ತಮ್ಮದೇ ಮದುವೆ ಎಂದು ಗೊತ್ತಿಲ್ಲದೆ ವಿಜಯ್‌ಲಕ್ಷ್ಮಿ ಸಿಂಗ್‌ಗೆ ತಾಳಿ ಕಟ್ಟಿದ ಜೈ ಜಗದೀಶ್; ಏನಿದು ಕಥೆ?

By Vaishnavi Chandrashekar  |  First Published Aug 6, 2022, 1:29 PM IST

ಸ್ನೇಹಿತರ ತಯಾರಿಯಲ್ಲಿ ನಡೆದ ಮದುವೆ. ತಾಯಿಗೆ ಕೊಟ್ಟ ನೋವು ಜೀವನ ಪೂರ್ತಿ ಮರೆಯಲಾಗುವುದಿಲ್ಲ ಎಂದ ನಟಿ.... 
 


ಕನ್ನಡ ಚಿತ್ರರಂಗದ ದಿ ಮೋಸ್ಟ್‌ ಲವ್ಲಿ ಆಂಡ್ ಸಪೋರ್ಟಿವ್ ಕಪಲ್ ಜೈ ಜಗದೀಶ್ ಮತ್ತು ವಿಜಯ್‌ಲಕ್ಷ್ಮಿ ಸಿಂಗ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನಿತ್ತರ ಸ್ಪರ್ಧಿಗಳಿಗಿಂತ ಜೀವನದ ಬಗ್ಗೆ ಹೆಚ್ಚಿಗೆ ತಿಳಿದುಕೊಂಡಿರುವ ಇವರು ತಮ್ಮ ಮದುವೆ ಕಥೆಯನ್ನು ಮೊದಲ ಬಾರಿ ಹಂಚಿಕೊಂಡಿದ್ದಾರೆ. ತಯಾರಿ ಹೇಗಿತ್ತು? ಯಾರದ್ದೋ ಮದುವೆ ಅಂದುಕೊಂಡು ತಮ್ಮ ಮದುವೆಗೆ ಹೋಗಿದ್ದ ಕ್ಷಣ ಹೀಗಿತ್ತು.. ಪ್ರತಿಯೊಂದನ್ನು ರಿವೀಲ್ ಮಾಡಿದ್ದಾರೆ.

'ಮದುವೆನಾ ನಾವು ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಆಗಬೇಕು ಎಂದು ನಿರ್ಧಾರ ಮಾಡಿಕೊಂಡಿದ್ವಿ ಏಕೆಂದರೆ 8 ವರ್ಷ ಪ್ರೀತಿ ಮಾಡಿದ್ವಿ. ಮದುವೆ ಆಗಬೇಕು ಅಂತ ಹೇಗೆ ಹೇಳೋದು? ನಮ್ಮ ಸ್ನೇಹಿತರು ಬಾಲು ಅಂತ ನಮ್ಮ ಜಾತಕ ತೆಗೆದುಕೊಂಡು ಹೋಗಿ ತೋರಿಸಿ ಇದು ಹುಡುಕಿದ್ದರೂ ಸಿಗದ ಜಾತಕ ಅಂತ ಹೇಳಿದ್ದಾರೆ. ಜೂನ್‌ 4, 1990ರಲ್ಲಿ ಮದುವೆ ಆಗಲಿಲ್ಲ ಅಂದ್ರೆ ಅವರು ಮದುವೆ ಆಗೋದೆ ಇಲ್ಲ ಅಂದ್ರು. ಮದುವೆ ಸೀರೆನ ರವಿ ಅನ್ನೋರು ತಂದಿದ್ದು, ಈ ತಾಳಿನ ಪ್ರದೀಪ್‌ ಅನ್ನೋರು ಹೋಗಿ ತಂದಿದ್ದು, ನನ್ನ ಸ್ನೇಹಿತೆ ಸುಜಾತಾ ಮದುವೆ ಸೀರೆ ಬ್ಲೌಸ್ ಮಾಡಿಸಿದ್ದು. ಎಲ್ಲಾ ಅವರೇ ಮಾಡಿದ್ದು ನನಗೆ ಏನೂ ಗೊತ್ತಾಗುತ್ತಿರಲಿಲ್ಲ. ಅವರು ಊರಿನಲ್ಲಿ ಇದ್ದರೂ ನಾನು ಅವರಿಗೆ ಕರೆ ಮಾಡಿ 10.30 ಬರಬೇಕು ಹೋಟೆಲ್‌ಗೆ ಅಂತ. ಕೊನೆ ಕ್ಷಣದಲ್ಲಿ ನಾನೇ ಬೇಡ ಅಂತೀನಾ ಅಥವಾ ಅವರೇ ಬೇಡ ಅನ್ನುತ್ತಾರ ಗೊತ್ತಿಲ್ಲ' ಎಂದು ಮದುವೆ ದಿನವನ್ನು ವಿಜಯಲಕ್ಷ್ಮಿ ಸಿಂಗ್ ನೆನಪಿಸಿಕೊಳ್ಳುತ್ತಾರೆ.

