ದಯವಿಟ್ಟು ಫೇಕ್​ನ್ಯೂಸ್​ ಹರಡಬೇಡಿ ಎಂದು 'ಕರಿಮಣಿ ಮಾಲಿಕ' ವಿಕ್ಕಿ ಮನವಿ: ಆದ್ರೆ ಅಲ್ಲಾಗಿದ್ದೇ ಬೇರೆ!

Published : Mar 19, 2024, 04:11 PM IST
ದಯವಿಟ್ಟು ಫೇಕ್​ನ್ಯೂಸ್​ ಹರಡಬೇಡಿ ಎಂದು 'ಕರಿಮಣಿ ಮಾಲಿಕ' ವಿಕ್ಕಿ ಮನವಿ: ಆದ್ರೆ ಅಲ್ಲಾಗಿದ್ದೇ ಬೇರೆ!

ಸಾರಾಂಶ

ದಯವಿಟ್ಟು ಫೇಕ್​ನ್ಯೂಸ್​ ಹರಡಬೇಡಿ ಎಂದು ವಿಕ್ಕಿಪಿಡಿಯಾ ಖ್ಯಾತಿಯ ವಿಕಾಸ್​ ಅವರು ಮನವಿ ಮಾಡಿಕೊಳ್ಳುವಷ್ಟರಲ್ಲಿಯೇ ಏನಾಗೋಯ್ತು ನೋಡಿ!  

ನಾನು ನಂದಿನಿ ಹಾಗೂ ಕರಿಮಣಿ ಮಾಲಿಕ ಖ್ಯಾತಿಯ ವಿಕ್ಕಿಪಿಡಿಯಾ ಅಲಿಯಾಸ್​ ವಿಕಾಸ್​ ಅವರು ಜನರಲ್ಲಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ. ದಯವಿಟ್ಟು ಫೇಕ್​ನ್ಯೂಸ್​ ಹರಡಬೇಡಿ ಎನ್ನುವ ವಿಡಿಯೋ ಅದು. ಅದರಲ್ಲಿ ಅವರು, ಯೂಸವಲ್​ ಆಗಿ ನಾನು ಈ ರೀತಿಯ ವಿಡಿಯೋ ಮಾಡಲ್ಲ. ಆದ್ರೆ ಸಮಯ, ಸಂದರ್ಭ ಬಂದಿದ್ದರಿಂದ ಹಾಗೂ ನಾನು ಸೈನ್ಸ್​ ಸ್ಟುಡೆಂಟ್​ ಆಗಿರೋದ್ರಿಂದ ಈ ವಿಡಿಯೋ ಮಾಡಲೇಬೇಕಾಯ್ತು ಎನ್ನುತ್ತಲೇ ತುಂಬಾ ಗಂಭೀರ ಎನಿಸುವ ಮಾಹಿತಿ ನೀಡಲು ಆರಂಭಿಸಿದರು. 

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಸುಳ್ಳು ಸುದ್ದಿ ಸ್ಪ್ರೆಡ್​ ಆಗ್ತಿದೆ. ಅದೇನೆಂದರೆ ಮಾಲಿನ್ಯ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ, ಕೆನಡಾದಿಂದ  ಪಂಜಾಬ್​ ಕಾಣಿಸುತ್ತಿದೆ. ಮಧ್ಯಪ್ರದೇಶದಿಂದ ಹಿಮಾಚಲ ಕಾಣಿಸ್ತಿದೆ ಎಂದೆಲ್ಲಾ ಹೇಳಲಾಗ್ತಾ ಇದೆ ಎಂದಿದ್ದಾರೆ. ಇಷ್ಟು ಹೇಳುತ್ತಿದ್ದಂತೆಯೇ ನಿಮಗೆ ಬಹುಶಃ ಒಂದು ಡೌಟ್​ ಬಂದಿರಲು ಸಾಕು, ಅಷ್ಟಕ್ಕೂ ಪೊಲ್ಯುಷನ್​ ಲೆವೆಲ್​ ಕಡಿಮೆ ಆಗ್ತಾ ಇದ್ಯಾ ಎನ್ನೋದು. ಇಲ್ಲದಿದ್ರೆ ನಮಗೆ ಈ ರೀತಿ ಯಾವುದೇ ಮೆಸೇಜ್​ ಬಂದಿಲ್ವಲ್ಲಾ? ಈ ರೀತಿ ಸ್ಪ್ರೆಡ್​ ಆಗ್ತಿರೋದು ಗೊತ್ತಿಲ್ವಲ್ಲಾ, ಇದ್ದರೂ ಇರಬಹುದು. ನಮ್ಗೆ ಮೆಸೇಜ್​ ಬಂದಿರಲಿಕ್ಕಿಲ್ಲ ಎಂದುಕೊಳ್ಳಬಹುದು. ಆದರೆ ಅಲ್ಲೇ ಇರೋದು ವಿಕ್ಕಿಯವರ ಟ್ವಿಸ್ಟ್​!

ಕೊನೆಗೂ ಸಿಕ್ಕ ಒರಿಜಿನಲ್​ ರಾವುಲ್ಲಾ! ಬೆಳ್ಳುಳ್ಳಿ ಕಬಾಬ್​ ಓನರ್​ ಜೊತೆ ಕರಿಮಣಿ ಮಾಲೀಕನ ಎಂಟ್ರಿ!

