ಗೆಳೆಯ, ಗಾನಾ ಬಜಾನಾ, ಸ್ನೇಹಿತರು, ಒಂದು ಕ್ಷಣದಲ್ಲಿ, ಲವ್ ಗುರು, ಪದೇ ಪದೇ ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟ ತರುಣ್ ಚಂದ್ರ, ನಟ ಪ್ರಜ್ವಲ್ ದೇವರಾಜ್ ಅವರ ಕ್ಲೋಸ್ ಫ್ರಂಡ್ ಎಂಬುದು ಸಿನಿಮಾ ಇಂಡಸ್ಟ್ರಿಯಲ್ಲಿ ಹಿಂದಿನಿಂದಲೂ ಕೇಳಿಬರುತ್ತಿರುವ ಮಾತು.
ಸ್ಯಾಂಡಲ್‌ವುಡ್ ನಟ ತರುಣ್ ಚಂದ್ರ ಬಿಗ್ ಬಾಸ್ ಸೀಸನ್ 10ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ತರುಣ್ ಚಂದ್ರ ಇತ್ತೀಚೆಗೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಕೊಂಡಿಲ್ಲ. ಅವರು ಅನವಶ್ಯಕವಾಗಿ ಯಾವುದೇ ವಿವಾದಗಳಲ್ಲಿ ಕೂಡ ಮೂಗು ತೂರಿಸಿ ಸುದ್ದಿ ಆಗುವ ಜಾಯಮಾನದವರೂ ಅಲ್ಲ. ಆದರೂ ನಟ ತರುಣ್ ಚಂದ್ರ ಬಗ್ಗೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಗೊತ್ತಿದೆ. ಕಾರಣ ಅವರು ಸುಮಾರು 10 ರಿಂದ 15 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಗೆಳೆಯ, ಗಾನಾ ಬಜಾನಾ, ಸ್ನೇಹಿತರು, ಒಂದು ಕ್ಷಣದಲ್ಲಿ, ಲವ್ ಗುರು, ಪದೇ ಪದೇ, ಪರಿಚಯ ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟ ತರುಣ್ ಚಂದ್ರ, ನಟ ಪ್ರಜ್ವಲ್ ದೇವರಾಜ್ ಅವರ ಕ್ಲೋಸ್ ಫ್ರಂಡ್ ಎಂಬುದು ಸಿನಿಮಾ ಇಂಡಸ್ಟ್ರಿಯಲ್ಲಿ ಹಿಂದಿನಿಂದಲೂ ಕೇಳಿಬರುತ್ತಿರುವ ಮಾತು. ಮೊದಲೆಲ್ಲ ಬಹಳಷ್ಟು ಕಾರ್ಯಕ್ರಮಗಳಲ್ಲಿ ತರುಣ್ ಮತ್ತು ಪ್ರಜ್ವಲ್ ದೇವರಾಜ್ ಒಟ್ಟಾಗಿ ಕಾಣಿಸಿಕೊಂಡಿದ್ದರು ಕೂಡ. ಕೆಲವು ಚಿತ್ರಗಳಲ್ಲಿ ಸಹ ಟವರಿಬ್ಬರೂ ಒಟ್ಟಾಗಿ ನಟಿಸಿದ್ದರು.
ತುಳಿಸಿ ಮನೆ ಬಾಗಿಲಿಗೆ ಬಂದ ಅವಿನಾಶ್; ಇನ್ನೇನು 'ಗ್ರಹಚಾರ' ಕಾದಿದೆಯೋ ಎಂದ ವೀಕ್ಷಕರು
ಅವರಿಬ್ಬರ ಕಾಂಬಿನೇಶನ್ ಚಿತ್ರವಾದ 'ಗೆಳೆಯ'ದಲ್ಲಿ ಅವರಿಬ್ಬರೂ ಎಷ್ಟು ಚೆನ್ನಾಗಿ ನಟಿಸಿದ್ದರು ಎಂದರೆ, ಅವರಿಬ್ಬರೂ ನಿಜವಾದ ಸ್ನೇಹಿತರು ಎಂಬುದು ತೆರೆಯ ಮೇಲೆ ಕೂಡ ಗೊತ್ತಾಗುವಷ್ಟು ಎಂಬ ಮಾತು ಆಗ ಎಲ್ಲೆಡೆ ಚಾಲ್ತಿಗೆ ಬಂದಿತ್ತು. ನಟ ತರುಣ್ ಇತ್ತೀಚೆಗೆ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಕಾರಣಗಳು ಹಲವು ಇರಬಹುದು. ಅವರು ಬೇರೆ ಬಿಸಿನೆಸ್‌ಗಳಲ್ಲಿ ತೊಡಗಿರಬಹುದು ಅಥವಾ, ಅವರಿಗೇ ನಟನೆ 'ಸಾಕು' ಎನಿಸಿರಬಹುದು.
ಅತ್ತಿಗೆ ಚಾರು ಕಾಲಿಗೆ ಬಿದ್ದ ಶ್ರುತಿ; ಸತ್ಯ ಗೊತ್ತಾದ ಬಳಿಕ ರಾಮಾಚಾರಿ ರಿಯಾಕ್ಷನ್ ಏನು?
ಅದೇನೇ ಇರಲಿ, ಇದೀಗ ನಟ ತರುಣ್ ಚಂದ್ರ ಹೆಸರು ಬಿಗ್ ಬಾಸ್ ಸೀಸನ್-10 ನ ಸ್ಪರ್ಧಿಗಳ ಲಿಸ್ಟ್‌ನಲ್ಲಿ ಇದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಇದು ಅಧಿಕೃತ ಮಾಹಿತಿ ಅಲ್ಲ, ಆಗಲು ಸಾಧ್ಯವೂ ಇಲ್ಲ. ಏಕೆಂದರೆ, ಬಿಗ್ ಬಾಸ್ ಮೊದಲ ಸಂಚಿಕೆ ಸ್ಪರ್ಧಿಗಳ ಪರಿಚಯಕ್ಕೆ ಅಂತಲೇ ಮೀಸಲಾಗಿರುವಾಗ ಕಲರ್ಸ್ ಕನ್ನಡ ಅದಕ್ಕೂ ಮೊದಲು ಸ್ಪರ್ಧಿಗಳ ಮಾಹಿತಿ ನೀಡಿ 'ಮೂರ್ಖತನ' ಪ್ರದರ್ಶಿಸಲು ಹೇಗೆ ಸಾಧ್ಯ? ಒಟ್ಟಿನಲ್ಲಿ, ಯಾವುದೋ ಮೂಲದಿಂದ ಈ ಗಾಸಿಪ್ ಹಬ್ಬಿದೆ, ಇದು ನಿಜವೂ ಆಗಿರಬಹುದು.