ಮುರಿದು ಬಿತ್ತು ನಾಗಿನ್‌ ನಟನ ದಾಂಪತ್ಯ ಜೀವನ, ಮಗಳ ನೆನೆದು ಭಾವುಕನಾದ ಸ್ಟಾರ್

Published : Oct 07, 2026, 01:58 AM IST
Naagin actor Vijayendra Kumeria confirms divorce

ಸಾರಾಂಶ

ಉಡಾನ್‌ ಖ್ಯಾತಿಯ ನಟ ವಿಜಯೇಂದ್ರ ಕುಮೇರಿಯಾ ಅವರ ದಾಂಪತ್ಯ ಜೀವನ ಮುರಿದು ಬಿದ್ದಿರೋದು ಪಕ್ಕಾ ಆಗಿದೆ. ಈ ಬಗ್ಗೆ ಖುದ್ಧು ಅವರೇ ದೃಢಪಡಿಸಿದ್ದಾರೆ. ಇದೇ ವೇಳೆ ಮಗಳ ಬಗ್ಗೆ ತುಂಬಾ ಎಮೋಷನಲ್‌ ಆಗಿದ್ದಾರೆ.

ಜನಪ್ರಿಯ ಟಿವಿ ನಟ ವಿಜಯೇಂದ್ರ ಕುಮೇರಿಯಾ ಅವರ ವೈವಾಹಿಕ ಜೀವನ ಮುರಿದು ಬಿದ್ದಿದೆ. 14 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಪ್ರೀತಿ ಭಾಟಿಯಾ ಜೊತೆ ಡಿವೋರ್ಸ್‌ ಪಡೀತಿರೋದನ್ನ ಖಚಿತಪಡಿಸಿದ್ದಾರೆ. ವಿಜಯೇಂದ್ರ ಮತ್ತು ಪ್ರೀತಿ 2012, ಜನವರಿಯಲ್ಲಿ ಮದುವೆ ಆಗಿದ್ದರು. ಇವರಿಬ್ಬರಿಗೆ ಕಿಮಯಾ ಎಂಬ ಮಗಳಿದ್ದಾಳೆ.

ಕೆಲವು ದಿನಗಳಿಂದ ಇವರ ಡಿವೋರ್ಸ್‌ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವದಂತಿಗಳು ಹಬ್ಬಿದ್ದವು. ಅದೀಗ ನಿಜವಾಗಿದೆ. ಖುದ್ದು ನಾಗಿನ್‌ ನಟ ವಿಜಯೇಂದ್ರ ಅವರೇ ಸ್ಪಷ್ಟಪಡಿಸಿದ್ದಾರೆ. ಅವರೇ ನೀಡಿರುವ ಮಾಹಿತಿ ಪ್ರಕಾರ ಕಳೆದ ನಾಲ್ಕು ವರ್ಷಗಳಿಂದ ಇಬ್ಬರು ಪ್ರತ್ಯೇಕವಾಗಿ ಬದುಕುತ್ತಿರೋದಾಗಿ ತಿಳಿಸಿದ್ದಾರೆ. ವಿಜಯೇಂದ್ರ ಅವರು ಇತ್ತೀಚೆಗೆ ಟೆಲಿ ಟಾಕ್‌ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿರುವ ಅವರು.. ವಿಚ್ಛೇದನ ಕುರಿತ ವದಂತಿಯನ್ನು ಕನ್ಫರ್ಮ್‌ ಮಾಡಿದ್ದಾರೆ.

ಈ ವದಂತಿ ಮಾರ್ಚ್ 2023 ರಲ್ಲಿ ಶುರುವಾಗಿತ್ತು. ವಿಜಯೇಂದ್ರ ಅವರ ಪತ್ನಿ ಪ್ರೀತಿ ನಿಗೂಢ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. ಮಗಳು ಕಿಮಯಾ ಜೊತೆಗಿನ ಫೋಟೋ ಶೇರ್‌ ಮಾಡಿ ನೀವು ನನಗೆ ಹೇಳಿದ ಎಲ್ಲಾ ಸುಳ್ಳುಗಳಲ್ಲಿ, 'ಐ ಲವ್ ಯು' ನನ್ನ ನೆಚ್ಚಿನದು. 'ಐ ಮಿಸ್ ಯು' ಎಂಬುದು ಹತ್ತಿರದ ಕ್ಷಣವಾಗಿತ್ತು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದರು. ಇದು ವದಂತಿಗಳಿಗೆ ಕಾರಣವಾಗಿತ್ತು.

ಡಿವೋರ್ಸ್‌ಗೆ ಕಾರಣ ಏನು?

