ಬಿಗ್ ಬಾಸ್ ಕನ್ನಡ ಶೋ ವೀಕ್ಷಿಸಲು ಹಲವು ದಾರಿಗಳಿವೆ; ಚಿಂತೆ ಬಿಟ್ಟು ಬಿಡಿ..!

By Shriram Bhat  |  First Published Oct 5, 2023, 12:49 PM IST

ರಾತ್ರಿ 9.30ರ ಪ್ರಸಾರ ಮಿಸ್ ಮಾಡಿಕೊಂಡವರು ರಿಪೀಟ್ ಟೆಲೆಕಾಸ್ಟ್ ನೋಡಬಹುದು. ಅಥವಾ ಚಾನೆಲ್‌ನ ವೆಬ್‌ಸೈಟ್ ಹಾಗೂ ಮೊಬೈಲ್ Appನಲ್ಲಿ ಕೂಡ ನೋಡಬಹುದು. ಟ್ವಿಟ್ಟರ್ (X), ಇನ್‌ಸ್ಟಾಗ್ರಾಂ ಹಾಗೂ ಪೇಸ್‌ಬುಕ್ ಮುಂತಾದ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಈ ಶೋ ವೀಕ್ಷಿಸಬಹುದು. 'ಜಿಯೋ ಸಿನಿಮಾ'ದಲ್ಲಿ ಸಹ ಈ ಶೋ ಪ್ರಸಾರವಾಗಲಿದೆ.


ಕಲರ್ಸ್ ಕನ್ನಡ ಬಿಗ್ ಬಾಸ್-10 ಶೋ ಅಕ್ಟೋಬರ್ 8, 2023ಕ್ಕೆ ಶುರುವಾಗಲಿದೆ. ಇನ್ನೇನು 3 ದಿನಗಳಷ್ಟೇ ಬಾಕಿ ಇದೆ. ಈ ಬಿಗ್ ಬಾಸ್ ಹಬ್ಬವನ್ನು ನೋಡಲು ಕನ್ನಡನಾಡಿನ ಕಿರುತೆರೆ ವೀಕ್ಷಕರು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಪ್ರತಿ ದಿನ ರಾತ್ರಿ '9.30 ರಿಂದ 10.30'ರವರೆಗೆ ಬಿಗ್ ಬಾಸ್ ಕನ್ನಡ-10 ಪ್ರಸಾರವಾಗಲಿದೆ. ಮೊದಲ ಎಪಿಸೋಡ್ ಭಾನುವಾರ 08 ಅಕ್ಟೋಬರ್ 2023ರಂದು ಸಂಜೆ '6-00' ಗಂಟೆಗೆ ಪ್ರಸಾರವಾಗಲಿದ್ದು, ಅಕ್ಟೋಬರ್ 9 ರಿಂದ ಶೋ ಪ್ರಸಾರದ ಟೈಮ್ ಪ್ರತಿ ದಿನ ರಾತ್ರಿ 9.30. ಬರೋಬ್ಬರಿ ಒಂದು ತಾಸು ಬಿಗ್ ಬಾಸ್ ಶೋ ಪ್ರಸಾರ ಕಾಣಲಿದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆದಿದೆ. 

ಅಕ್ಟೋಬರ್ 08, 2023ರಿಂದ ಸಂಜೆ 6.00 ಗಂಟೆಗೆ ಪ್ರಸಾರ ಆಗಲಿರುವ ಬಿಗ್ ಬಾಸ್ ಕನ್ನಡ -10, ಮಾರನೇ ದಿನದಿಂದ ರಾತ್ಮರಿ 9.30ಕ್ಕೆ ಪ್ರಸಾರ ಕಾಣಲಿದೆ. ಅದೇ ದಿನ ಮತ್ತೆ ರಿಪೀಟ್ ಪ್ರಸಾರ ಆಗಲಿದೆ. ಹೀಗಾಗಿ 9.30ಕ್ಕೆ ಈ ಶೋ  ನೋಡಲು ಮಿಸ್ ಆಗಿಬಿಟ್ಟರೆ, ಚಿಂತೆ ಮಾಡುವ ಅಗತ್ಯವೇನಿಲ್ಲ. ರಾತ್ರಿ 9.30ರ ಪ್ರಸಾರ ಮಿಸ್ ಮಾಡಿಕೊಂಡವರು ರಿಪೀಟ್ ಟೆಲೆಕಾಸ್ಟ್ ನೋಡಬಹುದು. ಅಥವಾ ಚಾನೆಲ್‌ನ ವೆಬ್‌ಸೈಟ್ ಹಾಗೂ ಮೊಬೈಲ್ Appನಲ್ಲಿ ಕೂಡ ನೋಡಬಹುದು. ಟ್ವಿಟ್ಟರ್ (X), ಇನ್‌ಸ್ಟಾಗ್ರಾಂ ಹಾಗೂ ಪೇಸ್‌ಬುಕ್ ಮುಂತಾದ ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಈ ಶೋ ವೀಕ್ಷಿಸಬಹುದು. 'ಜಿಯೋ ಸಿನಿಮಾ'ದಲ್ಲಿ ಸಹ ಈ ಶೋ ಪ್ರಸಾರವಾಗಲಿದೆ.

