ಹೆಂಡ್ತಿಯನ್ನು ಯಾಕೆ ಅಷ್ಟು ಲವ್​ ಮಾಡ್ತೀರಿ ಅಂತ ಯುವತಿ ಕೇಳಿದಾಗ ಹೀಗೆ ಹೇಳೋದಾ ಬಿಗ್​ಬಾಸ್​ ವಿನಯ್​?

By Suvarna News  |  First Published Feb 24, 2024, 2:22 PM IST

ಬಿಗ್​ಬಾಸ್​ ಖ್ಯಾತಿಯ ವಿನಯ್​ ಗೌಡ ಅವರು ಪತ್ನಿಯನ್ನು ಯಾಕೆ ಅಷ್ಟು ಪ್ರೀತಿಸ್ತಾರೆ ಎಂದು ಎದುರಾದ ಪ್ರಶ್ನೆಗೆ ಅವರು ಹೇಳಿದ್ದೇನು ಕೇಳಿ...
 


ಬಿಗ್​ಬಾಸ್​ ಸೀಸನ್​ 10 ಮುಗಿದು ಹಲವು ದಿನಗಳೇ ಕಳೆದಿದ್ದರೂ ಇದರ ಗುಂಗಿನಿಂದ ಫ್ಯಾನ್ಸ್​ ಹೊರಕ್ಕೆ ಬರಲಿಲ್ಲ.    ಬಿಗ್​ಬಾಸ್​ ಮನೆಯಿಂದ ಬಂದ ಸ್ಪರ್ಧಿಗಳೆಲ್ಲರೂ ಬಹುದೊಡ್ಡ ಸೆಲೆಬ್ರಿಟಿಗಳಾಗಿ ಬದಲಾಗುತ್ತಾರೆ. ಅವರನ್ನು ಒಂದಿಷ್ಟು ಜನರು ನೋಡುವ ದೃಷ್ಟಿಯೇ ಬದಲಾಗುತ್ತದೆ.   ಅದರಲ್ಲಿಯೂ   ಬಿಗ್​ಬಾಸ್ ವಿನ್ನರ್​ ಎಂದರೆ ಅವರ ರೇಂಜೇ ಬೇರೆ. ಅವರ ಅಭಿಮಾನಿಗಳು ಖುಷಿ ಪಡುವ ರೀತಿಯೇ ಬೇರೆ.  ಅದೇ ರೀತಿ ಇದೀಗ ಬಿಗ್​ಬಾಸ್​ ಸೀಸನ್​ 10 ವಿನಯ್​ ಅವರು,  ಬಹುದೊಡ್ಡ ಸೆಲೆಬ್ರಿಟಿಯಾಗಿದ್ದಾರೆ.   ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಬಿಗ್​ಬಾಸ್​ನ ಕೆಲವು ಸ್ಪರ್ಧಿಗಳು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​ನ ವಿನಯ್​, ಕಾರ್ತಿಕ್​, ಸಂಗೀತಾ ಶೃಂಗೇರಿ ಹಾಗೂ ಡ್ರೋನ್​ ಪ್ರತಾಪ್​ ಕಾಣಿಸಿಕೊಂಡಿದ್ದಾರೆ.  ಇದೇ ವೇದಿಕೆಯ ಮೇಲೆ ಪರ್ಫಾಮ್​ ಮಾಡಿದ್ದಾರೆ. 

 ಈ ಸಂದರ್ಭದಲ್ಲಿ ವಿನಯ್​ ಅವರಿಗೆ ಅಲ್ಲಿ ನೆರೆದಿದ್ದ ಯುವತಿರು ಕೆಲವೊಂದು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಹೆಂಡ್ತಿಯನ್ನು ನೀವು ಅಷ್ಟೆಲ್ಲಾ ಲವ್​ ಮಾಡೋದು ಯಾಕೆ ಎಂದು ಯುವತಿಯೊಬ್ಬರು ಪ್ರಶ್ನಿಸಿದರು. ಈ ಪ್ರಶ್ನೆ ಕೇಳಿ ಎಲ್ಲರೂ ಗೊಳ್ಳೆಂದು ನಕ್ಕರು. ಇದಕ್ಕೆ ತಮಾಷೆಯಾಗಿ ಉತ್ತರ ಕೊಟ್ಟ ವಿನಯ್​ ಅವರು, ಲವ್​ ಮಾಡೋಕೆ ನನ್ನ ಹತ್ರ ಬೇರೆ ಆಪ್ಷನ್​ ಇಲ್ಲ, ಬೇರೆ ಆಪ್ಷನ್​ ಬೇಡ ಅಂತನೇ ಅವಳನ್ನು ಲವ್​ಮಾಡ್ತಿರೋದು ಎಂದ್ರು. ಆಗ ಆ ಯುವತಿ ನಿಮ್ಮಂಥ ಎಲ್ಲರಿಗೂ ಸಿಗಲಿ ಎಂದು ಹೇಳಿದಾಗ, ವಿನಯ್​ ಫುಲ್​ ಖುಷ್​ ಆದ್ರು. ಇದೇ ವೇಳೆ ವಿನಯ್​ ಆನೆ ಬಂತೊಂದಾನೆಯನ್ನು ತಮ್ಮದೇ  ಆದ ಶೈಲಿಯಲ್ಲಿ ಹೇಳಿ ಮನರಂಜಿಸಿದರು. 

