ಸುಂಟರಗಾಳಿ ಪ್ರತಾಪ್​! ಒಂದ್ಸಲ ಆಗ್ಲಿಲ್ಲ... ಎರಡು ಸಲ ಆಗ್ಲಿಲ್ಲ ಎನ್ನುತ್ತಲೇ ಡ್ರೋನ್​ ಮಾಡಿದ್ರೊಂದು ಹೊಸ ಟ್ರಿಕ್ಸ್​!

By Suvarna NewsFirst Published Feb 24, 2024, 3:42 PM IST
Highlights

ಬಿಗ್​ಬಾಸ್​ ಖ್ಯಾತಿಯ ಡ್ರೋನ್ ಪ್ರತಾಪ್​ ಇದೀಗ ಸುಂಟರಗಾಳಿ ಪ್ರತಾಪ್​ ಆಗಿದ್ದಾರೆ.  ನೀರಿನ ಸುಂಟರಗಾಳಿ ಪ್ರಯೋಗವನ್ನು ಮಾಡಿ ತೋರಿಸಿದ್ದಾರೆ. ನೆಟ್ಟಿಗರು ಏನಂದ್ರು? 
 

ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್ ಇದೀಗ ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆಗುವ ಮೂಲಕ ಅಸಂಖ್ಯೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇವರ ಫ್ಯಾನ್ಸ್​ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ ಡ್ರೋನ್​ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್​ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್​ ಅಪ್​ ಆದೆ ಎಂದು ಹೇಳಿಕೊಂಡಿರುವ ಡ್ರೋನ್​ ಪ್ರತಾಪ್​ ಅವರಿಗೆ ಬಿಗ್​ಬಾಸ್​ ಹೊಸದೊಂದೇ ಜೀವನ ಕೊಟ್ಟಿದೆ. 

ಇದೀಗ ಡ್ರೋನ್​ ಪ್ರತಾಪ್​, ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಇದೀಗ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನೀರಿನ ಸುಂಟರಗಾಳಿ ಪ್ರಯೋಗವನ್ನು ಮಾಡಿ ತೋರಿಸಿದ್ದಾರೆ. ತಮ್ಮ ಎಂದಿನ ಡೈಲಾಗ್​ನಂತೆ ಒಂದು ಸಲ ಮಾಡಿದ್ರೆ ಆಗ್ಲಿಲ್ಲ... ಎರಡು ಸಲ ಮಾಡಿದ್ರೆ ಆಗ್ಲಿಲ್ಲ... ಎನ್ನುತ್ತಲೇ ಮೂರನೆಯ ಸಲ ಸಕ್ಸಸ್​ ಆಗಿದ್ದಾರೆ ಎಂದು ಹೇಳಿಕೊಂಡರು. ಒಂದು ಗ್ಲಾಸ್​ನಲ್ಲಿ ನೀರು ಇಟ್ಟು ಎರಡು ಬ್ಯಾಟರಿ ಸೆಲ್​ಗಳನ್ನು ಅತ್ತ-ಇತ್ತ ಇಟ್ಟು ನೀರಿನ ಸುಂಟರಗಾಳಿ ಪ್ರಯೋಗ ಎಂದು ಒಂದು ಟ್ರಿಕ್ಸ್​ ಮಾಡಿ ಅದು ಯಶಸ್ವಿಯಾಯಿತು ಎಂದರು. ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿವೆ. ನಿಜಕ್ಕೂ ನಿನ್​ ಈ ಪ್ರಯೋಗ ಅರ್ಥ ಆಗ್ಲಿಲ್ಲಪ್ಪಾ ಎಂದು ಹಲವರು ಹೇಳುತ್ತಿದ್ದರೆ, ಚಮಚ ತಿರುಗಿಸಿ ಸುಂಟರಗಾಳಿ ಮಾಡಿದ್ದು ಯಾಕೆ ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಭೇಷ್​ ಕಣೋ, ನೀನೇ ನಿಜವಾದ ಸೈಂಟಿಸ್ಟ್​. ನಿನ್ನಂಥವರು ನಮ್​ ದೇಶಕ್ಕೆ ಬೇಕು ಎನ್ನುತ್ತಿದ್ದಾರೆ. ಇಲ್ಲಿದೆ ನೋಡಿ ಡ್ರೋನ್​ ಪ್ರತಾಪ್​ ವಿಡಿಯೋ:

ಹೆಂಡ್ತಿಯನ್ನು ಯಾಕೆ ಅಷ್ಟು ಲವ್​ ಮಾಡ್ತೀರಿ ಅಂತ ಯುವತಿ ಕೇಳಿದಾಗ ಹೀಗೆ ಹೇಳೋದಾ ಬಿಗ್​ಬಾಸ್​ ವಿನಯ್​?

