ನಿದ್ರೆ ಇಲ್ಲದೆ ರಾತ್ರಿಗಳು ಕಳೆದಿರುವೆ, ಮೆಚ್ಚಿ ಮದ್ವೆಯಾದ ಗಂಡ ಇವರಲ್ಲ: ಸುಮನ್ ನಗರ್‌ಕರ್‌ ಶಾಕಿಂಗ್ ಹೇಳಿಕೆ

By Vaishnavi Chandrashekar  |  First Published Aug 6, 2022, 11:25 AM IST

ಮನಸ್ಸಿನಲ್ಲಿರುವ ಮನಸ್ತಾಪಗಳನ್ನು ಇಸ್ಮಾರ್ಟ್‌ ಜೋಡಿ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟ ಸುಮನ್ ನಗರ್‌ಕರ್‌....


ಕನ್ನಡ ಚಿತ್ರರಂಗದ ಬೆಳದಿಂಗಳ ಸುಮನ್ ನಗರ್‌ಕರ್‌ ಪ್ರಪ್ರಥಮ ಬಾರಿಗೆ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಇಸ್ಮಾರ್ಟ್‌ ಜೋಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ತಮ್ಮ ಪತಿ ಗುರುದೇವ್ ನಾಗರಾಜರನ್ನು ಪರಿಚಯಿಸಿಕೊಟ್ಟಿದ್ದಾರೆ. ಪ್ರೀತಿ, ಮದುವೆ ಮತ್ತು ವಿದೇಶದಲ್ಲಿ ಜೀವನ ಹೇಗಿತ್ತು ಎಂದು ಸುಮನ್ ಹಂಚಿಕೊಂಡಿದ್ದಾರೆ. ಇಂದು ಪ್ರಸಾರವಾಗುತ್ತಿರುವ ವಿಶೇಷ ಎಪಿಸೋಡ್‌ನಲ್ಲಿ ಸುಮನ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. 

'ನಿಮ್ಮದು 22 ವರ್ಷಗಳ ಮದುವೆ ಜೀವನ ಅಲ್ಲ ಸ್ನೇಹ, ಹೇಗಿದೆ ಈ ಜರ್ನಿ?' ಎಂದು ಗಣೇಶ್ ಪ್ರಶ್ನೆ ಮಾಡುತ್ತಾರೆ. ಮೌನದಲ್ಲಿ ಕೆಲವು ನಿಮಿಷಗಳ ಕಾಲ ಕುಳಿತುಕೊಂಡ ಸುಮನ್‌ ನೋವಿನಲ್ಲಿ ಉತ್ತರಿಸುತ್ತಾರೆ. 'ಇತ್ತೀಚಿಗೆ ನಮ್ಮ ಜೀವನ ಎಲ್ಲೋ ಹಳ್ಳ ತಲುಪಿ ಬಿಟ್ಟಿತ್ತು. ಕಳೆದ ವರ್ಷ ಅವರು ಭಾರತಕ್ಕೆ ಬಂದ್ದರು ನಾನು ವಿದೇಶದಲ್ಲಿ ಇದ್ದೆ.  ಅವರು ವಾಪಸ್ ಬರಬೇಕಿತ್ತು ಆದರೆ ತುಂಬಾ ತಿಂಗಳು ಮುಂದೂಡುತ್ತಿದ್ದರು. ಆ ಸಮಯದಲ್ಲಿ ನಮ್ಮ ನಡುವೆ ತುಂಬಾ ಗ್ಯಾಪ್ ಆಯ್ತು. ನಾನು ಅದೆಷ್ಟು ದಿನ ನಿದ್ರೆ ಇಲ್ಲದೆ ರಾತ್ರಿ ಕಳೆದಿರುವೆ ಗೊತ್ತಿಲ್ಲ. ಕಳೆದು ಎರಡು ಮೂರು ವರ್ಷಗಳಲ್ಲಿ ನಾನು ಮೆಚ್ಚಿ ಮದುವೆ ಆದ ಗುರು ಎಲ್ಲೋ ಕಳೆದು ಹೋಗಿದ್ದಾನೆ. ನನಗೆ ನನ್ನ ಆ ಕ್ಲೋಸ್‌ ಸ್ನೇಹಿತ ಗುರು ಮತ್ತೆ ಬೇಕು' ಎಂದು ಸುಮನ್ ಮಾತನಾಡಿದ್ದಾರೆ. 

Tap to resize

Latest Videos

ಸೀಕ್ರೆಟ್‌ ರೂಮಿನಲ್ಲಿ ಕುಳಿತುಕೊಂಡು ಗುರುದೇವ್ ನಾಗರಾಜ್‌ ಮೌನಿಯಾಗುತ್ತಾರೆ, ಭಾವುಕರಾಗಿ ವೇದಿಕೆ ಮೇಲೆ ಬಂದು ಪತ್ನಿಯನ್ನು ತಬ್ಬಿಕೊಳ್ಳುತ್ತಾರೆ.

