Bigg Boss Ott; ಈ ಬಾರಿ ಬಿಗ್ ಮನೆಯಲ್ಲಿ ಇಲ್ಲ ಈ ರೂಮ್

Published : Aug 06, 2022, 12:00 PM IST
Bigg Boss Ott; ಈ ಬಾರಿ ಬಿಗ್ ಮನೆಯಲ್ಲಿ ಇಲ್ಲ ಈ  ರೂಮ್

ಸಾರಾಂಶ

ಬೆಡ್ ರೂಮ್, ಅಡುಗೆ ಮನೆ ಕ್ಯಾಪ್ಟನ್ ರೂಮ್ ಎಲ್ಲವನ್ನು ಸುದೀಪ್ ಪ್ರೇಕ್ಷಕರಿಗೆ ಪರಿಚಯಿಸಿದರು. ಆದರ ಈ ಬಾರಿ ಬಿಗ್ ಮನೆಯಲ್ಲಿ ಒಂದು ರೂಮ್ ಇರುವುದಿಲ್ಲ ಎಂದು ಹೇಳಿದರು. ಅಂದಹಾಗೆ ಈ ಬಾರಿ ಬಿಗ್ ಬಾಸ್ ನಿಂದ ಮಾಯವಾಗಿರುವ ಆ ರೂಮ್ ಯಾವುದು ಗೊತ್ತಾ? ಈ ಸ್ಟೋರಿ ನೋಡಿ.

ಬಿಗ್ ಬಾಸ್ ಒಟಿಟಿ ಕನ್ನಡ ರಿಯಾಲಿಟಿ ಶೋ ಆಗಸ್ಟ್ 6 ರಂದು ಅದ್ದೂರಿಯಾಗಿ ಆರಂಭವಾಗುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.ಕಿಚ್ಚನ ಜೊತೆ ಗಾಯಕ, ಮಾಜಿ ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆ ಹೇಗಿರಲಿದೆ, ಏನೆಲ್ಲ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು.ಇದೀಗ ಕಿಚ್ಚ ಬಿಗ್ ಬಾಸ್ ಮನೆ ಪರಿಚಯ ಮಾಡಿಕೊಡುವ ಮೂಲಕ ಅಭಿಮಾನಿಗಳ ಕತೂಹಲಕ್ಕೆ ತೆರೆ ಎಳೆದರು. ಕಿಚ್ಚನ ಬಿಗ್ ಬಾಸ್ ಎಂಟ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿಚ್ಚನ ಜೊತೆ ಬಿಗ್ ಮನೆಗೆ ಎಂಟ್ರಿ ಕೊಟ್ಟ ವಾಸುಕಿ ಮನೆಯನ್ನು ನೋಡಿ ಸಖತ್ ಥ್ರಿಲ್ ಆದರು. ಬಿಗ್ ಮನೆಯ ಹಳೆಯ ನೆನಪನ್ನು ಮತ್ತೆ ಬಿಚ್ಚಿಟ್ಟರು. ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಎಂದು ಕೇಳಿದರು, ಇದಕ್ಕೆ ವಾಸುಕಿ ಅತಿ ಹೆಚ್ಚು ಯುದ್ಧಗಳಾದ ಜಾಗವಿದು ಎಂದು ಮನೆಯ ಅಂಗಳದ ಬಗ್ಗೆ ವಿವರಿಸಿದರು.ವಾಸುಕಿ ಮಾತಿಗೆ ಕಿಚ್ಚ ಜೋರಾಗಿ ನಕ್ಕಿದರು. 

ಬಳಿಕ ಇಬ್ಬರು ಸಂಪೂರ್ಣ ಮನೆಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಟ್ಟರು.ಮೊದಲು ದೇವರ ಮನೆಗೆ ಎಂಟ್ರಿ ಕೊಟ್ಟ ಸುದೀಪ್ ಮತ್ತು ವಾಸುಕಿ ದೇವರಿಗೆ ನಮಸ್ಕಾರ ಮಾಡಿದರು. ಆಗ ಸುದೀಪ್ ದೇವರ ಬಳಿ ಸ್ಪರ್ಧಿಗಳಿಗೆ ಒಳ್ಳೆಯ ಬುದ್ಧಿ ಕೊಡು, ಅವರು ಸರಿಯಾಗಿ ಮಾತನಾಡುವಂತೆ ಮಾಡು ತಾಯಿ ಎಂದು ಕೇಳಿಕೊಂಡರು. ಸ್ಪರ್ಧಿಗಳು ಸರಿಯಾಗಿ ಮಾತನಾಡಿದರೆ ನನಗೆ ಕ್ಷೇಮ ಎಂದು ಕಿಚ್ಚ ಕೇಳಿಕೊಂಡರು. ಬಳಿಕ ವಾಸುಕಿ ದೇವರ ನಾಮ ಹಾಡಿದರು. ಲಿವಿಂಗ್ ರೂಮ್ ಕಡೆ ಹೊರಟ ಕಿಚ್ಚನಿಗೆ ಅಲ್ಲಿ ಇಟ್ಟಿದ್ದ ಕಪ್ಪು ಬಣ್ಣದ ಮೂರ್ತಿ ಗಮನ ಸೆಳೆದಿದೆ. ಕಪ್ಪು ಬಣ್ಣದ ಮೂರ್ತಿ ಕಣ್ಣು ಮುಚ್ಚಿಕೊಂಡಿದ್ದು ಮತ್ತೊಂದು ಕೈ ಕುತ್ತಿಗೆಯ ಭಾಗದಲ್ಲಿದೆ. ಇದನ್ನು ನೋಡಿದ ಕಿಚ್ಚ, ವಾಸುಕಿ ಬಳಿ ನನ್ನ ಮುಖ ಇದ್ದಹಾಗೆ ಇದೆಯಲ್ವಾ ಎಂದು ವಾಸುಕಿ ಬಳಿ ಕೇಳಿದರು.  

