ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಿಯಾಲಿಟಿ ಶೋನಲ್ಲಿ ನಟಿ ಅಭಿಜ್ಞಾ ಭಟ್ ಮಂಗಳೂರಿನ ವೆರೈಟಿ ಹಾಗೂ ಅವುಗಳ ಸ್ಪೆಷಾಲಿಟಿ ಬಗ್ಗೆ ತಿಳಿಸಿದ್ದಾರೆ. ಅವರು ಏನ್ ಹೇಳಿದ್ದಾರೆ ನೀವೆ ಒಮ್ಮೆ ಕೇಳಿ.
ಝೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 (Bharjari Bachelors Season 2) ಭರ್ಜರಿಯಾಗಿಯೇ ನಡೆಯುತ್ತಿದೆ. ಬ್ಯಾಚುಲರ್ಸ್ ಗಳಿಗೆ ಮೆಂಟರ್ಸ್ ಗಳು ಕೂಡ ಸಿಕ್ಕಿದ್ದಾರೆ. ಕಳೆದ ವಾರ ಸರ್ಪ್ರೈಸ್ ರೌಂಡ್ ಇತ್ತು. ವಿವಿಧ ರೀತಿಯಲ್ಲಿ ತಮ್ಮ ಪಾರ್ಟ್ನರ್/ ಮೆಂಟರ್ ಗಳಿಗೆ ಬ್ಯಾಚುಲರ್ಸ್ ಸರ್ಪ್ರೈಸ್ ನೀಡಿದ್ದರು. ಈ ಬಾರಿ ಸಿನಿಮಾಗಳ ರೀಕ್ರಿಯೇಶನ್ ರೌಂಡ್ ಸಕ್ಕಾತ್ತಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಟಿ ಅಭಿಜ್ಞಾ ಭಟ್, ಸೂರ್ಯ ಕುಮಾರ್ ಗೆ ಜೋಡಿಯಾಗಿದ್ದು, ಇವರಿಬ್ಬರು ಜೊತೆಯಾಗಿ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಹಾಡು, ದೃಶ್ಯಗಳನ್ನು ರೀಕ್ರಿಯೇಟ್ ಮಾಡಿದ್ದಾರೆ.
ಕಾಲೇಜ್‌ನಲ್ಲಿ ಆ ಹುಡುಗಿಗೆ ಐ ಲವ್ ಯೂ ಹೇಳೋಕೆ 1 ವರ್ಷ ತೆಗೊಂಡೆ; ಕೊನೆಗೂ ಹಳೆ ಕಹಾನಿ ಬಿಚ್ಚಿಟ್ಟ ರವಿಚಂದ್ರನ್
ಇದೀಗ ರಿಲೀಸ್ ಆಗಿರುವ ಪ್ರೊಮೋ ಒಂದರಲ್ಲಿ ನಿರೂಪಕ ನಿರಂಜನ್ ದೇಶಪಾಂಡೆ (Niranjan Dehspande) ಮೀನುಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅಭಿಜ್ಞಾ ಭಟ್ ಉತ್ತರಿಸಿದ್ದು, ಮಂಗಳೂರು ಮೀನುಗಳ ವಿಶೇಷತೆ, ವೆರೈಟಿ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತು ಆರಂಭಿಸಿದ ಅಭಿಜ್ಞಾ, ನಾನು ಮೀನು ತಿನ್ನೋದಿಲ್ಲ, ಆದರೆ ನಾನು ದಕ್ಷಿಣ ಕನ್ನಡದವಳು ಅಲ್ವಾ? ಹಾಗಾಗಿ ನಮ್ಮ ಅಕ್ಕ ಪಕ್ಕದ ಮನೆಯಲ್ಲಿ ಯಾವಾಗ ನೋಡಿದ್ರೂ ಮೀನು. ಮೀನು ಕಣ್ಣಿಗೆ ತುಂಬಾನೆ ಒಳ್ಳೆಯದು ಅಲ್ಲದೇ ಮೀನಿನ ಮಂಡೆ ತಿಂದ್ರೆ ನಮ್ಮ ಮಂಡೆಸ ಚುರುಕಾಗುತ್ತದೆ ಎಂದಿದ್ದಾರೆ ಅಭಿಜ್ಞಾ ಭಟ್.