ಸುಮನ್‌ ನಗರ್‌ಕರ್‌ ಪ್ರತಿ ದಿನ 20 ಕಿ.ಮೀ ಓಡುತ್ತಿರುವ ಗುಟ್ಟೇನು?

2001 ಜನವರಿ 1ರಿಂದ ಸುಮನ್ ನಗರ್‌ಕರ್ ಮತ್ತು ಗುರುದೇವ್‌ ನಾಗರಾಜ್‌ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ. ಹಣ ಆಭರಣದ ಮೇಲೆ ವ್ಯಾಮೋಹ ಇಲ್ಲದ ಕಾರಣ ಸುಮನ್ ಸರಳವಾಗಿ ನೀಲಿ ಬಣ್ಣದ ಸೆಲ್ವಾರ್‌ ಧರಿಸಿರುತ್ತಾರೆ, ನಾಗರಾಜ್‌ ಶರ್ಟ್‌ ಪ್ಯಾಂಟ್‌ನಲ್ಲಿರುತ್ತಾರೆ. 

'ನಾವು ಮೊದಲು ಭೇಟಿಯಾಗಿದ್ದು ಬೆಂಗಳೂರಿನ ಬಸವನಗುಡಿ ಮತ್ತು ಗಿರಿನಗರದಲ್ಲಿ. ಸುಮನ್‌ ಅಣ್ಣ ನನಗೆ ಸ್ನೇಹಿತ. ಮೊದಲು ನಾವು ಪ್ರೆಂಡ್ಸ್‌ ಆಗಿದ್ವಿ. ನಮ್ಮಿಬ್ಬರ ಗುಣಗಳಲ್ಲಿ ತುಂಬಾ ಹೋಲಿಕೆಗಳಿತ್ತು. ಮೊದಲು ನಾನು ಪ್ರಪೋಸ್ ಮಾಡಿದಾಗ ಆಕೆ ಇಲ್ಲ ಅಂದ್ಳು. ಒಂದ ವರ್ಷ ಬಿಟ್ಟು ಮತ್ತೆ ಪ್ರಪೋಸ್ ಮಾಡಿದೆ. ಆದ ನಾನು ಅಮೆರಿಕಾಗ ಹೋಗುವ ನಿರ್ಧಾರ ಮಾಡಿದ್ದೆ. ಹೊರಟು ಹೋಗುತ್ತೀದ್ದೇನೆ ಎಂದಾಗ ಮದುವೆ ಮಾಡಿಕೊಳ್ಳೋಣ ಎಂದಳು. ಕುಟುಂಬ ಒಪ್ಪಿಗೆ ಪಡೆದುಕೊಂಡು ನಾವು ಮದ್ವೆ ಆಗಿದ್ದು' ಎಂದು ಗುರುರಾಜ್ ಮಾತನಾಡಿದ್ದಾರೆ.

'ಬೆಳದಿಂಗಳ ಬಾಲೆ...' ಎಂದರೆ ನೆನಪಾಗೋ ನಟಿ ಇವರು..

'ನಾವು ಹಲವು ವರ್ಷಗಳ ಕಾಲ ಸ್ನೇಹಿತರಾಗಿದ್ವಿ. ನನಗೆ ಮದುವೆಯಾಗುವ ಐಡಿಯಾ ಇರಲಿಲ್ಲ ಹೀಗಾಗಿ ಮದುವೆಯಾಗೋಣ್ವ ಅಂತ ನನಗೆ ಕೇಳಿದಾಗ ತುಂಬಾ ಟೈಮ್ ತೆಗೆದುಕೊಂಡೆ. ಮುಖ್ಯವಾದ ವಿಚಾರ ಹೇಳಬೇಕು. ನನಗೆ ಚಿನ್ನದ ಹುಚ್ಚಿಲ್ಲ. ನನ್ನ ಬಳಿ ಚಿನ್ನ- ಬೆಳ್ಳಿ ಏನೂ ಇಲ್ಲ ಅವನ್ನೆಲ್ಲಾ ನಾನು ಹಾಕೋದೇ ಇಲ್ಲ. ನನ್ನ ಪತಿ ಕೂಡ ಹೀಗೆ. ನಮ್ಮ ನಡುವೆ ಈ ರೀತಿ ಹೋಲಿಕೆಗಳು ತುಂಬಾ ಇದೆ' ಎಂದು ಸುಮನ್ ಹೇಳಿದ್ದಾರೆ.

 

click me!