ಕನ್ನಡತಿ ಬೋರ್, ಅತ್ತಿದ್ದು ಸಾಕು, ಬೋಲ್ಡ್ ಆಗಲಿ ಭುವಿ ಅಂತಿದ್ದಾರೆ ವೀಕ್ಷಕರು

Published : Nov 07, 2022, 03:50 PM IST
ಕನ್ನಡತಿ ಬೋರ್, ಅತ್ತಿದ್ದು ಸಾಕು, ಬೋಲ್ಡ್ ಆಗಲಿ ಭುವಿ ಅಂತಿದ್ದಾರೆ ವೀಕ್ಷಕರು

ಸಾರಾಂಶ

ಹಳ್ಳಿ ಹುಡುಗಿ. ನೋಡಲು ಮುಗ್ಧೆಯಾದರೂ, ಗಟ್ಟಿ ಮನಸ್ಸು. ಎಂಥದ್ದೇ ಪರಿಸ್ಥಿತಿ ಎದುರಾದರೂ ತಾಳ್ಮೆಯಿಂದ ಎದುರಿಸುವ ಸಾಮರ್ಥ್ಯ ಇರುವ, ಅಪ್ಪಟ ಕನ್ನಡ ಮಾತನಾಡುವ ಹೆಣ್ಣಿನ ಕಥೆ ಕನ್ನಡತಿ ದಾರಿ ತಪ್ಪಿದೆಯಾ? 

ಅಪ್ಪಟ ಕನ್ನಡ ಮಾತನಾಡುವ, ಒಳ್ಳೆ ಮನಸ್ಸಿನ ಹಳ್ಳಿ ಹುಡುಗಿ ಎಂಬ ಕಾರಣಕ್ಕೆ 'ಕನ್ನಡತಿ' ಎಂಬ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್ ವೀಕ್ಷಕರಿಗೆ ಆಪ್ತವಾಗಿತ್ತು. ಅಪ್ಪಿ ತಪ್ಪಿಯೂ ಇಂಗ್ಲಿಷ್ ಪದ ಬಳಸದ ಭುವಿ ವಿಶ್ವಾಸದಿಂದ ಇಂಗ್ಲಿಷ್ ಮಾತನಾಡುವುದನ್ನು ನೋಡಲು ಕಾಯುತ್ತಿದ್ದ ವೀಕ್ಷಕರಿಗೆ ಆ ದಿನ ಬಂದಿತ್ತು. ಫುಲ್ ಖುಷಿಯಾಗಿದ್ದ ಭುವಿ ಕನ್ನಡದಷ್ಟೇ ಸುಲಲಿತವಾಗಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಥ್ರಿಲ್ ಆಗಿದ್ದರು. ಆದರೆ, ಈಗಲಾದರೂ ಭುವಿ ಬೋಲ್ಡ್ ಆಗುತ್ತಾಳೆ. ಮನೆಯವರನ್ನು ಎದುರಿಸುತ್ತಾಳೆ. ಹಳ್ಳಿಯಿಂದ ಬಂದ ಹೆಣ್ಣು ಮಗಳು ರತ್ನಮಾಲಾ ಕಟ್ಟಿದ ಸಾಮ್ರಾಜ್ಯವನ್ನು ಅವರಷ್ಟೇ ಸಮರ್ಥವಾಗಿ ನಿಭಾಯಿಸುವಂತೆ ಆಗುತ್ತದೆ ಎಂದು ಕಾಯುತ್ತಿದ್ದ ವೀಕ್ಷಕರಿಗೆ ಸೀರಿಯಲ್ ಸಿಕ್ಕಾಪಟ್ಟೆ ಬೋರ್ ಎನಿಸುತ್ತಿದೆ. ಚಾನೆಲ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಪ್ರೋಮೋಗೆ ಮಾಡುವ ಕಮೆಂಟ್‌ನಲ್ಲಿ ಎಲ್ಲರೂ ಸೀರಿಯಲ್ ಬೋರೋ ಬೋರು ಎಂದೇ ಹೇಳುತ್ತಿದ್ದಾರೆ. 

