ಖ್ಯಾತ ನಿರೂಪಕಿ ಅನುಶ್ರೀಯವರು ಎಲ್ಲಿಯೇ ಹೋದರೂ ಮದುವೆಯ ವಿಷಯವನ್ನೇ ಕೇಳುತ್ತಾರೆ. ಈಗ ಇನ್ಸ್ಟಾಗ್ರಾಮ್ನಲ್ಲಿ ಲೈವ್‌ನಲ್ಲಿ ನಟಿ ಹೇಳಿದ್ದೇನು?
ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್ ನಟಿ (Sandalwood star) ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಅವರಿಗೆ ಎಲ್ಲಿಯೇ ಹೋದ್ರೂ ಎದುರಾಗುವ ಪ್ರಶ್ನೆ ಒಂದೇ ನಿಮ್ಮ ಮದ್ವೆ ಯಾವಾಗ ಎನ್ನುವುದು. ಇದಾಗಲೇ ಈ ಪ್ರಶ್ನೆಗೆ ನಟಿ ತಮ್ಮದೇ ಆದ ರೀತಿಯಲ್ಲಿ ಹಲವಾರು ವಿಧನಾಗಿ ಉತ್ತರಿಸಿದ್ದಾರೆ. 1987ರಲ್ಲಿ ಹುಟ್ಟಿರುವ ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು. ಮದುವೆಯ ವಯಸ್ಸು ಮೀರುತ್ತಿದ್ದರೂ ಮದ್ವೆ ಯಾಕೆ ಆಗ್ತಿಲ್ಲ ಎನ್ನೋ ಆತಂಕದಲ್ಲಿ ಇರುವಂತೆ ತೋರುತ್ತಿದೆ ಅನುಶ್ರೀ ಫ್ಯಾನ್ಸ್. ಮದುವೆಯ ವಿಷಯವಾಗಿ ನಟಿ ಎಷ್ಟೇ ಸಮಜಾಯಿಷಿ, ಎಷ್ಟೇ ಉತ್ತರ ಕೊಟ್ಟರೂ ಅಭಿಮಾನಿಗಳಿಗೆ ಸಮಾಧಾನವಾಗುವಂತೆ ಕಾಣುತ್ತಿಲ್ಲ.
ನಟಿ ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ನಿರೂಪಕಿ ಅನುಶ್ರೀ (Anchor Anushree) ಇನ್ನಾದರೂ ತಮ್ಮ ಮದುವೆಯ ಬಗ್ಗೆ ಪ್ರಶ್ನೆ ಮಾಡೋದನ್ನು ನಿಲ್ಲಿಸಿ ಎನ್ನೋ ಅರ್ಥದಲ್ಲಿ ಹೇಳಿದ್ದರು. ಮದುವೆ ಮಾಡಿಕೊಳ್ಳುವ ತುಂಬಾ ಸಮಯವಿದೆ. ಮೊದಲು ಕೆಲಸ ಮಾಡೋಣ ಎಂದಿದ್ದ ಅವರು, ಮದುವೆ ಅನ್ನೋದು ಒಂದು ಸುಂದರ ಅನುಭವ. ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ಈ ಹಿಂದೆ ಹೇಳಿದ್ದರು. ಮದುವೆ ಅನ್ನೋದು ಬ್ಯೂಟಿಫುಲ್ ಅನುಭವ, ಮದುವೆ ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ ,ಈ ಸಂಬಂಧದ ಒಳಗೆ ಎರಡು ಜೀವಗಳು ಹೊಕ್ಕಬೇಕು. ಇದಕ್ಕೆಲ್ಲಾ ಸ್ವಲ್ಪ ಟೈಮ್ ಬೇಕು. ಸೋ ಸದ್ಯ ಪ್ಲೀಸ್ ನನ್ನ ಮದುವೆ ಬಗ್ಗೆ ಮಾತ್ರ ಕೇಳ್ಬೇಡಿ ಎಂದೂ ಕೆಲವೊಮ್ಮೆ ಅನುಶ್ರೀ ತಮ್ಮ ಅಭಿಮಾನಿಗಳಿಗೆ ನೇರವಾಗಿಯೇ ಹೇಳಿದ್ದುಂಟು. ಇದೇ ವಿಷಯದ ಬಗ್ಗೆ ಮಾತನಾಡುವಾಗ ಹಿಂದೊಮ್ಮೆ ಭಾವುಕರಾಗಿದ್ದ ನಟಿ, ನನ್ನನ್ನು ಯಾರಾದ್ರೂ ಬಿಟ್ಟು ಹೋಗ್ತಾರಾ ಅನ್ನೋ ಭಯವಿದೆ. ನನಗೆ ಆ ದುಃಖವನ್ನು ತಡೆಯುವ ಶಕ್ತಿ ಇಲ್ಲ ಎಂದಿದ್ದರು. ಪ್ಲೀಸ್ ಇಂತಹ ವಿಚಾರವನ್ನು ಕೇಳ್ಬೇಡಿ ನಾನು ಭಾವುಕರಾಗ್ತೀನಿ ಎಂದೂ ಹೇಳಿದ್ದರು.