Bigg Boss OTT; ವಾಸುಕಿ ಜೊತೆ ಬಿಗ್ ಮನೆಗೆ ಕಿಚ್ಚನ ಎಂಟ್ರಿ, ದೇವರಬಳಿ ಕೇಳಿಕೊಂಡಿದ್ದೇನು ಸುದೀಪ್?

ಇದಕ್ಕೆ ವಿವರಣೆ ನೀಡಿದ ಸುದೀಪ್'ಇಲ್ಲಿ ನಡೆಯೋದು ನನ್ನ ಕಣ್ಣಿಗೆ ಕಾಣುತ್ತಿರುತ್ತದೆ. ಆದರೆ, ಏನು ಗೊತ್ತಿಲ್ಲದ ಹಾಗೆ ನಾನು ಇರಬೇಕು. ಕುತ್ತಿಗೆಯ ಭಾಗದಲ್ಲಿ ಇರುವ ಕೈ ಜನರು ಹಾಗೂ ಒಳಗಿರುವ ಸ್ಪರ್ಧಿಗಳದ್ದು. ಅವರು ನನ್ನ ಕುತ್ತಿಗೆಗೆ ಕೈ  ಹಾಕುತ್ತಾರೆ. ಈ ಮೂರ್ತಿಗೆ ಕೂದಲು ಮೀಸೆ ಇದ್ದಿದ್ದರೆ ನನ್ನ ರೀತಿಯೇ ಕಾಣುತ್ತಿತ್ತು. ತುಂಬಾ ಸಿಂಬಾಲಿಕ್ ಆಗಿದೆ’ ಎಂದು ಸುದೀಪ್ ಹೇಳಿದರು.

ಬೆಡ್ ರೂಮ್, ಅಡುಗೆ ಮನೆ ಕ್ಯಾಪ್ಟನ್ ರೂಮ್ ಎಲ್ಲವನ್ನು ಸುದೀಪ್ ಪ್ರೇಕ್ಷಕರಿಗೆ ಪರಿಚಯಿಸಿದರು. ಆದರ ಈ ಬಾರಿ ಬಿಗ್ ಮನೆಯಲ್ಲಿ ಒಂದು ರೂಮ್ ಇರುವುದಿಲ್ಲ ಎಂದು ಹೇಳಿದರು. ಅಂದಹಾಗೆ ಈ ಬಾರಿ ಬಿಗ್ ಬಾಸ್ ನಿಂದ ಮಾಯವಾಗಿರುವ ಆ ರೂಮ್ ಯಾವುದು ಗೊತ್ತಾ? ಕನ್ಫೆಷನ್ ರೂಮ್. ಹೌದು ಸ್ಪರ್ಧಿಗಳು ತಮ್ಮ ದೂರುಗಳನ್ನು, ಸಮಸ್ಯೆಗಳನ್ನು ಬಿಗ್ ಬಾಸ್ ಬಳಿ ಹೇಳಲು, ಎಲಿಮಿನೇಟ್ ಮಾಡುವುದು ಕನ್ಫೆಷನ್ ರೂಮ್ ನಲ್ಲಿ. ಆದರೆ ಈ ಬಾರಿ ಕನ್ಫೆಷನ್ ರೂಮ್ ಇರುವುದಿಲ್ಲ ಎಂದು ಸುದೀಪ್ ಬಹಿರಂಗ ಪಡಿಸಿದ್ದಾರೆ. ಯಾಕೆ ಎನ್ನುವ ಬಗ್ಗೆ ಕಿಚ್ಚ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ವಾಸುಕಿ ಬಳಿ ಹೇಳುತ್ತಾ ಸುದೀಪ್ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸೋಣ ಎಂದು ಮನೆಯಿಂದ ಹೊರಟರು. 

ಬಿಗ್ ಬಾಸ್‌ಗೆ ಯಾಕೆ ಹೋಗಬಾರದು? ನವ್ಯಶ್ರೀ ರಾವ್ ಪ್ರಶ್ನೆ

ಬಿಗ್ ಬಾಸ್ ಒಟಿಟಿ ಕನ್ನಡ ಶೋನಲ್ಲಿ 16 ಸ್ಪರ್ಧಿಗಳು ಇರುತ್ತಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆರಂಭ ಆಗಿದೆ.ಕೆಲವರ ಹೆಸರುಗಳು ಬಲವಾಗಿ ಕೇಳಿಬರುತ್ತಿದೆ. ಆದರೆ ಯಾರೆಲ್ಲ ಇರಲಿದ್ದಾರೆ ಎನ್ನುವ ಅಂತಿಮ ಪಟ್ಟಿ ಆಗಸ್ಟ್ 6 ಸಂಜೆ ವೇಳೆಗೆ ಹೊರಬೀಳಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?