ಅಭಿ ನೋಡಿ ವಿಲನ್​ ದೀಪಿಕಾನೂ ಬದಲಾಗಿ ಹೋದ್ಲು! ಇನ್ನೇನಿದ್ರೂ ವೀಕ್ಷಕರ ಸರದಿ...!

Published : Oct 24, 2024, 04:42 PM IST
ಅಭಿ ನೋಡಿ ವಿಲನ್​ ದೀಪಿಕಾನೂ ಬದಲಾಗಿ ಹೋದ್ಲು! ಇನ್ನೇನಿದ್ರೂ ವೀಕ್ಷಕರ ಸರದಿ...!

ಸಾರಾಂಶ

ಅಭಿ ನೋಡಿ ವಿಲನ್​ ದೀಪಿಕಾನೂ ಬದಲಾಗಿ ಹೋದ್ಲು! ಇನ್ನೇನಿದ್ರೂ ವೀಕ್ಷಕರ ಸರದಿ...! ಶ್ರೀರಸ್ತು ಶುಭಮಸ್ತು ಸೀರಿಯಲ್​ ಟ್ವಿಸ್ಟ್​ ಇದು.  

ತುಳಸಿ ಗರ್ಭಿಣಿ ಎನ್ನುವ ಸುದ್ದಿ, ನಿಧಿಯನ್ನು ನೋಡಲು ಬಂದ ಗಂಡಿನ ಕಡೆವರನ್ನೂ ಕೆರಳಿಸಿದೆ. ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ತುಳಸಿ ಗರ್ಭಿಣಿ ಎನ್ನುವ ವಿಷಯ ತಿಳಿಯಲಿ ಎನ್ನುವ ಕಾರಣಕ್ಕೆ ದೀಪಿಕಾ ಅವರ ಎದುರು ವಿಷಯ ಕೆದಕಿದ್ದಾಳೆ. ಕೊನೆಗೆ, ತುಳಸಿಯೇ ಗಂಡಿನ ಕಡೆಯವರ ಬಳಿ ಕ್ಷಮೆ ಕೋರಿದರೂ ಅವರು ಅದಕ್ಕೆ ಒಪ್ಪದೇ ಮದುವೆಯೇ ಬೇಡ ಎಂದು ಹೋದರು. ಈ ಸಂದರ್ಭದಲ್ಲಿ ತಾಯಿ ವಿರುದ್ಧ ಮಾತನಾಡಿದರೆ ನಾನು ಸಹಿಸಲ್ಲ ಎಂದು ಅಭಿಯೂ ತುಳಸಿ ಪರ ನಿಂತ. ಶಾರ್ವರಿ ಮತ್ತು ದೀಪಿಕಾ ಇಂಗುತಿಂದ ಮಂಗನಂತಾದರು. ಅಭಿಯ ವರ್ತನೆ ಎಲ್ಲರನ್ನೂ ಅಚ್ಚರಿಗೆ ತಳ್ಳಿತು. ಅದೇ ಇನ್ನೊಂದೆಡೆ, ಶಾರ್ವರಿ ಗಂಡಿನ ಕಡೆಯವರ ಬಳಿ ಮಾತನಾಡಿ, ಮದುವೆಗೆ ಒಪ್ಪಿಸಿದ್ದಾಳೆ. ಮದುವೆಯ ದಿನ ತುಳಸಿ ಯಾರ ಕಣ್ಣಿಗೂ ಬೀಳದಂತೆ ನೋಡಿಕೊಳ್ಳುವುದಾಗಿ ಹೇಳಿದ್ದಾಳೆ.