ಸಂದರ್ಶನದಲ್ಲಿ ತಿಳಿಸಿರುವ ಪ್ರಕಾರ.. ಅವರ ವೈಯಕ್ತಿಕ ಜೀವನದಲ್ಲಿ ತುಂಬಾ ಬದಲಾವಣೆಗಳು ಆಗಲು ಶುರುವಾಗಿತ್ತು. ಅದು ಅವರಿಗೆ ಅರ್ಥ ಆಗಲು ದಿನಗಳು ಬೇಕಾಯಿತು. ನಂತರ ಅದನ್ನು ಸ್ವೀಕರಿಸಲು ಕೂಡ ಹೆಚ್ಚು ಸಮಯ ತೆಗೆದುಕೊಂಡರು. ಸಾರ್ವಜನಿಕವಾಗಿ ಮಾತನ್ನಾಡಲು ಇಷ್ಟ ಇರಲಿಲ್ಲ. ಅದೆಲ್ಲವನ್ನೂ ಖಾಸಗಿಯಾಗಿ ಇಡುವ ಮನಸು ಮಾಡಿದರು. ಆರಂಭದಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟಕರವಾಗಿತ್ತು ಎಂದಿದ್ದಾರೆ.

ಹಾಗಂತ ನಾವು ಈ ನಿರ್ಧಾರವನ್ನು ರಾತ್ರೋರಾತ್ರಿ ತೆಗೆದುಕೊಂಡಿಲ್ಲ. ಹೊಂದಾಣಿಕೆಯಲ್ಲಿ ಸಮಸ್ಯೆ ಎದುರಿಸಿದೇವು. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿಲ್ಲ. ಅಂದುಕೊಂಡ ವಿಷಯಗಳು ಕಾರ್ಯರೂಪಕ್ಕೆ ಬರಲಿಲ್ಲ, ಮತ್ತು ನಾವು 2022 ರಲ್ಲಿ ಬೇರ್ಪಟ್ಟಿದ್ದೇವೆ. ಇದು ಪರಸ್ಪರ ನಿರ್ಧಾರವಾಗಿತ್ತು ಮತ್ತು ನಾವು 2025 ರಲ್ಲಿ ತೀರ್ಪು (ಕಾನೂನು ಆದೇಶ) ಸ್ವೀಕರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಗಳ ಬಗ್ಗೆ ಭಾವುಕ ಮಾತು

ಡಿವೋರ್ಸ್‌ ಕಷ್ಟಕರವಾಗಿತ್ತು. ನಮಗೆ 10 ವರ್ಷದ ಮಗಳು ಕಿಮಯ ಇದ್ದಾಳೆ. ಕಿಮಯಳ ಸಲುವಾಗಿ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಂಬಂಧವನ್ನು ಉಳಿಸಲು ತಾವು ಮತ್ತು ಪ್ರೀತಿ ವರ್ಷಗಳಿಂದ ಪ್ರಯತ್ನಿಸಿದ್ದೇವೆ. ಅಂತಿಮವಾಗಿ ಬೇರೆಯಾಗಿ ಬದುಕುವುದು ಒಳ್ಳೆಯದು. ತಮ್ಮ ಮಗಳಿಗೆ ಉತ್ತಮ ವಾತಾವರಣ ಒದಗಿಸುತ್ತದೆ ಎಂದು ಅರಿತುಕೊಂಡೆವು. ಇತರ ಪೋಷಕರಂತೆ.. ಅವರು ಮತ್ತು ಪ್ರೀತಿ ತಮ್ಮ ಮಗಳು ಕಿಮಯಾಗೆ ಒಳ್ಳೆಯದನ್ನು ಬಯಸುತ್ತಾರೆ ಎಂದು ತಿಳಿಸಿದ್ದಾರೆ.

ವಿಜಯೇಂದ್ರ ಕುಮೇರಿಯಾ ಧಾರಾವಾಹಿ ನಟನೆಗಳಲ್ಲಿ ಹೆಚ್ಚು ಜನಪ್ರಿಯರು. 2014 ರಲ್ಲಿ, ಅವರು ಕಲರ್ಸ್ ಟಿವಿ ಕಾರ್ಯಕ್ರಮ ಶಾಸ್ತ್ರಿ ಸಿಸ್ಟರ್ಸ್‌ನಲ್ಲಿ ಇಶಿತಾ ಗಂಗೂಲಿ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಮಿಂಚಿದರು. ಉಡಾನ್ ಕಾರ್ಯಕ್ರಮದಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಅವರು ನಾಗಿನ್ 4 , ಆಪ್ಕಿ ನಜ್ರೋನ್ ನೇ ಸಮ್ಜಾ, ಮೋಸ್ ಛಲ್ ಕಿಯೇ ಜಾಯೆ, ತೇರಿ ಮೇರಿ ದೋರಿಯಾನ್, ದೀವಾನಿಯತ್ ಸೇರಿ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಬಣ್ಣ ಹಚ್ಚಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇವರೇ ನೋಡಿ 'ಪ್ಯಾನ್ ಇಂಡಿಯಾ ಆಂಕರ್'.. ರಾಜಮೌಳಿ ಕೂಡ ಪ್ರಶಂಸಿಸಿದ ಆ ಜನಪ್ರಿಯ ನಿರೂಪಕಿ ಯಾರು?
ಸಿನಿಮಾ ಜೀವನ ಸಾಕೆಂದು ನಾಪತ್ತೆಯಾಗಿದ್ದ ನಟನಿಗೆ ದೊಡ್ಡ ಬ್ರೇಕ್‌ ನೀಡಿದ್ದು ತಂದೆಯದ್ದೇ ಪಾತ್ರ!