‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್‌ಗೆ ಮದುವೆ ಆಗೋಕೆ ಕಾವೇರಿ ರೆಡಿ ಆಗಿದ್ದಾಳೆ. ಈಗ ಲಕ್ಷ್ಮೀಯನ್ನು ಮದುವೆ ಆಗೋಕೆ ಹುಡುಗ ರೆಡಿ ಆಗಿದ್ದಾನೆ. ಅವರು ಯಾರು?
ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್ ಇನ್ನೊಂದು ಮದುವೆ ಆಗೋಕೆ ರೆಡಿ ಆಗಿದ್ದಾನೆ. ವೈಷ್ಣವ್ ಮರು ಮದುವೆಯನ್ನು ಹೇಗೆ ತಡೆಯೋದು ಅಂತ ಸುಪ್ರೀತಾ, ಲಕ್ಷ್ಮೀ ಚಿಂತೆಯಲ್ಲಿದ್ದಾರೆ. ಹೀಗಿರುವಾಗ ಲಕ್ಷ್ಮೀಗೆ ಹೊಸ ಫಜೀತಿ ಶುರುವಾಗಿದೆ.
ವೈಷ್ಣವ್‌ಗೆ ಮತ್ತೆ ಮದುವೆ?
ವೈಷ್ಣವ್‌ಗೆ ಸ್ವಂತ ಬುದ್ಧಿ ಇಲ್ಲ, ಪತ್ನಿಯನ್ನು ನಂಬಲ್ಲ, ತಾಯಿ ಹೇಳಿದಂಗೆ ಕೇಳ್ತಿದ್ದಾನೆ, ತಾಳಿ ಹೇಳಿದಳು ಅಂತ ಮತ್ತೆ ಮದುವೆ ಆಗೋಕೆ ರೆಡಿ ಆಗಿದ್ದಾನೆ ಅಂತ ವೀಕ್ಷಕರು ನಿಂದಿಸುತ್ತಿದ್ದಾರೆ. ಇನ್ನೊಂದು ಕಡೆ ಲಕ್ಷ್ಮೀಯನ್ನು ಮನೆಯಿಂದ ಹೊರಗಡೆ ಹಾಕಿರೋ ಕಾವೇರಿ, ವೈಷ್ಣವ್‌ಗೆ ಮತ್ತೆ ಮದುವೆ ಮಾಡಿಸೋಕೆ ರೆಡಿ ಆಗಿದ್ದಾಳೆ.
Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಕಾವೇರಿ ಕಾಲು ಹಿಡಿಬೇಕಂತೆ!
ನನ್ನ ಕಾಲು ಹಿಡಿದುಕೊಂಡು ಕ್ಷಮೆ ಕೇಳಿದರೆ ಲಕ್ಷ್ಮೀಯನ್ನು ಕ್ಷಮಿಸ್ತೀನಿ, ಆ ರೀತಿ ಮಾಡಿಲ್ಲ ಅಂದ್ರೆ ಲಕ್ಷ್ಮೀ ಎಂದಿಗೂ ನನ್ನ ಎದುರಾಳಿ ಅಂತ ಕಾವೇರಿ ಖಡಕ್ ಆಗಿ ಹೇಳಿದ್ದಾರೆ. “ಇದಿನ್ನೂ ಆರಂಭ, ಆಮೇಲೆ ತುಂಬ ಇದೆ” ಅಂತ ಕಾವೇರಿ ಎಚ್ಚರಿಕೆ ಕೊಟ್ಟಿದ್ದಾಳೆ. ʼಹಾವಿನ ದ್ವೇಷ ಹನ್ನೆರಡು ವರ್ಷ, ನನ್ನ ದ್ವೇಷ ನೂರು ವರ್ಷʼ ಎಂದು ಕಾವೇರಿ ತನ್ನ ನಿಜವಾದ ಮುಖವನ್ನು ಸುಪ್ರೀತಾ ಮುಂದೆ ಮತ್ತೊಮ್ಮೆ ಬಯಲು ಮಾಡಿದ್ದಾಳೆ.
