್‌ ಹೀಗಾಯ್ತು ಅಂತಾ ಕೊರಗಿಕೊಂಡು ಕೂರುವ ಮೂಡ್‌ನಲ್ಲಿ ನಾನಿಲ್ಲ. ಇದ್ದರೆ ಚೆನ್ನಾಗಿ ಇರಬೇಕು. ಸದ್ಯಕ್ಕೆ ಯಾವುದೇ ಒತ್ತಡವನ್ನು ತೆಗೆದುಕೊಳ್ಳಲು ಇಷ್ಟವಿಲ್ಲ. ಕಿತ್ತಾಟಗಳು ಇದ್ದೇ ಇರುತ್ತದೆ. ಇಷ್ಟು ವರ್ಷ ಆದರೂ ನಮ್ಮ ಅಪ್ಪ-ಅಮ್ಮ ಕಿತ್ತಾಡುತ್ತಾರೆ. ಕೊನೆಯಲ್ಲಿ ಅವರಿಗೆ ಪ್ರೀತಿ ಅಂದರೆ ಇದೇ ಅಂತಾ ಗೊತ್ತು. ಪ್ರೀತಿ ಇದ್ದ ಕಡೆ ಜಗಳ ಇದ್ದೇ ಇರುತ್ತದೆ. ಆದರೆ ಎಂದಿಗೂ ಸಾಕು ಎನಿಸಿ ಬಿಡಬಾರದು ಎನ್ನುವುದರ ಮೇಲೆ ನಂಬಿಕೆ ಇಟ್ಟಿದ್ದೇನೆ' ಎಂದಿದ್ದಾರೆ.

ಹುಟ್ಟುಹಬ್ಬದಂದೇ ಅದ್ಧೂರಿಯಾಗಿ ಬೇಬಿ ಶವರ್ ಸೆಲೆಬ್ರೇಟ್ ಮಾಡಿದ ನೇಹಾ ಗೌಡ

ಹಿಂದೆ ನಡೆದ ಘಟನೆಗಳೇ ಹೊಸ ಹೆಜ್ಜೆ ಇಡಲು ಹೆದರಿಕೆ ಉಂಟು ಮಾಡುತ್ತಿದೆಯೇ ಎನ್ನುವ ಪ್ರಶ್ನೆಗೆ, 'ಎಲ್ಲವೂ ಕಾರಣವಾಗುತ್ತದೆ. ಒಬ್ಬ ಮನುಷ್ಯ ಬೆಳೆಯುತ್ತಾ, ಘಟಿಸಿದ ಕಹಿ ಘಟನೆಗಳಿಂದ ಜಡತ್ವ ಬೆಳೆಯುತ್ತದೆ. ಎಲ್ಲಾ ವಿಚಾರ ಬಗ್ಗೆ ಹೆಚ್ಚು ಜಾಗೃತರಾಗುತ್ತೇವೆ. ಹೀಗಾಗಿ ನನ್ನ ಹಳೆಯ ಅನುಭವದಿಂದ ಆಗಿರಬಹುದು ಅಥವಾ ಬೇರೆ ಕಾರಣದಿಂದ ಆಗಿರಬಹುದು' ಎಂದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಡಿವೋರ್ಸ್ ಆಗಿರುವ ಜೋಡಿಗಳು; ಯಾರು 2ನೇ ಮದುವೆ ಆಗಿದ್ದಾರೆ?

ನನ್ನ ಮೇಲೆ ನಂಬಿಕೆ ಹಾಗೂ ನನ್ನ ವಿಚಾರದಲ್ಲಿ ಸ್ಪಷ್ಟತೆ ಎರಡೂ ಇದೆ. ಜೀವನ ಹೇಗಿರಬೇಕು ಅನ್ನೋದರ ಬಗ್ಗೆ ಸ್ಪಷ್ಟತೆ ಇದೆ. ಇದು ಆ ಹುಡುಗನಲ್ಲೂ ಇರಬೇಕು. ನಮ್ಮ ಆಲೋಚನೆಗಳು ಹೊಂದಾಣಿಕೆ ಆದಾಗ ಚೆನ್ನಾಗಿರುತ್ತದೆ. ಬೇರೆ ಏನೂ ನಿರೀಕ್ಷೆ ಇಲ್ಲ. ಹುಡುಗ ಇದೇ ರೀತಿ ಇರಬೇಕು ಎನ್ನುವ ಯಾವ ನಿರೀಕ್ಷೆ ಕೂಡ ಇಲ್ಲ. ನಾನು ಜೀವನದಲ್ಲಿ ಆರಾಮಾಗಿದ್ದೇನೆ. ಇದೇ ರೀತಿ ನೀವು ಬಂದು ಆರಾಮಾಗಿ ಇರುವುದಿದ್ದರೆ ಇರಿ. ಇಲ್ಲ ಅಂದರೆ ಬೇಡ' ಎಂದು ನೇರವಾಗಿ ತಿಳಿಸಿದ್ದಾರೆ.

click me!