ಹೆಂಡತಿಗೆ ಸಣ್ಣ ನೋವು ಕಾಣಿಸಿಕೊಂಡಿತ್ತು 15 ನಿಮಿಷದಲ್ಲಿ ಮಗ ಹುಟ್ಟಿದ; 2ನೇ ಮಗುವಿನ ಸಂಭ್ರಮದಲ್ಲಿ ವಿಜಯ್ ಸೂರ್ಯ

Published : Jul 11, 2023, 04:31 PM IST
ಹೆಂಡತಿಗೆ ಸಣ್ಣ ನೋವು ಕಾಣಿಸಿಕೊಂಡಿತ್ತು 15 ನಿಮಿಷದಲ್ಲಿ ಮಗ ಹುಟ್ಟಿದ; 2ನೇ ಮಗುವಿನ ಸಂಭ್ರಮದಲ್ಲಿ ವಿಜಯ್ ಸೂರ್ಯ

ಸಾರಾಂಶ

ಎರಡನೇ ಮಗುವಿಗೆ ತಂದೆಯಾ ಸಂಭ್ರಮದಲ್ಲಿ ಕಿರುತೆರೆ ನಟ ವಿಜಯ್ ಸೂರ್ಯ. ಬೆಂಗಳೂರು ಹೈದರಾಬಾದ್‌ ಚಿತ್ರೀಕರಣದಲ್ಲಿ ಫುಲ್ ಬ್ಯುಸಿ.... 

ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಚಾಕೊಲೇಟ್ ಬಾಯ್ ವಿಜಯ್ ಸೂರ್ಯ ಮತ್ತು ಚೈತ್ರಾ ದಂಪತಿ ಜ್ಯೂನ್ 2ರಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಎರಡನೇ ಮಗುವಿಗೆ ನಾಮಕರಣ ಕೂಡ ಮಾಡಿ ತಡವಾಗಿ ರಿವೀಲ್ ಮಾಡಿದ್ದಾರೆ. ವಿಜಯ್ ಹಂಚಿಕೊಂಡ ಸಿಹಿ ಸುದ್ದಿಯಿಂದ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ ಆದರೆ ತಡವಾಗಿ ರಿವೀಲ್ ಮಾಡುತ್ತಿರುವುದಕ್ಕೆ ಕೊಂಚ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

'ಕಳೆದ ಎರಡು ತಿಂಗಳುಗಳಿಂದ ನಾನು ನಾನ್ ಸ್ಟಾಪ್ ಚಿತ್ರೀಕರಣ ಮಾಡುತ್ತಿರುವ ಅದರಲ್ಲೂ ಬೆಂಗಳೂರು ಮತ್ತು ಹೈದರಾಬಾದ್‌ಗೆ ಪ್ರಯಾಣ ಮಾಡಿಕೊಂಡು ಚಿತ್ರೀಕರಣ ಮಾಡುತ್ತಿರುವೆ. ಒಂದು ಕಡೆ ನಮ್ಮ ಲಕ್ಕಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿದೆ ಮತ್ತೊಂದು ಕಡೆ ಕೃಷ್ಣಂ ಕಲ್ಪಿಂಡಿ ಇದರಿನಿ ತೆಲುಗು ಚಿತ್ರೀಕರಣ ನಡೆಯುತ್ತಿದೆ. ನಾನು ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡುವ ನನ್ನ ಎರಡನೇ ಮಗು ಬರ ಮಾಡಿಕೊಂಡೆ' ಎಂದು ಖಾಸಗಿ ಸಂದರ್ಶನದಲ್ಲಿ ವಿಜಯ್ ಹೇಳಿದ್ದಾರೆ. 

ವಿದೇಶದಲ್ಲಿ ಪುತ್ರನ ಮೊದಲ ಹುಟ್ಟಹಬ್ಬ ಆಚರಿಸಿದ ವಿಜಯ್ ಸೂರ್ಯ!