Tap to resize

Latest Videos

'ನನ್ನ ಮದುವೆ ವಿಚಾರ ನನ್ನ ತಾಯಿಗೆ ಗೊತ್ತಿರಲಿಲ್ಲ. ಆಗ ನನ್ನ ಮಾವನ ಮನೆಗೆ ಹೋಗಿ ಹೇಳಿದೆ ಮದುವೆ ಆಗಬೇಕು ಎಂದು ನಾನು ನಿರ್ಧಾರ ಮಾಡಿದ್ದೀನಿ ನೀವು ದಯವಿಟ್ಟು ಅಮ್ಮನನ್ನು ಒಪ್ಪಿಸಿ ನನಗೆ ಮದುವೆ ಮಾಡಿ ಕೊಡಿ. ನನ್ನ ಕ್ಲೋಸ್ ಸ್ನೇಹಿತೆ ಈ ವಿಚಾರ ಹೇಳೋಕೆ ಬಂದ್ರು. ಆ ದಿನ ನಾನು ಬೇಗ ಎದ್ದು ತಲೆ ಸ್ನಾನ ಮಾಡಿ ರೆಡಿ ಆಗಬೇಕಿರುವಾಗ ಅಮ್ಮ ಏನು ಇಷ್ಟು ಬೇಗ ಎಂದು ಪ್ರಶ್ನೆ ಮಾಡುತ್ತಿದ್ದರು. ನನ್ನ ಎರಡನೇ ಅಣ್ಣ ಸಂಘ್ರಾಮ್ ಸಿಂಗ್‌ಗೆ ಮಾತ್ರ ಗೊತ್ತಿತ್ತು. ನಾನೇ ಧೈರ್ಯ ಮಾಡಿ ಅಮ್ಮನ ದೇವರ ಮುಂದೆ ನಿಲ್ಲಿಸಿ ಅಮ್ಮ ಇನ್ನು 1 ಗಂಟೆಯಲ್ಲಿ ನನ್ನ ಮದುವೆ ಇದೆ ಅಂತ ಹೇಳಿದೆ. ಈಗ ನನಗೆ ಮೂವರು ಹೆಣ್ಣು ಮಕ್ಕಳು ಈಗ ನನಗೆ ಆ ನೋವು ಗೊತ್ತಾಗುತ್ತದೆ. ನನ್ನ ಮೇಲೆ ಎಷ್ಟು ಆಸೆ ಇಟ್ಕೊಂಡಿದ್ರು ಅಂದ್ರೆ ಮೂವರು ಗಂಡು ಮಕ್ಕಳಾದ ಮೇಲೆ ನಾನು ಹೆಣ್ಣು ಅದ್ದೂರಿ ಮದುವೆ ಆಸೆ ..ಆದರೆ ನಮ್ಮ ಮದುವೆ ಯಾವ ಶಾಸ್ತ್ರಿ ಮೆಹೆಂದಿ ಏನೂ ಇಲ್ಲ. ಅವತ್ತು ಕುಸಿದು ಬಿದ್ದ ಕ್ಷಣ ಕಣ್ಣು ಮುಂದೆ ಇದೆ. ನನ್ನ ಜೀವನ ಪೂರ್ತಿ ಕ್ಷಮೆ ಕೇಳಿದ್ದೀನಿ' ಎಂದು ಮಾತನಾಡಿದ್ದಾರೆ. 

ನಿದ್ರೆ ಇಲ್ಲದೆ ರಾತ್ರಿಗಳು ಕಳೆದಿರುವೆ, ಮೆಚ್ಚಿ ಮದ್ವೆಯಾದ ಗಂಡ ಇವರಲ್ಲ: ಸುಮನ್ ನಗರ್‌ಕರ್‌ ಶಾಕಿಂಗ್ ಹೇಳಿಕೆ

'ಒಂದು ಮಾತು ಹೇಳಿದೆ ಅಮ್ಮ ನನ್ನ ಹಣೆಯಲ್ಲಿ ಇದೇ ಬರೆದಿದೆ ನಾನು ಖುಷಿಯಾಗಿ ಇರ್ತೀನಿ ನೀನು ಬಾ ಎಂದು ಕೈ ಹಿಡಿದು ಕರೆದುಕೊಂಡು ಹೋದೆ. ಅಮ್ಮ ದುಖಃದಲ್ಲಿದ್ದರು ಅಳುತ್ತಿದ್ದರು. ಪ್ರೀತಿ ಎಲ್ಲಾ ಗೊತ್ತಿತ್ತು ಆದರೆ ಈ ಹಂತಕ್ಕೆ ಬಂದಿದೆ ಅಂತ ಗೊತ್ತಿಲ್ಲ. ನಾವು ಅಲ್ಲಿಗೆ ಹೋದ ಮೇಲೆ ಜೈ ಜಗದೀಶ್ ಬಂದಿರಲಿಲ್ಲ' ಎಂದು ವಿಜಯಲಕ್ಷ್ಮಿ ಸಿಂಗ್ ಹೇಳಿದ್ದಾರೆ. 

