ಸಿಂಪಲ್ಲಾಗಿ ಮನಸ್ಸಿಗೆ ಹತ್ತಿರಾಗೋ ಸೀರಿಯಲ್ ಶ್ರೀರಸ್ತು ಶುಭಮಸ್ತು

By Suvarna NewsFirst Published Apr 21, 2024, 5:16 PM IST
Highlights

ಜೀ ಕನ್ನಡದಲ್ಲಿ ಪ್ರಸಾರ ಆಗೋ ಶ್ರೀರಸ್ತು ಶುಭಮಸ್ತು ಸೀರಿಯಲ್ ಹಲವರ ಫೇವರಿಟ್. ಕಾರಣ ಇದರ ಸ್ಟೋರಿಲೈನ್. ಸಿಂಪಲ್ಲಾಗಿ ಮನಸ್ಸಿಗೆ ಹತ್ರ ಆಗೋ ಈ ಸೀರಿಯಲ್ ಬಗ್ಗೆ ಒಂದಿಷ್ಟು..

ಶ್ರೀರಸ್ತು ಶುಭಮಸ್ತು ಅನ್ನೋ ಸೀರಿಯಲ್ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತೆ. ಕೆಲವು ವಾರಗಳಿಂದ ಟಿಆರ್‌ಪಿ ರೇಸ್‌ನಲ್ಲಿ ಕೊಂಚ ಹಿಂದೆ ಬಿದ್ದಿದ್ದರೂ ಇದರ ಸ್ಟೋರಿ ಲೈನ್‌ ಹಲವರಿಗೆ ಇಷ್ಟ. ಮುಖ್ಯವಾಗಿ ಇದರಲ್ಲಿ ಸಂಬಂಧಗಳ ಬಗ್ಗೆ ಕೆಲವು ಸೂಕ್ಷ್ಮಗಳನ್ನು ಹೇಳಿರೋ ರೀತಿ ಸಖತ್ತಾಗಿದೆ. ಇದರಲ್ಲಿ ಇರೋ ಮುಖ್ಯ ಪಾತ್ರ ತುಳಸಿ ಮತ್ತು ಮಾಧವ. ಮುಖ್ಯ ಪಾತ್ರ ತುಳಸಿಗೆ ಗಂಡ ಇಲ್ಲ. ಈ ಪಾತ್ರಕ್ಕೆ ಜೊತೆಯಾಗುವ ಇನ್ನೊಂದು ಕ್ಯಾರೆಕ್ಟರ್ ಮಾಧವ. ಆತನೂ ಪತ್ನಿಯನ್ನು ಕಳೆದುಕೊಂಡ ವಿಧುರ. ಇವರಿಬ್ಬರನ್ನೂ ಒಂದುಗೂಡಿಸೋದು ಒಂದು ಸಮಾನ ಆಸಕ್ತಿ. ಅದು ಅಡುಗೆ. ಯೆಸ್, ಅಡುಗೆ ಅನ್ನೋ ಸಬ್ಜೆಕ್ಟ್ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಕಾರಣ ಈ ಸೀರಿಯಲ್‌ನ ಮೇಜರ್ ಪಾಯಿಂಟ್‌ ವೀಕ್ಷಕರಿಗೆ ಇಷ್ಟ ಆಗಿದೆ. ಹಾಗಂತ ಅಲ್ಲೇ ನಿಲ್ಲೋದಕ್ಕೆ ಆಗಲ್ವಲ್ಲಾ, ಅಡುಗೆ ಅನ್ನೋ ವಿಚಾರಕ್ಕೆ ಇಬ್ಬರೂ ಜೊತೆಯಾಗಿದ್ದಾರೆ. ಇಬ್ಬರ ಚಿಂತನೆಯ ರೀತಿ ಒಂದೇ ಥರ ಇದೆ. ಹೀಗಾಗಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗೋದಕ್ಕೆ ಜಾಸ್ತಿ ಟೈಮ್ ಹಿಡಿಯಲಿಲ್ಲ.