ಕೇವಲ ಧಾರಾವಾಹಿ ಹೀರೋಗೆ ಮಾತ್ರ ಅಮ್ಮನಾದ ರತ್ನಮ್ಮ ಅವರ ವ್ಯಕ್ತಿತ್ವ ಹಾಗೂ ನಟನೆಯಿಂದ ಪ್ರತಿಯೊಬ್ಬ ವೀಕ್ಷಕನಿಗೂ ಅಮ್ಮನಾಗಿದ್ದಾರೆ. ಅವರಿಗೆ ಪದೆ ಪದೇ ಸೀರಿಯಸ್ ಆದ ಹಾಗೆ, ಇನ್ನೇನು ಸತ್ತೇ ಹೋದಂತೆ ತೋರಿಸುವುದು ನೋಡಿ ನೋಡಿ ಸಾಕಾಗಿದೆ ಎನ್ನುತ್ತಿದ್ದಾರೆ ವೀಕ್ಷಕರು. ಆಯ್ತು, ಹರ್ಷ-ಭುವಿಗೆ ಮದ್ವೆಯಾಯಿತು.ಇನ್ನೇನು ಎಲ್ಲವನ್ನೂ ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಭುವಿ ಎಲ್ಲರಿಗೂ ಪಾಠ ಕಳುಹಿಸುವ ಜೊತೆ, ತನ್ನ ಬಲವೇನು ಎಂಬುದನ್ನು ತೋರಿಸುತ್ತಾಳೆ ಎಂದು ಕಾಯುತ್ತಿದ್ದ ವೀಕ್ಷಕರಿಗೆ ಗೋಳು ನೋಡಿ ನೋಡಿ ಸಾಕಾಗಿದೆ. ಭುವಿ ಇನ್ನಾದರೂ ಅಳುವುದ ನಿಲ್ಲಿಸಲಿ ಎಂದು ಪರಿ ಪರಿಯಾಗಿ ಬೇಡಿ ಕೊಳ್ಳುತ್ತಿದ್ದಾರೆ. 

Kannadathi: ಅಮ್ಮಮ್ಮನ ಕೊಲೆ ಯತ್ನದ ಕೇಸ್‌ ಸಾನ್ಯಾ ಮೇಲೆ ಬೀಳೋ ಕ್ಷಣ ಹತ್ತಿರದಲ್ಲಿದೆ!

ಎಷ್ಟರ ಮಟ್ಟಿಗೆ ಅಂದ್ರೆ, 'ಆಮ್ಮಮ್ಮನ ಬದಲು ಭುವೀಗೆ ಕಾಯಿಲೆ ಭರ್ಸಿ ಸಾಯಸಿ. Villain ಮಾಡ್ತಾ ಇರೋ ಕುತಂತ್ರವೂ ಗೊತ್ತಾಗದ ದಡ್ಡಿ ಥರ heroine ಇದ್ದರೆಷ್ಟು, ಬಿಟ್ಟರೆಷ್ಟು, ಎನ್ ಕಥೇ ಬರೀತೀರೋ ಏನೋ.. ಅಮ್ಮಮ್ಮನಾ ಅಮೆರಿಕಾಗೆ ಕಳುಹಿಸಿ, ಈ ಚೆಂದಕ್ಕೆ ಯಾಕೆ ಬದುಕಿಸಬೇಕಿತ್ತು?'ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅತ್ಲಾಗೆ ಅಮ್ಮಮ್ಮನೂ ಸಾಯಿಸುತ್ತಲೂ ಇಲ್ಲ, ಸರಿಯಾಗಿ ಬದುಕಲೂ ಬಿಡುತ್ತಿಲ್ಲ. ನೋಡುಗರಿಗೇ ಇಷ್ಟು ಬೇಜಾರಾಗುತ್ತಿದೆ. ಇನ್ನು ಆ ಪಾತ್ರ ಮಾಡುತ್ತಿರುವ ಅಮ್ಮಮ್ಮನ ಕಥೆ ಏನೋ ಎಂದು ಮತ್ತೊಬರು ತಮ್ಮ ಬೇಸರ ವ್ಯಕ್ತಪಡಿಸುತ್ತಾರೆ. 

