ಡಾಮಿನೇಟ್ ಮಾಡ್ಬೇಡ, ನಿನ್ನ ತೊಂದ್ರೆನ ನಮ್ಮ ತಲೆಗೆ ಕಟ್ಬೇಡ; ತನಿಶಾಗೆ ನಮ್ರತಾ ಕ್ಲಾಸ್!

By Shriram Bhat  |  First Published Oct 13, 2023, 1:11 PM IST

ತನಿಶಾ ಕಣ್ಣೀರಿಗೆ ಕರಗಿದ ಅಲ್ಲಿದ್ದ ಹಲವರು ತನಿಶಾ ಸಮಾಧಾನ ಮಾಡಲು ಮುಂದಾದರು. ಆಗ ನಮೃತಾ ತಮ್ಮ ಮಾತಿನಿಂದ ಸ್ವಲ್ಪ ಹಿಂದೆ ಸರಿದಂತೆ ಕಂಡುಬಂತು. ಒಟ್ಟಿನಲ್ಲಿ, ಬಿಗ್ ಬಾಸ್ ಮನೆ ಇತ್ತೀಚೆಗೆ ಲವ್ ಕಹಾನಿ, ಜಗಳಗಳು, ಮನಸ್ತಾಪಗಳು ಹೆಚ್ಚಾಗಿವೆ.


ಬಿಗ್ ಬಾಸ್ ಮನೆಯಲ್ಲಿ ಜಗಳ, ಮನಸ್ತಾಪಗಳು ಹೆಚ್ಚಾಗುತ್ತಿವೆ. ಟೀಕೆಗಳ ಸುರಿಮಳೆ ಸುರಿಯತೊಡಗಿದೆ. ಇದು ಸಹಜ ಎನ್ನಬಹುದು. ಏಕೆಂದರೆ, ಇಲ್ಲಿ ಎಲ್ಲರೂ ಆಡಲು ಬಂದಿರುವುದು, ಗೆಲ್ಲಲು ಬಂದಿರುವುದು. ಎಲ್ಲರ ಕಣ್ಣು ಕೂಡ 50 ಲಕ್ಷ ಗೆದ್ದು ಮನೆಗೆ ಹೋಗಬೇಕು ಎಂಬ ಗುರಿಯೇ ಆಗಿದೆ.  ಮೊದಲ ದಿನ ಎಲ್ಲರೂ ಬಂದ ಹೊಸದು ಎಂಬ ಕಾರಣಕ್ಕೆ 'ದೊಡ್ಮನೆ'ಯೊಳಕ್ಕೆ ಚೆನ್ನಾಗಿಯೇ ಇದ್ದರು. ಆದರೆ, ಎರಡನೇ ದಿನ ಆಗುವಷ್ಟರ ಹೊತ್ತಿಗೆ ಜಗಳಗಳು ಶುರುವಾಗಿವೆ. 

ಜಗಳ ಅಂತ ಬಂದಾಗ ಎಲ್ಲರೂ ನಟಿ ತನಿಶಾ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ನಮೃತಾ ಗೌಡ ಹೆಚ್ಚು ಹೆಚ್ಚು ತನಿಶಾರನ್ನೇ ದೂಷಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರಾ ಎಂಬ ಸಂಶಯ ಹಲವರಿಗೆ ಕಾಡತೊಡಗಿದೆ. ನಮೃತಾ ಹೆಚ್ಚಿನ ವೇಳೆ 'ತನಿಶಾ ಮಾತನಾಡುವ ರೀತಿ ಸರಿಯಿಲ್ಲ, ಡಾಮಿನೇಟಿಂಗ್ ತರ ಇತ್ತು, ಹಾಗೆ ಹೀಗೆ' ಎಂದು ತನಿಶಾರನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. 

Tap to resize

Latest Videos

ನಿನ್ನೆ ರಾತ್ರಿ ಕೂಡ ತನಿಶಾ ಬಗ್ಗೆ ಟೀಕೆ ಮಾಡಿದ ನಮೃತಾ, 'ನೀವು ನಿಮ್ಮ ಎಲ್ಲಾ ಪ್ರಶ್ಟ್ರೇಶನ್‌ಗಳನ್ನು ಬೇರೆಯವರ ಮೇಲೆ ತೋರಿಸಲು ಸಾಧ್ಯವಾಗಲ್ಲ. ಎಲ್ಲಾ ಟೈಮ್ ಜೋರಾಗಿ ಮಾತನಾಡಬೇಡಿ. ಡಾಮಿನೇಟಿಂಗ್ ಮಾಡಬೇಡಿ' ಎನ್ನಲು ತನಿಶಾ 'ನಾನು ಮಾತನಾಡುವುದೇ ಹಾಗೆ. ನಾನು ಯಾರನ್ನೂ ಡಾಮಿನೇಟಿಂಗ್ ಮಾಡುತ್ತಿಲ್ಲ. ಆ ಉದ್ದೇಶವೂ ನನಗಿಲ್ಲ. ಎಲ್ಲದಕ್ಕೂ ನನ್ನನ್ನು ಹೊಣೆ ಮಾಡಬೇಡಿ' ಎಂದು ಹೇಳುತ್ತ ಕಣ್ಣೀರಾದರು. 

ತುಕಾಲಿ, ಸ್ನೇಹಿತ್ ಮತ್ತು ವಿನಯ್‌ ಟ್ರೋಲಿಗರ ಟಾರ್ಗೆಟ್; ನೀವೇನ್ ಕಿತ್ತು ದಬ್ಬಾಕಿದ್ದೀರಾ ಜೀವನದಲ್ಲಿ ಎಂದ ನೆಟ್ಟಿಗರು!

ತನಿಶಾ ಕಣ್ಣೀರಿಗೆ ಕರಗಿದ ಅಲ್ಲಿದ್ದ ಹಲವರು ತನಿಶಾ ಸಮಾಧಾನ ಮಾಡಲು ಮುಂದಾದರು. ಆಗ ನಮೃತಾ ತಮ್ಮ ಮಾತಿನಿಂದ ಸ್ವಲ್ಪ ಹಿಂದೆ ಸರಿದಂತೆ ಕಂಡುಬಂತು. ಒಟ್ಟಿನಲ್ಲಿ, ಬಿಗ್ ಬಾಸ್ ಮನೆ ಇತ್ತೀಚೆಗೆ ಲವ್ ಕಹಾನಿ, ಜಗಳಗಳು, ಮನಸ್ತಾಪಗಳ ಮೂಲಕ ಭಾರೀ ಕುತೂಹಲ ಕೆರಳಿಸತೊಡಗಿದೆ. ಮುಂದಿನ ಸಂಚಿಕೆಗಳಲ್ಲಿ ಏನಾಗಬಹುದು ಎಂಬುದನ್ನು ನೋಡೋಣ!

ಅಬ್ಬಬ್ಬಾ! ಬಿಗ್ ಬಾಸ್ ತನಿಷಾ ಹಾಟ್ ಫೋಟೋ ಎಲ್ಲೆಡೆ ವೈರಲ್

click me!