ಹೀಗೆ ಜೋಡಿ ಆದವರು ಮದುವೆಯನ್ನೂ ಆಗ್ತಾರೆ. ತುಳಸಿ ಮಾಧವನ ಮನೆಗೆ ಬರ್ತಾಳೆ. ಆ ಮನೆಯಲ್ಲೋ ಮಕ್ಕಳಿಗೇ ತಂದೆಯನ್ನು ಕಂಡರೆ ಆಗಲ್ಲ. ಅವಿನಾಶ್ ಅನ್ನೋ ಹೆಸರಿನ ಮೊದಲ ಮಗ ಅಪ್ಪನನ್ನು ಮೊದಲು ಶತ್ರುವಂತೆ ಕಾಣುತ್ತಿದ್ದ. ಈಗ ತುಳಸಿ ಅವನ ಮನ ಗೆದ್ದಿದ್ದಾಳೆ. ಹೀಗಾಗಿ ತನ್ನ ತಂದೆಯ ಎರಡನೇ ಹೆಂಡತಿಯನ್ನು ಆತ 'ಅಮ್ಮಾ' ಎಂದು ಕರೆದಿದ್ದಾನೆ. ಇದೊಂದು ಮೇಜರ್ ಹ್ಯಾಪನಿಂಗ್.

ಆ್ಯಕ್ಸಿಡೆಂಟ್​ ರಹಸ್ಯ ಬಯಲಾಗೋ ಕಾಲ ಬಂದೇ ಬಿಡ್ತು! ವಿಲನ್​ಗೇ ತಿರುಗೇಟು ಅಂದ್ರೆ ಇದೇ ನೋಡಿ..!

ಆದರೆ ತುಳಸಿಗೂ ಒಬ್ಬ ಮದುವೆಯಾದ ಮಗ ಇದ್ದಾನೆ. ತನ್ನ ಅಮ್ಮ ಈ ವಯಸ್ಸಲ್ಲಿ ಶ್ರೀಮಂತನ ಕೈ ಹಿಡಿದಿರೋದು ಆತನಿಗೆ ಇಷ್ಟ ಇಲ್ಲ. ಆತ ಆಕೆಯನ್ನು 'ಅಮ್ಮ' ಎಂದೇ ಕರೆಯುತ್ತಿಲ್ಲ. ಬದಲಿಗೆ 'ಮೇಡಂ' ಅಂತ ಸಂಭೋದಿಸುತ್ತಾನೆ. ಆದರೆ ಆಳದಲ್ಲಿ ತಾಯಿ ಬಗ್ಗೆ ಪ್ರೀತಿ ಇದೆ. ಈ ನಡುವೆ ಆತನಿಗೆ ತನ್ನ ತಾಯಿ ಮದುವೆ ಆಗಿರುವ ವ್ಯಕ್ತಿಯ ಮಗ ತನ್ನ ತಾಯಿಯನ್ನು 'ಅಮ್ಮಾ' ಅಂತ ಕರೆಯೋದು ಗೊತ್ತಾಗಿದೆ. ಅದು ಈತನಿಗೆ ಇಷ್ಟ ಆಗ್ತಿಲ್ಲ. ತಾನು ತನ್ನನ್ನು ಹೆತ್ತ ಅಮ್ಮನನ್ನು 'ಅಮ್ಮಾ' ಎನ್ನಲಾರ. ಇನ್ನೊಬ್ಬ ತಾಯಿ ಇಲ್ಲದವನು 'ಅಮ್ಮಾ' ಅಂದರೂ ಸಹಿಸಲು ಸಾಧ್ಯವಾಗಲ್ಲ.