ಇದು ಒಂದೆಡೆಯಾದರೆ, ಅತ್ತ ದೀಪಿಕಾ, ಬದಲಾದ ಅಭಿಯನ್ನು ನೋಡಿ ಸಿಟ್ಟಾಗಿದ್ದಾಳೆ. ತುಳಸಿ ಗರ್ಭಿಣಿಯಾದ ವಿಷಯ ತೆಗೆದಿದ್ದಾಳೆ. ಅದಕ್ಕೆ ಅಭಿ, ನೋಡು ದೀಪಿಕಾ ಒಂದು ಮಗುವಿಗೆ ಜನ್ಮ ಕೊಡುವುದು ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾನೆ. ಸಮಾಜ ಏನು ಹೇಳುತ್ತದೆ ಎಂದು ನೋಡುವುದಲ್ಲ. ಸಮಾಜ ಬದಲಾಗಬೇಕು ಎನ್ನುತ್ತಾರೆ. ಆ ಬದಲಾವಣೆ ನಮ್ಮಿಂದಲೇ ಆಗಲಿ, ಇದರಲ್ಲಿ ತಪ್ಪು, ಕೆಟ್ಟದ್ದು ಏನಿದೆ ಎನ್ನುತ್ತಲೇ ಅಮ್ಮನ ವಿರುದ್ಧ ಒಂದು ಮಾತೂ ಆಡಬೇಡ ಈ ವಿಷಯದಲ್ಲಿ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಅವನ ಮಾತು ದೀಪಿಕಾಗೂ ಸರಿ ಎನಿಸಿದೆ. ನಾನ್ಯಾಕೆ ಇದರಲ್ಲಿ ತಲೆ ಹಾಕಲಿ ಎನ್ನುವುದು ಅವಳ ಪ್ರಶ್ನೆ. ಒಟ್ಟಿನಲ್ಲಿ ಅಭಿ ನನ್ನವನಾಗಿರಬೇಕುಅಷ್ಟೇ, ಯಾರು ಅಮ್ಮ ಆದ್ರೆ ನನಗೇನು ಎಂದು ಪ್ರಶ್ನಿಸಿಕೊಂಡಿದ್ದಾಳೆ. ಅಲ್ಲಿಗೆ ದೀಪಿಕಾನೂ ಬದಲಾಗುತ್ತಿದ್ದಾಳೆ.

ನೀನೇನೆ ನನ್ನವನು ಎಂದು ಬಾಯ್ಬಿಟ್ಟ ವೈಷ್ಣವಿ, ಎದೆ ಮೇಲೆ ಕಾಲಿಟ್ಟಂಗಾಯ್ತು ಎಂದ ಗಗನ್​!

ಅಷ್ಟಕ್ಕೂ ಇವೆಲ್ಲಾ ಡೈಲಾಗ್​ ಸೀರಿಯಲ್​ ಆ್ಯಕ್ಟರ್ಸ್​ ಕೈಯಲ್ಲಿ ನಿರ್ದೇಶಕರು ಹೇಳಿಸ್ತಿರೋದಕ್ಕೆ ಕಾರಣ, ವೀಕ್ಷಕರಿಂದ ಬಂದಿರುವ ತೀವ್ರ ಪ್ರತಿಕ್ರಿಯೆ! ಹೌದು. ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿ ಗರ್ಭಿಣಿ ಎನ್ನುವ ಸಂಚಿಕೆ ತೋರಿಸಿದಾಗಿನಿಂತಲೂ ತುಳಸಿಯ ವಿರುದ್ಧ ಮಾತ್ರವಲ್ಲದೇ ತುಳಸಿ ಪಾತ್ರಧಾರಿ ಸುಧಾರಾಣಿ ವಿರುದ್ಧವೂ ಒಂದಷ್ಟು ಮಂದಿ ಗರಂ ಆಗಿದ್ದಾರೆ. ಥೂ ಅಸಹ್ಯ... ಈ ವಯಸ್ಸಿನಲ್ಲಿ ಎಂದೆಲ್ಲಾ ಹೇಳುತ್ತಿದ್ದಾರೆ. ಸೀರಿಯಲ್​ ವಿರುದ್ಧ  ಕೆಟ್ಟ ಕೆಟ್ಟ ಪದಗಳ ಪ್ರಯೋಗ ಮಾಡುತ್ತಿದ್ದಾರೆ. ನಿರ್ದೇಶಕರ ವಿರುದ್ಧವೂ ಗರಂ ಆಗಿದ್ದಾರೆ. ಅಜ್ಜಿಯಾಗುವ ಕಾಲದಲ್ಲಿ ಅಮ್ಮ ಆಗುವುದು ಹೇಗೆ ಸಾಧ್ಯ ಎನ್ನುವುದು ಬಹುತೇಕ ಮಂದಿಯ ಅಭಿಮತ. ಇದೊಂದು ಅಸಹ್ಯ ಎಂದೂ ಹೇಳಿದ್ದಾರೆ ಹಲವರು. ತಮ್ಮ ನಡುವೆ ದೈಹಿಕ ಸಂಬಂಧ ಬೇಡ ಎಂದಿದ್ದ ತುಳಸಿ ಮತ್ತು ಮಾಧವ್​ ಹೀಗೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ ಹಲವರು.  ಕಮೆಂಟ್​ ಯಾವ ಮಟ್ಟಿಗೆ ಬಿರುಗಾಳಿ ಎಬ್ಬಿಸಿತ್ತು ಎಂದರೆ ಇದರ ಪ್ರೊಮೋ  ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ ದಿನ,  ಕಮೆಂಟ್​ ಸೆಕ್ಷನ್​ ಆಫ್​ ಮಾಡಲಾಗಿತ್ತು. ಆದರೆ ನೆಟ್ಟಿಗರು ಸುಮ್ನೆ ಇರ್ತಾರಾ? ಬೇರೆ ಸೀರಿಯಲ್​ ಪ್ರೊಮೋಗಳಲ್ಲಿನ ಕಮೆಂಟ್​ ಸೆಕ್ಷನ್​ಗೆ ಬಂದು ಶ್ರೀರಸ್ತು ಶುಭಮಸ್ತು ಸೀರಿಯಲ್​ ಅನ್ನು ಉಗಿಯುತ್ತಿದ್ದರು.
 
