
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಮಲ್ಲಿಯನ್ನು ಮನೆಯಿಂದ ಹೊರಕ್ಕೆ ಹಾಕುವಲ್ಲಿ ನಕಲಿ ಭೂಮಿಕಾ ಸಕ್ಸಸ್ ಆಗಿದ್ದಾಳೆ. ಮನೆಯಲ್ಲಿ ಈಗ ದೀಪಿಕಾಳದ್ದೇ ಕಾರುಬಾರು ಆಗಿದೆ. ಅದೇ ಇನ್ನೊಂದೆಡೆ, ಭೂಮಿಕಾಗೆ ಪ್ರಜ್ಞೆ ಬಂದಿದೆ. ಅವಳು ಈ ವಿಷಯವನ್ನು ತಿಳಿಸಲು ಮಲ್ಲಿಗೆ ಕಾಲ್ ಮಾಡಿದ್ರೆ ಆಕೆ ರಿಸೀವ್ ಮಾಡಲಿಲ್ಲ. ಅದಕ್ಕಾಗಿಯೇ ಮನೆಗೆ ಕಾಲ್ ಮಾಡಿದಾಗ ಅದನ್ನು ದೀಪಿಕಾ ರಿಸೀವ್ ಮಾಡಿದ್ದಾಳೆ. ಅವರಿಗೆ ಅಲ್ಲಿಂದ ಕಾಲ್ ಮಾಡಿದ್ದು ಭೂಮಿಕಾ ಎಂದು ತಿಳಿದಿದೆ.
ಅವಳಿಗೆ ಶಕುಂತಲಾ ಮತ್ತು ಜೈದೇವರ ಕುತಂತ್ರ ತಿಳಿದಿಲ್ಲ. ಅದಕ್ಕಾಗಿ ಅವಳು ಖುಷಿಯಿಂದ ಅದನ್ನು ಹೋಗಿ ಶಕುಂತಲಾಗೆ ಹೇಳಿದ್ದು, ಅಲ್ಲಿಗೆ ಶಕುಂತಲಾ ಮತ್ತು ಜೈದೇವ್ ತತ್ತರಿಸಿ ಹೋಗಿದ್ದಾರೆ. ಭೂಮಿಕಾಳನ್ನು ಸಾಯಿಸುವುದಕ್ಕಾಗಿ ಜೈದೇವ ಆಸ್ಪತ್ರೆಗೆ ಬಂದಿದ್ದಾನೆ. ಅದೇ ವೇಳೆ ಭೂಮಿಕಾ ಹೊರಕ್ಕೆ ಬಂದಿದ್ದು, ಜೈದೇವನ ಪ್ಲ್ಯಾನ್ ಬಗ್ಗೆ ಅರಿತಿದ್ದಾಳೆ.
ಕಳೆದ ಬಾರಿ ಅವಳು ತಪ್ಪಿಸಿಕೊಂಡಳು, ಈ ಬಾರಿ ತಪ್ಪಿಸಿಕೊಳ್ಳಬಾರದು ಎಂದ ಜೈದೇವ್, ರೌಡಿಗಳನ್ನು ಕರೆದುಕೊಂಡು ಬಂದಿದ್ದಾನೆ. ಆದರೆ ಭೂಮಿಕಾ ಅದನ್ನು ನೋಡಿದ್ದಾಳೆ. ಅಲ್ಲಿಗೆ ಭೂಮಿಕಾ ತಪ್ಪಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಅದೇ ಇನ್ನೊಂದೆಡೆ ಮಲ್ಲಿಗೂ ನಕಲಿ ಭೂಮಿಕಾ ಮೇಲೆ ಡೌಟ್ ಬಂದಿದೆ. ಅದನ್ನು ಪತ್ತೆ ಹಚ್ಚುವಲ್ಲಿ ಅವಳು ಸಕ್ಸಸ್ ಆಗ್ತಾಳಾ ಎನ್ನೋದನ್ನು ನೋಡಬೇಕಿದೆ.
ಇದೀಗ ಮಲ್ಲಿಗೂ ಡೌಟ್ ಬಂದಿರುವ ಹಿನ್ನೆಲೆಯಲ್ಲಿ, ಆಕೆ ಏನೋ ಪ್ಲ್ಯಾನ್ ಮಾಡಿ ಇದರ ಅಸಲಿಯತ್ತನ್ನು ಬಯಲು ಮಾಡಬೇಕಿದೆ. ಅತ್ತ ಭೂಮಿಕಾ ಹೇಗಾದರೂ ಮಾಡಿ ತಪ್ಪಿಸಿಕೊಂಡು ಬಂದು ವಿಷಯವನ್ನು ಮಲ್ಲಿಯವರೆಗೆ ಮುಟ್ಟಿಸಬೇಕಿದೆ. ಅಷ್ಟರವರೆಗೆ ಜೈದೇವನ ಕಣ್ಣಿಗೆ ಭೂಮಿಕಾ ಬೀಳಬಾರದು. ಇವೆಲ್ಲವೂ ಆದರೆ ಸೀರಿಯಲ್ ಒಂದು ಹಂತಕ್ಕೆ ಬರಲಿದ್ದು, ಮುಂದೇನು ಟ್ವಿಸ್ಟ್ ಎನ್ನೋದನ್ನು ನೋಡಬೇಕಿದೆ.
ಆದರೆ ಇಷ್ಟರಲ್ಲಿಯೇ ಮಲ್ಲಿ ಮತ್ತು ಜೀವ ಭೂಮಿಕಾಳನ್ನು ಹುಡುಕಿ ಹೊರಟಿದ್ದಾರೆ. ಜೈದೇವನಿಂದ ತಪ್ಪಿಸಿಕೊಳ್ಳಲು ಬಂದ ಭೂಮಿಕಾ ರಸ್ತೆಯ ಮೇಲೆ ಬಿದ್ದಿದ್ದು, ಅದನ್ನು ಮಲ್ಲಿ ಮತ್ತು ಜೀವ ನೋಡಿದ್ದಾರೆ. ಕೊನೆಗೂ ಅಸಲಿ ಭೂಮಿಕಾ ಅವರ ಕೈಗೆ ಸಿಕ್ಕಿದ್ದು, ಮುಂದಿದೆ ಮಾರಿಹಬ್ಬ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.