ಇಷ್ಟು ಹೇಳುತ್ತಿದ್ದಂತೆಯೇ ಅತ್ತ ಹಿಮಾಲಯದಿಂದ ಒಂದು ದನಿ ಕೇಳಿಸುವುದುನ್ನು ತೋರಿಸಿದ್ದಾರೆ. ಅಷ್ಟಕ್ಕೂ ಆ ದನಿ ಬೇರೆ ಯಾರದ್ದೂ ಅಲ್ಲ, ಕೈಲಾಸದಲ್ಲಿ ಹೊಸ ರಾಷ್ಟ್ರ ನಿರ್ಮಾಣ ಮಾಡಿಕೊಂಡಿರುವ ನಿತ್ಯಾನಂದ ಸ್ವಾಮಿಯದ್ದು! ಇಲ್ಲಿಯವರೆಗೆ ಸೀರಿಯಸ್​ ಆಗಿ ವಿಕ್ಕಿ ಅವರು ಹೇಳಿರುವ ಮಾಹಿತಿ ಕೇಳುತ್ತಿದ್ದ ನೀವು ಒಂದು ಕ್ಷಣದಲ್ಲಿ ನಗುವಿನ ಅಲೆಯಲ್ಲಿ ತೇಲಿ ಹೋಗ್ತೀರಾ. ಅಲ್ಲಿ ನಿತ್ಯಾನಂದ ಸ್ವಾಮೀಜಿ, ಎಂ ಮತ್ತು ಸಿ ಎಂದರೆ ಅದು ಎಂಸಿ ಅಲ್ಲ, ಬದಲಿಗೆ ಎಂ..... ಸೀ.... ಎನ್ನುತ್ತಾ ರಾಗ ಎಳೆಯುವುದನ್ನು ನೋಡಬಹುದು. ಇಷ್ಟು ಕೇಳುತ್ತಿದ್ದಂತೆಯೇ ನಕ್ಕೂ ನಕ್ಕೂ ಸುಸ್ತಾಗುವುದು ಗ್ಯಾರೆಂಟಿ. ಇದು ಫೇಕ್​ ನ್ಯೂಸ್​ ಗುಟ್ಟು!

ಅಷ್ಟಕ್ಕೂ ವಿಕಾಸ್​ ಮತ್ತು ಗ್ಯಾಂಗ್​ ಇದಾಗಲೇ ನೂರಾರು ವಿಡಿಯೋಗಳನ್ನು ಮಾಡಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಲೇ ಬಂದಿದೆ. ಹಲವು ವರ್ಷಗಳಿಂದ ಈ ತಂಡ ಕಾಮಿಡಿ ರೀಲ್ಸ್​ ಮಾಡುತ್ತಿದ್ದರೂ ಬೆಳಕಿಗೆ ಬಂದದ್ದು ನಾನು ನಂದಿನಿ, ಬೆಂಗಳೂರ್ಗೆ ಬಂದಿನಿ ರೀಲ್ಸ್​ ಮೂಲಕ. ಇದು ಯಾವ ಪರಿಯಲ್ಲಿ ವೈರಲ್​ ಆಯ್ತು ಎಂದರೆ, ವಿದೇಶಗಳಲ್ಲಿಯೂ ಇದರ ರೀಲ್ಸ್​ ಮಾಡಲು ಶುರುವಿಟ್ಟುಕೊಂಡರು. ಅಲ್ಲಿಯವರೆಗೆ ತಮ್ಮ ಫ್ಯಾನ್ಸ್​ಗಷ್ಟೇ ಗೊತ್ತಿದ್ದ ವಿಕ್ಕಿ ಮತ್ತು ಅವರ ತಂಡ ರಾತ್ರೋರಾತ್ರಿ ಫೇಮಸ್​ ಆದರು. ಇವರ ಹಳೆಯ ರೀಲ್ಸ್​ಗಳಿಗೆಲ್ಲಾ ಮತ್ತೆ ಮರುಜೀವ ಬಂದಿತ್ತು. ಇದಾದ ಬಳಿಕ ಕರಿಮಣಿ ಮಾಲಿಕ ರಾವುಲ್ಲಾ ಮೂಲಕ ಈಗಲೂ ವಿಕ್ಕಿ ಎಲ್ಲರ ಬಾಯಲ್ಲೂ ನಲಿದಾಡುತ್ತಿದ್ದಾರೆ. ಇದೀಗ ಏನೋ ಸೀರಿಯಸ್​ ವಿಷ್ಯದ ರೀಲ್ಸ್​ ಎಂದುಕೊಂಡರೆ ಇದು ಕೂಡ ಜೋಕ್​ ಎಂದು ತಿಳಿದು ಅಭಿಮಾನಿಗಳು ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. 

'ಯೋಧ' ನಟ ಸಿದ್ಧಾರ್ಥ್ ಮಲ್ಹೋತ್ರಾ ಮೇಲೆ ವಿಮಾನದಲ್ಲಿಯೇ ಭಾರಿ ಹಲ್ಲೆ: ವೈರಲ್​ ವಿಡಿಯೋಗೆ ಫ್ಯಾನ್ಸ್​ ಶಾಕ್​!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ನೀನು ಫ್ರೀ ಪ್ರೊಡಕ್ಟ್‌, ಏನೂ ಮಾಡದೆ ಇಲ್ಲಿದ್ದೀಯಾ? ಕೊನೆಗೂ ಕಾವ್ಯ ವಿರುದ್ಧ ತಿರುಗಿಬಿದ್ದ ಗಿಲ್ಲಿ ನಟ
BBK 12: ರೊಮ್ಯಾನ್ಸ್‌ ಎಂದ ರಜತ್;‌ ಎಪಿಸೋಡ್‌ನಲ್ಲಿ ಇಲ್ಲ ಅಂತ ವೀಕ್ಷಕರು ಅಂದ್ಕೊಂಡ್ರೆ ಏನ್‌ ಮಾಡಲಿ?: ರಾಶಿಕಾ