'ರಾಮಚಾರಿ' ರವಿಚಂದ್ರನ್ ರೀತಿ ಬದಲಾದ ಡ್ರೋನ್ ಪ್ರತಾಪ್; ಪೆದ್ದನಾಗಿ ನಟಿಸೋದು ಸುಲಭವಲ್ಲ ಎಂದ ನಟ
ಇಷ್ಟೇ ಅಲ್ಲ ಮೀನು ಕೊಟ್ಟು ಪ್ರಪೋಸ್ ಮಾಡುವ ಕುರಿತು ಸಹ ಅಭಿಜ್ಞಾ (Abhijna Bhat)ಮಾಹಿತಿ ನೀಡಿದ್ದು, ಇಲ್ಲೆಲ್ಲಾ ಹುಡುಗರು ಹುಡುಗಿಯರಿಗೆ ಪ್ರಪೋಸ್ ಮಾಡಲು, ಅಥವಾ ಇಂಪ್ರೆಸ್ ಮಾಡಲು ರೋಸ್, ಚಾಕ್ಲೆಟ್ ಎಲ್ಲಾ ಕೊಡ್ತಾರೆ, ಆದರೆ ನಮ್ ಕಡೆ ಹಾಗಲ್ಲ, ಮೀನು ಕೊಟ್ರೆ ಮುಗಿತು ಅಂದಿದ್ದಾರೆ. ಇಲ್ಲೆಲ್ಲ ಐ ಲವ್ ಯೂ ಅಂದ್ರೆ ಮುಗೀತು, ಆದ್ರೆ ನಮ್ ಕಡೆ ಹೇ ಭಾಗಿ ನಿನಗಾಗಿ ಮೀನು ತಂದಿದ್ದೇನೆ, ಸಾರು ಮಾಡಿಡು, ರಾತ್ರಿ ಬೇಗ ಬರ್ತೇನೆ ಎನ್ನುತ್ತಾರಂತೆ ಕುಡ್ಲದ ಜನ. ಹಾಗಾಗಿ ಭಾಗಿ ಮನೆಯಲ್ಲಿ ಮೀನು ಸಾರು ಅಂದ್ರೆ, ಇವತ್ತೇನೋ ಸ್ಪೆಷಲ್ ಇದೆ ಎಂದು ಕನೆಕ್ಟ್ ಮಾಡ್ಬೇಕು ಎಂದಿದ್ದಾರೆ ಅಭಿಜ್ಞಾ.
ಎಲ್ರಿಗೂ ಅಪ್ಪ ಇದ್ದಾರೆ ಇವತ್ತು.....; ರವಿಚಂದ್ರನ್ ಎದುರು ಕಣ್ಣೀರಿಟ್ಟ ರಕ್ಷಕ್ ಬುಲೆಟ್
ಅಭಿಜ್ಞಾ ಹೇಳಿದಾ ಕಥೆಯನ್ನೆಲ್ಲಾ ಕೇಳಿ, ಜಡ್ಜ್ ಆಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ (Crazy star Ravichandran), ಯಾವ ಯಾವ ಮೀನು ಕೊಟ್ರೆ ಅದರ ಅರ್ಥ ಏನು ಎಂದು ಕೇಳಿದ್ದಾರೆ. ಅದಕ್ಕೆ ಅಭಿಜ್ಞಾ, ಬಂಗುಡೆ ಮೀನು ಕೊಟ್ರೆ, ಬರೀ ರೋಮ್ಯಾನ್ಸ್ ಅಷ್ಟೇ ಎಂದಿದ್ದಾರೆ. ಇನ್ನು ಕಾಣೆ ಫಿಶ್ ಕೊಟ್ರೆ ಸ್ವಲ್ಪ ಜಾಸ್ತಿನೇ ರೊಮ್ಯಾನ್ಸ್ ಅಂತೆ, ಪಾಂಪ್ಲೆಟ್ ಮೀನು ಕೊಟ್ರೆ ಲವ್ ಮಾಡೋದು ಅಂತ ಅರ್ಥ ಅಂತೆ, ಇನ್ನು ಏಡಿಯನ್ನು ತಂದು ಕೊಟ್ರೆ ಫಸ್ಟ್ ಸೆಕೆಂಡ್ ಸ್ಟೇಜ್ ಏನೂ ಇಲ್ಲ, ಡೈರೆಕ್ಟ್ ಎಂದಿದ್ದಾರೆ ಅಭಿಜ್ಞಾ, ಅದರ ಜೊತೆಗೆ, ನಾನು ಸುಮ್ಮನೆ ಹೇಳಿದ್ದು, ಇನ್ನು ನಮ್ಮ ಊರಿನವರು ನೋಡಿ, ಇವಳಿಗೇನು ಮಾಡೋದಕ್ಕೆ ಬೇರೆ ಕೆಲ್ಸ ಇಲ್ವಾ ಅಂತ ಹೇಳ್ಬೇಡಿ ಅಂತಾನೂ ಹೇಳಿದ್ದಾರೆ.