ದಿಂಬು, ಫೀಡಿಂಗ್ ಬಾಟಲ್ಲು.. ಶುಭಾ ಪೂಂಜಾಗೆ ಇದೆಲ್ಲ ಬೇಕಿತ್ತಾ!

By Suvarna News  |  First Published Mar 14, 2021, 4:42 PM IST

ಬಿಗ್‌ಬಾಸ್ ಸೀಸನ್ 8ನ ಸ್ಪರ್ಧಿ ಶುಭಾ ಪೂಂಜಾಗೆ ಈ ವೀಕೆಂಡ್ ಶೋನಲ್ಲಿ ಗಿಫ್ಟ್ ಸಿಕ್ಕಿರೋದು ದಿಂಬು, ಫೀಡಿಂಗ್ ಬಾಟಲ್ ಇತ್ಯಾದಿ. ಇದೆಲ್ಲ ಏನನ್ನು ಹೇಳುತ್ತೆ. ನಿಜಕ್ಕೂ ಶುಭಾಗೆ ಇದೆಲ್ಲ ಬೇಕಿತ್ತಾ..


ಶುಭಾ ಪೂಂಜಾ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಂಗಳೂರಿನ ದುಂಡು ಮಲ್ಲಿಗೆ. ಈ ಹುಡುಗಿ ಬಿಗ್‌ಬಾಸ್ ಸೀಸನ್ 8ನ ಸ್ಪರ್ಧಿ. ಬಿಗ್‌ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟ 15 ದಿನಗಳಲ್ಲೇ ಎಲ್ಲರ ಕಣ್ಮಣಿ ಅಂತ ಅನಿಸಿಕೊಂಡಿರೋ ಮುಗ್ಧ ಹುಡುಗಿ. ಈ ವೀಕ್‌ನಲ್ಲಿ ಶುಭಾ ಪೂಂಜಾ ಪರ್ಫಾಮೆನ್ಸ್ ನೋಡಿದ ವೀಕ್ಷಕರು ಆಕೆಗೆ ಭರ್ಜರಿ ಓಟು ದಯಪಾಲಿಸಿ ನಾಮಿನೇಶನ್ ನಿಂದ ಬಚಾವ್ ಮಾಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಮಾತ್ರ ಅಲ್ಲ, ವೀಕೆಂಡ್ ಶೋನಲ್ಲೂ ಶುಭಾ ಮಾತುಗಳು ಎಲ್ಲರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡಿವೆ. ಅಷ್ಟೇ ಅಲ್ಲ, ಈಕೆಗೆ ಬಹಳ ಡಿಫರೆಂಟ್ ಆಗಿ ಗಿಫ್ಟ್‌ಗಳೂ ಸಿಕ್ಕಿವೆ. ಯಾಕೆ ಶುಭಗೆ ಇಂಥಾ ಗಿಫ್ಟ್‌ಗಳು ಸಿಕ್ಕವು, ಈ ಗಿಫ್ಟ್‌ಗಳು ಏನನ್ನ ಇಂಡಿಕೇಟ್ ಮಾಡುತ್ತವೆ, ಇದರ ಹಿಂದಿರುವ ಶುಭಾ ಅವರ ಸೀಕ್ರೆಟ್‌ಗಳೇನು ಅನ್ನೋದೆಲ್ಲ ಸಖತ್ ಇಂಟೆರೆಸ್ಟಿಂಗ್. 

Tap to resize

Latest Videos

undefined

ಇಂಡಸ್ಟ್ರಿಗೆ ಬಂದು 16 ವರ್ಷ: ಹೇಗಿದ್ದೋರು ಹೇಗಾದ್ರು ನೋಡಿ ...

ಈ ಸಲದ ವೀಕೆಂಡ್ ಶೋನಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್ ಇತ್ತು. ಒಂದು ಬಾಕ್ಸ್ ನ ತುಂಬ ಒಂದಿಷ್ಟು ಸಾಮಗ್ರಿಗಳು ತುಂಬಿದ್ದವು. ಅವನ್ನು  ಆ ಬಾಕ್ಸ್‌ನೊಳಗೆ ಕೈ ಹಾಕಿ ತೆಗೆಯೋ ಸ್ಪರ್ಧಿಗಳು ಆ ವಸ್ತು ಯಾರಿಗೆ ರಿಲೇಟ್ ಆಗುತ್ತೋ ಅವರಿಗೆ ಗಿಫ್ಟ್‌ ಮಾಡಬೇಕಿತ್ತು. ಮೊದಲು ಹೋದ ಬ್ರೋ ಗೌಡ ಶಮಂತ್‌ಗೆ ಸಿಕ್ಕಿದ್ದು ಬಕೆಟ್‌. ಅವರು ಈ ಬಕೆಟ್‌ ಅನ್ನು ಗೀತಾಭಾರತಿ ಭಟ್ ಅವರಿಗೆ ನೀಡಿದ್ರು. ಗೀತಾ ಅವರು ಬಕೆಟ್‌ಗಟ್ಟಲೆ ಕಣ್ಣೀರು ಸುರಿಸುತ್ತಾರೆ.