ವೈಷ್ಣವ್ ಮನಸ್ಸಿನಲ್ಲಿ ಗೊಂದಲ
ಎಲ್ಲದಕ್ಕೂ ತಾಯಿ ಮಾತನ್ನು ಕೇಳುವ ವೈಷ್ಣವ್‌ಗೆ ಈಗಲೂ ಪತ್ನಿ ಮೇಲೆ ಲವ್ ಇದೆ. ಮನೆಯಲ್ಲಿರುವ ಫೋಟೋಗಳನ್ನು ಹೊರಗಡೆ ತಂದು ರೂಮ್‌ನಲ್ಲಿರೋ ಇಟ್ಟಿರೋ ವೈಷ್ಣವ್‌ಗೆ ಸಿಕ್ಕಾಪಟ್ಟೆ ಗೊಂದಲ ಆಗುತ್ತಿದೆ. ಮುಂದೆ ಅವನು ಏನು ಮಾಡ್ತಾನೆ ಅಂತ ಕಾದು ನೋಡಬೇಕಿದೆ. ಕಾವೇರಿ ಹಾಗೂ ಲಕ್ಷ್ಮೀಯಿಂದ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗ್ತಿಲ್ಲ, ಮತ್ತೆ ಗೊಂದಲ ಆಗ್ತಿದೆ ಎಂದು ವೈಷ್ಣವ್ ಮನಸ್ಸಿಗೆ ಅನಿಸಿದೆ.
PHOTOS: ಮದುವೆಯಾಗ್ತಿದ್ದಂತೆ ಕೇರಳಕ್ಕೆ ಹಾರಿದ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ವಿಧಿ
ಲಕ್ಷ್ಮೀಗೆ ಮತ್ತೆ ಮದುವೆ?
ಇನ್ನೊಂದು ಕಡೆ ನಿತಿನ್ ಆಗಮನ ಆಗಿದೆ. ಈ ಹಿಂದೆ ಸಾಕಷ್ಟು ಬಾರಿ ಲಕ್ಷ್ಮೀಯನ್ನು ಮದುವೆ ಆಗಬೇಕು ಅಂತ ಟ್ರೈ ಮಾಡಿದ್ದನು. ಆಗೆಲ್ಲ ವೈಷ್ಣವ್ ಅವಳನ್ನು ಕಾಪಾಡಿದ್ದನು. ಈಗ ಅವಳನ್ನು ಯಾರು ಕಾಪಾಡುತ್ತಾರೆ ಎಂದು ಕಾದು ನೋಡಬೇಕಿದೆ. ಗಂಡನ ಜೊತೆ ಇರಬೇಕು, ಗಂಡನ ಮನೆಗೆ ಹೋಗಬೇಕು ಎಂದು ಬಯಸುತ್ತಿರೋ ಲಕ್ಷ್ಮೀಗೆ ನಿತಿನ್ ದೊಡ್ಡ ಸಮಸ್ಯೆ ಆಗಿದ್ದಾನೆ. ಬಹುಶಃ ಕಾವೇರಿಯೇ ನಿತಿನ್‌ರನ್ನು ಕರೆಸಿದ್ದರೂ ಆಶ್ಚರ್ಯ ಇಲ್ಲ.
ʼಲಕ್ಷ್ಮೀ ಬಾರಮ್ಮʼ ನಟಿ ಭೂಮಿಕಾ ರಮೇಶ್, ಅಭಿನವ್ ವಿಶ್ವನಾಥನ್ ಪ್ರೀತಿಸ್ತಿದ್ದಾರಾ? ಶೋನಲ್ಲಿ ಸತ್ಯ ಬಯಲು!
ಮುಂದೆ ಏನಾಗುವುದು?
ಈ ಬಾರಿ ನಿತಿನ್, ಲಕ್ಷ್ಮೀಯನ್ನು ಮದುವೆ ಆಗ್ತಾನಾ ಎನ್ನುವ ಪ್ರಶ್ನೆ ಕಾಡಿದೆ. ಏನೇ ಹೇಳಿ, ಲಕ್ಷ್ಮೀ ಮತ್ತು ವೈಷ್ಣವ್ ಮತ್ತೆ ಒಂದಾಗ್ತಾರೆ. ವೈಷ್ಣವ್‌ಗೆ ಇಂದು ಅಥವಾ ನಾಳೆ ಸತ್ಯ ಗೊತ್ತಾಗುತ್ತದೆ. ಆದರೆ ಸದ್ಯಕ್ಕೆ ಕಾವೇರಿ ನಿಜವಾದ ಬಣ್ಣ ಹೊರಗಡೆ ಬರೋದು ಡೌಟ್. ಇನ್ನೊಂದು ಕಡೆ ಕೀರ್ತಿಗೆ ಹಳೆಯ ನೆನಪು ಬಂದು, ಅವಳು ಕೂಡ ಸರಿಯಾಗಿ ಆಗಬೇಕು.
ಪಾತ್ರಧಾರಿಗಳು
ಲಕ್ಷ್ಮೀ- ಭೂಮಿಕಾ ರಮೇಶ್
ಕಾವೇರಿ- ಸುಷ್ಮಾ ನಾಣಯ್ಯ
ಸುಪ್ರೀತಾ-ರಜನಿ ಪ್ರವೀನ್
ಕೀರ್ತಿ- ತನ್ವಿ ರಾವ್
ವೈಷ್ಣವ್- ಶಮಂತ್ ಬ್ರೊ ಗೌಡ