'ನನಗೆ ಮೈಸೂರಿನಲ್ಲಿ ನನ್ನ ಮದುವೆ ಆಗಲಿದೆ ಅಂತ ಸುಳಿವು ಕೂಡ ಇರಲಿಲ್ಲ. ತೋಟದ ಮನೆಯಲ್ಲಿದ್ದೆ ಮೈಸೂರಿನಿಂದ ನಾನು ಬೆಂಗಳೂರಿಗೆ ಹೋಗೋಣ ಆಗ ಆಕೆನ ಭೇಟಿ ಮಾಡೋಣ ಅಂದುಕೊಂಡೆ. ಆಕೆ ಕರೆ ಮಾಡಿ ಸದರ್ನ್‌ ಸ್ಟಾರ್ ಹೋಟೆಲ್‌ಗೆ ಬನ್ನಿ ಅಂದ್ರು. ಏನೋ ಫಂಕ್ಷನ್ ಇತ್ತು ಅಂತ ನೋಡಿದರೆ ಆಕೆ ಬನ್ನಿ ಪಕ್ಕಾ ಕುಳಿತುಕೊಳ್ಳಿ ಅಂತ ಹೇಳುತ್ತಿದ್ದಳು. ಏನ್ ನಡೆಯುತ್ತಿದೆ ಅಂತ ಯೋಚನೆ ಕೂಡ ಮಾಡಲು ಆಗಲಿಲ್ಲ. ಆಕೆ ಸ್ನೇಹಿತರ ಮದುವೆ ಅಂದುಕೊಂಡೆ ಆಮೇಲೆ ಕಿವಿ ಹತ್ತಿರ ಬಂದು ನಿನ್ನದೇ ಮದುವೆ ಅಂತ ಹೇಳಿದ್ದಳು. ಓಡಿ ಹೋಗಬೇಕಾ ಅಥವಾ ಇರಬೇಕಾ ಗೊತ್ತಾಗುತ್ತಿರಲಿಲ್ಲ. ದಾರಿಯಲ್ಲಿದ್ದಾಗ ಹೇಳಿದ್ದರೆ ನಾನು ಬರುತ್ತಿರಲಿಲ್ಲ. ಹರಿಕೆ ಕುರಿ ತರ ಮದುವೆಯಲ್ಲಿ ಕುಳಿತುಕೊಂಡೆ' ಎಂದು ಜೈ ಜಗದೀಶ್ ಹೇಳಿದ್ದಾರೆ. 

ಮದುವೆ ಮುನ್ನ ಕುಡ್ದಿದ್ದಕ್ಕೆ ಗಂಡ-ಭಾವ ರೂಮ್‌ಗೆ ಎತ್ಕೊಂಡ್ ಹೋದ್ರು: ದಿಶಾ ಮದನ್ ಶಾಕಿಂಗ್ ಹೇಳಿಕೆ

'ಮದುವೆಯಾದ ತಕ್ಷಣ ನಮ್ಮನ್ನು ಮನೆಗೆ ಕರೆದುಕೊಂಡು ಹೋದ್ದರು. ಆಗ ಜಗದೀಶ್ ಮಾತು ಕೊಟ್ಟರು, ಮಗಳನ್ನು ಮಾತ್ರವಲ್ಲ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೀನಿ ಅಂದ್ರು. 32 ವರ್ಷ ಸ್ವಂತ ಮಗನ ರೀತಿ ನೋಡಿದ್ದಾರೆ. ನಮ್ಮ ಮದುವೆ ಬಗ್ಗೆ ಎಲ್ಲೂ ನೆಗೆಟಿವ್ ಆಗಿ ಬರೆದಿರಲಿಲ್ಲ ಎಲ್ಲರೂ ಪಾಸಿಟಿವ್ ಆಗಿ ನೋಡಿದ್ದರು. ಕೊನೆಗೂ ಮದುವೆ ಆಯ್ತು ಅನ್ನೋದೆ ಸೆಲೆಬ್ರಿಟಿಗಳು ಹೇಳಿದ್ದರು. ಇಷ್ಟು ಕಷ್ಟ ಪಟ್ಟು ನಾವು ಮದ್ವೆ ಅಗಿದ್ದೀನಿ ಹೊಂದಿಕೊಂಡು ನಾವು ಜೀವನ ಮಾಡಬೇಕು ಅನ್ನೋದಷ್ಟೆ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಕೊಂಡಿತ್ತು' ಎಂದಿದ್ದಾರೆ ವಿಜಯಲಕ್ಷ್ಮಿ ಸಿಂಗ್.

click me!