ಯಾರ್ಯಾರನ್ನೋ ಮದ್ವೆ ಮಾಡಿಕೊಳ್ಳಲು ಆಗಲ್ಲ, ಕೊರಗಜ್ಜನ ಮೇಲೆ ಬಿಡ್ತೀನಿ: ಲೈವ್‌ನಲ್ಲಿ ಅನುಶ್ರೀ ಸ್ಪಷ್ಟನೆ
ಈಗ ಪುನಃ ಬಹಳ ದಿನಗಳ ಬಳಿಕ ಅನುಶ್ರೀ ಇನ್ಸ್ಟಾಗ್ರಾಮ್ನಲ್ಲಿ (Instagram) ಲೈವ್ಗೆ ಬಂದಾಗಲೂ ಇದೇ ಪ್ರಶ್ನೆ ಎದುರಾಗಿದೆ. ಅದಕ್ಕೆ ಫುಲ್ ಸುಸ್ತಾದ ಅನುಶ್ರೀ, ಅಬ್ಬಾ ಮತ್ತೆ ಅದೇ ಪ್ರಶ್ನೆ, ಯಾವಾಗ ಮದ್ವೆಯಾಗ್ತೀರಿ ಎನ್ನೋದು ಎಂದು ಹೇಳಿದ್ದಾರೆ. ಈ ಪ್ರಶ್ನೆ ನೋಡಿದ ನಟಿ ಜೋರಾಗಿ ನಕ್ಕು ನನ್ನ ಅಮ್ಮಂಗೂ ಇದೇ ಪ್ರಶ್ನೆಯಾಗಿ ಹೋಗಿದೆ, ಯಾರಪ್ಪಾ ನನ್ನ ಮಗಳ ಹಿಂದೆ ಮದ್ವೆಗಾಗಿ ಬಿದ್ದಿರೋದು ಅಂತ ಅಮ್ಮನೂ ಕೇಳ್ತಿದ್ದಾರೆ ಎಂದರು. ಇದೇ ಲೈವ್ ಕಾರ್ಯಕ್ರಮದಲ್ಲಿ ತೇಜಸ್ವಿನಿ ಎನ್ನುವ ನವ ವಿವಾಹಿತೆ ಜೊತೆ ಅನುಶ್ರೀ ಮಾತನಾಡಿದರು. ತೇಜಸ್ವಿನಿ ಅವರು ಕೂಡ ಅನುಶ್ರೀ ಅವರ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, ಅನುಶ್ರೀಯವರು 'ಸರಿ ನನಗೆ ಎಂತ ಹುಡುಗ ಸಿಗ್ಬೇಕು ಎಂದು ನಿಮಗೆ ಅನಿಸುತ್ತದೆ' ಎಂದರು. ಆಗ ತೇಜಸ್ವಿನಿಯವರು 'ನಿಮ್ಮ ಹಾಗೆ ಪಟಪಟ ಎಂದು ಮಾತನಾಡುವ ಹುಡುಗ ಸಿಗಲಿ ಎನ್ನುವುದು ನನ್ನ ಹಾರೈಕೆ' ಎಂದರು. ಅದಕ್ಕೆ ಅನುಶ್ರೀ 'ಪಟಪಟ ಮಾತನಾಡಿದರೆ ಸಾಕಾ? ಚೆನ್ನಾಗಿ ನೋಡ್ಕೋಳೋದು ಬೇಡ್ವಾ' ಎಂದು ಚಟಾಕಿ ಹಾರಿಸಿದರು. ಒಟ್ಟಿನಲ್ಲಿ ಅನುಶ್ರೀ ಮದ್ವೆಯಾಗುವವರೆಗೂ ಫ್ಯಾನ್ಸ್ ಬಿಡಲ್ಲ ಎಂದು ಕಾಣಿಸುತ್ತಿದೆ.
ಈ ಹಿಂದೆ ಹಲವರು ನನ್ನ ಮದುವೆ ಆಗಿ ನಮ್ಮನೆ ಸೊಸೆಯಾಗಿ ಬಾರಮ್ಮ ಎಂದು ಅನೇಕರು ಬೇಡಿಕೆ ಮುಂದಿಟ್ಟಿದ್ದೂ ಇದೆ. 'ಮದುವೆ ಆಗಬೇಕು ಎಂದು ಮದುವೆ ಬಗ್ಗೆ ನನ್ನ ತಾಯಿ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಮನೆಯಲ್ಲಿ ಏನೇ ನಡೆದರೂ ಮೊದಲು ನೀನು ಮದುವೆ ಆಗು ಎನ್ನುತ್ತಾರೆ. ನೀನು ಮದುವೆ ಮಾಡಿಕೋ ಎಲ್ಲಾ ಸರಿ ಹೋಗುತ್ತೆ ಎನ್ನುತ್ತಾರೆ. ಹೀಗೆಲ್ಲಾ ಹೇಳ್ತಾರೆ ಅಂತ ಮದುವೆ ಮಾಡಿಕೊಳ್ಳಲು ಆಗಲ್ಲ. ಇಲ್ಲಿ ಜನರು ನೀವು ಅರೇಂಜ್ಡ್ ಮ್ಯಾರೇಜ್ (arranged) ಅಥವಾ ಲವ್ ಮ್ಯಾರೇಜ್ ಆಗ್ತೀರಾ ಎಂದು ಕೇಳುತ್ತಾರೆ....ಈ ವಿಚಾರದ ಬಗ್ಗೆ ನಾನು ಯೋಚನೆ ಮಾಡಿಲ್ಲ ಮೊದಲು ಲವ್ ಆಗಬೇಕು ಅಲ್ವಾ ನಮ್ಮನ್ನು ಯಾರು ಲವ್ ಮಾಡ್ತಾರೆ ಬಿಡಿ' ಎಂದಿದ್ದರು ಅನುಶ್ರೀ.
Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್ ಅನುಶ್ರೀ ಬಾಯಲ್ಲಿ!