 
 
 
 
 
 
 
 
 
 
 
 
 
 
 

A post shared by Prathap N M (@droneprathap)

 ಅಂದಹಾಗೆ, ಡ್ರೋನ್​ ಪ್ರತಾಪ್​ ಕೆಲ ವರ್ಷಗಳ ಹಿಂದೆ ತುಂಬಾ ಆರೋಪ, ಟೀಕೆಗಳಿಗೆ ಗುರಿಯಾದವರು. ತಾವೊಬ್ಬ ಯುವ ವಿಜ್ಞಾನಿ ಎಂದು ಹೇಳಿಕೊಂಡು ಹಲವರನ್ನು ಯಾಮಾರಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಮಾತಿನಲ್ಲಿ ಎಂಥವರನ್ನೂ ಮೋಡಿ ಮಾಡಬಲ್ಲ ಚಾಣಾಕ್ಷತೆ ಇವರಿಗೆ ಇದೆ.  ಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್‌ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್‌ ಅಪ್‌ ಕೂಡ ಆದರು.

 

 ಬಿಗ್​ಬಾಸ್​ನಲ್ಲಿ ಫಿನಾಲೆವರೆಗೆ ಹೋಗಲು ತಮಗೆ ಬೂಸ್ಟ್​ ಕೊಟ್ಟಿದ್ದು  ಕೆಲವರು ಆಡಿದಂಥ ಕೆಲವು ಮಾತುಗಳು, ನೀಡಿದಂಥ ಕೆಲವು ಪ್ರತಿಕ್ರಿಯೆಗಳು ಎಂದು ಸಂದರ್ಶನದಲ್ಲಿ ಡ್ರೋನ್​ ಹೇಳಿದ್ದರು.  ಬಿಗ್​ಬಾಸ್​​ ಮನೆಯಲ್ಲಿ ರಕ್ಷಕ್​, ವಿನಯ್​, ಈಶಾನಿ, ಮೈಕೆಲ್​ ಸೇರಿದಂತೆ ಕೆಲವರು ಆಡಿದ  ಮಾತುಗಳಿಂದ ನನಗೆ ತುಂಬಾ ನೋವಾಯಿತು. ನಮ್ರತಾ ದೀದೀ ಅವರೂ ಅಪ್ಪ-ಅಮ್ಮನ ಕುರಿತು ಹೇಳಿದರು. ಇದರಿಂದ ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಆದರೆ ನನಗೆ ಗೊತ್ತು. ಎಲ್ಲರೂ  ಆಟಕ್ಕೋಸ್ಕರ ಮಾಡಿದ್ದಾರೆ. ಕೊನೆಗೆ ನಮ್ರತಾ ದೀದೀ, ವಿನಯ್​ ಎಲ್ಲರೂ ಸಾರಿ ಕೇಳಿದ್ರು. ಅಲ್ಲಿಗೇ ಎಲ್ಲವೂ ಮುಗಿಯಿತು. ಆದರೂ ಕೆಲವು ಮಾತುಗಳನ್ನು ನೆನಪಿಸಿಕೊಂಡಾಗ ನೋವಾಗುತ್ತದೆ. ಆದರೆ ಬಿಗ್​ಬಾಸ್​ ಮನೆಯಲ್ಲಿಯೇ ಎಲ್ಲ ಗಲಾಟೆ ಮುಗಿದಿದೆ. ಅಲ್ಲಿ ನಡೆದಿದ್ದನ್ನು ಮರೆತಿದ್ದೇನೆ ಎಂದಿದ್ದರು. ಈಗ ಅಪಾರ ಜನಪ್ರಿಯತೆ ಗಳಿಸಿದ್ದಾರೆ.  
 

ಬಿಗ್​ಬಾಸ್​ ವಿನಯ್​ ಕನಸು ಏನಿತ್ತು? ಡ್ರೋನ್​ ಪ್ರತಾಪ್​ ಗೆಲ್ಲದ ಕಾರಣವೇನು? ಅವ್ರ ಬಾಯಲ್ಲೇ ಕೇಳಿ....

click me!