ನೀನೇನೆ ನನ್ನವನು ಎಂದು ಬಾಯ್ಬಿಟ್ಟ ವೈಷ್ಣವಿ, ಎದೆ ಮೇಲೆ ಕಾಲಿಟ್ಟಂಗಾಯ್ತು ಎಂದ ಗಗನ್​!

Published : Oct 24, 2024, 02:41 PM IST
ನೀನೇನೆ ನನ್ನವನು ಎಂದು ಬಾಯ್ಬಿಟ್ಟ ವೈಷ್ಣವಿ, ಎದೆ ಮೇಲೆ ಕಾಲಿಟ್ಟಂಗಾಯ್ತು ಎಂದ ಗಗನ್​!

ಸಾರಾಂಶ

ಸೀತಾ-ರಾಮರ ರಿಯಲ್​ ಲೈಫ್​ನಲ್ಲೂ ಕುಚ್ ಕುಚ್​ ನಡೆಯುತ್ತಿದೆ ಎಂದು ಅಭಿಮಾನಿಗಳು ಪದೇ  ಪದೇ ಹೇಳ್ತಿರೋ ನಡುವೆಯೇ ಹೀಗೆಲ್ಲಾ ಮಾತನಾಡಿದ್ದಾರೆ ತಾರೆಯರು!  

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್‌ ನಾಯಕ, ನಾಯಕಿ ತಮ್ಮ ಕ್ಯೂಟ್‌ನೆಸ್‌ನಿಂದಲೂ ಸಖತ್ ಪಾಪ್ಯುಲರ್‌. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿ ಈ ಕ್ಯೂಟ್ ಹೀರೋ ಹೀರೋಯಿನ್. ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿ ವರ್ಕೌಟ್ ಆಗ್ತಾ ಇದೆ. ಇಬ್ರೂ ಈ ಪಾತ್ರಕ್ಕೆ ಹೇಳಿ ಮಾಡಿಸಿದ ಹಾಗಿದ್ದಾರೆ ಅಂತ ಎಲ್ಲರೂ ಕಮೆಂಟ್ ಮಾಡ್ತಾರೆ.  ಕೆಲ ದಿನಗಳ ಹಿಂದೆ ಇವರಿಬ್ಬರೂ ಸೇರಿ ರೀಲ್ಸ್​ ಮಾಡಿದ್ದರು. ಇದನ್ನು ನೋಡಿದವರು, ಇವರಿಬ್ಬರ ಮಧ್ಯೆ ಖಂಡಿತಾ ಕುಚ್ ಕುಚ್​ ನಡೆಯುತ್ತಿದೆ ಎಂದಿದ್ದರು. ಏಕೆಂದ್ರೆ ಇದರಲ್ಲಿ ಇಬ್ಬರೂ ಸಖತ್ ರೊಮ್ಯಾಂಟಿಕ್ ಆಗಿ  ವೀಡಿಯೋ ಮಾಡಿದ್ದರು. ಇವರಿಬ್ಬರೂ ಅವಿವಾಹಿತರಾಗಿರುವ ಹಿನ್ನೆಲೆಯಲ್ಲಿ ಈ ಜೋಡಿಯ ಮದುವೆ ಮಾಡಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ನಂತರ ರೊಮಾಂಟಿಕ್​ ಸಾಂಗ್​ನ ವಿಡಿಯೋ ನೋಡಿದ ಮೇಲಂತೂ  ಮದುವೆ ಆಗ್ಲಿ ಅನ್ನೋ ಫ್ಯಾನ್ಸ್ ಒತ್ತಡ ಮತ್ತಷ್ಟು ಹೆಚ್ಚಾಗಿದೆ.  