ಹಾಗಂತೂ ಈಗಲೂ ಇದರ ಬಗ್ಗೆ ನಿಂದನೆ ತಪ್ಪಲಿಲ್ಲ. ಇದೆಲ್ಲಾ ಆದ ಬಳಿಕ ತುಳಸಿ ಮಗುವನ್ನು ಹೆತ್ತರೆ ಆಕೆಯ ಜೀವಕ್ಕೆ ಅಪಾಯವಿದೆ, ಮಗುವನ್ನು ತೆಗೆಸಬೇಕು ಎಂದು ವೈದ್ಯರು ಹೇಳುತ್ತಾರೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ನೆಟ್ಟಿಗರೆಲ್ಲಾ ಗೆಲುವಿನ ನಗೆ ಬೀರಿದ್ದರು. ತಾವು ಹಾಕಿದ ಕಮೆಂಟ್ಸ್​ಗೆ ನಿರ್ದೇಶಕರು ಹೆದರೇ ಬಿಟ್ಟರು. ತುಳಸಿಯ ಮಗುವನ್ನು ಅಬಾರ್ಟ್​ ಮಾಡಿಸುತ್ತಾರೆ. ಇನ್ನು ಮುಂದೆ ನೆಮ್ಮದಿಯಿಂದ ಸೀರಿಯಲ್​ ನೋಡಬಹುದು. ಅಂತೂ ತಮ್ಮ ಮಾತು ನಡೆಯಿತು ಎಂದೇ ಅಂದುಕೊಂಡರು. ಆದರೆ ಈಗ ಆಗಿದ್ದೇ ಬೇರೆ.  ಇದೀಗ ತುಳಸಿ ಮಗು ಹೆರಲುಮುಂದಾಗಿದ್ದಾಳೆ. ಆಕೆಗೆ ತನ್ನ ಪ್ರಾಣಕ್ಕಿಂತಲೂ ಮುಖ್ಯವಾಗಿದ್ದು ಪೂರ್ಣಿಯ ಮಡಿಲಿಗೆ ಕಂದನನ್ನು ಕೊಡುವುದು. ತಾನು ಮಗುವನ್ನು ಹೆತ್ತು ಅದನ್ನು ಪೂರ್ಣಿಯ ಮಡಿಲಿಗೆ ಹಾಕುವುದಾಗಿ ಹೇಳಿದ್ದಾಳೆ ತುಳಸಿ. ಇದಾದ ಬಳಿಕ, ಈ ಗರ್ಭಧಾರಣೆ ಬಗ್ಗೆ ಸಿರಿ, ಸಮರ್ಥ್​, ಸಂಧ್ಯಾ ಬಾಯಲ್ಲಿ ಇದನ್ನು ವಿರೋಧಿಸುವ ವೀಕ್ಷಕರಿಗೆ ತಿರುಗೇಟು ನೀಡುವ ರೀತಿಯಲ್ಲಿ ನಿರ್ದೇಶಕರು ಡೈಲಾಗ್​ ಹೇಳಿಸಿದ್ದರು. ಈಗ ಅಭಿಯ ಕೈಯಲ್ಲಿ ಹೇಳಿಸಿದ್ದಾರೆ. ದೀಪಿಕಾಳೂ ಬದಲಾಗುತ್ತಿದ್ದಾಳೆ. ಹಾಗಿದ್ರೆ ಇನ್ನೇನಿದ್ರೂ ವೀಕ್ಷಕರ ಸರದಿ ಎನ್ನುವ ಅರ್ಥದಲ್ಲಿದೆ ಈ ಡೈಲಾಗ್​ಗಳು.

ಮಾದಕ ನಟಿ ಮಲ್ಲಿಕಾ ಶೆರಾವತ್​ಗೇ ಕಿಸ್​ ಕೊಡಲು ಬರಲ್ಲ ಎನ್ನೋದಾ ಇಮ್ರಾನ್​? ನಟಿ ಕೊಟ್ಟ ತಿರುಗೇಟು ನೋಡಿ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!