'ನನ್ನ ಎರಡನೇ ಮಗನನ್ನು ಜೂನ್ 2ರಂದು ಬರ ಮಾಡಿಕೊಂಡೆವು, ತಕ್ಷಣ ಯಾಕೆ ರಿವೀಲ್ ಮಾಡಲಿಲ್ಲ ಅಂದ್ರರ ಅಫೀಶಿಯಲ್ ಮಾಡೋಣ ಎಂದು ಸುಮ್ಮನಿದ್ದೆವು. ನನ್ನ ಮಗನ ಹೆಸರು ಕಾರ್ತೀಕೇಯ ಸೂರ್ಯ. ಈಗ ಮಕ್ಕಳ ಜೊತೆ ಇರುವುದಕ್ಕೆ ಸಮಯ ಸಿಕ್ಕಿದೆ. ನನ್ನ ದೊಡ್ಡ ಮಗ ಸೋಹನ್ ನನ್ನ ಜೊತೆ ಇದ್ದಾನೆ ಚೈತ್ರಾ ಮತ್ತು ಮಗು ಅವರ ತಾಯಿ ಮನೆಯಲ್ಲಿದ್ದಾರೆ' ಎಂದಿದ್ದಾರೆ ವಿಜಯ್. 

'ಹೈದರಾಬಾದ್‌ನಲ್ಲಿ ಧಾರಾವಾಹಿ ಚಿತ್ರೀಕರಣ ಮಾಡುವಾಗ ಚೈತ್ರಾ ಸಹೋದರ ನನಗೆ ಮೆಸೇಜ್ ಮಾಡಿ ಚೈತ್ರಾಗೆ ಸಣ್ಣ ನೋವು ಕಾಣಿಸಿಕೊಂಡಿದೆ ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವೆ ಎಂದು ಹೇಳಿದ ಅನಂತರ ಕರೆಕ್ಟ್‌ ಆಗಿ 15 ನಿಮಿಷಕ್ಕೆ ನಾನು ಶಾಟ್ ಮುಗಿಸಿ ಬಂದ ಅಷ್ಟರಲ್ಲಿ ಮಗ ಹುಟ್ಟಿದ್ದಾನೆ ಎಂದು ಮೆಸೇಜ್ ಮಾಡಿದ್ದರು. ಆ ಕ್ಷಣದಲ್ಲಿ ನಾನು ಅಲ್ಲಿರಬೇಕಿತ್ತು ಅನ್ನೋ ಆಸೆ ತುಂಬಾ ಇತ್ತು ಆದರೆ ಅನಿರೀಕ್ಷಿತ ಇದು ಏಕೆಂದರೆ ಡಾಕ್ಟರ್ ಒಂದು ವಾರ ತಡವಾಗಿ ಡೇಟ್ ಕೊಟ್ಟಿದ್ದರು' ಎಂದು ವಿಜಯ್ ಹೇಳಿದ್ದಾರೆ. 

ಅಗ್ನಿಸಾಕ್ಷಿ ವಿಜಯ್ ಸೂರ್ಯ ಮದ್ವೆ ಆದ್ಮೇಲೂ ಫ್ಲರ್ಟ್ ಮಾಡ್ತಾರಾ?

ಅದೆಷ್ಟೋ ಸಿರಿಯಲ್ ಮಾಡಿದ್ದರೂ ಇಂದಿಗೂ ಅಗ್ನಿ ಸಾಕ್ಷಿಯ ಸಿದ್ದಾರ್ಥ್ ಆಗಿ ಗುರುತಿಸಿಕೊಂಡಿರುವ ಡಿಂಪಲ್ ಬಾಯ್ ವಿಜಯ್ ಸೂರ್ಯ ಅವರ ಹೆಂಡ್ತಿ ಕೂಡ ವಿಜಯ್ ಅಷ್ಟೇ ಮುದ್ದಾಗಿರೋ ಡಿಂಪಲ್ ಇರೋ ಸುಂದರಿ ಚೈತ್ರ. ಚೈತ್ರ ಸಾಫ್ಟ್ ವೇರ್ ಇಂಜಿನಿಯರ್. ಇವರಿಬ್ಬರದು ಅರೇಂಜ್ ಮ್ಯಾರೇಜ್. ಅಮ್ಮ ತೋರಿಸಿದ ಹುಡುಗಿಯನ್ನೇ ಮದುವೆಯಾಗಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