Tap to resize

Latest Videos

ಬಿಗ್​ಬಾಸ್​ನಲ್ಲಿ ವಿನಯ್​ ಸದಾ ಆಕ್ರಮಣಿಕಾರಿಯಾಗಿ ಇರ್ತಿದ್ದುದು ಯಾಕೆ? ಅವರ ಬಾಯಲ್ಲೇ ಕೇಳಿ...

ಅಂದಹಾಗೆ, ಬಿಗ್​ಬಾಸ್​ನಲ್ಲಿ ಜಗಳದ ಮೂಲಕ ಅತಿ ಹೆಚ್ಚು ಸದ್ದು ಮಾಡಿದವರಲ್ಲಿ ವಿನಯ್​ ಗೌಡ ಒಬ್ಬರು. ವಿನಯ್​ ಮತ್ತು ಡ್ರೋನ್​ ಪ್ರತಾಪ್​ ನಡುವಿನ ಕಾಳಗ, ಜಟಾಪಟಿ ಬಿಗ್​ಬಾಸ್​ ವೀಕ್ಷಕರಿಗೆ ತಿಳಿದದ್ದೇ. ಕೆಲವರು ವಿನಯ್​ ಪರವಾಗಿ ನಿಂತಿದ್ದರೆ, ಇನ್ನು ಕೆಲವರು ಡ್ರೋನ್​ ಪ್ರತಾಪ್​ ಮಾಡುತ್ತಿರುವುದು ಸರಿಯೆನ್ನುತ್ತಿದ್ದರು. ವೀಕ್ಷಕರಲ್ಲಿ ಕೂಡ ಇವರಿಬ್ಬರ ಜಗಳದ ಕುರಿತು ಭಿನ್ನ ಅಭಿಪ್ರಾಯಗಳೇ ವ್ಯಕ್ತವಾಗುತ್ತಿದ್ದವು. ಕೆಲವರು ವಿನಯ್​ ಸುಮ್ಮನೇ ಪ್ರವೋಕ್​ ಮಾಡ್ತಿದ್ದಾರೆ ಎಂದರೆ ಇನ್ನು ಕೆಲವರು ಡ್ರೋನ್​ ಪ್ರತಾಪ್​ ಪ್ರವೋಕ್​ ಮಾಡುವುದು ಎನ್ನುತ್ತಿದ್ದರು. ಒಟ್ಟಿನಲ್ಲಿ ಇವರಿಬ್ಬರ ಜಗಳ ಹಾಟ್​ ಟಾಪಿಕ್​ ಆಗಿತ್ತು. ಡ್ರೋನ್​ ಪ್ರತಾಪ್​ ಜೊತೆ ಮಾತ್ರವಲ್ಲದೇ ವಿನಯ್​ ಎಂದರೆ ಹಲವರ ಕಣ್ಣಿನಲ್ಲಿ ಇವರೊಬ್ಬರು ಅಗ್ರೀಸಿವ್​(agressive) ಅಂದರೆ ಆಕ್ರಮಣಕಾರಿ ಎನ್ನಿಸಿದ್ದು ಉಂಟು. ಸೋಷಿಯಲ್​ ಮೀಡಿಯಾಗಳಲ್ಲಿಯೂ ಇವರು ಗೆಲ್ಲಬೇಕು ಎಂದು ಹಲವು ಅಭಿಮಾನಿಗಳು ಹೇಳುತ್ತಿದ್ದರೂ, ಇವರು ಸಿಟ್ಟಿನ ಮನುಷ್ಯ ಎಂದೇ ಹೇಳುತ್ತಿದ್ದವರು ಹಲವರು.

ಇದಕ್ಕೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದ ವಿನಯ್​ ಅವರು, ಬಿಗ್​ಬಾಸ್​ ಎನ್ನುವುದು ಆಟ. ನಾನು ಅಲ್ಲಿ ಆರ್ಟಿಫಿಷಿಯಲ್​ ಆಗಿ ಆಡಲು ಇಷ್ಟಪಡುವುದಿಲ್ಲ. ಆಟದ ವಿಷಯ ಬಂದಾಗ ಎಲ್ಲರೂ ಗೆಲ್ಲಲೇಬೇಕು ಎಂದೇ ಬಂದಿರುವವರು. ಆ ಸಮಯದಲ್ಲಿ ಆಟ ಎಂದು ಬಂದಾಗ ಈ ಸಿಟ್ಟು, ಕೋಪ ತಾಪ ಸಹಜ ಎಂದಿದ್ದರು. ಜೊತೆಗೆ ಇಲ್ಲಷ್ಟೇ ಅಲ್ಲ, ಮಗನ ಜೊತೆ ಆಟವಾಡುವಾಗಲೂ ಹೀಗೆಯೇ ಎಂದಿದ್ದರು.  ಅಂದಹಾಗೆ ವಿನಯ್​ ಅವರ ಪತ್ನಿಯ ಹೆಸರು ಅಕ್ಷತಾ ಗೌಡ. 

ಸಂಗೀತಾ ಮದ್ವೆಯಾಗೋ ಹುಡ್ಗ ಹೊಸಪೇಟೆಯಲ್ಲೇ ಇದ್ದಾನೆ ಅಂದಾಗ ಹೇಗಿತ್ತು ರಿಯಾಕ್ಷನ್?
 

click me!