ಇದರ ನಡುವೆ ಅತ್ತೆಯನ್ನು ಅಮ್ಮನಿಂತಲೂ ಫ್ರೆಂಡ್ ಥರ ನಡೆಸಿಕೊಳ್ಳೋ ಪಾತ್ರಗಳು ಇದರಲ್ಲಿವೆ. ಅವು ಪೂರ್ಣಿ ಮತ್ತು ಸಿರಿ. ಇಬ್ಬರಿಗೂ ತುಳಸಿ ಅತ್ತೆ. ಸಿರಿ ತುಳಸಿ ಹೆತ್ತ ಮಗನ ಪತ್ನಿಯಾದರೆ ಪೂರ್ಣಿ ಆಕೆಯ ಎರಡನೇ ಗಂಡನ ಮಗನ ಪತ್ನಿ. ಈ ಪೂರ್ಣಿ ಅತ್ತೆಗೆ ಭರತನಾಟ್ಯ ಕಲಿಸುತ್ತಾಳೆ. ಅತ್ತೆಯ ಎಲ್ಲ ಸಾಹಸಗಳಿಗೂ ಎನ್‌ಕರೇಜ್ ಮಾಡ್ತಾಳೆ. ಇತ್ತ ತುಳಸಿಯೂ ಪೂರ್ಣಿಯನ್ನು ತನ್ನ ಮಗಳಿಗಿಂತ ಹೆಚ್ಚು ಪ್ರೀತಿಯಲ್ಲಿ ನೋಡ್ಕೊಳ್ತಾಳೆ.

ಎಲ್ಲಾ ಆ್ಯಂಕರ್​ಗಳನ್ನು ರಿಜೆಕ್ಟ್​ ಮಾಡಿ ಶಾಕ್​ ಕೊಟ್ಟ ನಟ ಜಗ್ಗೇಶ್​: ಕಾಮಿಡಿ ಕಿಲಾಡಿಯಲ್ಲಿ ಏನಿದು ಹೊಸ ವಿಷ್ಯ?

ಇಲ್ಲಿರೋ ಇನ್ನೆರಡು ಸ್ಟ್ರಾಂಗ್ ಪಾತ್ರಗಳು ಮಾಧವ ಮತ್ತು ದತ್ತ. ಇಬ್ಬರೂ ಮೂಲತಃ ವಿಧುರರು. ಅದರಲ್ಲಿ ಮಾಧವನನ್ನು ತುಳಸಿ ಕೈ ಹಿಡಿದಿದ್ದಾಳೆ. ತುಳಸಿಯ ಮಾವ ದತ್ತ ವಯಸ್ಸಾದ ಒಂಟಿ ಜೀವ. ಮೇಲ್ನೋಟಕ್ಕೆ ಭಾರೀ ಘಾಟಿ. ಆದರೆ ಒಳ ಮನಸ್ಸು ಬೆಣ್ಣೆಯಂತೆ ಮೃದು. ಕಠೋರ ಅನಿಸಿದರೂ ಬಹಳ ಮಾನವೀಯತೆ ಉಳ್ಳ ಪಾತ್ರ. ಹಾಗೇ ತುಂಟ ಪಾತ್ರವೂ ಸಹ.

ಹೀಗೆ ಶ್ರೀರಸ್ತು ಶುಭಮಸ್ತು ಸೀರಿಯಲ್ ಪಾತ್ರ ಡಿಫರೆಂಟ್‌. ಈ ಸೀರಿಯಲ್ ಸಹ ಡಿಫರೆಂಟ್. ಆ ಕಾರಣಕ್ಕೆ ಹೆಚ್ಚು ಜನಕ್ಕೆ ತಲುಪುತ್ತಿದೆ. ಜೊತೆಗೆ ವಯಸ್ಸಾದ ಮೇಲೂ ಸಂಗಾತಿ ಬೇಕು ಅನ್ನೋ ಅಂಶವನ್ನು ಈ ಸೀರಿಯಲ್ ಒತ್ತಿ ಹೇಳುವುದು ಹಲವು ಮಂದಿಗೆ ಇಷ್ಟವಾಗಿದೆ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಸುಧಾರಾಣಿ ಹಾಗೂ ಅಜಿತ್ ಹಂದೆ ಅವರ ಆಕ್ಟಿಂಗ್ ಸಖತ್ತಾಗಿದೆ. ಇವರಿಬ್ಬರ ಸೂಕ್ಷ್ಮ ಪ್ರೀತಿಯ ಭಾವಗಳು ವೀಕ್ಷಕರಿಗೆ ಇಷ್ಟ. ಈ ಸೀರಿಯಲ್ ಕೂಡ ಈ ಎಲ್ಲ ಕಾರಣಕ್ಕೆ ಇಷ್ಟ.

 

click me!