ನನ್ನ ಫೆವರೇಟ್ ನಾನೇ ಎನ್ನುತ್ತ ರೀಲ್ಸ್ ಮಾಡಿದ ನಿವೇದಿತಾ ಗೌಡ. ಇಲ್ಲೂ ಅಭಿಮಾನಿಗಳಿಗೆ ನಟಿಯ ಕೂದಲಿಂದೇ ಚಿಂತೆ. ಕೂದಲೇನಾಯ್ತು ಕೇಳ್ತಿದ್ದಾರೆ ಫ್ಯಾನ್ಸ್!
ಬಾರ್ಬಿಡಾಲ್ ಎಂದೇ ಫೇಮಸ್ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್ ಸಂಖ್ಯೆ ಸಕತ್ ಹೆಚ್ಚಿದೆ. ಇದೇ ಕಾರಣಕ್ಕೆ ಇವರು ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಹಲವೊಮ್ಮ ಸಿಂಗಲ್ ಆಗಿ, ಕೆಲವೊಮ್ಮೆ ಪತಿ ಚಂದನ್ ಶೆಟ್ಟಿ ಜೊತೆ ಈಕೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್ ಸುದ್ದಿ ಮಾಡುತ್ತೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್ಗಳೂ ಬರುತ್ತವೆ. ಟ್ರೋಲ್ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್ ಸಂಖ್ಯೆ ಸಕತ್ ಹೆಚ್ಚಿದೆ. ಇದೇ ಕಾರಣಕ್ಕೆ ಇವರು ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್ಗಳೂ ಬರುತ್ತವೆ. ಟ್ರೋಲ್ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ನಿವೇದಿತಾ- ಚಂದನ್ಶೆಟ್ಟಿ ದಾಂಪತ್ಯಕ್ಕೆ ನಾಲ್ಕು ವರ್ಷ: ಹೊಸ ಚಿತ್ರದ ರೊಮ್ಯಾಂಟಿಕ್ ಮೂಡ್ನಲ್ಲಿ ದಂಪತಿ
ಇದೀಗ ನಟಿ, ನನ್ನನ್ನು ಕಂಡ್ರೆ ನನಗೆ ತುಂಬಾ ಪ್ರೀತಿ, ನನ್ನ ಫೆವರೆಟ್ ನಾನೇ ಎನ್ನುತ್ತಾ ಹಿಂದಿ ಹಾಡಿಗೆ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಮೊದಲಿನಿಂದಲೂ ಉದ್ದನೆಯ ಕೂದಲಿಗೆ ಫೇಮಸ್. ಬಿಗ್ಬಾಸ್ನಲ್ಲಿಯೂ ಇವರ ಕೂದಲನ್ನೇ ಪ್ರೀತಿಸ್ತದ್ದೋರು ಹೆಚ್ಚು. ನಂತರ ಅದನ್ನು ಕಟ್ ಮಾಡಿದಾಗ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಈಗ ಈ ರೀಲ್ಸ್ನಲ್ಲಿ ಚಿಕ್ಕ ಹೇರ್ಸ್ಟೈಲ್ ನೋಡಿ ಮತ್ತೆ ಕೂದಲ ಬಗ್ಗೆ ಅಭಿಮಾನಿಗಳು ಮಾತನಾಡಿದ್ದಾರೆ. ಕೆಲವರು ನಿಮಗೆ ಈ ಹೇರ್ಸ್ಟೈಲ್ ಚೆನ್ನಾಗಿ ಕಾಣಿಸುತ್ತದೆ ಎಂದಿದ್ದರೆ, ಮತ್ತೆ ಹಲವರು ಕೂದಲೆಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.
ಅಂದಹಾಗೆ ಈಚೆಗೆ, ನಿವೇದಿತಾ ಮತ್ತು ಚಂದನ್ ಶೆಟ್ಟಿ ಅವರು ನಾಲ್ಕನೆಯ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. 2020ರ ಇದೇ ದಿನ ಮದ್ವೆಯಾಗಿದ್ದ ಜೋಡಿಗೆ ಈಗ ನಾಲ್ಕನೇ ಮದುವೆ ದಿನದ ಸಂಭ್ರಮ. ಈ ಸಂದರ್ಭದಲ್ಲಿ ಜೊತೆಯಾಗಿ ರೊಮ್ಯಾನ್ಸ್ ಮಾಡಿದ ವಿಡಿಯೋ ಒಂದನ್ನು ನಿವೇದಿತಾ ಶೇರ್ ಮಾಡಿಕೊಂಡಿದ್ದರು. ಇವರಿಬ್ಬರೂ ಜೊತೆಯಾಗಿ ನಟಿಸ್ತಿರೋ ಕ್ಯಾಂಡಿ ಕ್ರಶ್ ಮೂವಿಯ ಮೇಕಿಂಗ್ ವಿಡಿಯೋ ಇದಾಗಿದ್ದು, ಜೋಡಿ ಇದರಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು.
ಅಡುಗೆ ಮನೆಯಲ್ಲಿ ಬಿಗ್ಬಾಸ್ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!