
ಬಿಗ್ ಬಾಸ್ ಮನೆಯಲ್ಲಿ ಡ್ರೋಣ್ ಪ್ರತಾಪ್‌ರನ್ನು ವಿನಯ್ ಗೌಡ ಟಾರ್ಗೆಟ್ ಮಾಡಿದ್ದಾರಾ? ಹೀಗೊಂದು ಪ್ರಶ್ನೆ ವೀಕ್ಷಕರ ವಲಯದಲ್ಲಿ ಮೂಡುವಂತಾಗಿದೆ. ಅದಕ್ಕೆ ಕಾರಣವಾಗಿರುವುದು ಇಂದು ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಪ್ರೋಮೋ ಮೂಲಕ ಎನ್ನಬಹುದು. ಹೌದು, ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಟಾರ್ಗೆಟ್ ಆಗುತ್ತಿರುವುದು ಹೊಸದೇನೂ ಅಲ್ಲ.
ಈ ಮೊದಲು ಸ್ನೇಹಿತ್ ಗೌಡ ಮತ್ತು ತುಕಾಲಿ ಸಂತೋಷ್ ಪ್ರತಾಪ್‌ನನ್ನು ಹಿಗ್ಗಾಮುಗ್ಗಾ ಟೀಕೆ ಮಾಡಿದ್ದರು. ಅದನ್ನೆಲ್ಲ ಸಹಿಸಿಕೊಂಡಿರುವ ಪ್ರತಾಪ್ ಇದೀಗ ನಿಧಾನವಾಗಿ ವೀಕ್ಷಕರ ಅನುಕಂಪ ಗಿಟ್ಟಿಸತೊಡಗಿದ್ದಾರೆ. ಆದರೆ, ಸ್ನೇಹಿತ್ ಹಾಗೂ ಸಂತು ಅವರಿಂದ ತಪ್ಪಿಸಿಕೊಂಡೆ ಎಂದು ಡ್ರೋಣ್ ಪ್ರತಾಪ್ ನಿಟ್ಟುಸಿರು ಬಿಡುವಷ್ಟರಲ್ಲಿ ವಿನಯ್ ಗೌಡ ಪ್ರತಾಪ್‌ನನ್ನು ಬೈಯುವ ಮೂಲಕ ಅವಮಾನ ಮಾಡಿದ್ದಾರೆ. ಪ್ರತಾಪ್ ಅದೇನು ಹೇಳಿದರೋ, ವಿನಯ್‌ಗೆ ಅದನ್ನು ಯಾರು ಅದ್ಯಾವ ರೀತಿ ಸುದ್ದಿ ಮುಟ್ಟಿಸಿದರೋ ಏನೋ!
ಒಟ್ಟಿನಲ್ಲಿ ವಿನಯ್ ಗೌಡ ಪ್ರತಾಪ್ ಅವರನ್ನು ಹಿಗ್ಗಾಮುಗ್ಗಾ ಬೈದಿದ್ದಾರೆ. ಪ್ರತಾಪ್ "ನಾನು ಹಾಗೆಲ್ಲ ಹೇಳಿಲ್ಲ ಬ್ರೋ, ನಾನು ಹೇಳಿದ್ದು.. ಎನ್ನುತ್ತಿದ್ದಂತೆ ವಿನಯ್ ಪ್ರತಾಪ್ ಮಾತಿಗೆ ಓವರ್ ಲ್ಯಾಪ್ ಮಾಡುತ್ತ ಪ್ರತಾಪ್ ಸೈಲೆಂಟ್ ಮೋಡ್‌ಗೆ ಜಾರುವಂತೆ ಮಾಡಿದ್ದಾರೆ. ಪ್ರತಾಪ್ ಕಿಚನ್ ಗೋಡೆಗೆ ಒರಗಿ ಬೇಸರದಿಂದ ಕುಳಿತಲ್ಲಿಗೆ ಪ್ರೊಮೋ ಕಟ್ ಮುಗಿದಿದೆ.
ಡಾಮಿನೇಟ್ ಮಾಡ್ಬೇಡ, ನಿನ್ನ ತೊಂದ್ರೆನ ನಮ್ಮ ತಲೆಗೆ ಕಟ್ಬೇಡ; ತನಿಶಾಗೆ ನಮೃತಾ ಕ್ಲಾಸ್!
ಹಿಂದಿನ ಮತ್ತು ಮುಂದಿನ ಕಥೆಯೇನು ಎಂಬುದನ್ನು ತಿಳಿಯಲು ಇಂದಿನ ಸಂಚಿಕೆ ಮಿಸ್ ಮಾಡದೇ ನೋಡಲೇಬೇಕು. ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಪರಿಸ್ಥಿತಿ ಏನು ಎಂದು ತಿಳಿಯಲು ಇಂದಿನ ಸಂಚಿಕೆ ನೋಡುವ ಕುತೂಹಲ ಹಲವರಿಗೆ ಹತ್ತಿದೆ. ಒಟ್ಟಿನಲ್ಲಿ, ಕಾರ್ತಿಕ್ ಮಹೇಶ್-ಸಂಗೀತಾ ಶೃಂಗೇರಿ ಮತ್ತು ಸ್ನೇಹಿತ್-ಈಶಾನಿ ಲವ್ ಮ್ಯಾಟರ್‌ನಲ್ಲಿ ಮುಳುಗಿದ್ದರೆ, ಪ್ರತಾಪ್ ಹಲವರಿಂದ ಟ್ರೋಲ್‌ಗೆ ಒಳಗಾಗುತ್ತಿದ್ದು, ವೀಕ್ಷಕರ ಅನುಕಂಪ ಗಿಟ್ಟಿಸಿಕೊಳ್ಳುವಲ್ಲಿ ಸಫಲನಾಗುತ್ತಿದ್ದಾನೆ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.