ಇದೀಗ ಜೀ ಕುಟುಂಬ ಅವಾರ್ಡ್​ ಕಾರ್ಯಕ್ರಮದಲ್ಲಿ ಈ ಜೋಡಿಗೆ ಒಂದಿಷ್ಟು ಪ್ರಶ್ನೆ ಕೇಳಲಾಗಿದ್ದು, ಇಲ್ಲಿಯೂ ಅಭಿಮಾನಿಗಳು ಇವರಿಬ್ಬರ ಮದುವೆಯ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇದರಲ್ಲಿ ಸೀತಾಳಿಗೆ ಸಕಲೇಶಪುರಕ್ಕೆ ರಾಮ್​ ಟ್ರಿಪ್​ ಹೋದಾಗ ಮಳೆ ಬಂದ್ರೆ ಯಾವ ಹಾಡು ಹಾಡ್ತೀರಿ ಎಂದಾಗ ಸೀತಾ ಪಾತ್ರಧಾರಿ ವೈಷ್ಣವಿ ಅನಿಸುತಿದೆ ಯಾಕೋ ಇಂದು ... ನೀನೇನೇ ನನ್ನವನೆಂದು ಎಂದಿದ್ದಾರೆ. ಅದಕ್ಕೆ ರಾಮ್​ ಪಾತ್ರಧಾರಿ ಗಗನ್​, ಒಹೊಹೊ ನನ್ನ ಎದೆ ಮೇಲೆ ಕಾಲು ಇಟ್ಟಹಾಗಾಯ್ತು ಎಂದು ತಮಾಷೆ ಮಾಡಿದ್ದಾರೆ. ಆಗ ರಾಮ್​ಗೆ ಸೀತಾಗೆ ಇನ್ನೊಂದು ಸಾರಿ ಸೀರೆ ಉಡಿಸುವ ಸನ್ನಿವೇಶ ಬಂದ್ರೆ ಯಾವ ಹಾಡು ಹಾಡ್ತೀರಿ ಎಂದಾಗ ಗಗನ್​ ಉಡಿಸುವೆ ಜಗದ ಸೀರೆಯಾ ಎಂದು ಕೆಟ್ಟ ದನಿಯಲ್ಲಿ ಹಾಡಿ ಎಲ್ಲರನ್ನೂ ನಗಿಸಿದ್ದಾರೆ. ಕೊನೆಗೆ, ಸೀತಾ ಎಲ್ಲರನ್ನೂ ಬಿಟ್ಟು ದೂರ ಹೋಗ್ಲೇಬೇಕು ಎಂದು ಬಂದಾಗ ಸೀತಾ ರಾಮ್​ನ ಮಿಸ್​ ಮಾಡಿಕೊರ್ಳ್ತಿದ್ದಾಳೆ, ಹೋಗೋಕೆ ಇಷ್ಟ ಇಲ್ಲ. ಆಗ ರಾಮ್​ ಯಾವ ಹಾಡು ಹೇಳ್ತಾನೆ ಎಂದಾಗ ಗಗನ್​ ಅವರು, ನನ್ನನ್ನು ಬಿಟ್​ಹೋಗ್ಬೇಡಾ ಎಂದು ಹೇಳಿದ್ದಾರೆ.  ನಮ್ಮಿಬ್ಬರ ಬಾಂಡಿಂಗ್​ ಹಾಗಿದೆ. ಒಬ್ಬರನ್ನು ಒಬ್ಬರು ಬಿಟ್ಟು ಇರಲ್ಲ ಎಂದು ಹೇಳುವ ಮೂಲಕ ರಿಯಲ್​ ಲೈಫ್​ನಲ್ಲೂ ಹೀಗೇನಾ ಎನ್ನುವ ಪ್ರಶ್ನೆ ಅಭಿಮಾನಿಗಳು ಇವರ ಮುಂದೆ ಇಟ್ಟಿದ್ದಾರೆ. 

ಮದ್ವೆ- ಮಕ್ಕಳು ಬಗ್ಗೆ ನಟಿ ವೈಷ್ಣವಿ ಬೋಲ್ಡ್​ ಮಾತು: ನಾಚಿ ನೀರಾದ ರಾಮ್​ ಪಾತ್ರಧಾರಿ ಗಗನ್!