Tap to resize

Latest Videos

ನಟ 'ಲವ್ ಗುರು' ತರುಣ್ ಚಂದ್ರ ಬಿಗ್ ಬಾಸ್ 10 ಮನೆಗೆ ಬರಲಿದ್ದಾರೆ; ಗಾಸಿಪ್ or ಕನ್ಪರ್ಮ್?

ಈ ಬಾರಿಯ ಬಿಗ್ ಬಾಸ್ ಕನ್ನಡ ಮನೆ ಕೂಡ ಹೊಸದಾಗಿದೆ. ಬೆಂಗಳೂರಿನ ದೊಡ್ಡ ಆಲದಮರದ ಸಮೀಪ ಬೃಹತ್ ಎನ್ನಬಹುದಾದ ಮನೆ ಈ ಸೀಸನ್ ಶೋಗಾಗಿ ನಿರ್ಮಾಣವಾಗಿದೆ. ಇಲ್ಲಿಯವೆರೆಗೆ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇದ್ದ ಮನೆಗಿಂತ ಈ ಮನೆ ತುಂಬಾ ವಿಶಾಲವಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಮನೆ ಭಾರತದಲ್ಲಿ ನಡೆಯುತ್ತಿರುವ ಎಲ್ಲಾ ಬಿಗ್ ಬಾಸ್ ಶೋ ಮನೆಗಳಿಗಿಂತಲೂ ದೊಡ್ಡದಾಗಿದೆ ಎಂಬ ಮಾಹಿತಿ ಕೂಡ ಬಂದಿದೆ. 

ಬಿಗ್ ಬಾಸ್ ಕನ್ನಡ -10 ಮನೆಗೆ 'ಸಿಂಗರ್' ಆಶಾ ಭಟ್ ಬಲಗಾಲಿಟ್ಟು ಬರಲಿದ್ದಾರಾ?

ಒಟ್ಟಿನಲ್ಲಿ, ಈ ಬಾರಿಯ ಕಲರ್ಸ್ ಕನ್ನಡ ಬಿಗ್ ಬಾಸ್-10 ಶೋ ಭಾರೀ ನಿರೀಕ್ಷೆ ಹುಟ್ಟುಹಾಕಿರುವುದಂತೂ ಸುಳ್ಳಲ್ಲ. ಹೊಸ ಮನೆ, ಹೊಸ ಸ್ಪರ್ಧಿಗಳು ಹಾಗೂ ಹೊಸದು ಎಂಬಷ್ಟು ಗ್ರಾಂಡ್‌ ಆಗಿ ಈ ಸೀಸನ್ ನಡೆಯಲಿದೆ ಎನ್ನಲಾಗುತ್ತಿದೆ. ಕಳೆದ ಬಾರಿಗಿಂತ ಹೆಚ್ಚು ಗೇಮ್‌ಗಳು ಇರಲಿದ್ದು ಹೆಚ್ಚು ಡ್ರಾಮಾಗಳೂ ಸಹ ಇರಲಿವೆ ಎನ್ನಲಾಗುತ್ತಿದೆ. ಅಕ್ಟೋಬರ್ 7ರಮದು 6.00ಕ್ಕೆ ಪ್ರೀಮಿಯರ್ ಶೋ ನೋಡಿ ಬಳಿಕ ಬಿಗ್ ಬಾಸ್ ಶೋ ನೋಡಲು ರಾತ್ರಿ 9.30 ಗಂಟೆಗೆ ರೆಡಿಯಾಗಿ!

click me!