ಈ ಮೂಲಕ ತನ್ನನ್ನು ತಾನು ಇನ್ನೋಸೆಂಟ್ ಅಂತ ಬಿಂಬಿಸಿ ವೀಕ್ಷಕರನ್ನು ಬುಟ್ಟಿಗೆ ಹಾಕ್ಕೊಳ್ತಾರೆ ಅನ್ನೋದು ಬ್ರೋ ಗೌಡ ನೀಡಿದ ಉತ್ತರ. ಇದಕ್ಕೆ ರಿಯಾಕ್ಟ್ ಮಾಡಿದ ಗೀತಾ, ತಾನು ಕಣ್ಣೀರು ಸುರಿಸೋದು ನಿಜ. ಆದರೆ ಇನ್ನೋಸೆಂಟ್ ಥರ ಆಕ್ಟ್ ಮಾಡಲ್ಲ. ಯಾರನ್ನೂ ಬುಟ್ಟಿಗೆ ಹಾಕ್ಕೊಳಲ್ಲ ಅಂತ ಸ್ಪಷ್ಟನೆ ನೀಡುತ್ತಾರೆ.

ಎರಡನೇ ವಾರ ಜೈಲು ಸೇರಿದ ಶಮಂತ್; ಬೀಪ್ ಪದಗಳಿಗೇನೂ ಕಮ್ಮಿ ಇಲ್ಲ! ...

ಪ್ರಶಾಂತ್ ಸಂಬರಗಿ ಅವರಿಗೆ ಟ್ಯೂಬ್‌ಲೈಟ್ ಸಿಗುತ್ತೆ. ಅವರದನ್ನು ನಿಧಿ ಅವರಿಗೆ ಕೊಡುತ್ತಾರೆ. ನಿಧಿ ಅವರಿಗೆ ನೇರವಾಗಿ ಹೇಳಿದ ಜೋಕ್ ಅರ್ಥ ಆಗಲ್ಲ, ಅವರು ಬರೀ ಡಬ್ಬಲ್ ಮೀನಿಂಗ್ ಜೋಕ್ ಹೊಡೀತಾರೆ ಅಂತ ಹೇಳಿ ಆ ಟ್ಯೂಬ್‌ಲೈಟ್‌ ಅನ್ನು ನೀಡುತ್ತಾರೆ. ಇನ್ನೊಬ್ಬ ಸ್ಪರ್ಧಿ ತಮಗೆ ಸಿಕ್ಕ ಗಮ್‌ಟೇಪ್‌ಅನ್ನು ಅವರು ಲ್ಯಾಗ್ ಮಂಜನಿಗೆ ನೀಡ್ತಾರೆ. ಮೈಕ್ ಅನ್ನು ಹಾಡುಗಾರ ವಿಶ್ವನಾಥ್ ಅವರಿಗೆ ನೀಡಲಾಗುತ್ತೆ. ತಲೆ ನೋವಿಗೆ ಹಚ್ಚಿಕೊಳ್ಳೋ ಬಾಂಮ್‌ ಅನ್ನು ಕ್ಯಾಪ್ಟನ್ ರಾಜೀವ್ ಅವರಿಗೆ ನೀಡಿದ ಸ್ಪರ್ಧಿಯೊಬ್ಬರು, 'ಮೊಡವೆ ಆದರೆ ಅದಕ್ಕೆ ಬಾಮ್ ಹಚ್ಕೊಂಡ್ರೆ ಮೊಡವೆ ಕಲೆ ಸಮೇತ ಹೋಗುತ್ತೆ ಅಂತ ರಾಜೀವ್ ಹೇಳ್ತಿದ್ರು. ಆ ಕಾರಣಕ್ಕೆ ಅವರಿಗೆ ಈ ಗಿಫ್ಟ್ ನೀಡುತ್ತಿದ್ದೇನೆ' ಅಂತಾರೆ. ಈ ವಿಚಾರ ಸುದೀಪ್ ಸೇರಿ ಮನೆಮಂದಿಗೆಲ್ಲ ಅಚ್ಚರಿ ಹುಟ್ಟಿಸಿದ್ದು ಸುಳ್ಳಲ್ಲ. ಬಾಂಮ್ ನಿಂದ ಇಷ್ಟೆ ಆಗುತ್ತೆ ಅಂತ ಗೊತ್ತಿರಲಿಲ್ಲ ಅಂತ ಸುದೀಪ್ ಜೋಕ್ ಹಾರಿಸ್ತಾರೆ. ಚಂದ್ರಕಲಾಗೆ ಸಿಕ್ಕ ಟಾರ್ಚ್ ಕ್ಯಾಮರ ಹುಡುಕಿಕೊಂಡು ರಾತ್ರಿ ಎಲ್ಲ ಓಡಾಡೋ ನಿರ್ಮಲಾಗೆ ಸಿಗುತ್ತೆ. 

