Kiran Raj Holi Photos: ನಾಡಿನೆಲ್ಲೆಡೆ ಹೋಳಿ ಹಬ್ಬ ಆಚರಿಸಲಾಗ್ತಿದೆ. ಇತ್ತ ʼಕರ್ಣʼ ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡ್ತಿರೋ ನಟ ಕಿರಣ್ ರಾಜ್ ಅವರು ʼಹೋಳಿ ಹಬ್ಬ ಇಲ್ದೆ ಇದ್ರೂ ಬಣ್ಣ ಹಾಕ್ಕೊಂಡು ಓಡಾಡೋರಿಗೆʼ ಎಂಬ ಡೈಲಾಗ್ ಹೇಳಿದ್ದಾರೆ.
ಇಂದು ಹೋಳಿ ಹಬ್ಬ, ಎಲ್ಲರೂ ಹೋಳಿ ಹಬ್ಬದ ರಂಗು ಮೆತ್ತಿಕೊಂಡು ಖುಷಿಯಲ್ಲಿದ್ದಾರೆ. ʼಕರ್ಣʼ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸಂಚಲನ ಮೂಡಿಸಲು ರೆಡಿ ಆಗಿರೋ ಕಿರಣ್ ರಾಜ್ ಬಹುದಿನಗಳ ಮತ್ತೊಂದು ಪಂಚ್ ಡೈಲಾಗ್ ಹೇಳಿದ್ದಾರೆ.
ಮೋಟಿವೇಶನ್ ವಿಡಿಯೋಗಳು!
ಕಿರಣ್ ರಾಜ್ ಅವರು ಆಗಾಗ ಪಂಚ್ ಡೈಲಾಗ್ ಹೇಳಿ ಸೋಶಿಯಲ್ ಮೀಡಿಯಾ ತುಂಬೆಲ್ಲ ಸದ್ದು ಮಾಡುತ್ತಿರುತ್ತಾರೆ. ರಿಯಾಲಿಟಿಯನ್ನು ಹೇಳಿಯೇ ಅವರು ವೀಕ್ಷಕರಿಗೆ ಹತ್ತಿರ ಆಗಿದ್ದಾರೆ. ಲವ್, ಮದುವೆ, ಸಂಬಂಧಿಕರು, ಜೀವನಕ್ಕೆ ಸಂಬಂಧಪಟ್ಟಂತೆ ಕಿರಣ್ ಅವರು ವಿಡಿಯೋ ಮಾಡುತ್ತಾರೆ. ಈ ವಿಡಿಯೋಗಳು ಅನೇಕರಿಗೆ ಇಷ್ಟ ಆಗುತ್ತವೆ.
Shrirasthu Shubhamasthu Serial: ಮಾಧವನ ಪತ್ನಿ ತುಳಸಿ ಪ್ರಾಣಪಕ್ಷಿ ಹಾರೋಯ್ತ! ಸುಧಾರಾಣಿ ಪಾತ್ರ ಮುಗೀತಾ?
ಈ ಬಾರಿ ಹೋಳಿ ಶುಭಾಶಯ ಏನು?
“ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಹೋಳಿ ಹಬ್ಬ ಇಲ್ದೆ ಇದ್ರೂ ಬಣ್ಣ ಹಾಕ್ಕೊಂಡು ಓಡಾಡೋರಿಗೆ ಹೋಳಿ ಹಬ್ಬದ ಶುಭಾಶಯಗಳು” ಎಂದು ಕಿರಣ್ ರಾಜ್ ಹೇಳಿದ್ದಾರೆ.
ಕಳೆದ ವರ್ಷದ ಶುಭಾಶಯ ಏನು?
ಈ ಸಂಬಂಧಿಕರು ಹೇಗೆ ಅಂದ್ರೆ ಅವರಿಗೆ ಕಡಿತಾ ಇದ್ದರೂ ನಮಗೆ ಬಂದು ಕೆರಿತಾರೆ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.
ನಿಧಿ ಸುಬ್ಬಯ್ಯ ಮನೆಯ ಗೇಟ್‌ಗೆ ಪಟಾಕಿ ಕಟ್ಟಿ ಸಿಡಿಸಿದ್ದ ಯಶ್..! ಆದ್ರೂ ಎಸ್ಕೇಪ್ ಆಗಿದ್ದು ಹೇಗೆ..?
ʼಕರ್ಣʼ ಧಾರಾವಾಹಿ ಮೂಲಕ ಕಂಬ್ಯಾಕ್!