ಅಷ್ಟೇ ಅಲ್ಲ ರೊಮ್ಯಾಂಟಿಕ್ ಹೀರೋ ಆಗಿ ಹರ್ಷನನ್ನು ನೋಡುತ್ತಿದ್ದ ವೀಕ್ಷಕರಿಗೆ ಆತನ ಮುಂಗೋಪ ಸಿಟ್ಟು ಬರಿಸುತ್ತಿದೆ. ಬರೀ ಹೆಂಡತಿ ಮೇಲೆ ಸಿಟ್ಟು ಮಾಡಿಕೊಳ್ಳುತ್ತಿದ್ದರೆ ಏನು ಉಪಯೋಗವೆಂದು ಪ್ರಶ್ನಿಸುತ್ತಿದ್ದಾರೆ. ಜನರಿಗೆ ಭುವಿ ಬೋಲ್ಡ್ ಆಗಿ ನಟಿಸಬೇಕೆಂಬ ಆಸೆ ಇದೆ. ಸೀರಿಯಲ್‌ನ (Serial) ಪ್ರಮುಖ ಆಶಯದಂತೆ ಕಥೆ ಮುಂದುವರಿಯಲಿ ಎಂದೇ ಬಯಸುತ್ತಿದ್ದಾರೆ. ಸುಖಾ ಸುಮ್ಮನೆ ಎಲ್ಲ ಸೀರಿಯಲ್‌ನಂಕೆ ಇದರಲ್ಲಿಯೂ ಹೀರೋಯಿನ್ ಅಳುಮುಂಜಿಯಂತೆ ಅಳುವುದ ನೋಡಲು ಇದೀಗ ಪ್ರೇಕ್ಷಕ ದೊರೆಗೆ ಸ್ವಲ್ಪವೂ ಇಷ್ಟವಾಗುತ್ತಿಲ್ಲ. 

ತನ್ನ ವಿರುದ್ಧ ಕತ್ತಿ ಮಸಿಯುತ್ತಿರುವವರ ಸಾನಿಯಾ ಸೇರಿ ಎಲ್ಲರ ಪ್ರೀತಿ (Love) ಗಳಿಸಬೇಕು ಭುವಿ. ರತ್ನಮ್ಮ ಕಟ್ಟಿದ ಸಾಮ್ರಾಜ್ಯವನ್ನು ಸಮರ್ಥವಾಗಿ ನಿಭಾಯಿಸೋದು ಮಾತ್ರವಲ್ಲ, ಮತ್ತಷ್ಟು ವಿಸ್ತರಿಸುವಂತಾಗಬೇಕು, ದುಡ್ಡು ದುಡ್ಡು ಅಂತ ಸಾಯ್ತಾ ಇರೋ ಮನೆ ಮಂದಿಗೆ ಪ್ರೀತಿ, ವಿಶ್ವಾಸದ ಮಹತ್ವವನ್ನು ತಿಳಿಸಿಕೊಡುವ ಅವಕಾಶ ಕಲ್ಪಿಸಿದರೆ ಕಥೆಗೊಂದು ಅರ್ಥವಿರುತ್ತೆ. ಕನ್ನಡತಿ ಎಂಬ ಶಿರ್ಷಿಕೆಯೊಂದಿಗೆ ಪ್ರಸಾರವಾಗುತ್ತಿರುವ ಸೀರಿಯಲ್‌ನ ಮೂಲ ಉದ್ದೇಶ ಈಡೇರುತ್ತೆ ಎನ್ನೋದು ಬಹುತೇಕರ ಅಭಿಪ್ರಾಯವಾಗಿದೆ. ಇನ್ನಾದರೂ ಚಿತ್ರಕಥೆ (Script) ಬದಲಾಗುತ್ತಾ? ಕಥೆಗೊಂದು ಗಟ್ಟಿತನ ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗುತ್ತಾರಾ ಕಾದು ನೋಡಬೇಕು. 

Kannadathi: ಕೋಮಾದಲ್ಲಿ ಅಮ್ಮಮ್ಮ, ರತ್ನಮಾಲಾ ಕಥೆ ಇಲ್ಲಿಗೆ ಮುಕ್ತಾಯವಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?