ಕವಿತಾ - ಚಂದನ್ ಮದ್ವೆ ಫಿಕ್ಸ್ ಆಯ್ತಂತೆ, ಹೇಗೆ ಗೊತ್ತಾಯ್ತು ಅಂತೀರಾ?! ...

ಆದರೆ ಈ ಆಟದಲ್ಲಿ ಒಬ್ಬ ಸ್ಪರ್ಧಿಗೆ ಮೂರು ಗಿಫ್ಟ್ ಬರುತ್ತೆ. ಅದು ಮತ್ಯಾರೂ ಅಲ್ಲ, ಶುಭಾ ಪೂಂಜಾ. ಮೊದಲು ಅವರಿಗೆ ಶಂಕರ್ ಅಶ್ವತ್ಥ ಕನ್ನಡಕ ಗಿಫ್ಟ್‌ ಮಾಡುತ್ತಾರೆ. ಇದ್ಯಾಕೆ ಅನ್ನೋದಕ್ಕೆ ಶಂಕರ್ ಹೇಳೋ ಕಾರಣ ಬಹಳ ಫನ್ನಿ. ಯಾವಾಗ್ಲೂ ತೂಕಡಿಸ್ತಾ ಇರೋ ಶುಭಾಗೆ ಈ ಗಿಫ್ಟ್ ನೀಡಿದರೆ ಅವರು ಯಾರಿಗೂ ಕಾಣದ ಹಾಗೆ ತೂಕಡಿಸಬಹುದು ಅಂತ. ಇನ್ನೊಬ್ಬ ಸ್ಪರ್ಧಿ ತಮಗೆ ಸಿಕ್ಕ ದಿಂಬನ್ನು ಶುಭಾಗೆ ನೀಡುತ್ತಾರೆ. ಅವರಿಗೆ ನಿದ್ದೆ ಬಂದರೆ ಮಲಕ್ಕೊಳ್ಳೋದಕ್ಕೆ ಅಂತ. ಇನ್ನೊಂದು ಫೀಡಿಂಗ್ ಬಾಟಲ್. ಗೀತಾ ಭಾರತಿ ಅವರು ಇದನ್ನೂ ಶುಭಾಗೆ ನೀಡುತ್ತಾರೆ. ಅವರು ಪಾಪು ಥರ ಮುದ್ದು ಮುದ್ದಾಗಿ ಇರೋದೇ ಇದಕ್ಕೆ ಕಾರಣವಂತೆ.

ಇದರ ಜೊತೆಗೆ ಶುಭ ಕ್ಯಾಮರ ಕಣ್ಣು ತಪ್ಪಿಸಿ ನಿದ್ದೆ ಮಾಡಲು ಆರಿಸಿಕೊಂಡ ಜಾಗವನ್ನು ಪತ್ತೆ ಹಚ್ಚೋ ಸುದೀಪ್ ಇಲ್ಲೂ ಚೆನ್ನಾಗಿ ಶುಭಾ ಕಾಲೆಳೆಯುತ್ತಾರೆ. ಒಟ್ಟಾರೆ ಶುಭಾ ತಮ್ಮ ಮುಗ್ಧತೆ, ಸಹಜವಾಗಿ ಒಡನಾಡುವ ಸ್ವಭಾವದ ಮೂಲಕ ಮನೆಮಂದಿ ಜೊತೆಗೆ ವೀಕ್ಷಕರ ಮೆಚ್ಚುಗೆ ಪಡೆಯಲೂ ಸಫಲರಾಗಿದ್ದಾರೆ.

click me!