ಅಂದಹಾಗೆ ‘ಕರ್ಣ’ ಧಾರಾವಾಹಿ ಮೂಲಕ ಕಿರಣ್ ರಾಜ್ ಅವರು ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಸೀರಿಯಲ್ ಪ್ರೋಮೋ ರಿಲೀಸ್ ಆಗಿ ಮೂರು ದಿನಕ್ಕೆ ಈ ಧಾರಾವಾಹಿ 10 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಧಾರಾವಾಹಿಯಲ್ಲಿ ಯಾರು ಹೀರೋಯಿನ್ ಎಂಬ ಪ್ರಶ್ನೆ ಎದ್ದಿದೆ. ನಟಿ ಭವ್ಯಾ ಗೌಡ, ಮೋಕ್ಷಿತಾ ಪೈ, ರಂಜನಿ ರಾಘವನ್ ಅವರಲ್ಲಿ ಯಾರು ಎಂಬ ಕುತೂಹಲ ಹುಟ್ಟಿತ್ತು. ಆದರೆ ಈ ಮೂವರು ಅಲ್ಲ, ಹೊಸ ಹೀರೋಯಿನ್ ಎನ್ನಲಾಗುತ್ತಿದೆ. ಮುಂದಿನ ತಿಂಗಳು ಈ ಧಾರಾವಾಹಿ ಆರಂಭವಾಗುವ ಚಾನ್ಸ್ ಇದೆ ಎನ್ನಲಾಗಿದೆ.
ಮತ್ತೊಂದು ಗುಡ್ ನ್ಯೂಸ್ ಕೊಟ್ಟ ನಟ ಕಿರಣ್ ರಾಜ್… ಸೀರಿಯಲ್ ಬೆನ್ನಲ್ಲೆ ಹೊಸ ಚಿತ್ರಕ್ಕೂ ಆದ್ರು ನಾಯಕ!
ಡಾಕ್ಟರ್ ಆದ ಕಿರಣ್ ರಾಜ್!
ಈ ಸೀರಿಯಲ್‌ಗೋಸ್ಕರ ದೊಡ್ಡ ಮಟ್ಟದಲ್ಲಿ ಸೆಟ್ ಹಾಕಲಾಗಿದೆಯಂತೆ. ಇನ್ನು ಟಿ ಎಸ್ ನಾಗಾಭರಣ, ಆಶಾಲತಾ, ಸಿಮ್ರನ್, ವೀಣಾ ರಾವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯೇ ಈ ಧಾರಾವಾಹಿ ನಿರ್ಮಾಣ ಮಾಡುತ್ತಿದೆ. ಕಿರಣ್ ರಾಜ್ ಅವರು ಈ ಬಾರಿ ಡಾಕ್ಟರ್ ಪೋಷಾಕು ಧರಿಸಿದ್ದಾರೆ. ಹೀರೋ ಸೆಂಟ್ರಿಕ್ ಕಥೆ ಇದಾಗಿದೆ. ಯಾವಾಗ ತೆರೆ ಮೇಲೆ ಮತ್ತೆ ಕಾಣಿಸ್ತೀರಾ ಅಂತ ಅಭಿಮಾನಿಯೋರ್ವರು ಪ್ರಶ್ನೆ ಮಾಡಿದ್ದಾಗ, ಕಿರಣ್ ರಾಜ್ ಅವರು “ಹೀರೋ ಸೆಂಟ್ರಿಕ್ ಪಾತ್ರ ಸಿಕ್ಕರೆ ಪಕ್ಕಾ ಮಾಡ್ತೀನಿ” ಎಂದು ಹೇಳಿದ್ದರು. ಅದರಂತೆ ಅವರು ಮಾತು ಉಳಿಸಿಕೊಂಡಿದ್ದಾರೆ.
ಹೆಚ್ಚು ಸಂಭಾವನೆ ಪಡೆಯುವ ನಟ!
ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆ ಕೂಡ ಅವರಿಗೆ ಸಿಕ್ಕಿದೆ. ಒಟ್ಟಿನಲ್ಲಿ ʼಕರ್ಣʼ ಧಾರಾವಾಹಿ ಪ್ರೋಮೋ ಆರಂಭದಲ್ಲಿ ರೆಕಾರ್ಡ್ ಸೃಷ್ಟಿ ಮಾಡಿದ್ದು, ಸೀರಿಯಲ್ ಹೇಗೆ ಬರಲಿದೆ ಎಂಬ ಕುತೂಹಲ ಶುರುವಾಗಿದೆ.