ಅನುಶ್ರೀ ಎದುರು ತುಕಾಲಿ ಸಂತೋಷ್ ಹೆಂಡ್ತಿ ಮಾನಸ ಬಗ್ಗೆ ಹೀಗಾ ಹೇಳೋದು; ಶಾಕಿಂಗ್ ಅಂತಿದಾರೆ ನೋಡಿದವ್ರು!

By Shriram Bhat  |  First Published Feb 24, 2024, 2:22 PM IST

ತುಕಾಲಿ ಸಂತು ಅವರು ಸಂದರ್ಶನವೊಂದರಲ್ಲಿ ಹೇಳಿರುವ ಮಾತೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ನಿರೂಪಕಿ ಅನುಶ್ರೀ ಜತೆ ಮಾತನಾಡುತ್ತಿದ್ದ ತುಕಾಲಿ ಸಂತುಗೆ ಅನುಶ್ರೀ ಪ್ರಶ್ನೆಯೊಂದನ್ನು ಕೇಳಿದ್ದಾರೆ..


ಬಿಗ್ ಬಾಸ್ ಖ್ಯಾತಿಯ ತುಕಾಲಿ ಸಂತು ಅವರು ಸಂದರ್ಶನವೊಂದರಲ್ಲಿ ಹೇಳಿರುವ ಮಾತೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ನಿರೂಪಕಿ ಅನುಶ್ರೀ ಜತೆ ಮಾತನಾಡುತ್ತಿದ್ದ ತುಕಾಲಿ ಸಂತುಗೆ ಅನುಶ್ರೀ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದಕ್ಕೆ ಉತ್ತರ ಹೇಳಿದ ತುಕಾಲಿ ಸಂತು ಮಾತೀಗ ಕರ್ನಾಟಕದ ತುಂಬಾ ಓಡಾಡುತ್ತಿದೆ, ಕಾರಣ, ತುಕಾಲಿ ಸಂತು ಸತ್ಯ ಹೇಳಿದ್ದಾರೆ ಎಂದು ಕೆಲವರು, ಅವರು ತಮಾಷೆಗೆ ಹಾಗೆ ಹೇಳಿದ್ದಾರೆ ಎಂದು ಹಲವರು ಆ ಬಗ್ಗೆ ಚರ್ಚೆ ಮಾತೊಡಗಿದ್ದಾರೆ. 

ಹಾಗಿದ್ದರೆ ಅನುಶ್ರೀ ಪ್ರಶ್ನೆಯೇನಿತ್ತು, ಅದಕ್ಕೆ ತುಕಾಲಿ ಸಂತು ಕೊಟ್ಟಿರುವ ಉತ್ತರವೇನು? ಅನುಶ್ರೀ 'ಸಂತು ಬಿಗ್ ಬಾಸ್ ಫೈನಲ್‌ಗೆ ರೀಚ್ ಆದ್ರೂನೂ ಹಿಟ್ ಆಗಿರೋದು ಮಾನಸ.. ಇದ್ರ ಬಗ್ಗೆ ನಿಮ್ಗೆ ಎಷ್ಟು ನೋವಿದೆ' ಎಂದು ತುಕಾಲಿ ಸಂತು ಅವರನ್ನು ಕೇಳಿದ್ದಾರೆ ಅನುಶ್ರೀ. ಅದಕ್ಕೆ ಉತ್ತರವಾಗಿ 'ಹೌದಕ್ಕಾ, ತುಂಬಾ ನೋವಿದೆ. ನಾನು ನೂರಾಹನ್ನೊಂದು ದಿನದಲ್ಲಿ ಮಾಡದೇ ಇರುವುದನ್ನು ಅವಳು ಒಂದೇ ದಿನದಲ್ಲಿ ಏನ್ ಮಾಡಿದ್ಲು ಅಂತ ಗೊತ್ತಾಗ್ತಾ ಇಲ್ಲ. 

Tap to resize

Latest Videos

undefined

ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಯ್ತು; ಯಶ್ ಫ್ಯಾನ್ಸ್ ಮನದಲ್ಲಿ ನೂರಾರು ಪ್ರಶ್ನೆಗಳು!

ಟಿವಿ ಇಂಟರ್‌ವ್ಯೂದವ್ರು ಬಂದ್ರೂ ಕೂಡ 'ಸಂತೂ ಅವ್ರೇ ನೀವು ಸೂಪರ್ ಆಗಿ ಮಾಡಿದೀರ.. ನಿಮ್ ಹೆಂಡ್ತಿ ಇದ್ರೆ ಕರಿಸ್ತೀರಾ. ಸ್ವಲ್ಪ ವೀಡೀಯೋ ಮಾಡ್ಬೇಕು' ಅಂತಾರೆ. ಮುಖಮುಖಕ್ಕೆ ಹೊಡ್ದುಬಿಡ್ಬೇಕು ಅನ್ಸುತ್ತೆ ಒಂದೊಂದ್ ಸಾರಿ. ಆದ್ರೂ ಏನೋ ಹೆಮ್ಮೆ, ನನ್ ಹೆಂಡ್ತಿನೂ ಟಾಪ್‌ ಆಗಿ ಬೆಳೆದವ್ಳಲ್ಲ ಅಂತ.. ಆದ್ರೂ ದುಃಖ ಆಗುತ್ತೆ ಅಕ್ಕಾ ಒಂದೊಂದ್ ಸಾರಿ.. 'ಎಂದಿದ್ದಾರೆ. 

ನಟಿ ಸಂಯುಕ್ತಾ ಹೆಗಡೆ ಕಾಲಿಗೆ ಗಾಯ; ಕ್ರೀಂ ಸಿನಿಮಾ ಶೂಟಿಂಗ್ ಸಮಯದಲ್ಲಿ ನಡೆದ ಅವಘಡ

ಅದಕ್ಕೆ ಅನುಶ್ರೀ ಅವರು 'ಆಗುತ್ತೆ, ಆ ಟೈಮ್‌ನಲ್ಲಿ ಏನ್ ಮಾಡ್ತೀರಾ ದುಃಖ ಆದಾಗ' ಎಂದು ಕೇಳಲು ಸಂತು ' ದುಃಖ ಆದಾಗ ಏನ್ ಮಾಡೋದು.. ಅಳೋ ತರ ನಗೋದು.. ಈ ಕಡೆ ಸೈಡ್‌ಗೆ ಬಂದು ಅಳೋದು, ಎಂಥ ಪರಿಸ್ಥಿತಿಗೆ ಬಂದ್ಬಿಟ್ಟೆ ನಾನು ಅಂತ.. ' ಎಂದಿದ್ದಾರೆ ತುಕಾಲಿ ಸಂತು.. ಅನುಶ್ರೀ ಸೇರಿದಂತೆ ಅಲ್ಲಿದ್ದವರು ಸಂತು ಮಾತು ಕೇಳಿ ನಗೆಗಡಲಿನಲ್ಲಿ ತೇಲಾಡಿದ್ದಾರೆ.

ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಸಂಯೋಜಕ ಗುರುಕಿರಣ್ ಏನ್ ಹೇಳ್ತಿದಾರೆ ನೋಡ್ರೀ! 

click me!