ಟಿ.ಎನ್​.ಸೀತಾರಾಮ್​ ನಿರ್ದೇಶನದ ಸೀರಿಯಲ್​ನಲ್ಲಿ ನಟಿಸೋ ಆಸೆನಾ? ಈ ಛಾನ್ಸ್​ ಮಿಸ್​ ಮಾಡಿಕೊಳ್ಳಲೇಬೇಡಿ

Published : Sep 22, 2026, 11:54 AM IST
TN Seetaram

ಸಾರಾಂಶ

ಯಾವುದೇ ಹಿನ್ನೆಲೆ ಇಲ್ಲದ ಹೊಸ ಪ್ರತಿಭೆಗಳಿಗೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ತಮ್ಮ ಹೊಸ ಧಾರಾವಾಹಿಯಲ್ಲಿ ನಟಿಸಲು ಸುವರ್ಣಾವಕಾಶ ನೀಡಿದ್ದಾರೆ. ನಾಯಕ, ನಾಯಕಿ ಹಾಗೂ ಪೋಷಕ ಪಾತ್ರಗಳಿಗಾಗಿ ಮೈಸೂರಿನ ಪ್ರಿನ್ಸ್ ಹೋಟೆಲ್‌ನಲ್ಲಿ ಇದೇ 26ರಂದು ಮೆಗಾ ಆಡಿಷನ್ ನಡೆಯಲಿದೆ. ವದಂತಿಗಳಿಗೆ ಕಿವಿಗೊಡದೆ ಆಸಕ್ತರು ತಮ್ಮ ಫೋಟೋದೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರು: ಕಲೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ಕಲೆ ಒಲಿದರೂ ಅದಕ್ಕೊಂದು ವೇದಿಕೆ ಸಿಗದವರೂ ಹಲವರಿದ್ದಾರೆ. ಅದರಲ್ಲಿಯೂ ಅಭಿನಯಕ್ಕೆ ಹಲವು ವೇದಿಕೆಗಳು ತೆರೆದಿದ್ದರೂ, ಅದೃಷ್ಟ ಇದ್ದವರಿಗೆ ಮಾತ್ರ ಅದು ದಕ್ಕುತ್ತದೆ. ಇನ್ನು ಸೀರಿಯಲ್​, ಸಿನಿಮಾಗಳಲ್ಲಿ ಮಿಂಚಬೇಕು ಎಂದರೆ ಬರೀ ಅದೃಷ್ಟ ಇದ್ದರೆ ಸಾಲದು, ಗಾಡ್​ಫಾದರ್​ಗಳು ಬೇಕೇ ಬೇಕು ಎನ್ನುವ ಸ್ಥಿತಿ ಇದೆ. ಅಪ್ಪ-ಅಮ್ಮನೋ ಇಲ್ಲವೇ ಕುಟುಂಬದಲ್ಲಿ ಯಾರಾದರೂ ಸ್ಟಾರ್​ ನಟ-ನಟಿಯರಾಗಿದ್ದರೆ ಅವರಿಗೆ ಸುಲಭದಲ್ಲಿ ಅವಕಾಶ ದಕ್ಕುವುದು ಇದೆ. ಯಾವುದೇ ಬ್ಯಾಕ್​ಗ್ರೌಂಡ್​ ಇಲ್ಲದೆಯೇ ಬಣ್ಣದ ಲೋಕದಲ್ಲಿ ಮಿಂಚುತ್ತಿರುವವರೂ ಇದ್ದರೂ ಅಂಥವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ನಿಮ್ಮಲ್ಲಿಯೂ ನಟನೆಯ ಟ್ಯಾಲೆಂಟ್​ ಇದ್ದು, ಅವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿರುವಿರಾ?

ನಿಮಗಿದೋ ಸುವರ್ಣಾಕವಾಶ

ಹಾಗಿದ್ದರೆ ನಿಮಗಿದೋ ಸುವರ್ಣಾವಕಾಶವನ್ನು ಕೊಟ್ಟಿದ್ದಾರೆ ಖ್ಯಾತ ನಿರ್ದೇಶಕ ಟಿ.ಎನ್​.ಸೀತಾರಾಮನ್​. 'ಮಾಯಾಮೃಗ', 'ಮನ್ವಂತರ', 'ಮುಕ್ತ' ಮತ್ತು 'ಮುಕ್ತ ಮುಕ್ತ' ಮುಂತಾದ ಜನಪ್ರಿಯ ಧಾರಾವಾಹಿಗಳ ಮೂಲಕ ಬ್ಲಾಕ್​ಬಸ್ಟರ್​ ಎನ್ನುವಂಥ ಸೀರಿಯಲ್​ಗಳನ್ನು ನೀಡಿರುವ ಟಿ.ಎನ್​.ಸೀತಾರಾಮನ್​ ಅವರು ಈಗ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಹೊಸ ಸೀರಿಯಲ್​ಗೆ ನಾಯಕ-ನಾಯಕಿ ಮತ್ತು ಪೋಷಕ ಪಾತ್ರಕ್ಕೆ ನಟರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಅವರು ಚಾಲನೆ ನೀಡಿದ್ದಾರೆ.

ಎಲ್ಲಿ ಮೆಗಾ ಆಡಿಷನ್​?

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿರುವ ಅವರು, ಹೊಸ ಸೀರಿಯಲ್​ ಆರಂಭಿಸುತ್ತಿದ್ದೇನೆ. ಅದಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ಇದಕ್ಕಾಗಿ ಆಡಿಷನ್​ ಶುರು ಮಾಡಲಾಗಿದೆ.ಮೊದಲನೆಯ ಆಡಿಷನ್​ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಿನ್ಸ್​ ಹೋಟೆಲ್​ನಲ್ಲಿ ನಡೆಯಲಿದೆ. ಇದೇ ತಿಂಗಳ 26ರಂದು ಆಡಿಷನ್​ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಂದರ್ಶನ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಿಮ್ಮ ಫೋಟೋ ಜೊತೆ ಬರುವಂತೆ ತಿಳಿಸಲಾಗಿದೆ. ಇನ್ನೇಕೆ ತಡ, ಸೀರಿಯಲ್​ನಲ್ಲಿ ಕಾಣಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿರುವವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಸೀರಿಯಲ್​, ಸಿನಿಮಾಗಳಲ್ಲಿ ನಟಿಸುವ ಅವಕಾಶ ನೀಡುವುದಾಗಿ ಹೇಳಿ ಮೋಸ ಮಾಡುವವರು ಹಲವರು ಇದ್ದಾರೆ. ಅವರಿಗೆ ಬಲಿಯಾದವರು ಅದರಲ್ಲಿಯೂ ಹೆಚ್ಚಾಗಿ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಅಂಥ ಯಾವುದೇ ವದಂತಿಗಳಿಗೆ ಕಿವಿಗೊಡದೇ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಗಳ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಲಕ್ಷ್ಮೀ ಬಾರಮ್ಮ’ ನಟಿ
ಸೊಂಟ ಕಾಣಿಸುವಂಥ ಪೋಸ್ಟ್‌ ಹಾಕಿದ ಆಶಿಕಾ ರಂಗನಾಥ್‌, ಪೆದ್ದಿ ಸಿನಿಮಾ ವಿಚಾರವಿಟ್ಟು ಟ್ರೋಲ್‌ ಮಾಡಿದವರಿಗೆ ತಿರುಗೇಟು ನೀಡಿದ ನಟಿ