ಕೆಲ ದಿನಗಳ ಹಿಂದೆ,  ವೈಷ್ಣವಿಯೇ ಗಗನ್​ ಬಳಿ ಮದುವೆ, ಮಕ್ಕಳ ವಿಷಯ ತೆಗೆದಿದ್ದು, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು. ತಮ್ಮ ಹೊಸ ವಿಡಿಯೋ ಶೇರ್​ ಮಾಡಿದ್ದ ವೈಷ್ಣವಿ,  ನಿಮ್ಮ ಈಗಿನ ಇಷ್ಟದ ಹಾಡು ಯಾವುದು? ಒಂದೆರಡು ಲೈನ್​ ಹೇಳಿ ಎಂದಾಗ, ವೈಷ್ಣವಿ ಮಚಾಲೋ ಮಚಾಲೋ ಹೆಂಗೌಳೆ ನಿಮ್​ ಡವ್​ ಎಂದಿದ್ದರು. ಇಷ್ಟದ ಜಂಕ್​ ಫುಡ್​ ಪಾನೀಪುರಿ ಎಂದಿದ್ದಾರೆ. ನಟಿಯಾಗದೇ ಇದ್ದರೆ ಡಾನ್ಸರ್​ ಆಗುತ್ತಿದ್ದೆ ಎಂದಿದ್ದರು. ಎಲ್ಲಿಯಾದರೂ ಹೋಗಬೇಕು ಎನ್ನುವುದಾದರೆ ಎಲ್ಲಿಗೆ ಹೋಗುವಿರಿ ಕೇಳಿದ ಪ್ರಶ್ನೆಗೆ ಮಂತ್ರಾಲಯ ಎಂದಿದ್ದರು 

ಪ್ರಸಿದ್ಧ ವ್ಯಕ್ತಿಯೊಂದಿಗೆ ಊಟ ಮಾಡುವುದಾದರೆ ಯಾರ ಜೊತೆ ಎಂದು ವೈಷ್ಣವಿ ಅವರನ್ನು ಕೇಳಿದಾಗ ಕೂಡಲೇ ಗಗನ್​ ನನ್ನ ಜೊತೆ ಎಂದಿದ್ದರು. ವೈಷ್ಣವಿ ಖಂಡಿತಾ ಇಲ್ಲ, ನಾನು ಓಡಿ ಹೋಗ್ತೀನಿ ಎಂದಿದ್ದಾರೆ. ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದಿದ್ದರೆ ಏನಂತ ಇಟ್ಟುಕೊಳ್ತೀರಾ ಕೇಳಿದಾಗ, ಕೂಡಲೇ ಗಗನ್​ ಅವ್ರು ವನಜಾಕ್ಷಿ ಎಂದಿದ್ದರು. ಆಗ ವೈಷ್ಣವಿ, ಇಲ್ಲ ವೈಷ್ಣೋದೇವಿಯಿಂದ ಈ ಹೆಸರು ಬಂದಿದ್ದು, ಹೆಸರು ಬದಲಾಯಿಸಿಕೊಳ್ಳಲ್ಲ ಎಂದಿದ್ದರು. ಲಾಟರಿ ಬಂದರೆ ಏನು ಮಾಡುತ್ತೀರಿ ಕೇಳಿದಾಗ, ಅಮ್ಮನ ಕೈಗೆ ಕೊಡುತ್ತೇನೆ ಎಂದರು ವೈಷ್ಣವಿ. ಆಗ ಗಗನ್​ ಎಲ್ಲಾ ಸುಳ್ಳು ಎಂದರು. ಆಗ ವೈಷ್ಣವಿ ಮಕ್ಕಳನ್ನು ಸಾಕುವ ಕಷ್ಟ ನಿಮಗೇನು ಗೊತ್ತು ಮದ್ವೆಯಾಗಿ ಮಕ್ಳು ಮಾಡಿಕೊಳ್ಳಿ ಎಂದಾಗ ಕೂಡಲೇ ಗಗನ್​ ನನ್ನ ಮನೆಯಲ್ಲಿ ಯಾರೂ ಹೆಣ್ಣೇ ನೋಡ್ತಾ ಇಲ್ವಲ್ಲಪ್ಪಾ ಅಯ್ಯೋ ಎಂದರು. ಅದಕ್ಕೆ ನೆಟ್ಟಿಗರು ಪಕ್ಕದಲ್ಲೇ ಇದ್ದಾಳಲ್ಲ ಅಂದಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!